ನವದೆಹಲಿ : ಟೀಂ ಇಂಡಿಯಾ ಆಟಗಾರ ಮಹಮ್ಮದ್ ಶಮಿ ದಾಂಪತ್ಯ  ರಗಳೆ  ಇನ್ನು  ಮುಗಿದಂತಿಲ್ಲ. ಸಾಕಷ್ಟು ಬಾರಿ ಆರೋಪ-ಪ್ರತಿರೋಪಗಳನ್ನು ಮಾಡುತ್ತಲೇ ಗಂಡ- ಹೆಂಡತಿ ಜಗಳ ಮಾಡಿಕೊಂಡು ಮಾಧ್ಯಮಗಳ ಮುಂದೆ ನಿಂತಿದ್ದೂ ಇದೆ. ಇದೀಗ ಮಹಮ್ಮದ್​ ಶಮಿ ಎರಡನೇ ಮದುವೆ ಮಾಡಿಕೊಳ್ಳುವ ವಿಚಾರ ಬಹಿರಂಗಗೊಳಿಸಿದ್ದಾರೆ.  ಪತ್ನಿ ನನ್ನ ಮೇಲೆ ಸುಖಾ ಸುಮ್ಮನೆ ಆರೋಪ ಮಾಡುತ್ತಲೇ ಬಂದಿದ್ದಾರೆ. ಇದೀಗ ನಾನು ಎರಡನೇ ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದಾಳೆ. ನಾನು ಮದುವೆಯಾಗುವುದರಿಂದ ಅವಳಿಗೇನು ತೊಂದರೆ ಎಂದು ಹಾಸ್ಯಾಸ್ಪದವಾಗಿ ಶಮಿ  ಮಾತನಾಡಿದ್ದಾರೆ.

ಮುಂದುವರೆದು, ಮಹಮ್ಮದ್​ ಶಮಿ ಈದ್​ ಮುಗಿಯುತ್ತಿದ್ದಂತೆ ಮತ್ತೊಂದು ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ. ಅಲ್ಲದೇ ಹಣದ ಆಮಿಷ ತೋರಿ ನನಗೆ ಡೈವೋರ್ಸ್​​  ನೀಡುವಂತೆ ಕೋರಿದ್ದರು ಎಂದು ಇತ್ತೀಚಿಗಷ್ಟೇ ಜಹಾನ್​ ಆರೋಪಿಸಿದ್ದರು.

ಇದಕ್ಕೆ ಹಾಸ್ಯ ದಾಟಿಯಲ್ಲಿ ಉತ್ತರಿಸಿರುವ ಶಮಿ ಈಗಾಗಲೇ ಒಂದು ಮದುವೆ ಮಾಡಿಕೊಂಡು ಸಾಕಷ್ಟು ಸಮಸ್ಯೆ ಅನುಭವಿಸಿದ್ದು  ಆಗಿದೆ.  ಇದೀಗ ಮತ್ತೆ ಅದೇ ತಪ್ಪು ಮಾಡಲು ನನಗೇನು ಹುಚ್ಚು ಹಿಡಿದಿದೆಯಾ? ಎಂದಿದ್ದಾರೆ ಶಮಿ. ಇನ್ನು ಈ ಸುದ್ದಿ ಓದಿದ ಮೇಲೆ ಶಮಿ ಪತ್ನಿ ಪ್ರತೀ ತಿಂಗಳು 10 ಲಕ್ಷ ಬೇಡಿಕೆ ಇಡುತ್ತಿದ್ದಾರಂತೆ. ಇನ್ನು ಶಮಿ ನಾನು ನಿಜವಾಗಿಯೂ ಎರಡನೇ ಮದುವೆ ಆದ್ರೆ ಖಂಡಿತಾ ಹಸೀನ್​ ಜಹಾನ್​ ಅವರಿಗೂ ಆಹ್ವಾನ ನೀಡುತ್ತೇನೆ  ಎಂದು ಹಾಸ್ಯಾ ಸ್ಪದವಾಗಿ ಮಾತನಾಡಿದ್ದಾರೆ.

Please follow and like us:
0
http://bp9news.com/wp-content/uploads/2018/06/100347326_mohammed_shami.jpghttp://bp9news.com/wp-content/uploads/2018/06/100347326_mohammed_shami-150x150.jpgBP9 Bureauಕ್ರೀಡೆಪ್ರಮುಖರಾಷ್ಟ್ರೀಯನವದೆಹಲಿ : ಟೀಂ ಇಂಡಿಯಾ ಆಟಗಾರ ಮಹಮ್ಮದ್ ಶಮಿ ದಾಂಪತ್ಯ  ರಗಳೆ  ಇನ್ನು  ಮುಗಿದಂತಿಲ್ಲ. ಸಾಕಷ್ಟು ಬಾರಿ ಆರೋಪ-ಪ್ರತಿರೋಪಗಳನ್ನು ಮಾಡುತ್ತಲೇ ಗಂಡ- ಹೆಂಡತಿ ಜಗಳ ಮಾಡಿಕೊಂಡು ಮಾಧ್ಯಮಗಳ ಮುಂದೆ ನಿಂತಿದ್ದೂ ಇದೆ. ಇದೀಗ ಮಹಮ್ಮದ್​ ಶಮಿ ಎರಡನೇ ಮದುವೆ ಮಾಡಿಕೊಳ್ಳುವ ವಿಚಾರ ಬಹಿರಂಗಗೊಳಿಸಿದ್ದಾರೆ.  ಪತ್ನಿ ನನ್ನ ಮೇಲೆ ಸುಖಾ ಸುಮ್ಮನೆ ಆರೋಪ ಮಾಡುತ್ತಲೇ ಬಂದಿದ್ದಾರೆ. ಇದೀಗ ನಾನು ಎರಡನೇ ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದಾಳೆ. ನಾನು ಮದುವೆಯಾಗುವುದರಿಂದ ಅವಳಿಗೇನು ತೊಂದರೆ...Kannada News Portal