ನಟ ಶರಣ್​   ಹಾಸ್ಯ ಕಲಾವಿದನಾಗಿ, ನಾಯಕ ನಟನಾಗಿ ಭಜ್ರಿ ಕ್ಲಿಕ್​ ಆದ್ರು. ನಟ ಶರಣ್​ ಸಿನಿಮಾಕ್ಕಿಂತ ಹೆಚ್ಚಾಗಿ ಸಿನಿಮಾ ಆಡಿಯೋ ಮೂಲಕ ವೇ ಭಜ್ರಿ ಹಿಟ್​ ಆಗ್ತಾರೆ. ಅವರು ಮಾಡಿದ ಸಿನಿಮಾಗಳೆಲ್ಲಾ  ಇಂದಿನ ಟ್ರೆಂಡ್​ ಗೆ ಸಿಕ್ಕಾಪಟ್ಟೆ ಮ್ಯಾಚ್​ ಆಗುತ್ತೆ ಎಂಬುದು ವೀಕ್ಷಕರ ಅಭಿಪ್ರಾಯ. ಶರಣ್​ ಅಭಿನಯದ  ವಿಕ್ಟರೆಇ-2 ಸಿನಿಮಾ ಸೆಟ್ಟೇರಿದಾಗಿನಿಂದಲೂ ಚಂದನವನದಲ್ಲಿ ಭರವಸೆ ಮೂಡಿಸುತ್ತಿರುವ ಚಿತ್ರ ಡಬಲ್​ ಫನ್​ ಎಂಬ ಸಬ್​ ಟೈಟಲ್​ನ್ನು  ವಿಕ್ಟರಿ ಸಿನಿಮಾ ಬಳಸಿಕೊಂಡಿದ್ದು, ಈಗಾಗಲೇ ರಿವೀಲ್​ ಆಇರೋ ಫೋಟೋಗಳು ಮತ್ತು ಟೀಸರ್​ನಿಂದ ಸಖತ್​ ಸದ್ದು ಮಾಡುತ್ತಿದೆ.

ಸೆಪ್ಟೆಂಬರ್ 10ರಂದು ವಿಕ್ಟರಿ ಸಿನಿಮಾ ಲಿರಿಕಲ್ ಹಾಡಿನ ವಿಡಿಯೋ ಬಿಡುಗಡೆಯಾಗಿದೆ. ‘ಬ್ರಹ್ಮನಿಂಗೆ ಲಂಚ ಕೊಟ್ಟು ಬುಕ್ ಮಾಡಿಸಿದ್ದೀನಿ ಕಮ್,. ಏಳೇಳು ಜನ್ಮ ನೀನೇ ನನ್ನ ವೈಫು ಅಂತಾ ಬರೆಸಿದ್ದೀನಿ’ ಎಂಬ ಸಾಲುಗಳ ಮೂಲಕ ಸಾಗುವ ಹಾಡು ಕೇಳಲು ತುಂಬಾ ಕ್ಯಾಚಿಯಾಗಿದೆ. ಹಾಡಿನ ಚಿತ್ರೀಕರಣ ರಷ್ಯಾದಲ್ಲಿ ನಡೆದಿದ್ದು, ಶರಣ್ ಮತ್ತು ಆಸ್ಮಿತಾ ಕಲರ್ ಫುಲ್ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಹಾಡಿನ ಮತ್ತೊಂದು ವಿಶೇಷ ಅಂದ್ರೆ ಸಹ ಡ್ಯಾನ್ಸರ್ ಹುಲಿ ಕುಣಿತ, ಯಕ್ಷಗಾನ ಮತ್ತು ಪೌರಾಣಿಕ ಉಡುಪಿನಲ್ಲಿ ಕಾಣುವ ಮೂಲಕ ಹಾಡನ್ನು ಮತ್ತಷ್ಟು ಸುಂದರವಾಗಿಸಿದೆ.

ಪಕ್ಕಾ ಹಳ್ಳಿ ಭಾಷೆಯ ಇಂಗ್ಲಿಷ್ ಮಿಶ್ರಿತವಾಗಿ ರಚಿಸಿರುವ ಹಾಡು ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿ ಬಂದಿದೆ. ತರುಣ್ ಸುಧೀರ್ ಕಥೆ ಬರೆದಿದ್ದು, ಹಾಡಿನ ಸಾಲುಗಳು ನಾಗೇಂದ್ರ ಪ್ರಸಾದ್ ಅವರ ಲೇಖನಿಯಲ್ಲಿ ರಚಿತವಾಗಿದೆ.

ವಿಕ್ಟರಿ 2 ಸಿನಿಮಾವನ್ನು ಅಲೆಮಾರಿ ಸಂತು(ಹರಿ ಸಂತೋಷ್) ನಿರ್ದೇಶಿಸುತ್ತಿದ್ದು, ಸಿನಿಮಾದ ಹಾಡಿನ ಚಿತ್ರೀಕರಣ ರಷ್ಯಾದಲ್ಲಿ ನಡೆದಿದೆ. ಈ ಸಿನಿಮಾದ ಮೇಕಿಂಗ್ ಫೋಟೋಗಳು ಬಿಡುಗಡೆಯಾಗಿದ್ದು, ಶರಣ್, ಸಾಧುಕೋಕಿಲ ಮತ್ತು ರವಿಶಂಕರ್ ಹೆಣ್ಣಿನ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಲುಕ್‍ನಲ್ಲಿ ಒಟ್ಟು ಎರಡು ಫೋಟೋಗಳನ್ನು ಚಿತ್ರತಂಡ ಬಿಡುಗೊಡೆಗೊಳಿಸಿತ್ತು. ಒಂದರಲ್ಲಿ ವೈಟ್ ಆ್ಯಂಡ್ ವೈಟ್ ಶರ್ಟ್, ಪಂಚೆ ತೊಟ್ಟು ಮಿಂಚಿದರೆ, ಇನ್ನೊಂದರಲ್ಲಿ ಮಾಸ್ ಗೆಟಪ್ ನಲ್ಲಿ ಕಂಡಿದ್ದರು.

ಸಿನಿಮಾದಲ್ಲಿ ಶರಣ್ ಅವರಿಗೆ ಅಪೂರ್ವ ಜೋಡಿಯಾಗಿದ್ದಾರೆ. ಅಲ್ಲದೇ ಈ ಹಿಂದೆ ವಿಕ್ಟರಿ ಸಿನಿಮಾದಲ್ಲಿ ನಟಿಸಿದ್ದ ಅಸ್ಮಿತಾ ಸೂದ್ ಕೂಡ ಇಲ್ಲಿ ಕಾಣಿಸಿಕೊಂಡಿದ್ದಾರೆ. ತಬಲಾ ನಾಣಿ, ನಾಸೀನ್, ಅವಿನಾಶ್, ಮಿತ್ರಾ, ಕಲ್ಯಾಣಿ, ಅರಸು ಮತ್ತು ಸಿದ್ದಿ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ. ಅಲೆಮಾರಿ ಸಂತು ನಿರ್ದೇಶನ ಮತ್ತು ತರುಣ್ ಶಿವಪ್ಪ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದೆ.

Please follow and like us:
0
http://bp9news.com/wp-content/uploads/2018/09/victory-2-b.jpghttp://bp9news.com/wp-content/uploads/2018/09/victory-2-b-150x150.jpgBP9 Bureauಸಿನಿಮಾನಟ ಶರಣ್​   ಹಾಸ್ಯ ಕಲಾವಿದನಾಗಿ, ನಾಯಕ ನಟನಾಗಿ ಭಜ್ರಿ ಕ್ಲಿಕ್​ ಆದ್ರು. ನಟ ಶರಣ್​ ಸಿನಿಮಾಕ್ಕಿಂತ ಹೆಚ್ಚಾಗಿ ಸಿನಿಮಾ ಆಡಿಯೋ ಮೂಲಕ ವೇ ಭಜ್ರಿ ಹಿಟ್​ ಆಗ್ತಾರೆ. ಅವರು ಮಾಡಿದ ಸಿನಿಮಾಗಳೆಲ್ಲಾ  ಇಂದಿನ ಟ್ರೆಂಡ್​ ಗೆ ಸಿಕ್ಕಾಪಟ್ಟೆ ಮ್ಯಾಚ್​ ಆಗುತ್ತೆ ಎಂಬುದು ವೀಕ್ಷಕರ ಅಭಿಪ್ರಾಯ. ಶರಣ್​ ಅಭಿನಯದ  ವಿಕ್ಟರೆಇ-2 ಸಿನಿಮಾ ಸೆಟ್ಟೇರಿದಾಗಿನಿಂದಲೂ ಚಂದನವನದಲ್ಲಿ ಭರವಸೆ ಮೂಡಿಸುತ್ತಿರುವ ಚಿತ್ರ ಡಬಲ್​ ಫನ್​ ಎಂಬ ಸಬ್​ ಟೈಟಲ್​ನ್ನು  ವಿಕ್ಟರಿ ಸಿನಿಮಾ ಬಳಸಿಕೊಂಡಿದ್ದು,...Kannada News Portal