ಮೈಸೂರು : ಕೃಷಿ ಸಚಿವರಾದ ಎನ್​​​.ಹೆಚ್​​​.ಶಿವಶಂಕರ್​​​ ರೆಡ್ಡಿ ನೇತೃತ್ವದಲ್ಲಿ ಇಂದು ಮೈಸೂರು,ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ರೈತ ಮುಖಂಡರು ಮತ್ತು ಪ್ರಗತಿಪರ ರೈತ ರೊಂದಿಗೆ ಚರ್ಚೆ ನಡೆಸಿದರು. ಹಲವಾರು ಪ್ರಮುಖ ಅಂಶಗಳನ್ನ ಚರ್ಚೆ ನಡೆಸಿದ್ದಾರೆ.

ಸಿರಿಧಾನ್ಯ ಘಟಕ ವನ್ನು ಜಿಲ್ಲೆಗೆ ಒಂದು ಇರ ಬೇಕು. ರೈತರ ಆರೋಗ್ಯದಲ್ಲಿ ಕಾಳಜಿ ಇದ್ದರೆ ಯಶಸ್ವಿನಿ ಕಾರ್ಡ್ ಮತ್ತೆ ಜಾರಿಗೆ ತರಬೇಕು ಎಂದು ರೈತರು ಸಲಹೆ ನೀಡಿದರು. ಮಂಡ್ಯ ಮತ್ತು ಪಾಂಡವಪುರ ಸಕ್ಕರೆ ಕಾರ್ಖಾನೆ ಶೀಘ್ರ ತೆರೆಯಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ವ್ಯೆಜ್ಞಾನಿಕ ಬೆಲೆ ನೀಡಿ, ಭತ್ತದ ಖರೀದಿ ಕೇಂದ್ರ ಆದಷ್ಟು ಬೇಗ ತೆರಿಯ ಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಯವರು ಇಸ್ರೇಲ್ ಮಾದರಿಯ ಕೃಷಿ ಚಟುವಟಿಕೆ ಅನುಸರಿಸುತ್ತಿರುವುದು ಖುಷಿ ತಂದಿದೆ. ಆದರೆ ಇದು ಸರಿಯಾದ ರೀತಿಯಲ್ಲಿ ಜಾರಿಯಾಗಬೇಕು  ಎಂದರು. ಕಾವೇರಿ ಡ್ಯಾಮ್ ಈಗ ತುಂಬಿದೆ, ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಆದರೆ ಮೊದಲು ನಮ್ಮ ಜಿಲ್ಲೆಯ ಎಲ್ಲಾ ಕೆರೆ ಕಟ್ಟೆ ಗಳನ್ನು ತುಂಬಿಸಿ ನಂತರ ಬೇರೆಯವರಿಗೆ ನೀರು ಬಿಡಿ ಎಂದು ಆಗ್ರಹಿಸಿದರು.

ಸರ್ಕಾರದ ಯಾವುದೇ ಯೋಜನೆಗಳು ರೈತರಿಗೆ ತಲುಪುತ್ತಿಲ್ಲ. ಯೋಜನೆಗಳು ಸರಿಯಾಗಿ ರೈತರಿಗೆ ತಲುಪುವಂತೆ ಮಾಡಿ.  ಮೈಸೂರಿನಲ್ಲಿರುವ ಮಣ್ಣು ಪರೀಕ್ಷಾ ಕೇಂದ್ರವನ್ನು ಸರಿಪಡಿಸಿ  ಎಂದು ಮನವಿ ಮಾಡಿದರು.

ರೈತರು ವೈಜ್ಞಾನಿಕ ರೀತಿಯಲ್ಲಿ ಬೆಳೆ ಬೆಳೆಯಲು ಸರ್ಕಾರ ಸಹಾಯ ಮಾಡಬೇಕು. ಸ್ಥಳೀಯ ರೈತರಿಂದ ಅಕ್ಕಿಯನ್ನು ಖರೀದಿಸಬೇಕು. ಇದರಿಂದ ರೈತರಿಗೆ ಸಹಾಯವಾಗಲಿದೆ. ರೈತರ ಆಯುಷ್ಯವನ್ನು ಸರ್ಕಾರಿ ನೌಕರರು ತಿಂದುಹಾಕುತ್ತಿದ್ದಾರೆ. ಅಧಿಕಾರಿಗಳು ರೈತರ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಅಲ್ಲದೆ ಖಾಸಗಿ ರಸ ಗೊಬ್ಬರ ಮಾರಾಟಗಾರರ ಮೇಲೆ ಕಣ್ಣಿಡಬೇಕು  ಎಂದು ಆಗ್ರಹಿಸಿದರು. ನಂತರ ಮಾತನಾಡಿದ ಕೃಷಿ ಸಚಿವರು ಕೃಷಿ ಸಚಿವರು ಎಲ್ಲರ ಸಲಹೆಗಳನ್ನು  ಗಣನೆಗೆ  ತೆಗೆದುಕೊಳ್ಳಲಾಗುವುದು. ಹಾಗೆ ರೈತರ ಸಾಲವನ್ನು ಶೀಘ್ರ ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದರು. ಪ್ರತಿ ಜಿಲ್ಲೆಯಲ್ಲಿ ಮಾರಾಟ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಲಾತ್ತಿದೆ. ಕೃಷಿ ಇಲಾಖೆ ಯಲ್ಲಿ ಸುಮಾರು 600 ಹುದ್ದೆಗಳು ಖಾಲಿ ಇದೆ ಅದನ್ನು ಕೂಡಾ ಭರ್ತಿ ಮಾಡಲಾಗುವುದು ಎಂದರು.

 

 

Please follow and like us:
0
http://bp9news.com/wp-content/uploads/2018/06/WhatsApp-Image-2018-06-18-at-4.21.13-PM-1024x759.jpeghttp://bp9news.com/wp-content/uploads/2018/06/WhatsApp-Image-2018-06-18-at-4.21.13-PM-150x150.jpegBP9 Bureauಕೃಷಿಪ್ರಮುಖಮೈಸೂರುರಾಜಕೀಯಮೈಸೂರು : ಕೃಷಿ ಸಚಿವರಾದ ಎನ್​​​.ಹೆಚ್​​​.ಶಿವಶಂಕರ್​​​ ರೆಡ್ಡಿ ನೇತೃತ್ವದಲ್ಲಿ ಇಂದು ಮೈಸೂರು,ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ರೈತ ಮುಖಂಡರು ಮತ್ತು ಪ್ರಗತಿಪರ ರೈತ ರೊಂದಿಗೆ ಚರ್ಚೆ ನಡೆಸಿದರು. ಹಲವಾರು ಪ್ರಮುಖ ಅಂಶಗಳನ್ನ ಚರ್ಚೆ ನಡೆಸಿದ್ದಾರೆ. ಸಿರಿಧಾನ್ಯ ಘಟಕ ವನ್ನು ಜಿಲ್ಲೆಗೆ ಒಂದು ಇರ ಬೇಕು. ರೈತರ ಆರೋಗ್ಯದಲ್ಲಿ ಕಾಳಜಿ ಇದ್ದರೆ ಯಶಸ್ವಿನಿ ಕಾರ್ಡ್ ಮತ್ತೆ ಜಾರಿಗೆ ತರಬೇಕು ಎಂದು ರೈತರು ಸಲಹೆ ನೀಡಿದರು. ಮಂಡ್ಯ ಮತ್ತು ಪಾಂಡವಪುರ ಸಕ್ಕರೆ ಕಾರ್ಖಾನೆ...Kannada News Portal