ನವದೆಹಲಿ : 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಸರ್ಕಾರ ತೋರಿರುವ ಬದ್ಧತೆಯನ್ನು ಪುನರುಚ್ಚರಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ನಿಟ್ಟಿನಲ್ಲಿ ಎಲ್ಲ ರೈತರಿಗೂ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರೈತರೊಂದಿಗೆ ನಮೋ ಆ್ಯಪ್‌ ಮೂಲಕ  ದೇಶದ 600 ಜಿಲ್ಲೆಗಳ ರೈತರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ, ದೇಶಕ್ಕೆ ಆಹಾರ ಭದ್ರತೆಯನ್ನು ಒದಗಿಸಿರುವ ರೈತರ ಶ್ರಮವನ್ನು ಅಭಿನಂದಿಸಿ, ಜನರ ಉಳಿವಿಗಾಗಿ ರೈತರು ಅತ್ಯಗತ್ಯ ಎಂದಿದ್ದಾರೆ.

ಇನ್ನು ರೈತರಿಗೆ ಸಹಾಯ ಮಾಡಲು ತಂತ್ರಜ್ಞಾನದ ಹೊಸ ನಾವೀನ್ಯತೆಗಳ ಅಗತ್ಯವಿದೆ. ಹಾಗಾಗಿ ಸರ್ಕಾರ ಅವರ ಅಭಿವೃದ್ಧಿಯನ್ನು ಸಾಧಿಸಲು ನೆರವಾಗುತ್ತದೆ. ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ದೊರಕುವಂತೆ ಮಾಡಲು ಮಧ್ಯವರ್ತಿಗಳನ್ನು ತೆಗೆದುಹಾಕಲು ಪ್ರಯತ್ನಿಸಿದೆ. ರೈತರೇ ನೇರವಾಗಿ ತಮ್ಮ ಬೆಳೆಗಳನ್ನು ಗ್ರಾಹಕರಿಗೆ ಒದಗಿಸುವ ವ್ಯವಸ್ಥೆಗೆ ಯತ್ನಿಸಿದೆ ಎಂದು ಹೇಳಿದರು ಎಂದರು.

ಪ್ರಧಾನಿ ಮೋದಿ ಹೇಳಿದ ಪ್ರಮುಖಾಂಶಗಳು :

1. 2022 ರ ಹೊತ್ತಿಗೆ ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರ ಬದ್ಧ.
2. ರೈತರಿಗೆ ಸಹಾಯ ಮಾಡಲು ಮಣ್ಣಿನ ಆರೋಗ್ಯ ಕಾರ್ಡುಗಳನ್ನು ಪರಿಚಯಿಸಿದ್ದೇವೆ.
3. ನಮ್ಮ ಸರ್ಕಾರ ಕೃಷಿ ಸಮುದಾಯದ ಏಳಿಗೆಗೆ ದಣಿವರಿವಿಲ್ಲದೆ ಕಾರ್ಯನಿರ್ವಹಿಸುತ್ತಿದೆ.
4. ದೇಶದಲ್ಲಿ ಆಹಾರ ಧಾನ್ಯದ ಉತ್ಪಾದನೆ ಜತೆಗೆ ಹಾಲು, ಹಣ್ಣು ಮತ್ತು ತರಕಾರಿ ಉತ್ಪಾದನೆಯಲ್ಲಿಯೂ ಎಲ್ಲ ಕಾಲದಲ್ಲೂ ದೇಶ ಮುನ್ನಡೆ ಸಾಧಿಸಿದೆ.
5. ದಾಖಲೆಯ ಕೃಷಿ ಉತ್ಪಾದನೆಯ ಹೊರತಾಗಿಯೂ ರಸಗೊಬ್ಬರದ ಮಾರಾಟವನ್ನು ತಗ್ಗಿಸಲು ಕೋಟಿಂಗ್‌ ಪಾಲಿಸಿಯನ್ನು ಕಡ್ಡಾಯ ಮಾಡಲಾಗಿದೆ.
6. ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆಯಲು ಸರ್ಕಾರ ಶ್ರಮಿಸುತ್ತಿದ್ದು, ಈ ವರ್ಷದ ಬಜೆಟ್‌ನಲ್ಲಿ ಇದಕ್ಕೆ ಸೂಕ್ತ ಉತ್ತರ ಕಂಡುಕೊಳ್ಳಲಾಗುತ್ತದೆ.

Please follow and like us:
0
http://bp9news.com/wp-content/uploads/2018/06/modi-1.jpghttp://bp9news.com/wp-content/uploads/2018/06/modi-1-150x150.jpgPolitical Bureauಪ್ರಮುಖರಾಜಕೀಯರಾಷ್ಟ್ರೀಯModi talks with farmers in 600 districts of India Recharges to double farmers' revenueನವದೆಹಲಿ : 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಸರ್ಕಾರ ತೋರಿರುವ ಬದ್ಧತೆಯನ್ನು ಪುನರುಚ್ಚರಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ನಿಟ್ಟಿನಲ್ಲಿ ಎಲ್ಲ ರೈತರಿಗೂ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ರೈತರೊಂದಿಗೆ ನಮೋ ಆ್ಯಪ್‌ ಮೂಲಕ  ದೇಶದ 600 ಜಿಲ್ಲೆಗಳ ರೈತರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ, ದೇಶಕ್ಕೆ ಆಹಾರ ಭದ್ರತೆಯನ್ನು ಒದಗಿಸಿರುವ ರೈತರ ಶ್ರಮವನ್ನು ಅಭಿನಂದಿಸಿ, ಜನರ ಉಳಿವಿಗಾಗಿ ರೈತರು ಅತ್ಯಗತ್ಯ ಎಂದಿದ್ದಾರೆ. var domain = (window.location != window.parent.location)?...Kannada News Portal