ಬೆಂಗಳೂರು : ಸಚಿವ ಸಂಪುಟ ಹಂಚಿಕೆ ವೇಳೆ ಎದ್ದ ಗೊಂದಲಗಳನ್ನು ವರದಿ ಮಾಡಲು ತೆರಳಿದ್ದ ಮಾಧ್ಯಮಗಳ ಮೇಲೆ ಸಚಿವ ರೇವಣ್ಣ ಹರಿಹಾಯ್ದಿದ್ದಾರೆ.

ಕೆಲವು ಮಾಧ್ಯಮಗಳು ಬೇಕಂತಲೆ‌ ವಿವಾದ ಹುಟ್ಟು ಹಾಕುತ್ತವೆ. ಮಾಧ್ಯಮಗಳಲ್ಲಿ ರೇವಣ್ಣ ದೇವೇಗೌಡರ ಎದುರು ಕಣ್ಣೀರು ಹಾಕಿದರು ಎಂದು ಸುದ್ದಿ ಮಾಡಲಾಗುತ್ತದೆ ಕುಮಾರಸ್ವಾಮಿ ಮತ್ತು ರೇವಣ್ಣ ಹೊಡೆದಾಡುತ್ತಾರೆ ಎಂದು ಮನಸ್ಸಿಗೆ ಬಂದ ಹಾಗೆ ತೋರಿಸುತ್ತಾರೆ. ನನ್ನ ಬದುಕಿನಲ್ಲಿ ಎಂದಿಗೂ ಕುಮಾರಸ್ವಾಮಿ ಜತೆ ಹೊಡೆದಾಡುವುದಿಲ್ಲ ಎಂದಿದ್ದಾರೆ.

ಇನ್ನು ಲೋಕೋಪಯೋಗಿ ಸಚಿವ ರೇವಣ್ಣ, ಜಲಸಂಪನ್ಮೂಲ‌ ಇಲಾಖೆ ವರ್ಗಾವಣೆಯಲ್ಲಿ ರೇವಣ್ಣ ಹಸ್ತಕ್ಷೇಪ ಮಾಡಿದ್ದಾರೆಂಬ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ನನ್ನ ಜಿಲ್ಲೆಗೆ ಸಂಬಂಧಪಟ್ಟಿದ್ದರೆ ನಾನು ಮಾಡೇ ಮಾಡುತ್ತೇನೆ ಹೊರತು ಬೇರೆಯದು ನನಗೆ ಸಂಬಂಧ ಇಲ್ಲ. ನಾನು ಬೇರೆ ಇಲಾಖೆಯಲ್ಲಿ ಯಾಕೆ ಹಸ್ತಕ್ಷೇಪ ಮಾಡಲಿ? ಅಂತಹ ಪ್ರಮೇಯ ನನಗಿನ್ನು ಬಂದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಲೋಕೋಪಯೋಗಿ ಇಲಾಖೆಯಲ್ಲಿ ನನ್ನ ಕಾರ್ಯವ್ಯಾಪ್ತಿ ಏನಿದೆ ಆ ಕೆಲಸ ಮಾಡಿಕೊಂಡು ಹೋಗುತ್ತೇನೆ. ವರ್ಗಾವಣೆ ವಿಚಾರ ಮುಖ್ಯಮಂತ್ರಿ ವ್ಯಾಪ್ತಿಗೆ ಸೇರುತ್ತದೆ. ಮುಖ್ಯಮಂತ್ರಿ ಬಳಿ ಮಾತನಾಡುವುದು ಡಿ.ಕೆ.ಶಿವಕುಮಾರ್ ಜವಾಬ್ದಾರಿ ಎಂದರು.

Please follow and like us:
0
http://bp9news.com/wp-content/uploads/2018/01/HD-Revanna.jpghttp://bp9news.com/wp-content/uploads/2018/01/HD-Revanna-150x150.jpgPolitical Bureauಪ್ರಮುಖರಾಜಕೀಯಹಾಸನMy life has not played with Kumaraswamy till now !!! Minister of State for Human Resource Development HC Revanna has not come to the news of my constituencyಬೆಂಗಳೂರು : ಸಚಿವ ಸಂಪುಟ ಹಂಚಿಕೆ ವೇಳೆ ಎದ್ದ ಗೊಂದಲಗಳನ್ನು ವರದಿ ಮಾಡಲು ತೆರಳಿದ್ದ ಮಾಧ್ಯಮಗಳ ಮೇಲೆ ಸಚಿವ ರೇವಣ್ಣ ಹರಿಹಾಯ್ದಿದ್ದಾರೆ. ಕೆಲವು ಮಾಧ್ಯಮಗಳು ಬೇಕಂತಲೆ‌ ವಿವಾದ ಹುಟ್ಟು ಹಾಕುತ್ತವೆ. ಮಾಧ್ಯಮಗಳಲ್ಲಿ ರೇವಣ್ಣ ದೇವೇಗೌಡರ ಎದುರು ಕಣ್ಣೀರು ಹಾಕಿದರು ಎಂದು ಸುದ್ದಿ ಮಾಡಲಾಗುತ್ತದೆ ಕುಮಾರಸ್ವಾಮಿ ಮತ್ತು ರೇವಣ್ಣ ಹೊಡೆದಾಡುತ್ತಾರೆ ಎಂದು ಮನಸ್ಸಿಗೆ ಬಂದ ಹಾಗೆ ತೋರಿಸುತ್ತಾರೆ. ನನ್ನ ಬದುಕಿನಲ್ಲಿ ಎಂದಿಗೂ ಕುಮಾರಸ್ವಾಮಿ ಜತೆ ಹೊಡೆದಾಡುವುದಿಲ್ಲ ಎಂದಿದ್ದಾರೆ. var domain = (window.location...Kannada News Portal