ಬೆಂಗಳೂರು : ಬಸವಣ್ಣ ಇದೇ ಭೂಮಿಯಿಂದ ಸಮಾನತೆಯನ್ನು ಸಾರಿದ್ದರು. ಇಂತ ಭೂಮಿಗೆ ನಾನು ಬಂದಿರುವುದು ನನಗೆ ಹೆಮ್ಮೆ ಇದೆ. ಜಗಜ್ಯೋತಿ ಬಸವಣ್ಣನವರ ಪಾದಗಳಿಗೆ ಪ್ರಣಾಮಗಳು ಎನ್ನುತ್ತಾ ಭಾಷಣ ಪ್ರಾರಂಭಿಸಿದ ಕಾಂಗ್ರೆಸ್ ವರಿಷ್ಠೆ ಸೋನಿಯಾ, ನೇರವಾಗಿ ಮೋದಿ ವಿರುದ್ಧ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಿಜಯಪುರದ ಬೃಹತ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಕಿಡಿ ಕಾರಿದರು.

ಮೋದಿಯವರು ಕರ್ನಾಟಕದ ಮೇಲೆ ಮಲತಾಯಿ ದೋರಣೆ ತೋರುತ್ತಿದ್ದಾರೆ. ತಮ್ಮ ಬಿಜೆಪಿ ಪಕ್ಷದ ಆಡಳಿತ ಇರುವ ರಾಜ್ಯಗಳಿಗೆ ಸಾವಿರಾರು ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಕರ್ನಾಟಕಕ್ಕೆ ಅಲ್ಪ ಸ್ವಲ್ಪ ನೀಡಿ, ನಾವು ನೀಡಿದ್ದೇವೆ, ಅವರು ಬಳಸಿಲ್ಲ. ನಾವು ನೀಡಿದ್ದೇವೆ ಅವರು ಬಳಸಿಲ್ಲ ಎಂದು ಬೊಬ್ಬೆ ಹೊಡೆಯುತ್ತಾರೆ.

ನಾನು ಮೋದಿ ಮತ್ತು ಬಿಜೆಪಿಗರನ್ನು ನೇರವಾಗಿ ಪ್ರಶ್ನೆ ಮಾಡುತ್ತಾನೆ, ನೀವು ಕರ್ನಾಟಕಕ್ಕೆ ಬಿಡುಗಡೆ ಮಾಡಿರುವ ಹಣಕ್ಕೂ ಇತರ ರಾಜ್ಯಗಳಿಗೆ ಬಿಡುಗಡೆ ಮಾಡಿರುವ ಹಣಕ್ಕೂ ಅನುಪಾತ ಮಾಡಿ ಶ್ವೇತ ಪತ್ರ ಬಿಡುಗಡೆ ಮಾಡಿ. ಆಗ ಇಡೀ ಕರ್ನಾಟಕಕ್ಕೆ ನಿಮ್ಮ ಬಣ್ಣ ಮತ್ತು ನಿಮ್ಮ ಮಾತಿನ ಬಣ್ಣ ಸ್ಪಷ್ಟವಾಗಲಿದೆ.

ಬಿಜೆಪಿ ತಮ್ಮ ಆಡಳಿತದ ರಾಜ್ಯಗಳಿಗೆ ಸಾಕಷ್ಟು ಹಣ ನೀಡಿದ್ದಾರೆ. ಆದರೆ ಕರ್ನಾಟಕಕ್ಕೆ ಏನು ಕೊಟ್ಟಿಲ್ಲ. ಇದೆ ಏನು ನಿಮ್ಮ ಸಬ್ ಕಾ ಸಾತ್ ಸಬ್ ಕಾ ವಿಕಾಸ್??? ಎಂದು ಪ್ರಧಾನಿ ಮೋದಿಯವರಿಗೆ ಫುಲ್ ಕ್ಲಾಸ್ ತೆಗೆದು ಕೊಂಡರು.

ಇನ್ನು ನಾವು ರೈತರ ಪರ, ನಾವು ರೈತರ ಪರ ಎಂದು ಮೊದಿ ಮತ್ತು ಬಿಜೆಪಿ ಸಚಿವ ಸಂಪುಟ ಹೇಳುತ್ತಲೇ ಇದ್ದಾರೆ. ನಾವು 4 ವರ್ಷಗಳಿಂದ ಕೇಳುತ್ತಲೇ ಇದ್ದೇವೆ. ಆದರೆ ರೈತರಿಗೆ ಬಿಜೆಪಿ ಸರ್ಕಾರ ನೀಡಿರುವ ಕೊಡುಗೆ ಶೂನ್ಯ. ಕರ್ನಾಟಕದ ನಮ್ಮ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಆದರೆ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿ ಎಂದರೆ ನೋಟು ಪ್ರಿಂಟ್ ಮಾಡುವ ಮಿಷನ್ ಇಟ್ಟಿಲ್ಲ ಎನ್ನುತ್ತದೆ. ಇದೇ ಏನು ಅವರ ರೈತರ ಮೇಲಿನ ಪ್ರೀತಿ ಎಂದು ಸೋನಿಯಾ ಗಾಂಧಿ ಬಿಜೆಪಿಗರ ವಿರುದ್ಧ ಗುಡುಗಿದರು.

ಇನ್ನು ಬಿಜೆಪಿ, ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಎನ್ನುತ್ತಾರೆ, ಆದರೆ ನಿಮ್ಮ ಸ್ಥಿತಿ ಏನಾಗಿದೆ ಇವತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೆ ಏರಿದೆ.

ಮೋದಿಯವರು ಉತ್ತಮ ಭಾಷಣಕಾರರು. ದೇಶ ಮತ್ತು ರಾಜ್ಯ ಬರೀ ಭಾಷಣ ಮಾಡುವುದರಿಂದ ಅಭಿವೃದ್ಧಿ ಆಗಲ್ಲ. ನಿಮ್ಮ ಮಾತಿನಿಂದ ಪ್ರಜೆಗಳಿಗೆ ಅಕ್ಕಿ ಬೇಳೆ ಸಿಗಲ್ಲ. ನೂರು ಬಾರಿ ಅದೇ ಸುಳ್ಳು ಹೇಳಿಕೊಂಡು ಹೋಡಾಡುವುದೇ ಇವರ ಕಾಯಕವಾಗಿ ಬಿಟ್ಟಿದೆ. ಈ ರೀತಿಯಾದ ಪ್ರಧಾನಿಯನ್ನು ನೀವು ಈ ಹಿಂದೆ ನೋಡಿರಲು ಸಾಧ್ಯವೇ ಇಲ್ಲ ಎಂದ ಅವರು, ಮೋದಿಯವರೇ ಮಾತನಾಡುವುದು ಬಿಟ್ಟು ಸ್ವಲ್ಪ ಕೆಲಸ ಮಾಡಿ. ಕಾಮ್ ಕಾ ಬಾತ್ ಮಾಡಿದ್ರೆ ಜನ ನಿಮನ್ನು ಗೌರವಿಸುತ್ತಾರೆ. ಇಲ್ಲವಾದರೆ ನಿಮ್ಮ ಸಮಯ ಇನ್ನೇನು ಮಗಿಯುತ್ತಿದೆ.

ಮತ್ತೆ ಚುನಾವಣೆ ಬರುತ್ತಿದೆ. ಜನರ ನಂಬಿಯನ್ನು ಈಗಾಗಲೇ ಕಳೆದು ಕೊಂಡಿರುವ ನೀವು ಮನೆಗೆ ಹೋಗುವ ಕಾಲ ದೂರವಿಲ್ಲ. ಅದು ಕರ್ನಾಟಕದ ಗೆಲುವಿನಿಂದಲೇ ನಿಮ್ಮ ಅಹಂಕಾರ ಅಂತ್ಯವಾಗಲಿದೆ. ಕೇವಲ ಭಾಷಣವನ್ನೇ ಮಾಡುತ್ತಾ ಕಾಲ ಕಳೆಯುವ ಪ್ರಧಾನಿಯನ್ನು ನೀವು ಈ ಹಿಂದೆ ನೋಡಿದ್ರಾ ಎಂದು ನೆರೆದಿದ್ದ ಲಕ್ಷಾಂತರ ಜನರನ್ನು ಪ್ರಶ್ನಿಸಿದರು.
ಮೋದಿಜಿ ಬರೀ ಮಾತನಾಡುತ್ತಾರೆ ಅಷ್ಟೇ. ರೈತರಿಗೆ, ಮಧ್ಯಮ ವರ್ಗದವರಿಗೆ , ಬಡವರಿಗೆ, ಅಲ್ಪಸಂಖ್ಯಾತರಿಗೆ ಏನು ಮಾಡಿದ್ದೀರಿ ಎಂಬ ಪ್ರಶ್ನೆಗೆ ನಿಮ್ಮ ಉತ್ತರ 4 ವರ್ಷಗಳಾದರೂ ನೀಡಲಾಗಲಿಲ್ಲ. ಯುವಕರ ಉದ್ಯೋಗ ಸಮಸ್ಯಗೆ ಪರಿಹಾರ ನೀಡಿ ಅಂದ್ರೆ ಪಕೋಡ ಮಾರಿ ಎನ್ನುತ್ತೀರಾ ಇದೇ ಏನು ನಿಮ್ಮ ಸರ್ಕಾರದ ನಿಲುವು.

ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಮತನಾಡುತ್ತಾ ಜನರಲ್ಲಿ ಮೋಡಿ ಮಾಡಿ ಅಧಿಕಾರಕ್ಕೆ ಬಂದ ನೀವು, 4 ವರ್ಷ ಆದರೂ ಏಕೆ ಲೋಕಪಾಲ ಮಸೂದೆಯನ್ನು ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿರುವ ಅವರು, ಏಕೆ ಅಂದ್ರೆ ನಿಮ್ಮ ಸುತ್ತ ಮುತ್ತಲಿನ ಜನರು ಮತ್ತು ಸಚಿವರು ಏನು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅವರನ್ನು ಕಾಪಾಡಿ ಕೊಳ್ಳಲು ಎಂಬುದು ಜನರಿಗೆ ತಿಳಿಯದೇ ಇಲ್ಲ. ನಿಮ್ಮ ಸುಳ್ಳನ್ನು ಪದೇ ಪದೇ ಜನ ನಂಬಲು ಸಿದ್ಧರಿಲ್ಲ.

ಭ್ರಷ್ಟ ಸಚಿವರನ್ನು ಪಕ್ಕದಲ್ಲೇ ಕೂರಿಸಿ ಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದೀರಿ, ಭ್ರಷ್ಟಾಚಾರದ ಬಗ್ಗೆ ನಿಮ್ಮ ನಿಲುವನ್ನು ಮೊದಲು ಸ್ಪಷ್ಟ ಪಡಿಸಿ ಎಂದು ಆಗ್ರಹಿಸಿದರು.

ನೀವು ಮಾಡುತ್ತಿರುವ ಕೆಲಸ, ಬಸವ ತತ್ವದ ವಿರುದ್ಧವಾದದ್ದು. ಸಮಾಜಾಕಿ ನ್ಯಾಯ ಸಾಮಾಜಿಕ ನೀತಿ ಈ ಮಣ್ಣಿನ ಕಣ ಕಣಗಳಲ್ಲಿಯೂ ಇದೆ. ಇಲ್ಲಿ ನಿಮ್ಮ ಸಿದ್ಧಾಂತ ಮತ್ತು ಬೊಗಳೆ ಭಾಷಣಗಳ ಆಟ ನಡೆಯುವುದಿಲ್ಲ ಎಂದ ಅವರು ನರೇಂದ್ರ ಮೋದಿಯವರ ಮರುಳು ಮಾತುಗಳು ಕರ್ನಾಟಕದ ಜನರಿಗೆ ಸ್ಪಷ್ಟವಾಗಿ ತಿಳಿಯಲಿದೆ ಮತ್ತು ಇಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮಾಡಿರುವ ಅಭಿವೃದ್ಧಿ ನಿಮ್ಮ ಮುಂದೆ ಇದೆ. ಅನ್ನಭಾಗ್ಯ, ಕ್ಷೀರ ಭಾಗ್ಯದಂತಹ ಮಹತ್ವಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಕರ್ನಾಟವನ್ನು ದೇಶದಲ್ಲೇ ನಂಬರ್ 1 ರಾಜ್ಯ ಮಾಡಿದೆ. ಮತ್ತೊಮ್ಮೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರವನ್ನು ಅಧಿಕಾರಕ್ಕೆ ತರುವ ಮೂಲಕ ಮೋದಿಯ ಗರ್ವ ಭಂಗ ಮಾಡಬೇಕಾಗಿ ಕಾಂಗ್ರೆಸ್ ಅಧಿನಾಯಕಿ ಮನವಿ ಮಾಡಿ , ದೂರ ದೂರದ ಊರಿಂದ ಬಂದಿರುವ ತಮಗೆಲ್ಲಾ ನನ್ನ ಧನ್ಯವಾದಗಳು , ಜೈ ಹಿಂದ್ ಜೈ ಕರ್ನಾಟಕ ಎಂದೇಳಿ ತಮ್ಮ ಭಾಷಣಕ್ಕೆ ವಿರಾಮ ಹೇಳಿದರು.

ಇನ್ನೂ ಸೋನಿಯಾ ಗಾಂಧಿಯವರು ಎರಡು ವರ್ಷಗಳ ನಂತರ ಚುನಾವಣಾ ಕಣಕ್ಕಿ ಕರ್ನಾಟಕದಲ್ಲಿ ಪ್ರಚಾರ ಮಾಡುವ ಮೂಲಕ ಮತ್ತೆ ದುಮುಕಿದ್ದು, ನೆರೆದಿದ್ದ ಕಾರ್ಯಕರ್ತರಲ್ಲಿ ಇದ್ದ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ಹಿಮ್ಮಡಿಗೊಳಿಸಿದ್ದಂತು ಸತ್ಯ.

ನಂತರ ಸೋನಿಯಾ ಗಾಂಧಿ ಅವರ ಹಿಂದಿ ಭಾಷಣವನ್ನು ಕನ್ನಡಕ್ಕೆ ತರ್ಜಿಮೆ ಮಾಡುತ್ತಿದ್ದ ಸಚಿವ ಎಂ ಬಿ ಪಾಟೀಲರು, ಸೋನಿಯಾ ಅವರ ಭಾಷಣ ಮುಗಿಯುತ್ತಿದ್ದಂತೆ, ಮಾನ್ಯ ಸೋನಿಯಾ ಗಾಂಧಿಯವರೇ ಕಳೆದ ಭಾರಿ ರಾಹುಲ್ ಗಾಂಧಿ ಇದೇ ವಿಜಯಪುಕ್ಕೆ ಆಗಮಿಸಿ ಭಾಷಣ ಮಾಡಿ ಹೋಗಿದ್ದರು. ಆಗ ನಾವು ಇರುವ 8 ಕ್ಷೇತ್ರಗಳಲ್ಲಿ 7 ಕ್ಷೇತ್ರವನ್ನು ಪಡೆದಿದ್ದೇವು. ಇದೀಗ ನೀವೇ ಬಂದು ಪ್ರಚಾರ ಮಾಡಿರುವುದರಿಂದ, ಈ ಬಾರಿ ನಾವು ಎಂಟೂ ಕ್ಷೇತ್ರವನ್ನು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Please follow and like us:
0
http://bp9news.com/wp-content/uploads/2018/05/soniya.jpghttp://bp9news.com/wp-content/uploads/2018/05/soniya-150x150.jpgPolitical Bureauಪ್ರಮುಖರಾಜಕೀಯವಿಜಯಪುರModi's ideology is against Basava's theory,your game will not take place in Karnataka: Sonia Gandhiಬೆಂಗಳೂರು : ಬಸವಣ್ಣ ಇದೇ ಭೂಮಿಯಿಂದ ಸಮಾನತೆಯನ್ನು ಸಾರಿದ್ದರು. ಇಂತ ಭೂಮಿಗೆ ನಾನು ಬಂದಿರುವುದು ನನಗೆ ಹೆಮ್ಮೆ ಇದೆ. ಜಗಜ್ಯೋತಿ ಬಸವಣ್ಣನವರ ಪಾದಗಳಿಗೆ ಪ್ರಣಾಮಗಳು ಎನ್ನುತ್ತಾ ಭಾಷಣ ಪ್ರಾರಂಭಿಸಿದ ಕಾಂಗ್ರೆಸ್ ವರಿಷ್ಠೆ ಸೋನಿಯಾ, ನೇರವಾಗಿ ಮೋದಿ ವಿರುದ್ಧ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಿಜಯಪುರದ ಬೃಹತ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಕಿಡಿ ಕಾರಿದರು. ಮೋದಿಯವರು ಕರ್ನಾಟಕದ ಮೇಲೆ ಮಲತಾಯಿ ದೋರಣೆ ತೋರುತ್ತಿದ್ದಾರೆ. ತಮ್ಮ ಬಿಜೆಪಿ ಪಕ್ಷದ ಆಡಳಿತ ಇರುವ ರಾಜ್ಯಗಳಿಗೆ ಸಾವಿರಾರು...Kannada News Portal