ಮೈಸೂರು : ಮೊದಲ ಆಷಾಢ ಶುಕ್ರವಾರ ಹಿನ್ನಲೆ  ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮುಂಜಾನೆಯಿಂದಲೇ ವಿಶೇಷ ಪೂಜೆ ಕಾರ್ಯ ನಡೆಯುತ್ತಿದೆ. ವಿಶೇಷ ಪೂಜೆ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ವಿವಿಧ ಬಗೆಯ ಹೂಗಳಿಂದ ನಾಡ ಅಧಿದೇವತೆ ಕಂಗೊಳಿಸುತ್ತಿದ್ದು, ದೇವಾಲಯದ ಸುತ್ತಲೂ ಬಣ್ಣ ಬಣ್ಣದ ಹೂವಿನ ಅಲಂಕಾರ ಮಾಡಲಾಗಿದೆ.


ಬೆಟ್ಟದಲ್ಲಿ ಸುಗಮ ಸಂಚಾರ ಹಾಗೂ ಗಣ್ಯ ವ್ಯಕ್ತಿಗಳಿಗೆ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 5:30ರಿಂದ ದೇವಿ ದರ್ಶನಕ್ಕೆ ಅನುವು ಮಾಡಿಕೊಡಲಾಗಿದ್ದು, ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಇನ್ನು ದೇವಸ್ಥಾನಕ್ಕೆ ಬಂದಂತಹ ಭಕ್ತಾದಿಗಳಿಗೆ ಸೇವಾ ಸಂಸ್ಥೆಗಳಿಂದ ಊಟದ ವ್ಯವಸ್ಥೆ ಕೂಡಾ ಮಾಡಲಾಗಿದೆ. ಹಾಗೆ  ಬೆಟ್ಟಕ್ಕೆ ಖಾಸಗಿ ವಾಹನಗಳನ್ನ ನಿರ್ಬಂಧಿಸಲಾಗಿದ್ದು,ಯಾವುದೇ  ಅಹಿತಕರ ಘಟನೆ ನಡೆಯದಂತೆ ಪೋಲೀಸ್ ಬಿಗಿ ಬಂದೋಬಸ್ತ್  ಮಾಡಲಾಗಿದೆ.

ಉನ್ನತ ಶಿಕ್ಷಣ ಸಚಿವರಿಂದ ವಿಶೇಷ ಪೂಜೆ!!

ಇಂದು ಮೊದಲ ಆಷಾಢ  ಶುಕ್ರವಾರ ಹಿನ್ನಲೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ತ್ರಿಪುರಸುಂದರಿ ದೇವಾಲಯದಲ್ಲಿ ಉನ್ನತ ಶಿಕ್ಷಣ ಸಚಿವರಾದ ಜಿ.ಟಿ.ದೇವೇಗೌಡರು ಕುಟುಂಬ ಸಮೇತ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಜಿಟಿಡಿ ಪ್ರಸಾದ ಹಂಚಿದರು.

Please follow and like us:
0
http://bp9news.com/wp-content/uploads/2018/07/ನಾಡ-ಅಧಿದೇವತೆಗೆ-ವಿಶೇಷ-ಪೂಜೆ-BP9-NEWS13.jpeghttp://bp9news.com/wp-content/uploads/2018/07/ನಾಡ-ಅಧಿದೇವತೆಗೆ-ವಿಶೇಷ-ಪೂಜೆ-BP9-NEWS13-150x150.jpegBP9 Bureauಆಧ್ಯಾತ್ಮಪ್ರಮುಖಮೈಸೂರುಮೈಸೂರು : ಮೊದಲ ಆಷಾಢ ಶುಕ್ರವಾರ ಹಿನ್ನಲೆ  ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮುಂಜಾನೆಯಿಂದಲೇ ವಿಶೇಷ ಪೂಜೆ ಕಾರ್ಯ ನಡೆಯುತ್ತಿದೆ. ವಿಶೇಷ ಪೂಜೆ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ವಿವಿಧ ಬಗೆಯ ಹೂಗಳಿಂದ ನಾಡ ಅಧಿದೇವತೆ ಕಂಗೊಳಿಸುತ್ತಿದ್ದು, ದೇವಾಲಯದ ಸುತ್ತಲೂ ಬಣ್ಣ ಬಣ್ಣದ ಹೂವಿನ ಅಲಂಕಾರ ಮಾಡಲಾಗಿದೆ. var domain = (window.location != window.parent.location)? document.referrer :...Kannada News Portal