ಮುಂಬೈ : ರಾಜಭವನ ಆವರಣದಲ್ಲಿ ಬ್ರಿಟಿಷರ ಕಾಲದ 2 ಫಿರಂಗಿಗಳು ಪತ್ತೆಯಾಗಿದೆ.
ಬ್ರಿಟಿಷರ ಕಾಲದ ಎರಡು ಫಿರಂಗಿಗಳು ಮುಂಬೈನ ರಾಜಭವನದ ಆವರಣದಲ್ಲಿ ಪತ್ತೆಯಾಗಿದ್ದು, ಕ್ರೇನ್​ ಸಹಾಯದಿಂದ ಹೊರತೆಗೆಯಲಾಗಿದೆ.

ಪ್ರತಿ ಫಿರಂಗಿ 22 ಟನ್​ ತೂಕವಿದೆ ಎಂದು ತಿಳಿದುಬಂದಿದೆ. ಫಿರಂಗಿ ತೂಪುಗಳನ್ನು ತೆಗೆಯಲು ಕಾರ್ಯಾಚರಣೆ ವೇಳೆ ಮಹಾರಾಷ್ಟ್ರದ ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್​ ಭಾಗಿಯಾಗಿದ್ದರು. ಈ ಪುರಾತನ ಅವಶೇಷಗಳನ್ನು ಪುನರ್​ಸ್ಥಾಪಿಸಿ ಸಂರಕ್ಷಿಸಬೇಕೆಂದು ಆದೇಶಿಸಿದ್ದಾರೆ ಎಂದು ರಾಜಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜಭವನ ಮುಂಭಾಗದ ಹುಲ್ಲುಹಾಸಿನ ಮೇಲೆ ಇರಿಸಲಾಗಿದ್ದ ಫಿರಂಗಿಗಳನ್ನು ಜಲ್​ ವಿಹಾರ್​ ಬ್ಯಾಂಕ್ವೆಟ್​ ಹಾಲ್​ ಮುಂದೆ ಇರಿಸುವಂತೆ ವಿದ್ಯಾಸಾಗರ ರಾವ್ ಅಧಿಕಾರಿಗಳಿಗೆ ತಿಳಿಸಿದರು. ಅಷ್ಟೇ ಅಲ್ಲದೇ ಭಾರತೀಯ ನೌಕಾಪಡೆಯ ನೆರವಿನಿಂದ ಫಿರಂಗಿಗಳಿಗೆ ಸಂಬಂಧಿಸಿದ ತಾಂತ್ರಿಕ ಮಾಹಿತಿಗಳನ್ನು ಪಡೆದುಕೊಂಡು ಸಂಗ್ರಹಾಲಯದ ದಾಖಲೆಯಲ್ಲಿ ಪತ್ತೆ ಹಚ್ಚುವಂತೆ ಆದೇಶಿಸಿದ್ದಾರೆ.

ಕೆಲವು ತಿಂಗಳ ಹಿಂದೆ ರಾಜಭವನ ಆವರಣದಲ್ಲಿ ಮರಗಳ ತೋಪಿನ ಮಧ್ಯೆ ಮಣ್ಣಿನೊಳಗೆ ಹೂತಿಕೊಂಡಿದ್ದ ಫಿರಂಗಿಗಳು ಪತ್ತೆಯಾದವು. ಪ್ರತಿ ಫಿರಂಗಿಯ ತೂಕ 22 ಟನ್​ಗಳಷ್ಟಿದ್ದು, 4.7 ಮೀಟರ್​ ಉದ್ದ, 1.15 ಮೀಟರ್ ಸುತ್ತಳತೆಯನ್ನು ಹೊಂದಿದೆ.


ಇನ್ನು 2016 ರಲ್ಲಿ ರಾಜಭವನದ ಹುಲ್ಲುಹಾಸಿನ ಕೆಳಗೆ ಬ್ರಿಟಿಷರ ಕಾಲದ 13 ಕೊಠಡಿಗಳಿರುವ 15,000 ಚದರ ಅಡಿಯ ನೆಲಮಾಳಿಗೆ ಪತ್ತೆಯಾಗಿತ್ತು. ಅದನ್ನು ಈಗ ಪುನರ್​ಸ್ಥಾಪಿಸಲಾಗಿದೆ. ನೆಲಮಾಳಿಗೆಯನ್ನು ಮ್ಯೂಸಿಯಂ ಮಾಡಲು ರಾಜ್ಯಪಾಲರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
Please follow and like us:
0
http://bp9news.com/wp-content/uploads/2018/11/mumbai-1.pnghttp://bp9news.com/wp-content/uploads/2018/11/mumbai-1-150x150.pngBP9 Bureauಪ್ರಮುಖರಾಷ್ಟ್ರೀಯಮುಂಬೈ : ರಾಜಭವನ ಆವರಣದಲ್ಲಿ ಬ್ರಿಟಿಷರ ಕಾಲದ 2 ಫಿರಂಗಿಗಳು ಪತ್ತೆಯಾಗಿದೆ. ಬ್ರಿಟಿಷರ ಕಾಲದ ಎರಡು ಫಿರಂಗಿಗಳು ಮುಂಬೈನ ರಾಜಭವನದ ಆವರಣದಲ್ಲಿ ಪತ್ತೆಯಾಗಿದ್ದು, ಕ್ರೇನ್​ ಸಹಾಯದಿಂದ ಹೊರತೆಗೆಯಲಾಗಿದೆ. ಪ್ರತಿ ಫಿರಂಗಿ 22 ಟನ್​ ತೂಕವಿದೆ ಎಂದು ತಿಳಿದುಬಂದಿದೆ. ಫಿರಂಗಿ ತೂಪುಗಳನ್ನು ತೆಗೆಯಲು ಕಾರ್ಯಾಚರಣೆ ವೇಳೆ ಮಹಾರಾಷ್ಟ್ರದ ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್​ ಭಾಗಿಯಾಗಿದ್ದರು. ಈ ಪುರಾತನ ಅವಶೇಷಗಳನ್ನು ಪುನರ್​ಸ್ಥಾಪಿಸಿ ಸಂರಕ್ಷಿಸಬೇಕೆಂದು ಆದೇಶಿಸಿದ್ದಾರೆ ಎಂದು ರಾಜಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜಭವನ ಮುಂಭಾಗದ ಹುಲ್ಲುಹಾಸಿನ ಮೇಲೆ ಇರಿಸಲಾಗಿದ್ದ...Kannada News Portal