ಮೈಸೂರು : ಪಡಿತರಚೀಟಿ ವ್ಯವಸ್ಥೆ ಇಲ್ಲದೆ ಪರಿತಪಿಸುತ್ತಿದ್ದ ಬಡ ಕುಟುಂಬಕ್ಕೆ ಮತ್ತೊಂದು ಶಾಕ್ ಎದುರಾಗಿದೆ.ಮೂರು ವರ್ಷದ ಪುಟ್ಟ ಬಾಲಕಿಗೆ ಹೃದಯದಲ್ಲಿ ಕಾಣಿಸಿಕೊಂಡ ರಂಧ್ರ ಆತಂಕ ಸೃಷ್ಟಿಸಿದೆ.ಚಿಕಿತ್ಸೆ ಪಡೆಯಬೇಕಿದ್ರೆ ಪಡಿತರ ಚೀಟಿ ಅವಶ್ಯಕತೆ ಇದೆ. ಆದರೆ ಕಳೆದ 7 ವರ್ಷಗಳಿಂದ ಪಡಿತರ ಚೀಟಿಗಾಗಿ ಅಲೆದ ಕುಟುಂಬ ಹೈರಾಣವಾಗಿದೆ.ಪಡಿತರ ಚೀಟಿಯೂ ಇಲ್ಲ ಚಿಕಿತ್ಸೆಗಾಗಿ ಹಣವೂ ಇಲ್ಲದೆ ಆತಂಕಕ್ಕೆ ಸಿಲುಕಿದೆ.


ನಂಜನಗೂಡು ತಾಲೂಕಿನ ಬೀರದೇವನಪುರ ಗ್ರಾಮದ ಕುಟುಂಬಕ್ಕೆ ಇಂತಹ ಸಂಕಷ್ಟ ಬಂದೊದಗಿದೆ. ಇತ್ತೀಚೆಗಷ್ಟೆ  ಅಂಗನವಾಡಿಗೆ ಆಗಮಿಸಿದ್ದ ವೈದ್ಯರ ತಂಡ ಮಕ್ಕಳನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವೇಳೆ ಬೀರದೇವನಪುರ ಗ್ರಾಮದ ದಂಪತಿ ಮಹೇಂದ್ರ ಮತ್ತು ಗೌರಮ್ಮ ರವರ ಪುತ್ರಿ ಮೂರು ವರ್ಷದ ದೀಕ್ಷಿತಾ ಗೆ ಹೃದಯದಲ್ಲಿ ರಂಧ್ರ ಇರುವುದು ಬೆಳಕಿಗೆ ಬಂದಿದೆ.


ಕೂಡಲೇ ನುರಿತ ವೈದ್ಯರಿಂದ ಪರಿಶೀಲನೆ ಮಾಡಿದಾಗ ರಂಧ್ರ ಇರುವುದು ಧೃಢಪಟ್ಟಿದ್ದು ಹೆಚ್ಚಿನ ಚಿಕಿತ್ಸೆ ಸಲಹೆ ನೀಡಿದ್ದಾರೆ. ಅಪೊಲೋ ಆಸ್ಪತ್ರೆಯಲ್ಲಿ ಸಂಪರ್ಕಿಸಿದಾಗ 3 ಲಕ್ಷ ಹಣ ಖರ್ಚಾಗುವುದಾಗಿ ತಿಳಿಸಿದ್ದಾರೆ.ಬಡಕುಟುಂಬಕ್ಕೆ ೩ ಲಕ್ಷ ಹೊಂದಿಸಲು ಸಾಧ್ಯವಾಗಿಲ್ಲ.ಕನಿಷ್ಟ ಪಡಿತರ  ಚೀಟಿ ಇದ್ದಿದ್ದರೆ ನಾರಾಯಣ ಹೃದಯಾಲಯದಲ್ಲಿ ಉಚಿತ ಚಿಕಿತ್ಸೆ ನೀಡುವ ಸೌಲಭ್ಯವಿತ್ತು. ಕೈಯಲ್ಲಿ ಹಣವೂ ಇಲ್ಲದೆ, ಉಚಿತ ಚಿಕಿತ್ಸೆಗೆ ಪಡಿತರ ಚೀಟಿಯೂ ಇಲ್ಲದೆ ಪರದಾಡುತ್ತಿರುವ ಕುಟುಂಬಕ್ಕೆ ಆರ್ಥಿಕ ನೆರವು ಅವಶ್ಯಕತೆ ಇದೆ.

Please follow and like us:
0
http://bp9news.com/wp-content/uploads/2018/07/WhatsApp-Image-2018-07-12-at-5.22.39-PM-768x1024.jpeghttp://bp9news.com/wp-content/uploads/2018/07/WhatsApp-Image-2018-07-12-at-5.22.39-PM-e1531400062854-150x150.jpegBP9 Bureauಪ್ರಮುಖಮೈಸೂರುಮೈಸೂರು : ಪಡಿತರಚೀಟಿ ವ್ಯವಸ್ಥೆ ಇಲ್ಲದೆ ಪರಿತಪಿಸುತ್ತಿದ್ದ ಬಡ ಕುಟುಂಬಕ್ಕೆ ಮತ್ತೊಂದು ಶಾಕ್ ಎದುರಾಗಿದೆ.ಮೂರು ವರ್ಷದ ಪುಟ್ಟ ಬಾಲಕಿಗೆ ಹೃದಯದಲ್ಲಿ ಕಾಣಿಸಿಕೊಂಡ ರಂಧ್ರ ಆತಂಕ ಸೃಷ್ಟಿಸಿದೆ.ಚಿಕಿತ್ಸೆ ಪಡೆಯಬೇಕಿದ್ರೆ ಪಡಿತರ ಚೀಟಿ ಅವಶ್ಯಕತೆ ಇದೆ. ಆದರೆ ಕಳೆದ 7 ವರ್ಷಗಳಿಂದ ಪಡಿತರ ಚೀಟಿಗಾಗಿ ಅಲೆದ ಕುಟುಂಬ ಹೈರಾಣವಾಗಿದೆ.ಪಡಿತರ ಚೀಟಿಯೂ ಇಲ್ಲ ಚಿಕಿತ್ಸೆಗಾಗಿ ಹಣವೂ ಇಲ್ಲದೆ ಆತಂಕಕ್ಕೆ ಸಿಲುಕಿದೆ. var domain = (window.location != window.parent.location)? document.referrer : document.location.href; if(domain==''){domain =...Kannada News Portal