ಮೈಸೂರು: ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಮನೆ ಇದೀಗ ಖಾಲಿ ಖಾಲಿಯಾಗಿದೆ. ಇದು ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರು ನಿವಾಸದ ಚಿತ್ರಣ. ಸಿದ್ದರಾಮ್ಯ ಸಿಎಂ ಆಗಿದ್ದಾಗ ಬಂದರೆ ಅಧಿಕಾರಿಗಳು, ಶಾಸಕರು,ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳಿಂದ ಮನೆ ಗಿಜುಗುಡುತ್ತಿತ್ತು.

ಆದರೆ ಮಾಜಿ ಸಿಎಂ ಆದ ನಂತರ ಸಿದ್ದರಾಮಯ್ಯ ಮನೆಯ ಕಡೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬರುತ್ತಿಲ್ಲ. ಅಧಿಕಾರದಲ್ಲಿದ್ದಾಗ ಮನೆಯ ಮುಂದೆಯೇ ಕಾದು ಕುಳಿತುಕೊಳ್ಳುತ್ತಿದ್ದ ಜನರು, ಈಗ ಸಿದ್ದರಾಮಯ್ಯರವರ ಮನೆ ಮುಂದೆ ಬೆರಳೆಣಿಕೆಯಷ್ಟೇ ಜನ ಕಾಣ ಸಿಗುತ್ತಾರೆ.

ಆದರೆ ಈಗ ಚುನಾವಣೆಯಾದ ಇಷ್ಟು ದಿನದ ಮೇಲೆ ಸಿದ್ದರಾಮಯ್ಯ ಸ್ವಕ್ಷೇತ್ರಕ್ಕೆ ಇಂದು ಆಗಮಿಸಿದ್ದಾರೆ. ಕಳೆದ ಒಂದು ವಾರದಿಂದ ಬಾದಾಮಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವಲ್ಲಿ ಬಿಸಿಯಾಗಿದ್ದ ಶಾಸಕ ಸಿದ್ದರಾಮಯ್ಯ ಇಂದು  ಬೆಳಿಗ್ಗೆ 8 ಗಂಟೆ ಸುಮಾರಿಗೆ ಮೈಸೂರಿಗೆ ಆಗಮಿಸಿದ್ದಾರೆ.


ಮೈಸೂರಿನ ಟಿ.ಕೆ.ಬಡಾವಣೆಯ ತಮ್ಮ ಮನೆಯಲ್ಲಿ ರಿಲ್ಯಾಕ್ಸ್ ಮಾಡುತ್ತಿರುವ  ಸಿದ್ದರಾಮಯ್ಯ. ತಮ್ಮಮಗನನ್ನು ಗೆಲ್ಲಿಸಿದ ವರುಣಾ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.ನಂತರ ಖಾಸಗೀ ಹೋಟೆಲ್ ನಲ್ಲಿ ಮೈಸೂರು ಹಾಗೂ ಚಾಮರಾಜನಗರದಲ್ಲಿ ಗೆದ್ದಿರುವ ಹಾಗೂ ಸೋತಿರುವವವರ ಜೊತೆ ಸಭೆ ನಡೆಸಿ ಸಂಜೆ ಮುಸ್ಲಿಂ ಬಾಂಧವರೊಂದಿಗೆ ಔತಣ ಕೂಟದಲ್ಲಿ ಭಾಗಿಯಾಗಲಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಸಚಿವ ಪುಟ್ಟರಂಗ ಶೆಟ್ಟಿ

ಮೈಸೂರು ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಸಚಿವ ಪುಟ್ಟರಂಗ ಶೆಟ್ಟಿ ಭೇಟಿ ಮಾಡಿದ್ದಾರೆ. ತಮ್ಮನ್ನ ಭೇಟಿ ಮಾಡಿದ  ಪುಟ್ಟರಂಗ ಶೆಟ್ಟಿ ಅವರನ್ನ  ತಮ್ಮದೆ ದಾಟಿಯಲ್ಲಿ ಆತ್ಮೀಯಾವಾಗಿ ಸಿದ್ದರಾಮಯ್ಯ ಮಾತನಾಡಿಸಿದ್ದಾರೆ.ಪ್ರಮಾಣ ವಚನ ವೇಳೆ ತಾವು ಕಾಣಲಿಲ್ಲ ಎಂದು ಪುಟ್ಟರಂಗಶೆಟ್ಟಿ ಸಿದ್ದರಾಯ್ಯನವರನ್ನು ಕೇಳಿದ್ದಕ್ಕೆ, ಅಧಿಕಾರ ಬಂದ‌ ಮೇಲೆ ನಾವು ಕಾಣುವುದಿಲ್ಲ ಎಂದು ಮಾರ್ಮಿಕವಾಗಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಪುಟ್ಟರಂಗಶೆಟ್ಟಿ ಸಿದ್ದರಾಮಯ್ಯ ಮಾತಿಗೆ ಮೌನಕ್ಕೆ‌ ಶರಣಾಗಿದ್ದಾರೆ.

Please follow and like us:
0
http://bp9news.com/wp-content/uploads/2018/06/Karnatakada-Miditha-52.jpeghttp://bp9news.com/wp-content/uploads/2018/06/Karnatakada-Miditha-52-150x150.jpegBP9 Bureauಪ್ರಮುಖಮೈಸೂರುರಾಜಕೀಯಮೈಸೂರು: ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಮನೆ ಇದೀಗ ಖಾಲಿ ಖಾಲಿಯಾಗಿದೆ. ಇದು ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರು ನಿವಾಸದ ಚಿತ್ರಣ. ಸಿದ್ದರಾಮ್ಯ ಸಿಎಂ ಆಗಿದ್ದಾಗ ಬಂದರೆ ಅಧಿಕಾರಿಗಳು, ಶಾಸಕರು,ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳಿಂದ ಮನೆ ಗಿಜುಗುಡುತ್ತಿತ್ತು. ಆದರೆ ಮಾಜಿ ಸಿಎಂ ಆದ ನಂತರ ಸಿದ್ದರಾಮಯ್ಯ ಮನೆಯ ಕಡೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬರುತ್ತಿಲ್ಲ. ಅಧಿಕಾರದಲ್ಲಿದ್ದಾಗ ಮನೆಯ ಮುಂದೆಯೇ ಕಾದು ಕುಳಿತುಕೊಳ್ಳುತ್ತಿದ್ದ ಜನರು, ಈಗ ಸಿದ್ದರಾಮಯ್ಯರವರ ಮನೆ ಮುಂದೆ ಬೆರಳೆಣಿಕೆಯಷ್ಟೇ ಜನ ಕಾಣ...Kannada News Portal