ಮಂಗಳೂರು : ಸ್ಥಳೀಯ ಸಂಸ್ಥೆ ಚುನಾವಣೆಗೆ ನಾವು ಜೆಡಿಎಸ್​​​ ಜೊತೆ  ಮೈತ್ರಿ‌ಮಾಡಿಕೊಳ್ಳಲ್ಲ. ಈ ಬಗ್ಗೆ ದಿನೇಶ್ ಗುಂಡೂರಾವ್ ಕೂಡಾ ಹೇಳಿದ್ದಾರೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ನಿರ್ಲಕ್ಷ್ಯವೇ ಕಾಂಗ್ರೆಸ್ ಸೋಲಿಗೆ ಕಾರಣವೆಂದು ಭೋಜೇಗೌಡರು ಹೇಳಿದ್ದಾರೆ. ಆದರೆ ಅದು ಭೋಜೇಗೌಡರ ಅಭಿಪ್ರಾಯ.ಭೋಜೇಗೌಡರ ಅಭಿಪ್ರಾಯ ನಾವು ಯಾಕೆ ಒಪ್ಪಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ. ಪಕ್ಷದ ಅನಾಲಿಸಿಸ್ ಬೇರೆ ರೀತಿ ಇತ್ತು, ಯಾಕೆ ಸೋತಿದ್ದೇವೆಂದು ವಿಶ್ಲೇಷಣೆ ಮಾಡಿದ್ದೇವೆ ಎಂದು ತಿಳಿಸಿದರು. ಬಿಜೆಪಿ ಸರಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರ, ಅಭಿವೃದ್ಧಿ ಹಿನ್ನೆಡೆಯಾಗಿದೆ.ಮತ್ತೆ ಬಿಜೆಪಿ ಬಂದಲ್ಲಿ ಸಮಸ್ಯೆ ತಪ್ಪಲ್ಲ ಎನ್ನುವ ದೃಷ್ಠಿಯಿಂದ ಸಮ್ಮಿಶ್ರ ಸರಕಾರಕ್ಕೆ ಒಲವು ತೋರಿಸಿದ್ದು ಎಂದರು.

ಮೋದಿಗೆ ರೈತರ ಸಮಸ್ಯೆ ಬೇಕಾಗಿಲ್ಲ

ರೈತ ಆತ್ಮಹತ್ಯೆ ಮಾಡಿಕೊಳ್ಳಬಾರದೆಂದೆ  ಸಾಲಮನ್ನಾ ಮಾಡಿದ್ವಿ.ಸಾವಿರಾರು ರೈತರು ಆತ್ಮಹತ್ಯೆಗೆ ಮುಂದಾದಾಗ ನಾವು ಸ್ಪಂದಿಸಬೇಕಾಗುತ್ತದೆ.12ಸಾವಿರ ರೈತರು ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತ‌ ಕುಟುಂಬ ಯಾವ ಸ್ಥಿತಿ ಬರಬಹುದು ಎಂಬ ಯೋಚನೆಯಿಟ್ಟು ಸಾಲಮನ್ನಾ ಮಾಡಿದ್ದು ನಾವು. ಆದರೆ 30 ಸಾವಿರ ಕೋಟಿ ರಾಜ್ಯ ಸರಕಾರಕ್ಕಿರುವ ಹೊರೆ ಪ್ರಧಾನಿ ತಪ್ಪಿಸಿದರೆ ರೈತರಿಗೆ ಒಳ್ಳೆಯದಾಗುತಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿಲ್ಲ ಎಂದು ವಗ್ದಾಳಿ ನಡೆಸಿದರು.

ಇದೊಂದು ವಿಶೇಷ ಪ್ರಕರಣ

ಶಿರೂರು ಸ್ವಾಮೀಜಿ ಆರಾಧನೆ‌ಗೆ ಪೊಲೀಸರಿಂದ ಅನುಮತಿ ನಕಾರ ವಿಚಾರವಾಗಿ, ಶಿರೂರು ಸ್ವಾಮೀಜಿ ಪ್ರಕರಣ ತನಿಖೆ ಹಂತದಲ್ಲಿದೆ.ಯಾವ ಕಾರಣಕ್ಕೆ ಪೊಲೀಸರು ಆ ರೀತಿ ನಿರ್ಧಾರ ಕೈಗೊಂಡಿದ್ದಾರೆ ತಿಳಿದಿಲ್ಲ. ಇದೊಂದು ವಿಶೇಷ ಪ್ರಕರಣವಾಗಿದ್ದು ಸಾಕ್ಷಿಗಳ ಪತ್ತೆಗೆ ಪೊಲೀಸರು ಈ ಕ್ರಮ ಕೈಗೊಂಡಿರಬಹುದು ಎಂದರು.

ಬಾಂಗ್ಲಾ ವಲಸಿಗರ ಬಗ್ಗೆ ಪರಿಶೀಲನೆ

ಬಾಂಗ್ಲಾದೇಶಿ ವಲಸೆಗಾರರ ಅಕ್ರಮ ವಲಸೆ ವಿಚಾರ ಮಾತನಾಡಿ, ಅನಧಿಕೃತವಾಗಿ ಹೊರರಾಜ್ಯದಿಂದ ಬಂದವರನ್ನು ಪರಿಶೀಲನೆ ನಡೆಸಲಾಗುವುದು. ಅವರ ವೀಸಾ ಕಾರ್ಡ್, ಸಂಬಂಧ ದಾಖಲೆ ಪರಿಶೀಲನೆ ಮಾಡಲಾಗುವುದು. ಈಗಾಗಲೇ ಡ್ರಗ್ಸ್ ಬಗ್ಗೆ ದೊಡ್ಡ ಅಭಿಯಾನ‌ ಮಾಡಲಾಗಿದೆ. ವೀಸಾ ಮುಗಿದವರನ್ನು ಹಿಡಿದು ಅವರನ್ನು ಕಳಿಸೋ ವ್ಯವಸ್ಥೆ ನಾವೇ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಮನೆಯವರಿಗೆ ಊಟ ಹಾಕಿದ್ದಕ್ಕೆ ಲೆಕ್ಕ ಹಾಕ್ತಾರಾ?

ಸಚಿವರ ದುಂದುವೆಚ್ಚ ವಿಚಾರವಾಗಿ,ಮನೆಯವರಿಗೆ ಊಟ ಹಾಕೋದನ್ನು ಯಾರಾದ್ರೂ ಲೆಕ್ಕ ಹಾಕ್ತಾರಾ ಎಂದು ಪ್ರಶ್ನಿಸಿದ್ದಾರೆ.ಬಿಜೆಪಿಯವರು ಆಡಳಿತ ಸಮಯದಲ್ಲಿ ಲೆಕ್ಕ ಹಾಕಿದ್ದಾರಾ?.ಇದು ಅವರ ಕೀಳು ಮನಸ್ಸನ್ನು ತೋರಿಸುತ್ತದೆ. ಬಿಜೆಪಿಯವರು ತಮ್ಮ  ಕೀಳು ಮನಸ್ಸನ್ನು ಎತ್ತಿ ತೋರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

 

Please follow and like us:
0
http://bp9news.com/wp-content/uploads/2018/08/ಡಿಸಿಎಂ-ಪರಮೇಶ್ವರ್​​​-BP9-NEWS1.jpeghttp://bp9news.com/wp-content/uploads/2018/08/ಡಿಸಿಎಂ-ಪರಮೇಶ್ವರ್​​​-BP9-NEWS1-150x150.jpegBP9 Bureauಪ್ರಮುಖಮಂಗಳೂರುರಾಜಕೀಯಮಂಗಳೂರು : ಸ್ಥಳೀಯ ಸಂಸ್ಥೆ ಚುನಾವಣೆಗೆ ನಾವು ಜೆಡಿಎಸ್​​​ ಜೊತೆ  ಮೈತ್ರಿ‌ಮಾಡಿಕೊಳ್ಳಲ್ಲ. ಈ ಬಗ್ಗೆ ದಿನೇಶ್ ಗುಂಡೂರಾವ್ ಕೂಡಾ ಹೇಳಿದ್ದಾರೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ನಿರ್ಲಕ್ಷ್ಯವೇ ಕಾಂಗ್ರೆಸ್ ಸೋಲಿಗೆ ಕಾರಣವೆಂದು ಭೋಜೇಗೌಡರು ಹೇಳಿದ್ದಾರೆ. ಆದರೆ ಅದು ಭೋಜೇಗೌಡರ ಅಭಿಪ್ರಾಯ.ಭೋಜೇಗೌಡರ ಅಭಿಪ್ರಾಯ ನಾವು ಯಾಕೆ ಒಪ್ಪಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ. ಪಕ್ಷದ ಅನಾಲಿಸಿಸ್ ಬೇರೆ ರೀತಿ ಇತ್ತು, ಯಾಕೆ ಸೋತಿದ್ದೇವೆಂದು ವಿಶ್ಲೇಷಣೆ ಮಾಡಿದ್ದೇವೆ...Kannada News Portal