ಮೈಸೂರು: ಪ್ರಜಾಪ್ರಭುತ್ವಕ್ಕೆ ಮಾರಕವಾದ ಚುನಾವಣೆ ನಡೆದಿದೆ. ಹೀಗೆ ಮುಂದುವರೆದಲ್ಲಿ ಚುನಾವಣೆ ಮೇಲೆ ನಂಬಿಕೆ ಹೋಗುತ್ತದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಬದ್ದವಾಗಿ ಶಾಸನ ಸಭೆ ಮತ್ತು ಲೋಕಸಭೆಗೆ ಆಯ್ಕೆಯಾಗುವವರಿಗೆ ವ್ಯಕ್ತಿತ್ವ ಬಹಳ ಮುಖ್ಯ. ಪ್ರಧಾನಿ ಮತ್ತು ರಾಷ್ಟ್ರಪತಿಯಿಂದ ಹಿಡಿದು ಪಕ್ಷದ ಕಾರ್ಯಕರ್ತನ ವರೆಗೂ ಅಕ್ರಮದ ಕೂಗು ಕೇಳುತ್ತಿದೆ.

ಒಬ್ಬ ಗ್ರಾ.ಪಂ.ಸದಸ್ಯನಿಗಿರುವ ಗಾಂಭೀರ್ಯ ಶಾಸನ ಸಭೆಯಲ್ಲಿ ಉಳಿದಿಲ್ಲ. ಜಾತಿ ಮತ್ತು ಹಣದ ಪ್ರಾಬಲ್ಯದ ಮೇಲೆ ಚುನಾವಣೆ ನಡೆಯುತ್ತಿದ್ದು, ಬೋಗಸ್ ಪ್ರನಾಳಿಕೆ ನೀಡಲಾಗುತ್ತಿದೆ. ಹೀಗೆ ಮುಂದುವರೆದಲ್ಲಿ ರಾಜ್ಯದಲ್ಲಿ ಅರಾಜಕಥೆ ಪ್ರಾರಂಭವಾಗುತ್ತದೆ ಎಂದು ಆರೋಪಿಸಿದರು.

ಸತತ 3ಬಾರಿ ಚುನಾವಣೆಯಲ್ಲಿ ಸೋತಿದ್ದೇನೆ. ಸೋಲಿಗೆ ನಾನು ಹೆದರುವುದಿಲ್ಲ. ಆದರೆ ನನ್ನನ್ನು ಸೋಲಿಸುವುದರಿಂದ ನಿಮಗೇನು ಲಾಭ ಎಂದು ಪ್ರಶ್ನಿಸಿದರು. ಚಾಮರಾಜನಗರ ಜಿಲ್ಲೆಗೆ ನಾನು ಮಾಡಿದಷ್ಟು ಕೆಲಸ ಬೆರೆ ಯಾರು ಮಾಡಿಲ್ಲ, ಮಾಡಲು ಸಾಧ್ಯವಿಲ್ಲ. ಚುನಾವಣೆ ಹಿಂದಿನ ದಿನದವರೆಗು ಎಲ್ಲ ಅಂದುಕೊಂಡಂತೆ ನಡೆಯುತ್ತಿತ್ತು. ಕೇವಲ ಒಂದು ದಿನದಲ್ಲಿ ಎಲ್ಲಾ ಬದಲಾಯಿತು. ಈ ಮ್ಯಾಜಿಕ್ ಹೇಗೆ ಎಂದು ಅರ್ಥವಾಗುತ್ತಿಲ್ಲ ಎಂದರು.

ರಾಜ್ಯದಲ್ಲಿ ಜಾತ್ಯಾತೀತ ಎಂದಿದ್ದರೆ ಅದು ನಾನೊಬ್ಬನೇ. ಬೇರೆಲ್ಲಾ ಪಕ್ಷದವರು ಜಾತಿ ರಾಜಕಾರಣಿಗಳು.ಟಿ.ಎನ್. ಶೇಶನ್ ಅವರಿದ್ದ ಕಾಲದಲ್ಲಿ ಒಂದು ಭಯವಿತ್ತು. ಅವರ ನಂತರ ಯಾರು ಅವರಂತ ಚುನಾವಣಾಧಿಕಾರಿ ಬರಲಿಲ್ಲ ಎಂದು ಹೇಳಿದರು. ಹಣ, ಜಾತಿ ಮತ್ತು ಮತಯಂತ್ರಗಳ ಬಗ್ಗೆ ಚುನಾವಣಾ ಆಯೋಗ ತನಿಖೆ ಮಾಡಬೇಕು. ಈ ಬಗ್ಗೆ ಶೀಘ್ರದಲ್ಲೇ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.

ವರದಿ : ಮೋಹನ್​​ಕುಮಾರ್​​​

 

 

Please follow and like us:
0
http://bp9news.com/wp-content/uploads/2018/05/Karnatakada-Miditha-70.jpeghttp://bp9news.com/wp-content/uploads/2018/05/Karnatakada-Miditha-70-150x150.jpegBP9 Bureauಚಾಮರಾಜನಗರಪ್ರಮುಖರಾಜಕೀಯಮೈಸೂರು: ಪ್ರಜಾಪ್ರಭುತ್ವಕ್ಕೆ ಮಾರಕವಾದ ಚುನಾವಣೆ ನಡೆದಿದೆ. ಹೀಗೆ ಮುಂದುವರೆದಲ್ಲಿ ಚುನಾವಣೆ ಮೇಲೆ ನಂಬಿಕೆ ಹೋಗುತ್ತದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಬದ್ದವಾಗಿ ಶಾಸನ ಸಭೆ ಮತ್ತು ಲೋಕಸಭೆಗೆ ಆಯ್ಕೆಯಾಗುವವರಿಗೆ ವ್ಯಕ್ತಿತ್ವ ಬಹಳ ಮುಖ್ಯ. ಪ್ರಧಾನಿ ಮತ್ತು ರಾಷ್ಟ್ರಪತಿಯಿಂದ ಹಿಡಿದು ಪಕ್ಷದ ಕಾರ್ಯಕರ್ತನ ವರೆಗೂ ಅಕ್ರಮದ ಕೂಗು ಕೇಳುತ್ತಿದೆ. ಒಬ್ಬ ಗ್ರಾ.ಪಂ.ಸದಸ್ಯನಿಗಿರುವ ಗಾಂಭೀರ್ಯ ಶಾಸನ ಸಭೆಯಲ್ಲಿ ಉಳಿದಿಲ್ಲ. ಜಾತಿ ಮತ್ತು...Kannada News Portal