ಮಂಡ್ಯ : ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಧು ಮಾದೇಗೌಡ ಅವರ ಪರವಾಗಿ ಅವರ ತಂದೆ ಕಾವೇರಿ ಹೋರಾಟಗಾರ ಡಾಕ್ಟರ್ ಜಿ ಮಾದೇಗೌಡರು  ಮತ ಹಾಕುವಂತೆ  ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ನಂತರ ಮಾತನಾಡಿದ ಅವರು, ನನ್ನ ರಾಜಕೀಯ ಗುರುಗಳಾದ ಕೆವಿ ಶಂಕರಗೌಡ  ಅವರ ಆಶೀರ್ವಾದದಿಂದ ನಾನು ಜಿಲ್ಲೆಯಲ್ಲಿ ಎರಡು ಸಲ ಲೋಕಸಭೆಗೆ, ಆರು ಸಲ ವಿಧಾನಸಭೆಗೆ ಆಯ್ಕೆಯಾಗಿ ಒಂದು ಸಲ ಮಂತ್ರಿಯಾಗಿ ಕೆಲಸ  ನಿರ್ವಹಿಸಿದ್ದೇನೆ. ನಾನು ರಾಜಕೀಯ ಜೀವನದಲ್ಲಿ ಅನೇಕ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದು. ಗಾಂಧಿ  ತತ್ತ್ವ ಪಾಲಕನಾಗಿದ್ದು ಅವರ ತತ್ವಗಳು ಜನರ ತಲುಪಲೆಂದು ಮಂಡ್ಯದಲ್ಲಿ ಗಾಂಧಿ ಭವನ ಮಾಡಿದ್ದು, ಈ ವರ್ಷ ಗಾಂಧಿ ಗ್ರಾಮ ಮಾಡಲು ಹೊರಟಿದ್ದೇನೆ ಎಂದರು.

ಭಾರತೀಯ ನಗರದಲ್ಲಿ ಒಂದು ಸಣ್ಣ ಶಿಕ್ಷಣ ಸಂಸ್ಥೆಯಿಂದ ಪ್ರಾರಂಭಾಗಿ ಇಂದು  ಬೃಹತ್ ಶಿಕ್ಷಣ ಸಂಸ್ಥೆಯನ್ನು  ಮಾಡಿ ಜನರಿಗೆ ಶಿಕ್ಷಣವನ್ನು ನೀಡಿದ್ದು, ಜಿಲ್ಲೆಯಲ್ಲಿ ಕಾವೇರಿ ಹೋರಾಟ ಚಳವಳಿ, ಕರ್ನಾಟಕ ಏಕೀಕರಣ ಚಳವಳಿ ಹಾಗೂ ವರುಣಾ ನಾಲೆ ಹೋರಾಟದಿಂದಲೇ ಬಂದಿರುವ ನಾನು ಅನೇಕ ಸಂಘ ಸಂಸ್ಥೆಗಳನ್ನು ಕಟ್ಟಿದ್ದು ಅವುಗಳನ್ನು ನೋಡಿಕೊಂಡು ಹೋಗಲು ನನ್ನ ಮಗನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

Please follow and like us:
0
http://bp9news.com/wp-content/uploads/2018/05/WhatsApp-Image-2018-05-10-at-11.38.56-AM-1024x768.jpeghttp://bp9news.com/wp-content/uploads/2018/05/WhatsApp-Image-2018-05-10-at-11.38.56-AM-150x150.jpegBP9 Bureauಮಂಡ್ಯರಾಜಕೀಯಮಂಡ್ಯ : ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಧು ಮಾದೇಗೌಡ ಅವರ ಪರವಾಗಿ ಅವರ ತಂದೆ ಕಾವೇರಿ ಹೋರಾಟಗಾರ ಡಾಕ್ಟರ್ ಜಿ ಮಾದೇಗೌಡರು  ಮತ ಹಾಕುವಂತೆ  ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನಂತರ ಮಾತನಾಡಿದ ಅವರು, ನನ್ನ ರಾಜಕೀಯ ಗುರುಗಳಾದ ಕೆವಿ ಶಂಕರಗೌಡ  ಅವರ ಆಶೀರ್ವಾದದಿಂದ ನಾನು ಜಿಲ್ಲೆಯಲ್ಲಿ ಎರಡು ಸಲ ಲೋಕಸಭೆಗೆ, ಆರು ಸಲ ವಿಧಾನಸಭೆಗೆ ಆಯ್ಕೆಯಾಗಿ ಒಂದು ಸಲ ಮಂತ್ರಿಯಾಗಿ ಕೆಲಸ  ನಿರ್ವಹಿಸಿದ್ದೇನೆ. ನಾನು ರಾಜಕೀಯ...Kannada News Portal