ಮಂಗಳೂರು : ಉನ್ನಾವೋ, ಕಥುವಾ ಅತ್ಯಾಚಾರ ಪ್ರಕರಣವನ್ನ ನಾವು ಖಂಡಿಸಬೇಕಾಗಿದೆ. ದೇಶದಲ್ಲಿ ತುಂಬಾ ಹೆಣ್ಮಕ್ಕಳು ಅತ್ಯಾಚಾರಕ್ಕೊಳಗಾಗಿದ್ದಾರೆ. ಈ ಘಟನೆಯಿಂದ ನೊಂದ ನಾನು ಭಾರತೀಯ ಮಹಿಳೆ ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದು ಕಾಂಗ್ರೆಸ್ ನ ಮಹಿಳಾ ರಾಜ್ಯ ಕಾರ್ಯದರ್ಶಿ ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ಹಿಂದೂ. ಆದರೆ ಬಿಜೆಪಿ ಹಿಂದೂ ಅಲ್ಲ. ವಿಶ್ವದಲ್ಲಿ ಗಂಡು, ಹೆಣ್ಣು ಜಾತಿ ಮಾತ್ರ ಇದೆ. ನನಗೆ, ನಮಗೆ ಖಂಡಿತಾ ಜಾತಿ ಇಲ್ಲ. ಭಾರತ ಮಾತೆ ಅನ್ನುವವರೇ ಮಹಿಳೆಯರಿಗೆ ರಕ್ಷಣೆ ಕೊಡುತ್ತಿಲ್ಲ. ಸ್ವತಃ ನಾನು ಕೂಡಾ ಹಿಂಸೆ ಅನುಭವಿಸಿದ್ದೇನೆ ಎಂದರು. ಇನ್ನು ಮೋದಿ ಭೇಟಿ ಬಚಾವೋ ಅಂತಾರೆ.

ಆದರೆ ಮೋದಿ ತನ್ನ ಪತ್ನಿಗೆ ಹಿಂಸೆ ಕೊಟ್ಟವರು ಹಾಗೆಯೇ ಪತ್ನಿಯನ್ನೇ ದೂರ ಇಟ್ಟವರು. ಇನ್ನು ಯುಪಿ ಸಿಎಂ ಯೋಗಿ ಜೋಗಿಯಾಗಿದ್ದಾರೆ. ಮೋದಿ, ಯೋಗಿಗೆ ಹೆಣ್ಮಕ್ಕಳ ನೋವು ಅರ್ಥವಾಗಲ್ಲ. ನನ್ನ ಮನೆ ಎದುರು  ಬಿಜೆಪಿ ಹಿಂದೂ ಕಾರ್ಯಕರ್ತರು ಎಂದು ಕರೆಸಿಕೊಳ್ಳುತ್ತಿರುವವರಿಂದ ದಾಂಧಲೆ ನಡೆದಿದೆ ಎಂದು ಮಂಗಳೂರಲ್ಲಿ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಆರೋಪಿಸಿದ್ದಾರೆ.

ಬಿಪಿ9 ನ್ಯೂಸ್ ಮಂಗಳೂರು

Please follow and like us:
0
http://bp9news.com/wp-content/uploads/2018/04/collage-4-16.jpghttp://bp9news.com/wp-content/uploads/2018/04/collage-4-16-150x150.jpgBP9 Bureauಪ್ರಮುಖಮಂಗಳೂರುಮಂಗಳೂರು : ಉನ್ನಾವೋ, ಕಥುವಾ ಅತ್ಯಾಚಾರ ಪ್ರಕರಣವನ್ನ ನಾವು ಖಂಡಿಸಬೇಕಾಗಿದೆ. ದೇಶದಲ್ಲಿ ತುಂಬಾ ಹೆಣ್ಮಕ್ಕಳು ಅತ್ಯಾಚಾರಕ್ಕೊಳಗಾಗಿದ್ದಾರೆ. ಈ ಘಟನೆಯಿಂದ ನೊಂದ ನಾನು ಭಾರತೀಯ ಮಹಿಳೆ ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದು ಕಾಂಗ್ರೆಸ್ ನ ಮಹಿಳಾ ರಾಜ್ಯ ಕಾರ್ಯದರ್ಶಿ ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ಹಿಂದೂ. ಆದರೆ ಬಿಜೆಪಿ ಹಿಂದೂ ಅಲ್ಲ. ವಿಶ್ವದಲ್ಲಿ ಗಂಡು, ಹೆಣ್ಣು ಜಾತಿ ಮಾತ್ರ ಇದೆ. ನನಗೆ, ನಮಗೆ...Kannada News Portal