ಮಂಡ್ಯ : ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವ ಸಂದರ್ಭದಲ್ಲಿ ಬಿಎಸ್​​ವೈ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮೇಲೆ ಕುಚೇಷ್ಟೆ ಪದದ ಭಾಷೆ ಬಳಸಿದ್ದು ಅದನ್ನು ನಾವು ಖಂಡಿಸುತ್ತೇವೆ ಎಂದು ಮಂಡ್ಯ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ ರಮೇಶ್ ಹೇಳಿದ್ದಾರೆ.

ಯಡಿಯೂರಪ್ಪ ರಾಜ್ಯಪಾಲರಿಗೆ ಒತ್ತಡ ಹೇರಿ, ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಸಂಖ್ಯಾಬಲದ ಕೊರತೆಯಿಂದ   ಬಹುಮತ ಸಾಬೀತು ಮಾಡಲು ಆಗದೇ ರಾಜೀನಾಮೆ ನೀಡಿದ್ದಾರೆ. ಆದರೆ ಈಗ ಕುಮಾರಸ್ವಾಮಿ ಅವರನ್ನು  ಕೊಳ್ಳಿದೆವ್ವ, ದುರ್ಯೋಧನ, ಊಸರವಳ್ಳಿ, ನಾಗರಹಾವು ಎಂಬ ಪದಗಳನ್ನು ಬಳಸಿದ್ದಾರೆ.

ಬಿಜೆಪಿಗೆ ನಿಜವಾದ ವಿರೋಧಿ ನೀವು. ಮುಖ್ಯಮಂತ್ರಿ ಸ್ಥಾನ ಕೊಡಲಿಲ್ಲ ಎಂದು ಕೆಜೆಪಿ ಪಕ್ಷ ಕಟ್ಟಿಕೊಂಡು, ಮಾತೃ ಪಕ್ಷ ಬಿಜೆಪಿಗೆ  ಮೋಸ ಮಾಡಿದ ವ್ಯಕ್ತಿ ನೀವು. ನಿಮ್ಮನ್ನು ಉಪಮುಖ್ಯಮಂತ್ರಿ ಮಾಡಿ ಮುಖ್ಯಮಂತ್ರಿ ಆಗುವಂತೆ ಮಾಡಿದ್ದು ಕುಮಾರಸ್ವಾಮಿಯವರು. ಅಂತವರನ್ನು  ಕುಚೇಷ್ಟೆ ಪದಗಳಿಂದ ನಿಂದಿಸಿದ್ದು ನಿಮ್ಮ ಕೆಟ್ಟ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಬಿಎಸ್​​​ವೈ ವಿರುದ್ದ ವಗ್ದಾಳಿ ನಡೆಸಿದರು. ಅನುಭವಿ ರಾಜಕಾರಣಿಯಾಗಿರುವ ನೀವು ಈ ತರದ ಕೆಳಮಟ್ಟದ ರಾಜಕಾರಣ ಮಾಡುತ್ತಿರುವುದು ನಿಮ್ಮ ವ್ಯಕ್ತಿತ್ವಕ್ಕೆ ಸರಿ ಹೊಂದುವುದಿಲ್ಲ.

ಮೋದಿಯವರು ಮಂಗಳೂರಿಗೆ ಬಂದಾಗ ದೇವೇಗೌಡರನ್ನ ಹೊಗಳಿ ಹೋಗ್ತಾರೆ, ಅಂತವರನ್ನ ನೀವು ಅಪ್ಪ ಮಕ್ಕಳ ಪಕ್ಷ ಜರಿಯುತ್ತೀರಿ. ನಿಜವಾಗಿ ಯಡಿಯೂರಪ್ಪ ಕುಮಾರಸ್ವಾಮಿ ರವರ ಫೋಟೋ ಇಟ್ಟು ಪೂಜೆ ಮಾಡಬೇಕು ಎಂದರು.

 

 

Please follow and like us:
0
http://bp9news.com/wp-content/uploads/2018/05/WhatsApp-Image-2018-05-26-at-1.40.03-PM-e1527331438186-1024x768.jpeghttp://bp9news.com/wp-content/uploads/2018/05/WhatsApp-Image-2018-05-26-at-1.40.03-PM-e1527331438186-150x150.jpegBP9 Bureauಪ್ರಮುಖಮಂಡ್ಯರಾಜಕೀಯಮಂಡ್ಯ : ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವ ಸಂದರ್ಭದಲ್ಲಿ ಬಿಎಸ್​​ವೈ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮೇಲೆ ಕುಚೇಷ್ಟೆ ಪದದ ಭಾಷೆ ಬಳಸಿದ್ದು ಅದನ್ನು ನಾವು ಖಂಡಿಸುತ್ತೇವೆ ಎಂದು ಮಂಡ್ಯ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ ರಮೇಶ್ ಹೇಳಿದ್ದಾರೆ. ಯಡಿಯೂರಪ್ಪ ರಾಜ್ಯಪಾಲರಿಗೆ ಒತ್ತಡ ಹೇರಿ, ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಸಂಖ್ಯಾಬಲದ ಕೊರತೆಯಿಂದ   ಬಹುಮತ ಸಾಬೀತು ಮಾಡಲು ಆಗದೇ ರಾಜೀನಾಮೆ ನೀಡಿದ್ದಾರೆ. ಆದರೆ ಈಗ ಕುಮಾರಸ್ವಾಮಿ ಅವರನ್ನು  ಕೊಳ್ಳಿದೆವ್ವ, ದುರ್ಯೋಧನ, ಊಸರವಳ್ಳಿ,...Kannada News Portal