ಬೆಂಗಳೂರು: ಕರ್ನಾಟಕ  ಸೇರಿದಂತೆ  ನೆರೆಪೀಡಿತ ರಾಜ್ಯಗಳಿಗೆ ಅಗತ್ಯ  ನೆರವು ನೀಡುವುದಾಗಿ ಪ್ರಧಾನಿ  ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ನೀತಿ ಅಯೋಗದ 4 ನೇ ಆಡಳಿತಮಂಡಳಿ ಸಭೆಯಲ್ಲಿ ಪ್ರಸ್ತಾವಿಕ ಮಾತನಾಡಿದ ಅವರು, ಅಭಿವೃದ್ದಿ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವುದೆ  ತಾರತಮ್ಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನೀತಿ ಅಯೋಗ ದೇಶದ 115 ಜಿಲ್ಲೆಗಳನ್ನು  ಗುರುತಿಸಿ ಅವುಗಳ ಸಮಗ್ರ ಅಭಿವೃದ್ದಿಗೆ ಕ್ರಮ ತೆಗೆದುಕೊಂಡಂತೆ ರಾಜ್ಯಗಳು ಶೇಕಡ  20 ರಷ್ಟು  ತಾಲೂಕು ಗಳನ್ನು ಗುರತಿಸಿ ಅವುಗಳ ಅಭಿವೃದ್ದಿಗೆ ಕ್ರಮಕೈಗೊಳ್ಳಬೇಕು ಎಂದು ಸಲಹೆ  ನೀಡಿದರು.

ಇದಲ್ಲದೆ ಏಕ ಕಾಲಕ್ಕೆ ಲೋಕಸಭೆ ಮತ್ತು ವಿಧಾನ ಸಭೆ  ಚುನಾವಣೆ ನಡೆಸುವ ಬಗ್ಗೆ ಎಲ್ಲ ರಾಜ್ಯಗಳು ಒಟ್ಟಿಗೆ  ಚರ್ಚೆ ಮಾಡಿ ಒಂದು ಒಮ್ಮತದ ನಿರ್ಧಾರಕ್ಕೆ  ಬರಬೇಕು ಇದರಿಂದ ಅನಗತ್ಯ  ವೆಚ್ಚ ಉಳಿತಾಯವಾಗಿ ಸಂಪನ್ಮೂಲ ಸದುಪಯೋಗವಾಗಲಿದೆ ಎಂದರು. ಇನ್ನು ದೇಶ ತ್ವರಿತಗತಿಯಲ್ಲಿ ಅಭಿವೃದ್ದಿ ಹೊಂದಿ ಎರಡಂಕಿ ಆರ್ಥಿಕ  ಪ್ರಗತಿ ಸಾಧಿಸುವುದು ಬಹಳ ಕಷ್ಟದ ಕೆಲಸವಾಗಲಿದ್ದು, ಇದಕ್ಕೆ   ರಾಜ್ಯಗಳ ಸಹಕಾರ  ಬೇಕು ಎಂದು ಮನವಿ ಮಾಡಿದರು.
Please follow and like us:
0
http://bp9news.com/wp-content/uploads/2018/06/Capture.PNG12.pnghttp://bp9news.com/wp-content/uploads/2018/06/Capture.PNG12-150x150.pngBP9 Bureauಪ್ರಮುಖಬೆಂಗಳೂರುರಾಜಕೀಯಬೆಂಗಳೂರು: ಕರ್ನಾಟಕ  ಸೇರಿದಂತೆ  ನೆರೆಪೀಡಿತ ರಾಜ್ಯಗಳಿಗೆ ಅಗತ್ಯ  ನೆರವು ನೀಡುವುದಾಗಿ ಪ್ರಧಾನಿ  ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ನೀತಿ ಅಯೋಗದ 4 ನೇ ಆಡಳಿತಮಂಡಳಿ ಸಭೆಯಲ್ಲಿ ಪ್ರಸ್ತಾವಿಕ ಮಾತನಾಡಿದ ಅವರು, ಅಭಿವೃದ್ದಿ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವುದೆ  ತಾರತಮ್ಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನೀತಿ ಅಯೋಗ ದೇಶದ 115 ಜಿಲ್ಲೆಗಳನ್ನು  ಗುರುತಿಸಿ ಅವುಗಳ ಸಮಗ್ರ ಅಭಿವೃದ್ದಿಗೆ ಕ್ರಮ ತೆಗೆದುಕೊಂಡಂತೆ ರಾಜ್ಯಗಳು ಶೇಕಡ  20 ರಷ್ಟು  ತಾಲೂಕು ಗಳನ್ನು ಗುರತಿಸಿ...Kannada News Portal