ಮೈಸೂರು :ವ್ಯಕ್ತಿಯೊಬ್ಬನ ತಂಗಿ ಗಂಡನ ಜೊತೆ ಆತನ ಹೆಂಡತಿಯೇ ಪರಾರಿಯಾಗಿರುವ ವಿಚಿತ್ರ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.

ಇರ್ಫಾನ್ ಪಾಷ ತಂಗಿ ಗಂಡನ ಜೊತೆ ಇರ್ಫಾನ್ ಪತ್ನಿ ಪರಾರಿಯಾಗಿದ್ದಾಳೆ. ಇದರಿಂದ ಅಣ್ಣ ತಂಗಿಯ ಪರಿಸ್ಥಿತಿ ಯಾರಿಗೂ ಬೇಡವಾಗಿದೆ. ಇರ್ಫಾನ್ ಪಾಷ ತಂಗಿಯ ಮದುವೆಯ ನಂತರ, ತಂಗಿ ಗಂಡ ಶೈಪುಲ್ಲಾ ಪ್ರತಿ ನಿತ್ಯ ಇರ್ಫಾನ್ ಪಾಷ ಮನೆಗೆ ಬರುತ್ತಿದ್ದ. ಮನೆಗೆ ಬರುತ್ತಿರುವ ಬಾವನ್ನ  ಹೇಗೆ ಅನುಮಾನಿಸೋದು ಎಂದು  ಇರ್ಫಾನ್ ಪಾಷ ಅವರು ದುಡಿಮೆಯಲ್ಲಿ ತೊಡಗುತ್ತಿದ್ದರಂತೆ.

ಮೈಸೂರಿನ ರಾಜೀವ್ ನಗರದ ಇರ್ಫಾನ್ ಪಾಷ ಹಾಗೂ ರುಕ್ಸನಾ ಕಾನಂ 2002 ರ ಸೆಪ್ಟಂಬರ್ 16 ರಂದು ವಿವಾಹವಾಗಿದ್ದರು.ಈ ದಂಪತಿಗೆ ಮುದ್ದಾದ ಮೂರು ಮಕ್ಕಳೂ ಇದ್ದಾರೆ.  ಇದು ಒಂದು ಕುಟುಂಬವಾದರೆ, ಇನ್ನೊಂದೆಡೆ ಇರ್ಫಾನ್ ಪಾಷ ಸಹೋದರಿ ಹುಸ್ಸಾ ಆರಾ ಅವರನ್ನ   ಶೈಪುಲ್ಲಾ ಎಂಬಾತನೊಂದಿಗೆ 2000 ಅಕ್ಟೊಬರ್ 10 ರಂದು ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೂ ಮುದ್ದಾದ ಗಂಡು ಮಗು ಇದೆ.

 

ಆದರೆ ಆತ ಮನೆಗೆ ಬರುವ ಒಳ ಗುಟ್ಟೇ ಬೇರೆ ಇತ್ತು. ಇರ್ಫಾನ್ ಪಾಷ ಹೆಂಡತಿ ರುಕ್ಸನಾ ಖಾನಂಗೂ, ಪಾಷಾ ತಂಗಿ ಹುಸ್ಸಾ ಆರಾ ಅವಳ ಗಂಡ ಶೈಪುಲ್ಲಾ ನಡುವೆ ಒಳೊಳಗೆ ಕುಚು, ಕುಚು ನಡೆಯುತ್ತಿತ್ತು. ಈ ವಿಚಾರ ಇಡೀ ವಠಾರದಲ್ಲಿ ಗುಸು ಗುಸು ಸುದ್ದಿಯಾಗಿತ್ತು. ಈ ಬಗ್ಗೆ ಇರ್ಫಾನ್ ತನ್ನ ಹೆಂಡತಿ ರುಕ್ಸನಾ ಬಳಿ ಕೇಳಿದಾಗ ನಯವಾಗಿ ತಿರಸ್ಕರಿಸಿದ್ದಳಂತೆ.

ಆದರೆ ಮಕ್ಕಳನ್ನ, ಗಂಡನ್ನ ಬಿಟ್ಟು ರಾತ್ರೋ ರಾತ್ರಿ ರುಕ್ಸನಾ ಖಾನಂ ಮತ್ತು ಹುಸ್ಸಾ ಆರಾ ಗಂಡ  ಶೈಪುಲ್ಲಾ ಪರಾರಿಯಾಗಿದ್ದಾರೆ. ಅಲ್ಲದೆ ಮದುವೆ ಕೂಡಾ ಆಗಿದ್ದಾರಂತೆ. ಮನೆಯಲ್ಲಿ ಇದ್ದ ಎಲ್ಲಾ ಹಣ ವಡವೆಗಳನ್ನ ದೋಚಿಕೊಂಡು ಹೊಗಿ  ಸಂಸಾರ ನಡೆಸುತ್ತಿದ್ದರೆ. ಇತ್ತ ಅಣ್ಣ  ಇರ್ಫಾನ್ ಪಾಷ, ತಂಗಿ ಹುಸ್ಸಾ ಆರಾ ಮಕ್ಕಳ ಜೊತೆ ಮೌನವಾಗಿ, ಬೇಸರದಿಂದ ನೋವು ಅನುಭವಿಸುತ್ತಿದ್ದರೆ. ಅತ್ತ ಶೈಪುಲ್ಲಾ  ಮತ್ತು ರುಕ್ಸನಾ ಕಾನಂ  ಲೈಲಾ ಮಜ್ನುಗಳಂತೆ ಮಜಾ ಮಾಡುತ್ತಿದ್ದಾರೆ. ಇನ್ನು ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರು  ನ್ಯಾಯ ಸಿಗುತ್ತಿಲ್ಲ ಎಂದು ಇರ್ಫಾನ್ ಪಾಷ ಅಲವತ್ತುಕೊಳ್ಳುತ್ತಿದ್ದಾರೆ.

 

 

 

 

Please follow and like us:
0
http://bp9news.com/wp-content/uploads/2018/06/collage-25.jpghttp://bp9news.com/wp-content/uploads/2018/06/collage-25-150x150.jpgBP9 Bureauಪ್ರಮುಖಮೈಸೂರುಮೈಸೂರು :ವ್ಯಕ್ತಿಯೊಬ್ಬನ ತಂಗಿ ಗಂಡನ ಜೊತೆ ಆತನ ಹೆಂಡತಿಯೇ ಪರಾರಿಯಾಗಿರುವ ವಿಚಿತ್ರ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ಇರ್ಫಾನ್ ಪಾಷ ತಂಗಿ ಗಂಡನ ಜೊತೆ ಇರ್ಫಾನ್ ಪತ್ನಿ ಪರಾರಿಯಾಗಿದ್ದಾಳೆ. ಇದರಿಂದ ಅಣ್ಣ ತಂಗಿಯ ಪರಿಸ್ಥಿತಿ ಯಾರಿಗೂ ಬೇಡವಾಗಿದೆ. ಇರ್ಫಾನ್ ಪಾಷ ತಂಗಿಯ ಮದುವೆಯ ನಂತರ, ತಂಗಿ ಗಂಡ ಶೈಪುಲ್ಲಾ ಪ್ರತಿ ನಿತ್ಯ ಇರ್ಫಾನ್ ಪಾಷ ಮನೆಗೆ ಬರುತ್ತಿದ್ದ. ಮನೆಗೆ ಬರುತ್ತಿರುವ ಬಾವನ್ನ  ಹೇಗೆ ಅನುಮಾನಿಸೋದು ಎಂದು  ಇರ್ಫಾನ್ ಪಾಷ ಅವರು ದುಡಿಮೆಯಲ್ಲಿ...Kannada News Portal