ಬೆಂಗಳೂರು : ಕರ್ನಾಟಕದಲ್ಲಿ ಸಿದ್ಧರುಪಾಯ್ಯ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಸಿದ್ದರೂಪಾಯಿಯ ಸರ್ಕಾರ ಕರ್ನಾಟಕವನ್ನು ಸಾಲಗಾರ ರಾಜ್ಯವನ್ನಾಗಿ ಮಾಡಿದೆ. ಸಿದ್ದರಾಮಯ್ಯರ ಕೆಟ್ಟ ಆಡಳಿತದಿಂದ ಜನ ಸಾಲದಿಂದ ನರಳುತ್ತಿದ್ದರೆ, ಮತ್ತೊಂದೆಡೆ ಅವರ ಸಚಿವ ಸಂಪುಟದ ಮಂತ್ರಿಗಳು ಹಣದ ಹೊಳೆಯಲ್ಲಿ ತೇಲುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಬಳ್ಳಾರಿಯಲ್ಲಿ ಗುಡುಗಿದ್ದಾರೆ.

ಈ ರೀತಿ ಲೂಟಿಕೋರ ಸರ್ಕಾರ ಲೂಟಿ ಮಾಡಿರುವ ಅಷ್ಟೂ ಹಣವನ್ನೂ ಒಂದೊಂದು ರೂಪಾಯಿ ಲೆಕ್ಕ ಕೇಳಲು ಕಮಲದ ಗುರುತಿಗೆ ತಾವು ವೋಟು ಹಾಕಬೇಕಿದೆ. ಕರ್ನಾಟಕದ ಸಿದ್ದರಾಮಯ್ಯನವರ ಸರ್ಕಾರ ತೆಗೆದು ಕೊಂಡಿರುವ ರಾಜಕೀಯ ನಿರ್ಣಯಗಳನ್ನು ತೆಗೆದು ಕೊಂಡಿರುವ ನಿರ್ಧಾರಗಳನ್ನು ಯೋಚಿಸಲೇ ಬೇಕಾದ ಕಾಲ ಬಂದಿದೆ.

ಜೈಲಿಗೆ ಹೋಗಿ ಬಂದವರು, ಬಳ್ಳಾರಿಯನ್ನು ಕೊಳ್ಳೆ ಹೊಡೆದವರು ಎಂದು ನಮ್ಮ ಬಿಜೆಪಿ ಪಕ್ಷದ ಮುಖಂಡರನ್ನು ಜರಿಯುತ್ತಿದೆ. ಆದರೆ ಅವರೇ ಜೈಲಿಗೆ ಹೋಗಿ ಬಂದವರಿಗೆ ‘ಟಿಕೆಟ್ ಕೊಟ್ಟು ತಾನು ಕಳ್ಳ ಪರರನ್ನು ನಂಬ’ ಎನ್ನುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರ ಖರ್ಚು ಮಾಡಿರುವ ಹಣದ ಲಾಭ ಜನರಿಗೆ ತಲುಪಿಲ್ಲ. ದಳ್ಳಾಳಿಗಳು ಮತ್ತು ಸಿಎಂ ಆಪ್ತರ ಕೈಗೆ ಸೇರುತ್ತಿದ್ದೆ. ಈ ಸಿದ್ದರಾಮಯ್ಯ ಸರ್ಕಾರದ ಕಾರಣದಿಂದ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ಳಲು ಲಂಚ ನೀಡಲೇ ಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಮತ್ತು ಸೋನಿಯಗಾಂಧಿ ಏನು ಹೇಳಿದ್ದರೋ ಅದು ಯಾವುದೂ ಆಗಿಲ್ಲ.
ಇತ್ತ ಕಾಂಗ್ರೆಸ್ ರಾಜ್ಯ ಸರ್ಕಾರವೂ 5 ವರ್ಷಗಳಲ್ಲಿ ಯಾವುದೇ ಗಣಿ ನೀತಿ ಮಾಡಿಲ್ಲ. ರಾಜಕೀಯ ಕಾರಣಕ್ಕಾಗಿ ಮಾತ್ರ ಬಳ್ಳಾರಿಯ ಪಾದಯಾತ್ರೆ ಮಾಡಿದ್ದಾರೆ ಅಷ್ಟೇ. ಹಿಂದೆ ಬಳ್ಳಾರಿಯಿಂದ ಸ್ಪರ್ಧೆ ಮಾಡಿದ ಸೋನಿಯಾ ಅವರು 3 ಸಾವಿರ ಕೋಟಿ ಪ್ಯಾಕೇಜ್ ನೀಡುವುದಾಗಿ ಹೇಳಿದ್ದರು, ಇಲ್ಲಿಂದ ಹೋದ ಮೇಲೆ ಬಳ್ಳಾರಿಯನ್ನು ಮರೆತರೂ, ಆ ಪ್ಯಾಕೇಜನ್ನು ಸಹ ಮರೆತರು. ಬಳ್ಳಾರಿಯಲ್ಲಿ ಇಷ್ಟೊಂದು ನೈಸರ್ಗಿಕ ಸಂಪನ್ಮೂಲ ಇದ್ದರೂ ಬಳ್ಳಾರಿಯನ್ನು ಅಭಿವೃದ್ಧಿ ಪಡಿಸಿಲ್ಲ. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ 2 ಸಾವಿರ ಕೋಟಿ ಪ್ಯಾಕೇಜ್ ನೀಡಿ ಕುಡಿಯೋ ನೀರು ಮತ್ತು ಆಸ್ಪತ್ರೆಯನ್ನು ಕಟ್ಟಿ ಜನರಿಗೆ ಒಳಿತು ಮಾಡಿತ್ತು.

ಆದರೆ ಇದೀಗ ಬಳ್ಳಾರಿಯ ನೀರಿನ ಸಮಸ್ಯೆಯನ್ನು ಬಗೆ ಹರಿಸಲು ಕಾಂಗ್ರೆಸ್ ವಿಫಲವಾಗಿದೆ. ರೈತನ ಜಮೀನಿಗೂ ನೀರಿಲ್ಲ, ಮನೆಯಲ್ಲಿ ಕುಡಿಯಲೂ ನೀರಿಲ್ಲ. ಬಹುದಿನಗಳ ಬೇಡಿಕೆ ತುಂಗಭದ್ರ ಅಣೆಕಟ್ಟಿನ ಹೂಳೆತ್ತುವ ಕಾರ್ಯವೂ ಆಗಿಲ್ಲ. ಚುನಾವಾಣ ಸಂದರ್ಭದಲ್ಲಿ ಮಾತ್ರ ಆಶ್ವಾಸನೆ ಕೊಡಲು ಮಾತ್ರ ಕಾಂಗ್ರೆಸ್ ಮತ್ತೆ ನಿಮ್ಮ ಮುಂದೆ ಬಂದು ನಿಲ್ಲುತ್ತಿದೆ. ಅವರನ್ನು ಮತ್ತೆ ನಂಬಬೇಡಿ.

ನಾವು ನಿಮಗೆ ಭರವಸೆ ನೀಡುತ್ತೇವೆ. ನಿಮ್ಮ ಬಹುಕಾಲದ ನೀರಿನ ಸಮಸ್ಯೆ ಇದೆ ಅದನ್ನು ನಾವು ಇರುವ ಎಲ್ಲಾ ಸಣ್ಣ ಪುಟ್ಟ ಡ್ಯಾಂಗಳನ್ನು ಪುನರುಜ್ಜೀವನಗೊಳಿಸಿ ಕೇವಲ ಬಳ್ಳಾರಿಗೆ ಮಾತ್ರ ಅಲ್ಲಾ ಇಡೀ ರಾಜ್ಯದ ರೈತರ ನೀರಿನ ಸಮಸ್ಯೆಯನ್ನು ಬಗೆ ಹರಿಸುತ್ತೇವೆ.

ಮಹರಾಷ್ಟ್ರದಲ್ಲಿ ಆಡಳಿಕ್ಕೆ ಬಂದ ಬಿಜೆಪಿ ಸರ್ಕಾರ ಅಲ್ಲಿ ಜನಸಂಪನ್ಮೂಲವನ್ನು ಹೆಚ್ಚು ಮಾಡಿದೆ. ಅಲ್ಲಿ ಇದ್ದ ನೀರಿನ ಸಮಸ್ಯೆ ಬಗೆ ಹರಿಸಿದೆ. ಮಹರಾಷ್ಟ್ರದಲ್ಲಿ ಜನಾಂದೋಲನವೇ ಆಯಿತು. 6 ಸಾವಿರ ಕೋಟಿ ಖರ್ಚು ಮಾಡಿ 12 ಸಾವಿರದಷ್ಟು ಸಮಸ್ಯೆ ಬಗೆ ಹರಿಯಿತು.ಇಷ್ಟು ದೊಡ್ಡ ಕಾರ್ಯ ಮಾಡಿದ್ದು, ಬಿಜೆಪಿ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಏನು ಮಾಡಿದೆ. ಏನು ಮಾಡಿಲ್ಲ ಬರೀ ಭ್ರಷ್ಟಾಚಾರ ಮಾಡಿದೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ಕೇಂದ್ರ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತಂದಿದೆ. ಅದನ್ನು ತಾವೆಲ್ಲಾ ಉಪಯೋಗಿಸಿ ಕೊಳ್ಳ ಬೇಕು. ಕಾಂಗ್ರೆಸ್ ದಲಿತರಿಗೆ , ಹಿಂದುಳಿದ ವರ್ಗದವರಿಗೆ ಏನು ಮಾಡಿಲ್ಲ. ನಿಮಗೆ ಗೊತ್ತಿದೆ OBC ಜನರಿಗೆ ಶಾಸನ ಬದ್ಧವಾದಂತ ಮೀಸಲಾತಿ ನೀಡಬೇಕು ಎಂಬ ಆಶಯಕ್ಕೆ ಕಾಂಗ್ರೆಸ್ ಮೇಲ್ಮನೆಯಲ್ಲಿ ಒಪ್ಪಗೆ ನೀಡಲು ಮೀನಾಮೇಷ ಎಣಿಸುತ್ತಿದೆ. ನಾಲ್ಕೂವರೆ ವರ್ಷದಿಂದ ಕಾಂಗ್ರೆಸ್ ಇದೇ ಕೆಲಸ ಮಾಡುತ್ತಾ ಬಂದಿದೆ.

ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಮಾಡಬೇಕು ಎಂಬ ಧ್ವನಿ ಎದ್ದಿತ್ತು. ಖರ್ಗೆಯವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದೂ, ಅಧಿಕಾರಕ್ಕೂ ಬಂದ್ರು. ಆದರೆ ಖರ್ಗೆ ಅವರನ್ನು ಗುಪ್ತ ಮಾತದಾನ ಮಾಡಿ ಅವರನ್ನು ಮೂಲೆಗುಂಪು ಮಾಡಿದರು. ಅಷ್ಟೇ ಏಕೆ ನಿಜಲಿಂಗಪ್ಪ ಅವರಿಗೆ ಏನು ಮಾಡಿದರು ಎಂದು ನಿಮಗೆ ಗೊತ್ತಿಲ್ಲವೇ? ಅದನ್ನು ಕರ್ನಾಟಕದ ಜನ ಮರೆತಿಲ್ಲ ಅಲ್ವಾ ಎಂದರು.
ಈಗ ಸಿಎಂ ಆಗಿರುವ ವ್ಯಕ್ತಿ 7 ಕೆರೆ ನೀರು ಕುಡಿಯೋ ತರ ಪಕ್ಷಾಂತರ ಮಾಡಿಕೊಂಡು ಬರುತ್ತಲೇ ಈಗ ಸಿಎಂ ಆಗಿದ್ದಾರೆ. ಅವರು ಯಾವುದೇ ಸಿದ್ಧಾಂತದ ಮೇಲೆ ರಾಜಕೀಯ ಮಾಡುವುದಿಲ್ಲ. ಕೇವಲ ಅಧಿಕಾರ ಇದ್ದರೆ ಮಾತ್ರ ಆ ಪಕ್ಷದಲ್ಲಿ ಇರುತ್ತಾರೆ. ಆದರೆ ಒಂದು ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ ದಲಿತ ಸಮುದಾಯದ ವ್ಯಕ್ತಿಯನ್ನು ದೇಶದ ರಾಷ್ಟ್ರಪತಿಯನ್ನು ಮಾಡುತ್ತದೆ. ಅದು ನಮ್ಮ ಪಕ್ಷ.

ನಮ್ಮ ವಿರೋಧಿಗಳು, ನಮ್ಮನ್ನು ಟೀಕಿಸುತ್ತಾರೆ. ನಾವು ದಲಿತ ವಿರೋಧಿಗಳು, ಬ್ರಾಹ್ಮಣರ ಪಕ್ಷ ಎಂದು. ಆದರೆ ನಮ್ಮ ಪಕ್ಷ ದಲಿತನನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ. ಟೀ ಮಾರುವವನನ್ನು ಪ್ರಧಾನಿ ಮಾಡಿದೆ. ಇವೆಲ್ಲವೂ ನೀವು ಕೊಟ್ಟ ಶಕ್ತಿ ಎಂದರು.
ನಮ್ಮನ್ನ ಉತ್ತರ ಭಾರತದ ಪಕ್ಷ ಎಂದು ಕರೆಯುತ್ತಿದ್ದರು ಆದರೆ ದಕ್ಷಿಣದಿಂದ ಉಪ ರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಅವರನ್ನು ಆಯ್ಕೆ ಮಾಡಿದ್ದೇವೆ. ಅವರು ಕರ್ನಾಟಕಕ್ಕೆ ಚಿರ ಪರಿಚಿತರು ಮತ್ತು ಬಲ್ಲ ವ್ಯಕ್ತಿಗಳು. ಬಿಜೆಪಿಯವರು ಮಹಿಳಾ ವಿರೋಧಿ ಎಂದು ಕರೆಯುತಿದ್ದರು. ಆದರೆ ನಮ್ಮ ರಕ್ಷಣಾ ಸಚಿವರು ಮಹಿಳೆಯಾದ ನಿರ್ಮಲಾ ಸೀತಾರಾಮನ್. ಅವರು ತಮಿಳು ನಾಡಿನವರು. ಕಾಂಗ್ರೆಸ್ ಸುಮ್ಮನೆ ಟೀಕೆ ಮಾಡುತ್ತದೆ ನಾವು ಕೆಲಸ ಮಾಡಿ ತೋರಿಸುತ್ತೇವೆ.

ಇದು ನಮ್ಮ ಬಳ್ಳಾರಿ. ಇಡೀ ಕ್ಷೇತ್ರ ನೈಸರ್ಗಿಕ ಸಂಪನ್ಮೂಲಗಳಿಂದ ಕೂಡಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆ ರಾಜ್ಯಗಳ ಸಂಪನ್ಮೂಲಗಳಲ್ಲಿ ಶೇಖಡ 33 ರಷ್ಟು ಮೌಲ್ಯಕ್ಕೆ ಸೇರಿದ್ದು ಎಂದು ಕಾನೂನು ಮಾಡಿದ್ದೇವೆ. ಈ ಒಂದು ಕಾನೂನಿನಿಂದ 900 ಕೋಟಿ ರಾಜ್ಯ ಸರ್ಕಾರಕ್ಕೆ ಆದಾಯ ಬಂದಿದೆ.

ಆದರೆ ನಿದ್ರೆ ಮಾಡುವ ಸಿಎಂ, ಸೋಮಾರಿ ಸರ್ಕಾರ ಆ 900 ಕೋಟಿಯನ್ನು ಏನು ಮಾಡಿದೆ. ಕೇವಲ 9 ಸಾವಿರ ಕೋಟಿ ಮಾತ್ರ ಉಪಯೋಗ ಮಾಡಿದೆ. ಅದೇ ಹಣದಲ್ಲಿ ತುಂಗಭದ್ರ ಅಣೆಕಟ್ಟು ಕೆಲಸ ಮಾಡಿದ್ರೆ ಇಷ್ಟೊತ್ತಿಗೆ ನೀರಿನ ಸಮಸ್ಯೆ ನಿರ್ಮೂಲನೆ ಆಗುತ್ತಿತ್ತು. ಈ ಎಲ್ಲಾ ಸಮಸ್ಯೆಗಳಿಗೆ, ಸರ್ಕಾರ ಮಾಡಿರುವ ತಪ್ಪುಗಳಿಗೆ ಒಂದೇ ಪರಿಹಾರ ಅದು ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವುದು.

ಬಳ್ಳಾರಿಯ ಈ ಜಾಗದಲ್ಲಿ ಬಟ್ಟೆ ಉದ್ಯಮವನ್ನು ಅಭಿವೃದ್ಧಿ ಪಡಿಸಬೇಕಿತ್ತು. ಆದರೆ ಕಾಂಗ್ರೆಸ್ ಇವತ್ತು ಏನು ಪ್ರಯತ್ನ ಮಾಡದೇ ಕೈ ಕಟ್ಟಿ ಕುಳಿತಿದೆ. ನನ್ನ ಪ್ರೀತಿಯ ಸೋದರ ಸಹೋದರೇ, ಈ ಉದ್ದಿಮೆಯನ್ನು ಬಳ್ಳಾರಿಯಲ್ಲಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 600ಕೋಟಿ ರೂಪಾಯಿಗಳನ್ನು ಕೇಂದ್ರ ಬಿಡುಗಡೆ ಮಾಡಲಿದೆ. ಬಳ್ಳಾರಿ ಅಭಿವೃದ್ಧಿ ಆದರೆ ಕರ್ನಾಟಕ ಅಭಿವೃದ್ಧಿ. ಕರ್ನಾಟಕದ ಅಭಿವೃದ್ಧಿ ಆದ್ರೆ ಭಾರತದ ಅಭಿವೃದ್ಧಿ ಆಗುತ್ತದೆ. ಇದಕ್ಕಾಗಿ ಬಿಜೆಪಿಗೆ ಮೇ 12ಕ್ಕೆ ಮತ ನೀಡುವ ಮೂಲಕ ಶಕ್ತಿ ತುಂಬಿ. ಸ್ವಚ್ಚ ಸುಂದರ ಸುರಕ್ಷಿತ ಕರ್ನಾಟವನ್ನು ನಿರ್ಮಾಣ ಮಾಡೋಣ. ಬನ್ನಿ ಎಲ್ಲರೂ ಕೈ ಜೋಡಿಸಿ ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ ಎಂದರು. ಈ ಘೋಷಣೆಯನ್ನು ನಾಲ್ಕಾರು ಬಾರಿ ಹೇಳಿ ಕಾರ್ಯಕರ್ತರು ತಮ್ಮ ಘೋಷಣೆಗೆ ತಕ್ಕಂತೆ ಧ್ವನಿಗೂಡಿಸುವಂತೆ ಮಾಡಿದರು. ಅಲ್ಲದೇ ಭಾರತ ಮಾತೆಗೆ ಜೈ ಎಂದೇಳಿ ತಮ್ಮ ಭಾಷಣಕ್ಕೆ ವಿರಾಮ ಹೇಳಿದರು.

Please follow and like us:
0
http://bp9news.com/wp-content/uploads/2018/05/1525341060-modi_bellary.jpghttp://bp9news.com/wp-content/uploads/2018/05/1525341060-modi_bellary-150x150.jpgPolitical Bureauಪ್ರಮುಖಬಳ್ಳಾರಿರಾಜಕೀಯModi switches in Gujarat: Government shout same shout !!!ಬೆಂಗಳೂರು : ಕರ್ನಾಟಕದಲ್ಲಿ ಸಿದ್ಧರುಪಾಯ್ಯ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಸಿದ್ದರೂಪಾಯಿಯ ಸರ್ಕಾರ ಕರ್ನಾಟಕವನ್ನು ಸಾಲಗಾರ ರಾಜ್ಯವನ್ನಾಗಿ ಮಾಡಿದೆ. ಸಿದ್ದರಾಮಯ್ಯರ ಕೆಟ್ಟ ಆಡಳಿತದಿಂದ ಜನ ಸಾಲದಿಂದ ನರಳುತ್ತಿದ್ದರೆ, ಮತ್ತೊಂದೆಡೆ ಅವರ ಸಚಿವ ಸಂಪುಟದ ಮಂತ್ರಿಗಳು ಹಣದ ಹೊಳೆಯಲ್ಲಿ ತೇಲುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಬಳ್ಳಾರಿಯಲ್ಲಿ ಗುಡುಗಿದ್ದಾರೆ. ಈ ರೀತಿ ಲೂಟಿಕೋರ ಸರ್ಕಾರ ಲೂಟಿ ಮಾಡಿರುವ ಅಷ್ಟೂ ಹಣವನ್ನೂ ಒಂದೊಂದು ರೂಪಾಯಿ ಲೆಕ್ಕ ಕೇಳಲು ಕಮಲದ ಗುರುತಿಗೆ ತಾವು ವೋಟು ಹಾಕಬೇಕಿದೆ....Kannada News Portal