ಬೆಂಗಳೂರು : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಕೆಲ ದಿನಗಳ ಹಿಂದೆ ಮುಸ್ಲಿಮರ ಪರ ಕೆಲಸ ಮಾಡಬೇಡಿ ಅವರು ನನಗೆ ಮತ ಹಾಕಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಹಾಶೀಮ್‌ ಪೀರ್‌ ದರ್ಗಾದ ಧರ್ಮಗುರುವೊಬ್ಬರು ರಂಜಾನ್‌ ಪವಿತ್ರ ದಿನದಂದು ಕೋಮು ಪ್ರಚೋದನಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.

ರಂಜಾನ್‌ ಧಾರ್ಮಿಕ ಉಪನ್ಯಾಸದ ವೇಳೆ ತನ್ವೀರ್‌ ಪೀರ್‌ ಹಾಶ್ಮಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು, 2 ತಿಂಗಳಲ್ಲಿ ಬಕ್ರೀದ್‌ ಬರಲಿದೆ. ಆಗ ಗೋವುಗಳ ಕುರ್ಬಾನಿ ಮಾಡುತ್ತೇವೆ. ಆಗ ಸೈತಾನ್‌ ತಿರುಗಿ ಬೀಳುತ್ತಾನೆ. ಗಮನದಲ್ಲಿಟ್ಟುಕೊಳ್ಳಿ ಗೋವುಗಳ ಜೊತೆ ಇನ್ನೊಂದು ಬಲಿ ಆಗದಿರಲಿ ಎಂದಿದ್ದಾರೆ.

ಬಿಲದೊಳಗಿದ್ದ ದೇಶದ್ರೋಹಿಗಳೆಲ್ಲಾ ಹೊರಗೆ ಬಂದಿದ್ದಾರೆ ಅವರ ಬಗ್ಗೆ ಜಾಗೃತೆಯಿಂದ ಇರಿ ಎಂದಿದ್ದಾರೆ. ಇನ್ನು ಸಚಿವ ಶಿವಾನಂದ ಪಾಟೀಲ್‌ ಅವರ ಸಮ್ಮುಖದಲ್ಲೇ ಈ ಹೇಳಿಕೆ ನೀಡಿದ್ದಾರೆ. ಇತ್ತ ಸಮಾರಂಭದ ಬಳಿಕ ಮುಸ್ಲಿಂ ಸಮುದಾಯದ ಮುಖಂಡರ ಬಳಿ ಸಚಿವ ಪಾಟೀಲ್ ಮುಸ್ಲಿಂ ಧರ್ಮಗುರು ತನ್ವೀರ್‌ ಪೀರ್‌ ಹಾಶ್ಮಿ ಹೇಳಿಕೆಗೆ ತೀವ್ರ ಅಸಮಧಾನ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದೀಗ ಈ ಹೇಳಿಕೆ ವಿರುದ್ಧ ವಿಜಯಪುರದ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುವುದರ ಜತೆಗೆ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಉದ್ದೇಶಿಸಿ ಈ ಹೇಳಿಕೆ ನೀಡಿದ್ದಾರೆ ಎಂದು ಗುಡುಗುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/06/ಯತ್ನಾಳ-ಮತ್ತು-ತನ್ವೀರ್_-1-1.jpghttp://bp9news.com/wp-content/uploads/2018/06/ಯತ್ನಾಳ-ಮತ್ತು-ತನ್ವೀರ್_-1-1-150x150.jpgPolitical Bureauಪ್ರಮುಖರಾಜಕೀಯವಿಜಯಪುರMuslim Mujahideen to donate tang to BJP MLA Yatnal !!! Minister Patil's displeasure over Tanveer Peer Hashmi's controversyಬೆಂಗಳೂರು : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಕೆಲ ದಿನಗಳ ಹಿಂದೆ ಮುಸ್ಲಿಮರ ಪರ ಕೆಲಸ ಮಾಡಬೇಡಿ ಅವರು ನನಗೆ ಮತ ಹಾಕಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಹಾಶೀಮ್‌ ಪೀರ್‌ ದರ್ಗಾದ ಧರ್ಮಗುರುವೊಬ್ಬರು ರಂಜಾನ್‌ ಪವಿತ್ರ ದಿನದಂದು ಕೋಮು ಪ್ರಚೋದನಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.  ರಂಜಾನ್‌ ಧಾರ್ಮಿಕ ಉಪನ್ಯಾಸದ ವೇಳೆ ತನ್ವೀರ್‌ ಪೀರ್‌ ಹಾಶ್ಮಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು,...Kannada News Portal