ಚಾಮರಾಜನಗರ: ಕರ್ನಾಟಕಕ್ಕೆ ಆಗಮಿಸಿರುವ ನರೇಂದ್ರ ಮೋದಿ ಅವರು ತಮ್ಮ ಮೊದಲ ಪ್ರಚಾರಸಭೆಯಲ್ಲಿ ಅಬ್ಬರಿಸಿದ್ದಾರೆ. ಕರ್ನಾಟಕದಲ್ಲಿ ಬರೀ ಅಲೆ ಅಲ್ಲ, ಬಿರುಗಾಳಿಯೇ ಎದ್ದು ಬಿಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯ ಸಮಾವೇಶದಲ್ಲಿ ಮಾತನಾಡಿದ ಅವರು, ಇವತ್ತು ಮೇ. 1 ಗುಜರಾತ್ ಸ್ಥಾಪನೆ ದಿನ. ಕಾರ್ಮಿಕ ದಿನದ ಶುಭಾಶಯಗಳು. ಮೇ.1 ಮೂರು ವರ್ಷಗಳ ಹಿಂದೆ ನಾನು ಕೆಂಪುಕೋಟೆಯಲ್ಲಿ ಘೋಷಣೆ ಮಾಡಿದ್ದಂತೆ ಗ್ರಾಮ ಗ್ರಾಮಗಳಲ್ಲಿ ವಿದ್ಯುತ್ ಕೊಡುವಂತಹ ಕೆಲಸವನ್ನು ಸಂಪೂರ್ಣಗೊಳಿಸಿದ್ದೇನೆ.

ಅಸ್ಸಾಂನ ಕೊನೆಯ ಹಳ್ಳಿಗೂ ವಿದ್ಯುತ್ ಕಲ್ಪಿಸಲಾಗಿದೆ ಇದರೊಂದಿಗೆ ದೇಶದ ಎಲ್ಲ ಗ್ರಾಮಗಳಿಗೂ ವಿದ್ಯುತ್ ನೀಡಿದ್ದೇನೆ ಎಂದಿದ್ದಾರೆ. ಇಂದಿನ ಕಾಂಗ್ರೆಸ್ ಅಧ್ಯಕ್ಷರಿಗೆ ದೇಶದ ಸಂಸ್ಕೃತಿ ಬಗ್ಗೆ ಕನಿಷ್ಠ ಗೌರವವೂ ಇಲ್ಲ. ವಂದೇ ಮಾತರಂಗೆ ಗೌರವ ತೋರಿಸದ ಇವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ.

ಸೋನಿಯಾಗಾಂಧಿ ಅಧ್ಯಕ್ಷರಾಗಿದ್ದಾಗ 2005 ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ದೇಶದ ಅಷ್ಟೂ ಗ್ರಾಮಗಳಿಗೆ ವಿದ್ಯುತ್ ನೀಡುತ್ತೇವೆ ಎಂದು ವಾಗ್ದಾನ ನೀಡಿದ್ದರು ಆದರೆ ಆ ಕೆಲಸವನ್ನು ಮಾಡುವುದಕ್ಕೆ ನರೇಂದ್ರ ಮೋದಿಯವರೇ ಬರಬೇಕಾಯಿತು ಎಂದು ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ.

Please follow and like us:
0
http://bp9news.com/wp-content/uploads/2018/05/narendra-modi-759.jpghttp://bp9news.com/wp-content/uploads/2018/05/narendra-modi-759-150x150.jpgBP9 News Bureauಪ್ರಮುಖಚಾಮರಾಜನಗರ: ಕರ್ನಾಟಕಕ್ಕೆ ಆಗಮಿಸಿರುವ ನರೇಂದ್ರ ಮೋದಿ ಅವರು ತಮ್ಮ ಮೊದಲ ಪ್ರಚಾರಸಭೆಯಲ್ಲಿ ಅಬ್ಬರಿಸಿದ್ದಾರೆ. ಕರ್ನಾಟಕದಲ್ಲಿ ಬರೀ ಅಲೆ ಅಲ್ಲ, ಬಿರುಗಾಳಿಯೇ ಎದ್ದು ಬಿಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯ ಸಮಾವೇಶದಲ್ಲಿ ಮಾತನಾಡಿದ ಅವರು, ಇವತ್ತು ಮೇ. 1 ಗುಜರಾತ್ ಸ್ಥಾಪನೆ ದಿನ. ಕಾರ್ಮಿಕ ದಿನದ ಶುಭಾಶಯಗಳು. ಮೇ.1 ಮೂರು ವರ್ಷಗಳ ಹಿಂದೆ ನಾನು ಕೆಂಪುಕೋಟೆಯಲ್ಲಿ ಘೋಷಣೆ ಮಾಡಿದ್ದಂತೆ ಗ್ರಾಮ ಗ್ರಾಮಗಳಲ್ಲಿ ವಿದ್ಯುತ್ ಕೊಡುವಂತಹ ಕೆಲಸವನ್ನು...Kannada News Portal