ಮಕ್ಕಳಿಂದ ಪ್ರತಿಭಟನೆ

ಮೈಸೂರು : ಪುಟ್ಟ ಪುಟ್ಟ ಮಕ್ಕಳು ಶನಿವಾರ ಕೈಯಲ್ಲಿ ಪ್ರಕಟಣಾ ಫಲಕ ಗಳನ್ನು ಹಿಡಿದು ಬೀದಿಗಿಳಿದಿದ್ದರು. ಎಲ್ಲರ ಕಣ್ಣು ಆ ಪುಟ್ಟ ಮಕ್ಕಳ ಮೇಲೆ ಇತ್ತು. ಸಿಗ್ನಲ್ ಬಳಿ ನಿಂತು ಏನು ಮಾಡುತ್ತಿದ್ದಾರೆ ಎಂದು ಎಲ್ಲರೂ ಒಮ್ಮೆ ಹುಬ್ಬೇರಿಸಿ ನೋಡುತ್ತಿದ್ದರು. ಅವರು ಬಂದಿದ್ದು ಸುಖಾಸುಮ್ಮನೆ ಅಲ್ಲ. ನದಿ ಜೋಡಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸೋದಕ್ಕೆ.

ನದಿ ಜೋಡಣೆಗೆ ಮಿಸ್ ಕಾಲ್ ನೀಡಿ ಸಹಕರಿಸಿ ಅಭಿಯಾನ ಜೋರಾಗಿಯೇ ನಡೆದಿದೆ. ಮೈಸೂರಿನ ಕುವೆಂಪುನಗರದ ಅಪೋಲೋ ಆಸ್ಪತ್ರೆಯ ವೃತ್ತದ ಬಳಿ ಕಿಡ್ ಝೀ ಚಿಣ್ಣರು ತಮ್ಮ ಗುರುಗಳು ಹಾಗೂ ಪಾಲಕರ ಜೊತೆ ಬಂದು ಸಿಗ್ನಲ್ ನಲ್ಲಿ ನಿಂತವರಿಗೆ, ವಾಹನ ಸವಾರರಿಗೆ ತಮ್ಮ ನಲ್ನುಡಿಗಳಲ್ಲಿ 8000980009ಗೆ ಮಿಸ್ ಕಾಲ್ ಕೊಡಿ ನದಿ ಉಳಿಸಲು ಸಹಕರಿಸಿ ಎಂದು ವಿನಂತಿಸಿಕೊಂಡರು.

ನದಿಗಳು ಮನುಷ್ಯನ ಜೀವನಾಡಿಗಳಾಗಿದ್ದು, ನದಿಗಳ ರಕ್ಷಣೆಗೆ ಎಲ್ಲರೂ ಮುಂದಾಗಬೇಕಿದೆ. ನದಿಗಳನ್ನು ಜೋಡಿಸುವುದರಿಂದ ನದಿಗಳು ಉಳಿಯಲಿವೆ. ಇಲ್ಲದಿದ್ದಲ್ಲಿ ಮರುಭೂಮಿಯಾಗಲಿದೆ. ಅದರಿಂದ ಎಲ್ಲರೂ ನದಿಜೋಡಣೆಗೆ ಸಹಕರಿಸಿ ಎಂದು ಶಿಕ್ಷಕರು ಮಕ್ಕಳೊಂದಿಗೆ ದನಿಗೂಡಿಸಿದರು.

ವರದಿ:ಮೋಹನ್​ ಕೃಷ್ಣ

Please follow and like us:
0
http://bp9news.com/wp-content/uploads/2017/09/ಮಕ್ಕ-1024x768.jpghttp://bp9news.com/wp-content/uploads/2017/09/ಮಕ್ಕ-150x150.jpgBP9 Bureauಮೈಸೂರುಸದ್ಗುರುcampign,children,isha foundation,juggi vasudev,Rally for River,river,ಕರ್ನಾಟಕ,ನದಿ ಉಳಿಸಿ,ನದಿಜೋಡಣೆ,ಪ್ರತಿಭಟನೆ,ಮಕ್ಕಳು  ಮೈಸೂರು : ಪುಟ್ಟ ಪುಟ್ಟ ಮಕ್ಕಳು ಶನಿವಾರ ಕೈಯಲ್ಲಿ ಪ್ರಕಟಣಾ ಫಲಕ ಗಳನ್ನು ಹಿಡಿದು ಬೀದಿಗಿಳಿದಿದ್ದರು. ಎಲ್ಲರ ಕಣ್ಣು ಆ ಪುಟ್ಟ ಮಕ್ಕಳ ಮೇಲೆ ಇತ್ತು. ಸಿಗ್ನಲ್ ಬಳಿ ನಿಂತು ಏನು ಮಾಡುತ್ತಿದ್ದಾರೆ ಎಂದು ಎಲ್ಲರೂ ಒಮ್ಮೆ ಹುಬ್ಬೇರಿಸಿ ನೋಡುತ್ತಿದ್ದರು. ಅವರು ಬಂದಿದ್ದು ಸುಖಾಸುಮ್ಮನೆ ಅಲ್ಲ. ನದಿ ಜೋಡಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸೋದಕ್ಕೆ. ನದಿ ಜೋಡಣೆಗೆ ಮಿಸ್ ಕಾಲ್ ನೀಡಿ ಸಹಕರಿಸಿ ಅಭಿಯಾನ ಜೋರಾಗಿಯೇ ನಡೆದಿದೆ. ಮೈಸೂರಿನ ಕುವೆಂಪುನಗರದ...Kannada News Portal