ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ವಿತ್ತ ಸಚಿವ ಅರುಣ್​ ಜೇಟ್ಲಿ ನಮ್ಮ ಕುಟುಂಬದ ಸರ್ವನಾಶಕ್ಕೆ ಮುಂದಾಗಿದ್ದಾರೆ. ಐಟಿ ದಾಳಿ ನಡೆಸುವ ಮೂಲಕ ಕುಟುಂಬಕ್ಕೆ ಸಂಚಕಾರ ತರಲು ಪ್ರಯತ್ನಿಸುತ್ತಿರುವ ಅವರ ಕ್ರಮ ಸಫಲವಾಗುವುದಿಲ್ಲ ಎಂದು ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್​ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಟಿಟಿವಿ ದಿನಕರನ್​
ಸುದ್ದಿಗೋಷ್ಠಿಯಲ್ಲಿ ಟಿಟಿವಿ ದಿನಕರನ್​

ಶುಕ್ರವಾರ ರಾತ್ರಿ ಪೋಯರ್ಸ್​ ಗಾರ್ಡನ್​ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಿನಕರನ್​, ಪೋಯರ್ಸ್​ ಗಾರ್ಡನ್​ ನಿವಾಸ ಅಮ್ಮ (ಜಯಲಲಿತಾ) ಅವರು ಬಾಳಿ ಬದುಕಿದ ನಿವಾಸ. ನಮ್ಮೆಲ್ಲರಿಗೆ ಅದು ದೇಗುಲವಿದ್ದಂತೆ. ಆದರೆ ಸಿಎಂ ಪಳನಿಸ್ವಾಮಿ ಮತ್ತು ಪನ್ನೀರ್​ ಸೆಲ್ವಂ ತಮ್ಮ ರಾಜಕೀಯ ದುರುದ್ದೇಶಕ್ಕಾಗಿ ಪ್ರಧಾನಿ ಮೋದಿ ಅವರೊಂದಿಗೆ ಕೈ ಜೋಡಿಸಿ, ಐಟಿ ದಾಳಿ ನಡೆಸುವ ಮೂಲಕ ಅಮ್ಮಾ ನಿವಾಸವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಹೇಳಿದರು.

ಕಳೆದ ರಾತ್ರಿ ನಡೆದ ಐಟಿ ದಾಳಿ ಹಿಂದೆ ರಾಜಕೀಯ ಷಡ್ಯಂತ್ರವಿದೆ. ಪಳನಿ ಮತ್ತು ಪನ್ನೀರ್​ ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಐಟಿ ದಾಳಿಗೆ ಕುಮ್ಮಕ್ಕು ನೀಡಿದ್ದಾರೆ. ಐಟಿ ದಾಳಿ ಮೂಲಕ ನಮ್ಮ ಕುಟುಂಬವನ್ನು ಒಡೆಯಲು ಜೇಟ್ಲಿ ಮತ್ತು ಮೋದಿ ಅವರು ಪ್ರಯತ್ನಿಸುತ್ತಿದ್ದಾರೆ. ನಮ್ಮ ಬಣದ ಪ್ರತಿನಿಧಿಗಳನ್ನು ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Please follow and like us:
0
http://bp9news.com/wp-content/uploads/2017/11/87b04f4e3e990fe46a7d4de7357ed8cc.jpghttp://bp9news.com/wp-content/uploads/2017/11/87b04f4e3e990fe46a7d4de7357ed8cc-150x150.jpgBP9ತಂತ್ರಜ್ಞಾನರಾಷ್ಟ್ರೀಯchennai,Modi and Jaitley are in the forefront of the destruction of our family: TTV Dinakaranಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ವಿತ್ತ ಸಚಿವ ಅರುಣ್​ ಜೇಟ್ಲಿ ನಮ್ಮ ಕುಟುಂಬದ ಸರ್ವನಾಶಕ್ಕೆ ಮುಂದಾಗಿದ್ದಾರೆ. ಐಟಿ ದಾಳಿ ನಡೆಸುವ ಮೂಲಕ ಕುಟುಂಬಕ್ಕೆ ಸಂಚಕಾರ ತರಲು ಪ್ರಯತ್ನಿಸುತ್ತಿರುವ ಅವರ ಕ್ರಮ ಸಫಲವಾಗುವುದಿಲ್ಲ ಎಂದು ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್​ ಹೇಳಿದ್ದಾರೆ. ಶುಕ್ರವಾರ ರಾತ್ರಿ ಪೋಯರ್ಸ್​ ಗಾರ್ಡನ್​ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಿನಕರನ್​, ಪೋಯರ್ಸ್​ ಗಾರ್ಡನ್​...Kannada News Portal