ಬೆಂಗಳೂರು : ಮನೆ ಮನೆಗೆ ಹೋಗಿ ಮತ ಹಾಕಿಸಿ, ಹೆಚ್ಚು ಹೆಚ್ಚು ಮತ ಚಲಾಯಿಸಿ, ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ ಎಂದು ವಿಜಯಪುರದಲ್ಲಿ ನಡೆದ ಬೃಹತ್​ ಬಿಜೆಪಿ ಪರ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಕರೆ ನೀಡಿದರು.

ನಮಗೆ ಸ್ವತಂತ್ರ ಬಂದು 70 ವರ್ಷ ಆಗಿದೆ. ಆದರೂ ನಮ್ಮ ರಾಷ್ಟ್ರದಲ್ಲಿ ನಾಲ್ಕು ಕೋಟಿ ಮನೆಗಳಲ್ಲಿ ಮೂಲಭೂತ ಸೌಕರ್ಯವಾಗಿರುವ ವಿದ್ಯುತ್​ ಸೌಲಭ್ಯ ನೀಡಲಾಗಿರಲಿಲ್ಲ ಈ ಕಾಂಗ್ರೆಸ್​ ಸರ್ಕಾರಕ್ಕೆ. ಸಂಜೆ ಆಗುತ್ತಿದ್ದಂತೆ ಮನೆ ಮತ್ತು ಇಡೀ ಗ್ರಾಮಗಳು ದೀಪ ಹಿಡಿದು ಕತ್ತಲಲ್ಲಿ ಕೂರುತ್ತಿತ್ತು.  ಆದರೆ ನಾವು ಬಂದ 4 ವರ್ಷಗಳಲ್ಲಿ ಗಂಭೀರವಾಗಿ ಈ ವಿಚಾರದ ಮೇಲೆ ಸಾಕಷ್ಟು ಗಮನಹರಿಸಿ ಶೇಕಡ 60 ರಷ್ಟು ವಿದ್ಯುತ್​ ಸಂಪರ್ಕ ನೀಡಿದ್ದೇವೆ. ಇನ್ನು 6 ತಿಂಗಳಲ್ಲಿ ಉಳಿದ ಸಂಪರ್ಕ ವ್ಯವಸ್ಥೆಯನ್ನು ಪೂರ್ಣಗೊಳಿಸಲಾಗುವುದು ಎಂದ ಮೋದಿಯವರು ತಿಳಿಸಿದ್ದು, ಈ ಕಾರಣಕ್ಕಾಗಿಯೇ ನಾವು ಇಡೀ ಭಾರತದಲ್ಲಿ ಅಧಿಕಾರ ಹಿಡಿಯುತ್ತಿದ್ದೇವೆ. ಕಾಂಗ್ರೆಸ್​ ಪಕ್ಷವನ್ನು ಜನ ಇಡೀ ಹಿಂದೂಸ್ಥಾನದಿಂದಲೇ ಕಣ್ಮರೆ ಮಾಡುತ್ತಿದ್ದಾರೆ.

ಇತ್ತ ಕರ್ನಾಟಕದಲ್ಲಿಯೂ 6 ಲಕ್ಷ ಪರಿವಾರದ ಮನೆಗಳಲ್ಲಿ ವಿದ್ಯತ್​ ಸಂಪರ್ಕ ಇಲ್ಲ. ಈ ಬಗ್ಗೆ ಸರ್ಕಾರ ಕಿಂಚಿತ್ತಾದರೂ ತಲೆಕಡಿಸಿಕೊಂಡಿಲ್ಲ ಎಂದರೆ ಏನು ಹೇಳ ಬೇಕು ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಇನ್ನು ಗ್ಯಾಸ್​ ಸಿಲಿಂಡರ್​ಗಳ ಸಂಪರ್ಕ ನೀಡುವ ಬಗ್ಗೆ ಹೇಳುವುದಾದರೆ, ಅಡುಗೆ ಮನೆಯಲ್ಲಿ ಸೀಮೆ ಎಣ್ಣೆ ಮತ್ತು ಕಟ್ಟಿಗೆಗಳಿಂದ ಒಲೆ ಹಚ್ಚಿ ಅಡುಗೆ ಮಾಡುತ್ತಿದ್ದ ಹೆಣ್ಣು ಮಕ್ಕಳ, ತಾಯಂದಿರ ಕಷ್ಟ ಈ ಕಾಂಗ್ರೆಸ್ಸಿಗರಿಗೆ ಕಾಣಲೇ ಇಲ್ಲ. ಅದು ಅವರಿಗೆ ಬೇಕಾಗೂ ಇರಲಿಲ್ಲ. ಆದರೆ ನಾನು ಅಧಿಕಾರಕ್ಕೆ ಬಂದ ಮೇಲೆ 10 ಕೋಟಿ ಹೊಸ ಸಿಲಿಂಡರ್​ ಕನೆಕ್ಷನ್ಸ್ ನೀಡಲಾಗಿದೆ.

ನಾವು ರಾಜ್ಯ ಮತ್ತು ರಾಷ್ಟ್ರದ ವಿಕಾಸಕ್ಕಾಗಿ ಮತ ಕೇಳಿದ್ರೆ, ಕಾಂಗ್ರೆಸ್​ ತಮ್ಮ ಕುಟುಂಬದ ಅಭಿವೃದ್ಧಿಗಾಗಿ ಮತ ಕೇಳುತ್ತಿದೆ. ತಮ್ಮ ವಂಶಾಡಳಿತಕ್ಕಾಗಿ ಇಡೀ ರಾಷ್ಟ್ರದ ಅಭಿವೃದ್ಧಿಯನ್ನು ಕುಂದು ಮಾಡಿತ್ತು. ರಾಜ್ಯದಲ್ಲಿಯೂ ಅದಕ್ಕಾಗಿಯೇ ಮತ ಕೇಳುತ್ತಿದೆ. ಕೇಂದ್ರದಲ್ಲಿ ಈ ಕಾರಣಕ್ಕಾಗಿಯೇ ಅಧಿಕಾರ ಕಳೆದು ಕೊಂಡಿದೆ. ರಾಜ್ಯದಲ್ಲಿಯೂ ಕಾಂಗ್ರೆಸ್​ಗೆ ಇದೇ ಪರಿಸ್ಥಿತಿಯಾಗಲಿದೆ.

ಇದೀಗ ಕಾಂಗ್ರೆಸ್​ ತನ್ನ ಖುರ್ಚಿ ಉಳಿಸಿ ಕೊಳ್ಳಲು ಎಂತ ಸುಳ್ಳನಾದ್ರೂ ಹೇಳುತ್ತದೆ. ಈ ಪ್ರಾಂತ್ಯದಲ್ಲಿಯೇ ಒಂದು ಪ್ರಕರಣ ಆಯ್ತು. ಓರ್ವ ದಲಿತ ಅಪ್ರಾಪ್ತ ಹೆಣ್ಣು ಮಗಳನ್ನು ರೇಪ್​ ಮಾಡಿ ಪಾಪಿಗಳು ಸಾಯಿಸಿದ್ದರು. ಅಂತ ಅಪರಾಧಿಗಳಿಗೆ ನಮ್ಮ ಸರ್ಕಾರ ಎಂದು ಕ್ಷಮೆಯನ್ನು ನೀಡಲ್ಲ. ಅತ್ಯಚಾರದ ವಿರುದ್ಧ ಕಠಿಣ ಕಾನೂನು ತಂದು, ಮರಣ ದಂಡನೆ ನೀಡುವಂತ ತಾಕತ್ತು ನಮ್ಮ ಸರ್ಕಾರಕ್ಕೆ ಮಾತ್ರ ಇದೆ. ಹೆಣ್ಣು ಯಾವ ಧರ್ಮದವರಾದ್ರೆ ಏನು ಅವರು ನಮ್ಮ ಹೆಣ್ಣಮಕ್ಕಳು. ಅವರ ಗೌರವದ ರಕ್ಷಣೆ ಆಗಬೇಕು. ಆ ಮನಸ್ಥಿತಿಯಿಂದಲೇ ದಿಟ್ಟ ಕ್ರಮ ತೆಗೆದು ಕೊಂಡಿದೆವೆ ಎಂದರು.

ಇತ್ತ ಹೆಣ್ಣು ಮಕ್ಕಳ ಮೇಲೆ ಉದ್ದ ಉದ್ದವಾದ ಭಾಷಣ ಮಾಡುತ್ತಾರೆ ಕಾಂಗ್ರೆಸ್​ನವರು ಆದರೆ, ಅವರಿಂದ ಆಗಿರುವದು ಏನು? ರಾಜ್ಯಸಭೆಯಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ತಂದಿರುವ ಕಾನೂನಿಗೆ ಇನ್ನೂ ಒಪ್ಪಿಗೆ ಸೂಚಿಸಿಲ್ಲ. ಹೆಣ್ಣು ಮಕ್ಕಳ ರಕ್ಷಣೆ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಿದೆ.

ನನಗೆ ಗೊತ್ತಿದೆ. ನೀವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತೆಗದು ಕೊಂಡು ಹೋಗಲು ಸಾಕಷ್ಟು ಕಷ್ಟ ಇತ್ತು. ನಾವು ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಸಾರಿಗೆ ಮೂಲಗಳನ್ನು ಅಭಿವೃದ್ಧಿ ಮಾಡುತ್ತಾ ಬಂದಿದ್ದೇವೆ. ಹಾಗೆ ಅಲ್ಲಲ್ಲಿ ಗೋದಾಮುಗಳನ್ನು ನಿರ್ಮಾಣ ಮಾಡಿದ್ದೇವೆ ಎಂದರು.

ಮೇ 17 ರಂದು ಬಿಎಸ್​ವೈ ಮುಖ್ಯಂತ್ರಿ ಆಗುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ನಾವು ಈ ನಿಟ್ಟಿನಲ್ಲಿ ಮತ್ತಷ್ಟ ದಿಟ್ಟ ಹೆಜ್ಜೆಗಳನ್ನು ಇಡುತ್ತೇವೆ ಎಂಬ ಆಶ್ವಾನೆ ನೀಡಿ ಪ್ರಧಾನಿಗಳು ಮನೆ ಮನೆಗೆ ಹೋಗಿ ಮತ ಹಾಕಿಸಿ, ಹೆಚ್ಚು ಹೆಚ್ಚು ಮತಚಾಲಾಯಿಸಿಸಿ, ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ ಎಂಬ ಘೋಷಣೆಯನ್ನು ಕೂಗುತ್ತಲೇ ತಮ್ಮ ಭಾಷಣಕ್ಕೆ ವಿರಾಮ ಹೇಳಿದರು.

Please follow and like us:
0
http://bp9news.com/wp-content/uploads/2018/05/Narendra-Modi-Leprosy-655x353.jpghttp://bp9news.com/wp-content/uploads/2018/05/Narendra-Modi-Leprosy-655x353-150x150.jpgPolitical Bureauಪ್ರಮುಖರಾಜಕೀಯವಿಜಯಪುರModi to call on activists in Vijayapur  ಬೆಂಗಳೂರು : ಮನೆ ಮನೆಗೆ ಹೋಗಿ ಮತ ಹಾಕಿಸಿ, ಹೆಚ್ಚು ಹೆಚ್ಚು ಮತ ಚಲಾಯಿಸಿ, ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ ಎಂದು ವಿಜಯಪುರದಲ್ಲಿ ನಡೆದ ಬೃಹತ್​ ಬಿಜೆಪಿ ಪರ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಕರೆ ನೀಡಿದರು. ನಮಗೆ ಸ್ವತಂತ್ರ ಬಂದು 70 ವರ್ಷ ಆಗಿದೆ. ಆದರೂ ನಮ್ಮ ರಾಷ್ಟ್ರದಲ್ಲಿ ನಾಲ್ಕು ಕೋಟಿ ಮನೆಗಳಲ್ಲಿ ಮೂಲಭೂತ ಸೌಕರ್ಯವಾಗಿರುವ ವಿದ್ಯುತ್​ ಸೌಲಭ್ಯ ನೀಡಲಾಗಿರಲಿಲ್ಲ ಈ ಕಾಂಗ್ರೆಸ್​ ಸರ್ಕಾರಕ್ಕೆ. ಸಂಜೆ ಆಗುತ್ತಿದ್ದಂತೆ ಮನೆ...Kannada News Portal