ಬೆಂಗಳೂರು : ರಾಮನಗರ ಮತ್ತು ಚೆನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ನಾನೇ ನಿಲ್ಲಬೇಕಾದ ಅನಿವಾರ್ಯತೆ ಇತ್ತು. ಇಲ್ಲ ಅಂದ್ರೆ ನನ್ನ ಕುಟುಂಬ ಬಂಗಾರಪ್ಪನ ಕುಟುಂಬದ ರೀತಿ ಹೊಡೆದು ಹೋಗುತ್ತಿತ್ತು ಎಂಬ ಮಾತುಗಳನ್ನು ಕುಮಾರಸ್ವಾಮಿ ತಮ್ಮ ಆಪ್ತರ ಜೊತೆ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಈ ರೀತಿ ಹೇಳಿಕೊಂಡಿರುವುದು ಒಂದು ಪ್ರಾಂತ್ಯದ ರಾಜಕೀಯ ಮುಖಂಡರಾದ ಅಣ್ಣತಮ್ಮ , ರಾಮಲಕ್ಷ್ಮಣರು ಎಂದೇ ಖ್ಯಾತಿ ಪಡೆದಿರುವವರ ಜೊತೆ ತಮ್ಮ ಸ್ಥಿತಿಯನ್ನು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಈ ಮಾತುಗಳು ಹೊರ ಬಿದ್ದಿರುವುದು ಸಿ ಪಿ ಯೋಗೇಶ್ವರ್​ ತಮ್ಮ ಆಪ್ತ ಗೆಳೆಯರ ಜೊತೆ ಮಾತುಕತೆ ನಡೆಸಿರುವ ಆಡಿಯೋ ಒಂದು ವೈರಲ್​ ಆಗಿರುವುದರಿಂದ. ಅವರವರು ತಮ್ಮ ರಾಜಕೀಯ ಬೆಳವಣಿಗೆ ಬಗ್ಗೆ ಮತದಾನ ನಡೆದಿರುವ ಬಗ್ಗೆ ಮಾತನಾಡುವ ವೇಳೆ ಈ ವಿಚಾರವನ್ನು ಸಿ ಪಿ ಯೋಗೇಶ್ವರ್​ ಅವರಿಗೆ ಅವರ ಆಪ್ತ ಹೇಳಿದ್ದು, ಈ ಮಾತನ್ನು ಕುಮಾರಸ್ವಾಮಿ ಅವರು ಆ ರಾಮಲಕ್ಷ್ಮಣರ ಜೊತೆ ಹೇಳಿರುವುದು ಸತ್ಯವೋ ಸುಳ್ಳೋ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕಿದೆ. ಅಥವಾ ರಾಜಕೀಯ ಎಂದ ಮೇಲೆ ಒಂದಷ್ಟು ಊಹಾಪೋಹಗಳು, ಅಂತೆ ಕಂತೆ ಮಾತುಗಳು ಇದ್ದದೇ.

ಬಂಗಾರಪ್ಪನ ಕುಟುಂಬದ ಹೋಲಿಕೆ ಏಕೆ ??

ಮಾಜಿ ಸಿಎಂ ಬಂಗಾರಪ್ಪ ಯಾರಿಗೆ ತಾನೆ ಗೊತ್ತಿಲ್ಲ. ಕಾವೇರಿ ವಿಚಾರದಲ್ಲಿ ಸುಪ್ರಿಂ ಕೋರ್ಟ್​ ಪಕ್ಕದ ರಾಜ್ಯಕ್ಕೆ ನೀರು ನೀಡಲೇ ಬೇಕು ಎನ್ನುತ್ತಿದ್ದಂತೆ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಎಸೆದು ಹೊರ ಬಂದ ಧೀರ ಮತ್ತು ಕಲರ್​ ಫುಲ್​ ನಾಯಕ. ಆದರೆ ಇಂದು ಅವರ ಕುಟುಂಬ ಹರಿದು ಹಂಚಿ ಹೋಗಿದೆ. ಅಣ್ಣ ತಮ್ಮರ ಜಗಳ ತಾರಕಕ್ಕೆ ಏರಿದೆ. ಆಸ್ತಿ , ಅಧಿಕಾರ ಹೀಗೆ ಎಲ್ಲಾ ವಿಚಾರಗಳಲ್ಲಿಯೂ ಒಬ್ಬರನ್ನು ಕಂಡೆ ಒಬ್ಬರಿಗೆ ಆಗುವುದಿಲ್ಲ. ಒಂದೇ ಕ್ಷೇತ್ರದಲ್ಲಿ ಇಬ್ಬರು ಕಣಕ್ಕಿಳಿದು ಇಡೀ ರಾಜ್ಯದಲ್ಲಿ ಸೋದರರ ಸವಾಲ್​ ಕ್ಷೇತ್ರವಾಗಿ ಖ್ಯಾತಿ ಪಡೆದಿದೆ.

ಈ ಸ್ಥಿತಿ ದೇವೇಗೌಡರ ಕುಟುಂಬಕ್ಕು ಬಂದು ಬಿಡಬಹುದು. ಆ ಕಾರಣವಾಗಿಯೇ ಕುಮಾರಸ್ವಾಮಿ ಮತ್ತು ದೇವೇಗೌಡರು ಹಾಗೆ ರೇವಣ್ಣ ಅವರು ನೂಲು ಹಿಡಿದು ಬೆಟ್ಟ ಅತ್ತುವಂತೆ ರಾಜಕೀಯ ಮತ್ತು ಕುಟುಂಬ ಎರಡೂ ವಿಚಾರಗಳಲ್ಲಿ ಸೂಕ್ಷ್ಮವಾಗಿ ಚಿಂತಿಸಿಯೇ ಹೆಜ್ಜೆ ಇಡಬೇಕಾದ ಸ್ಥಿತಿ ಏರ್ಪಟ್ಟಿದೆ.

ಭವಾನಿ ರೇವಣ V/S ಅನಿತಾ ಕುಮಾರಸ್ವಾಮಿ, ನಿಖಿಲ್​ ಕುಮಾರಸ್ವಾಮಿ V/S ಪ್ರಜ್ವಲ್​ ರೇವಣ್ಣ ರಾಜಕೀಯವಾಗಿ ಮತ್ತು ಕೌಟುಂಬಿಕವಾಗಿ ಇವರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಗಾಳಿ ಸುದ್ದಿಗಳೋ ಸತ್ಯ ಸುದ್ದಿಗಳೂ ಕೇಳುತ್ತಲೇ ಇರುವುದರಿಂದ ಈ ಮೇಲೆ ಕುಮಾರಸ್ವಾಮಿ ಈ ರೀತಿ ಹೇಳಿರಬಹುದೇನೋ ಎಂಬ ಚರ್ಚೆಗಳು ಇದೀಗ ವೈರಲ್​ ಆಗಿರುವ ಆಡಿಯೋ ಕೇಳಿದವರು ಚರ್ಚೆ ನಡೆಸುತ್ತಿದ್ದಾರೆ.

 

Please follow and like us:
0
http://bp9news.com/wp-content/uploads/2018/05/kumaraswamy-story_650_031615064959.jpghttp://bp9news.com/wp-content/uploads/2018/05/kumaraswamy-story_650_031615064959-150x150.jpgPolitical Bureauಪ್ರಮುಖರಾಜಕೀಯರಾಮನಗರಬೆಂಗಳೂರು : ರಾಮನಗರ ಮತ್ತು ಚೆನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ನಾನೇ ನಿಲ್ಲಬೇಕಾದ ಅನಿವಾರ್ಯತೆ ಇತ್ತು. ಇಲ್ಲ ಅಂದ್ರೆ ನನ್ನ ಕುಟುಂಬ ಬಂಗಾರಪ್ಪನ ಕುಟುಂಬದ ರೀತಿ ಹೊಡೆದು ಹೋಗುತ್ತಿತ್ತು ಎಂಬ ಮಾತುಗಳನ್ನು ಕುಮಾರಸ್ವಾಮಿ ತಮ್ಮ ಆಪ್ತರ ಜೊತೆ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ರೀತಿ ಹೇಳಿಕೊಂಡಿರುವುದು ಒಂದು ಪ್ರಾಂತ್ಯದ ರಾಜಕೀಯ ಮುಖಂಡರಾದ ಅಣ್ಣತಮ್ಮ , ರಾಮಲಕ್ಷ್ಮಣರು ಎಂದೇ ಖ್ಯಾತಿ ಪಡೆದಿರುವವರ ಜೊತೆ ತಮ್ಮ ಸ್ಥಿತಿಯನ್ನು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಈ ಮಾತುಗಳು ಹೊರ ಬಿದ್ದಿರುವುದು...Kannada News Portal