ಮಂಗಳೂರು:  ಮತದಾನ ಜಾಗೃತಿಗಾಗಿ ಉಡುಪಿ ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಸಿಡಿಯೊಂದರಲ್ಲಿ ಎಡವಟ್ಟು ಮಾಡಿಕೊಂಡಿದೆ. ನಿನ್ನೆ ಸಾಯಂಕಾಲವಷ್ಟೇ ಉಡುಪಿಯ ಮಣಿಪಾಲದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಯು ಮತದಾನ ಜಾಗೃತಿಯ ಯಕ್ಷಗಾನದ ಹಾಡುಗಳುಳ್ಳ ಸಿಡಿ ಬಿಡುಗಡೆಗೊಳಿಸಿತ್ತು. ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ನೇತೃತ್ವದಲ್ಲೇ ಸಿಡಿ ಬಿಡುಗಡೆಗೊಳಿಸಲಾಗಿತ್ತು.

ಆದ್ರೆ ಮಾಧ್ಯಮ ವರದಿಗಾರರಿಗೆ ಹಂಚಿದ ಸಿಡಿಯೊಂದರಲ್ಲಿ ಗೇಮ್ಸ್ ಪತ್ತೆಯಾಗಿದ್ದು, ಜಿಲ್ಲಾಡಳಿತದ ಎಡವಟ್ಟನ್ನು ತೆರೆದಿಟ್ಟಿದೆ. ಮಾಧ್ಯಮ ವರದಿಗಾರರಿಗೆ ಹಂಚಿದ ಸಿಡಿಯೊಂದರಲ್ಲಿ ಯೂರಿಸ್ ರಿವೆಂಜ್ ಅನ್ನೋ ಗೇಮ್ ಇದ್ದು, ಯಾವುದೇ ಪ್ರಚಾರ ಸಾಮಗ್ರಿ ಹೊಂದದೇ ಇರುವುದು ಪತ್ತೆಯಾಗಿದೆ.

ಸದ್ಯ ಇದು ಜಿಲ್ಲಾಡಳಿತ ಚುನಾವಣಾ ವಿಚಾರದಲ್ಲಿ ಅದ್ಯಾವ ಪರಿ ಗಂಭೀರತೆ ತಾಳಿದೆ ಅನ್ನೋದನ್ನು ಮುಂದಿಟ್ಟಂತಾಗಿದೆ. ಅಲ್ಲದೇ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಪಾಲಿಸೋ ಜಿಲ್ಲಾಧಿಕಾರಿ ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಅನ್ನೋ ಪ್ರಶ್ನೆ ಎದುರಾಗಿದೆ. ಸದ್ಯ ಮಾಧ್ಯಮಗಳಿಗೆ ಹಂಚಿದ ಒಂದು ಸಿಡಿಯಲ್ಲಿ ಈ ಎಡವಟ್ಟು ಕಾಣಸಿಕ್ಕಿದ್ದು, ಇಂತಹ ಇನ್ನೆಷ್ಟು ಸಿಡಿಗಳು ಇವೆ ಅನ್ನೋ ಕುತೂಹಲವು ಸೃಷ್ಟಿಸಿದೆ.

Please follow and like us:
0
http://bp9news.com/wp-content/uploads/2018/04/udupi-BP9-News-Web-Portal.jpeghttp://bp9news.com/wp-content/uploads/2018/04/udupi-BP9-News-Web-Portal-150x150.jpegBP9 Bureauಉಡುಪಿಮಂಗಳೂರುಮಂಗಳೂರು:  ಮತದಾನ ಜಾಗೃತಿಗಾಗಿ ಉಡುಪಿ ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಸಿಡಿಯೊಂದರಲ್ಲಿ ಎಡವಟ್ಟು ಮಾಡಿಕೊಂಡಿದೆ. ನಿನ್ನೆ ಸಾಯಂಕಾಲವಷ್ಟೇ ಉಡುಪಿಯ ಮಣಿಪಾಲದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಯು ಮತದಾನ ಜಾಗೃತಿಯ ಯಕ್ಷಗಾನದ ಹಾಡುಗಳುಳ್ಳ ಸಿಡಿ ಬಿಡುಗಡೆಗೊಳಿಸಿತ್ತು. ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ನೇತೃತ್ವದಲ್ಲೇ ಸಿಡಿ ಬಿಡುಗಡೆಗೊಳಿಸಲಾಗಿತ್ತು. ಆದ್ರೆ ಮಾಧ್ಯಮ ವರದಿಗಾರರಿಗೆ ಹಂಚಿದ ಸಿಡಿಯೊಂದರಲ್ಲಿ ಗೇಮ್ಸ್ ಪತ್ತೆಯಾಗಿದ್ದು, ಜಿಲ್ಲಾಡಳಿತದ ಎಡವಟ್ಟನ್ನು ತೆರೆದಿಟ್ಟಿದೆ. ಮಾಧ್ಯಮ ವರದಿಗಾರರಿಗೆ ಹಂಚಿದ ಸಿಡಿಯೊಂದರಲ್ಲಿ ಯೂರಿಸ್ ರಿವೆಂಜ್ ಅನ್ನೋ ಗೇಮ್ ಇದ್ದು,...Kannada News Portal