ಚಿತ್ತಾಪುರ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಸಕಾಲಕ್ಕೆ ಬಾರದೆ ಕೈಕೊಟ್ಟಿದೆ. ತೇವಾಂಶ ಕೊರತೆಯಿಂದ ತೊಗರಿ ಬೆಳೆ ಬೆಳವಣಿಗೆ ಕುಂಠಿತಗೊಂಡಿದೆ. ವರುಣನ ಮುನಿಸಿನಿಂದ ಬರಗಾಲ ಛಾಯೆ ಆವರಿಸಿ ತಾಲ್ಲೂಕಿನ ರೈತ ಸಮುದಾಯವು ತೀವ್ರ ಆತಂಕಕ್ಕೊಳಗಾಗಿದೆ.

ಜೂನ್ ತಿಂಗಳಲ್ಲಿ ಮುಂಗಾರು ಮಳೆ ಹದವಾಗಿ ಬಂದು ರೈತರಲ್ಲಿ ಭರವಸೆ ಮೂಡಿಸಿತ್ತು. ರೈತರು ನೂರಾರು ಹೆಕ್ಟರ್ ಹೆಸರು, ಉದ್ದು ಬೆಳೆ ಹರಗಿದ್ದರು. ‘ಮುಂಗಡವಾಗಿ ಬಿತ್ತನೆ ಮಾಡಿದರೂ ತೇವಾಂಶ ಕೊರತೆಯಿಂದ ಇಳುವರಿ ಕುಸಿತದ ಹೊಡೆತಕ್ಕೆ ಸಿಲುಕಿ ರೈತರು ಆರ್ಥಿಕ ನಷ್ಟ ಅನುಭವಿಸಿದ್ದಾರೆ’ ಎನ್ನುವ ಮಾತುಗಳು ಕೇಳಿಬಂದಿವೆ.

ಬೇಸಿಗೆ ನೆನಪಿಸುವ ಪ್ರಖರ ಬಿಸಿಲಿನಿಂದ ತೇವಾಂಶ ಕಡಿಮೆ ಆಗುತ್ತಿದೆ. ಭೂಮಿ ಬಾಯಿ ತೆರೆಯುತ್ತಿದೆ.‘ಹಿಂಗಾರು ಬೆಳೆಗಳಾದ ಜೋಳ, ಕಡಲೆ, ಕುಸುಬಿ ಬಿತ್ತನೆ ಮಾಡುವುದೋ ಬಿಡುವುದೋ ಎಂಬ ಚಿಂತೆ ಕಾಡುತ್ತಿದೆ. ಮಳೆಗಾಗಿ ನಿತ್ಯವೂ ಮುಗಿಲು ನೋಡುವ ಸ್ಥಿತಿ ಬಂದಿದೆ’ ಎಂದು ಚಿತ್ತಾಪುರ ರೈತ ಮಲ್ಲಿಕಾರ್ಜುನ ಆತಂಕ ಹೊರ ಹಾಕಿದರು.

ತೊಗರಿ ಬಿತ್ತನೆ ವಿಳಂಬವಾಗಿದ್ದರಿಂದ ಬೆಳೆಯ ಬೆಳವಣಿಗೆ ಕುಂಠಿತಗೊಂಡಿದೆ. ಬೆಳೆ ಇನ್ನೂ ಮೊಣಕಾಲು ಮಟ್ಟದಲ್ಲೇ ಉಳಿದಿದೆ. ರೈತರು ಆತಂಕದಲ್ಲಿ ಮುಳುಗಿದ್ದಾರೆ.

‘ಅಡವಿಯಲ್ಲಿ ಹನಿ ನೀರು ಸಿಗುತ್ತಿಲ್ಲ. ಹಳ್ಳಕೊಳ್ಳಗಳು, ನಾಲೆಗಳು ಬತ್ತಿವೆ. ರೈತರು, ಕೃಷಿ ಕಾರ್ಮಿಕರು
ಹೊಲದ ಕೆಲಸ ಬಿಟ್ಟು ನೀರಿಗಾಗಿ ಅಲೆದಾಡುವ ಸ್ಥಿತಿ ಇದೆ’ ಎಂದು ಚಿತ್ತಾಪುರದ ರೈತ ಶಿವರಾಯ ‘ಪ್ರಜಾವಾಣಿ’ಗೆ ಅಳಲು ತೋಡಿಕೊಂಡರು.

ಮಳೆ ಕೊರತೆ:

‘ಜೂನ್ ತಿಂಗಳಿಂದ ಸೆ.14ರ ವರೆಗೆ ವಾಡಿಕೆಯಂತೆ 493 ಮಿ.ಮೀ ಮಳೆ ಬರಬೇಕಿತ್ತು. ಆದರೆ 344 ಮಿ.ಮೀ ಮಳೆಯಾಗಿದೆ. ಶೇ 30 ರಷ್ಟು ಮಳೆ ಕೊರತೆಯಾಗಿದೆ. ಹೀಗಾಗಿ ಹೆಸರು ಮತ್ತು ಉದ್ದಿನ ಇಳುವರಿಯಲ್ಲಿ ಅರ್ಧದಷ್ಟು ಕಡಿಮೆ ಆಗಿದೆ. ಎಕರೆಗೆ 4 ರಿಂದ 5 ಕ್ವಿಂಟಲ್ ಇಳುವರಿ ನಿರೀಕ್ಷೆ ಇತ್ತು. ಆದರೆ 2 ರಿಂದ 3 ಕ್ವಿಂಟಾಲ್ ಮಾತ್ರ ಇಳುವರಿ ಬಂದಿದೆ’ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

‘ಸೆ.1 ರಿಂದ 14 ರವರೆಗೆ ಶೇ 80 ರಷ್ಟು ಮಳೆ ಕೊರತೆ ಆಗಿದೆ. 72 ಮಿ.ಮೀ ಮಳೆ ಬರಬೇಕಿತ್ತು. ಕೇವಲ 19 ಮಿ.ಮೀ ಮಳೆ ಆಗಿದೆ. ಶೇ 74ರಷ್ಟು ಮಳೆ ಕೊರತೆ ಆಗಿದೆ. ಸೆ.17 ರಂದು ಬೆಳಿಗ್ಗೆ ತಾಲ್ಲೂಕಿನ ಕೆಲವು ಕಡೆ ಮಳೆ ಆಗಿದೆ. ಇನ್ನೂ ಮಳೆಯ ಅವಶ್ಯಕತೆ ಇದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಾಲೇಂದ್ರ ಗುಂಡಪ್ಪ ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/09/daal.jpghttp://bp9news.com/wp-content/uploads/2018/09/daal-150x150.jpgPolitical Bureauಕೃಷಿಪ್ರಮುಖMonsoon on hand: stunted tin crop !!!  ಚಿತ್ತಾಪುರ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಸಕಾಲಕ್ಕೆ ಬಾರದೆ ಕೈಕೊಟ್ಟಿದೆ. ತೇವಾಂಶ ಕೊರತೆಯಿಂದ ತೊಗರಿ ಬೆಳೆ ಬೆಳವಣಿಗೆ ಕುಂಠಿತಗೊಂಡಿದೆ. ವರುಣನ ಮುನಿಸಿನಿಂದ ಬರಗಾಲ ಛಾಯೆ ಆವರಿಸಿ ತಾಲ್ಲೂಕಿನ ರೈತ ಸಮುದಾಯವು ತೀವ್ರ ಆತಂಕಕ್ಕೊಳಗಾಗಿದೆ. ಜೂನ್ ತಿಂಗಳಲ್ಲಿ ಮುಂಗಾರು ಮಳೆ ಹದವಾಗಿ ಬಂದು ರೈತರಲ್ಲಿ ಭರವಸೆ ಮೂಡಿಸಿತ್ತು. ರೈತರು ನೂರಾರು ಹೆಕ್ಟರ್ ಹೆಸರು, ಉದ್ದು ಬೆಳೆ ಹರಗಿದ್ದರು. ‘ಮುಂಗಡವಾಗಿ ಬಿತ್ತನೆ ಮಾಡಿದರೂ ತೇವಾಂಶ ಕೊರತೆಯಿಂದ ಇಳುವರಿ ಕುಸಿತದ ಹೊಡೆತಕ್ಕೆ ಸಿಲುಕಿ ರೈತರು ಆರ್ಥಿಕ...Kannada News Portal