ಬಂಟ್ವಾಳ : ತುಳು ಸಿನಿಮಾ ಸ್ಟಾರ್​ ಸುರೇಂದ್ರ ಬಂಟ್ವಾಳದಲ್ಲಿ ಗೂಂಡಾಗಿರಿ ನಡೆಸಿದ್ದಾರೆ. ಸಾರ್ವಜನಿಕವಾಗಿಯೇ ತಲ್ವಾರ್​ ಹಿಡಿದು ಬಿಜೆಪಿ ಕಾರ್ಯಕರ್ತರನ್ನು ಹಲ್ಲೆಗೊಳಿಸಿರುವ ಘಟನೆ ಬಂಟ್ವಾಳದ ಬಿಸಿ ರೋಡ್​ ಬಳಿ ನಡೆದಿದೆ. ಘಟನೆಯಲ್ಲಿ ಪುಷ್ಪರಾಜ್​ ಮತ್ತು ಗಣೇಶ್ ಎಂಬ ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆದಾಖಲಾಗಿದ್ದಾರೆ.ತುಳು ಸಿನಿಮಾಗಳಲ್ಲಿ ನಟಿಸುತ್ತಿರುವ ಸುರೇಂದ್ರ, ಸಚಿವ ರಮಾನಾಥ್​ ರೈ ಅವರ  ಬೆಂಬಲಿಗ ಎಂದು ತಿಳಿದು ಬಂದಿದೆ.  ಹಾಡಹಗಲೇ ಈ ಕೃತ್ಯ ನಡೆಸಿರುವ ಸುರೇಂದ್ರ ಅವರು ಯಾವ ಕಾರಣಕ್ಕಾಗಿ ಈ ರೀತಿ ಹಲ್ಲೆ ನಡೆಸಿದ್ದಾರೆ ಎಂದು  ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಈ ರೀತಿ ಮಾಡಲಾಗಿದ್ದು, ಸುರೇಂದ್ರ ರಮಾನಾಥ ರೈ ಅವರೊಂದಿಗೆ ಕಾಣಿಸಿಕೊಂಡಿದ್ದಾನೆ.

ಘಟನೆ ವಿವರ :

ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಬಿಜೆಪಿ ಕಾರ್ಯಕರ್ತರಾದ ಗಣೇಶ್, ಚರಣ್, ಪುಷ್ಪರಾಜ್  ಎಂಬುವವರು ಬಡ್ಡಕಟ್ಟೆ ಹೋಟೆಲೊಂದಕ್ಕೆ ಊಟಕ್ಕೆ ತೆರಳಿದ್ರು. ಈ ವೇಳೆ ಕಾಂಗ್ರೆಸ್ ನ ಸುರೇಂದ್ರ ಮತ್ತು ಅವರ ತಂಡ ಕಾರಿನಿಂದಳಿದು ತಲವಾರು ಹಿಡಿದು ಹೋಟೆಲ್ ಗೆ ಬಂದು ಊಟಕ್ಕೆ ಕುಳಿತಿದ್ದ ಬಿಜೆಪಿ ಕಾರ್ಯಕರ್ತರ ಜೊತೆಗೆ ವಾಗ್ವಾದ ನಡೆಸಿದ್ದಾರೆ.

ಈ ವೇಳೆ  ಎರಡು ಗುಂಪುಗಳ ಮಧ್ಯೆ ಹಲ್ಲೆ ನಡೆದಿದೆ. ನಂತರ ಸುರೇಂದ್ರ  ನಡುರಸ್ತೆಯಲ್ಲೇ ತಲವಾರು ಹಿಡಿದು ರೋಷಾವೇಷ ತೋರಿದ್ದಾರೆ. ಬಿಜೆಪಿ ಕಾರ್ಯಕರ್ತರಾದ ಗಣೇಶ್ ಮತ್ತು ಪುಷ್ಪರಾಜ್ ಅವರು ಹಲ್ಲೆಗೊಳಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುರೇಂದ್ರ ಬಂಟ್ವಾಳ ಅವರ ತಂಡದ ಯುವಕನಿಗೆ ಬಿಜೆಪಿ ಯುವಕರು ನಿನ್ನೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಎಂಬ ಕಾರಣಕ್ಕೆ ಸೆಲೂನ್ ಗೆ ನುಗ್ಗಿ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದ ಯುವಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಭುವಿತ್ ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಮುಂದುವರಿದ ಭಾಗವಾಗಿ ಇವತ್ತು ಪರಸ್ಪರ ದಾಳಿ ನಡೆದಿದೆ ಎನ್ನಲಾಗಿದೆ. ಇನ್ನು ತಲ್ವಾರು ಹಿಡಿದಿದ್ದ  ಸುರೇಂದ್ರ ಬಂಟ್ವಾಳ ತುಳು ಚಿತ್ರದಲ್ಲಿ ನಟಿಸಿದ್ದರು‌. ಅಲ್ದೇ ಈ ಹಿಂದೆ ಹಿಂದೂ ಸಂಘಟನೆಯಲ್ಲೂ ಗುರುತಿಸಿಕೊಂಡಿದ್ದು ರೌಡಿಶೀಟರ್ ಆಗಿದ್ದ. ಪ್ರಸ್ತುತ ಸಂಘಟನೆಯ ಜೊತೆ ಮುನಿಸಿಕೊಂಡು ಬಳಿಕ ಕಾಂಗ್ರೆಸ್ ಜೊತೆಯಲ್ಲಿ ಗುರುತಿಸಿಕೊಂಡಿದ್ದರು.

 

Please follow and like us:
0
http://bp9news.com/wp-content/uploads/2018/06/WhatsApp-Image-2018-06-11-at-16.24.01-1-767x1024.jpeghttp://bp9news.com/wp-content/uploads/2018/06/WhatsApp-Image-2018-06-11-at-16.24.01-1-150x150.jpegBP9 Bureauಪ್ರಮುಖಮಂಗಳೂರುಸಿನಿಮಾಬಂಟ್ವಾಳ : ತುಳು ಸಿನಿಮಾ ಸ್ಟಾರ್​ ಸುರೇಂದ್ರ ಬಂಟ್ವಾಳದಲ್ಲಿ ಗೂಂಡಾಗಿರಿ ನಡೆಸಿದ್ದಾರೆ. ಸಾರ್ವಜನಿಕವಾಗಿಯೇ ತಲ್ವಾರ್​ ಹಿಡಿದು ಬಿಜೆಪಿ ಕಾರ್ಯಕರ್ತರನ್ನು ಹಲ್ಲೆಗೊಳಿಸಿರುವ ಘಟನೆ ಬಂಟ್ವಾಳದ ಬಿಸಿ ರೋಡ್​ ಬಳಿ ನಡೆದಿದೆ. ಘಟನೆಯಲ್ಲಿ ಪುಷ್ಪರಾಜ್​ ಮತ್ತು ಗಣೇಶ್ ಎಂಬ ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆದಾಖಲಾಗಿದ್ದಾರೆ.   ತುಳು ಸಿನಿಮಾಗಳಲ್ಲಿ ನಟಿಸುತ್ತಿರುವ ಸುರೇಂದ್ರ, ಸಚಿವ ರಮಾನಾಥ್​ ರೈ ಅವರ  ಬೆಂಬಲಿಗ ಎಂದು ತಿಳಿದು ಬಂದಿದೆ.  ಹಾಡಹಗಲೇ ಈ ಕೃತ್ಯ ನಡೆಸಿರುವ ಸುರೇಂದ್ರ ಅವರು ಯಾವ...Kannada News Portal