ಮಂಡ್ಯ: ನಾಳೆ ಸಿಎಂ ನಾಟಿ ಮಾಡೋ ದೃಶ್ಯ ನಿಮಗೆ ಮತ್ತೊಮ್ಮೆ ‘ಬಂಗಾರದ ಮನುಷ್ಯ’ ಚಿತ್ರದ ‘ಕೈಲಾಗದು ಎಂದು’ ಎಂಬ ಹಾಡಿನ ದೃಶ್ಯವನ್ನು ನೆನಪು ಮಾಡಿಕೊಡುವಲ್ಲಿ ಅನುಮಾನವಿಲ್ಲ. ಸಕ್ಕರೆನಾಡು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಜಮೀನಿನಲ್ಲಿ ಸಿಎಂ ನಾಟಿ ಮಾಡೋ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಹರಳಕುಪ್ಪೆ ಗ್ರಾಮದ ಕೆಂಚೇಗೌಡ ಎಂಬುವವರ ಕುಟುಂಬಕ್ಕೆ ಸೇರಿದ 5 ಎಕರೆ ಜಮೀನಿನಲ್ಲಿ ನಾಟಿ ಕಾರ್ಯಕ್ಕೆ  ಈಗಾಗಲೇ ಗದ್ದೆಯನ್ನ ಹದಗೊಳಿಸಲಾಗಿದೆ.ನಾಳೆ ನಾಟಿಗಾಗಿ 100 ಹೆಣ್ಣಾಳುಗಳು, 50 ಗಂಡಾಳುಗಳು, 25 ಜೊತೆ ಉಳುಮೆ ಮಾಡೋ ಎತ್ತುಗಳ ಬಳಕೆ ಮಾಡಲಿದ್ದು, ಸಿಎಂ ನಾಟಿ ಕಾರ್ಯ ವೀಕ್ಷಿಸಲು ನಾಲೆ ಏರಿ ಮೇಲೆ ಎರಡು ಬೃಹತ್ LED ಪರದೆ ವ್ಯವಸ್ಥೆಗೆ ಜಿಲ್ಲಾಡಳಿತ ಸಿದ್ದತೆ ಮಾಡಿದೆ. ಹದಗೊಳಿಸಿರೋ ಗದ್ದೆ ಮಧ್ಯ ಭಾಗದಲ್ಲೇ 3 ಜನ ನಿಲ್ಲುವಷ್ಟು ಪುಟ್ಟ ವೇದಿಕೆ ಕೂಡ ನಿರ್ಮಾಣ ಮಾಡಿದ್ದು, ನಾಟಿ ಕಾರ್ಯದ ನಂತರ ಗದ್ದೆ ಮಧ್ಯೆಯ ಪುಟ್ಟ ವೇದಿಕೆಯಲ್ಲೇ ರೈತರನ್ನುದ್ದೇಶಿಸಿ ಸಿಎಂ ಕುಮಾರಸ್ವಾಮಿ ಭಾಷಣ ಮಾಡಲಿದ್ದಾರೆ.

ಸಿಎಂ ಆಗಮನಕ್ಕೆ ಭರದ ಸಿದ್ಧತೆ

ಪಾಂಡವಪುರ ತಾಲ್ಲೂಕಿನ ಸೀತಾಪುರ, ಅರಳಕುಪ್ಪೆ ಗ್ರಾಮ ವ್ಯಾಪ್ತಿಯ ಗ್ರಾಮಗಳು ಸಿಎಂ ಆಗಮನಕ್ಕಾಗಿ ಸಜ್ಜಾಗುತ್ತಿದ್ದು, ಗುಂಡಿ ಬಿದ್ದ ರಸ್ತೆಗಳಿಗೆ ಡಾಂಬರು ಭಾಗ್ಯ ಸಿಕ್ಕಿದೆ. ಅಲ್ಲದೆ ಮುಖ್ಯಮಂತ್ರಿಗಳ ನಾಟಿ ಕಾರ್ಯಕ್ಕೆ ಗದ್ದೆ ಬಯಲುಗಳು ಮದುವಣಗಿತ್ತಿಯಂತೆ ರೆಡಿಯಾಗಿದೆ. ಗದ್ದೆ ಬಯಲಿನ ಸುತ್ತ ಬಣ್ಣ ಬಣ್ಣದ ಬಾವುಟ. ಕುಮಾರಸ್ವಾಮಿ ಸ್ವಾಗತಕ್ಕಾಗಿ ಎತ್ತಿನ ಗಾಡಿಗಳನ್ನು ಬಣ್ಣ ಬಳಿದು ಶೃಂಗಾರ ಮಾಡಲಾಗಿದೆ.


ಕಲಾವಿದರು ಎತ್ತಿನಗಾಡಿ ಮತ್ತು ಅದರ ಚಕ್ರಕ್ಕೆ  ಹೊಸದಾಗಿ ಬಣ್ಣ ಬಳಿದು, ಬಣ್ಣಬಣ್ಣದ  ಚಿತ್ತಾರ ಬಿಡಿಸುತ್ತಿದ್ದಾರೆ. ಗದ್ದೆಯ ಸುತ್ತಲೂ ಬ್ಯಾರಿಕೇಡ್ ವ್ಯವಸ್ಥೆ. ನಾಲೆಯ ಪಕ್ಕ ಗದ್ದೆಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ನಾಲೆಯ ದಡದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಒಟ್ಟಾರೆ  ಮುಖ್ಯಮಂತ್ರಿಗಳ ನಾಟಿಕಾರ್ಯಕ್ರಮಕ್ಕಾಗಿ ನೂರಾರು ಜನ ಕಾರ್ಮಿಕರು, ಕಾರ್ಯಕರ್ತರು ದುಡಿಯುತ್ತಿದ್ದು, ಗದ್ದೆಯ ಬಳಿ ಮುಖ್ಯಮಂತ್ರಿಗಳ ಸ್ವಾಗತಕ್ಕಾಗಿ ಸಕಲ ರೀತಿಯ ಸಿದ್ಧತೆಯಾಗಿದೆ.

ಸಿಎಂ ಕಾರ್ಯಕ್ರಮದ ವಿವರ

ಮುಖ್ಯಮಂತ್ರಿಗಳ ನಾಟಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಸ್ಥಳ ಪರಿಶೀಲನೆ ನಡೆಸಿದ್ದಾರೆ.ನಾಳೆ(11-08-2018) 11 ಗಂಟೆಗೆ ಕುಮಾರಸ್ವಾಮಿ ಅವರು ಸೀತಾಪುರ ಗ್ರಾಮಕ್ಕೆ ಆಗಮಿಸಿ, ರೈತರು ಮತ್ತು ಮಹಿಳೆಯರೊಂದಿಗೆ ಮಧ್ಯಾಹ್ನ 2 ಗಂಟೆಗಳವರೆಗೆ ನಾಟಿ ಕಾರ್ಯ ಮಾಡಲಿದ್ದಾರೆ. ಗದ್ದೆಯ ಮಧ್ಯ ಭಾಗದಲ್ಲಿ ಮೂರು ಜನ ನಿಲ್ಲುವಂತಹ ಪುಟ್ಟ ವೇದಿಕೆ ನಿರ್ಮಿಸಲಾಗಿದ್ದು, ಇಲ್ಲಿಂದ ಮುಖ್ಯಮಂತ್ರಿಗಳು ರೈತರಿಗೆ ಆತ್ಮವಿಶ್ವಾಸ ತುಂಬುವ ಮಾತುಗಳನ್ನು ಆಡಲಿದ್ದಾರೆ.


ಸಿಡಿಎಸ್ ನಾಲೆ ಮೇಲೆ ಜನರು ಸೇರಲು ಅವಕಾಶ ಮಾಡಿಕೊಡಲಾಗಿದೆ. ಯಾವುದೇ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ನಂತರ ರೈತರೊಂದಿಗೆ ಸೇರಿ ಮಧ್ಯಾಹ್ನ ಊಟ ಸೇವಿಸಲಿದ್ದಾರೆ. ಹಾಗೆ ಸಂಜೆ 4 ಗಂಟೆಗೆ ಕೆಆರ್​ಎಸ್​ ಹೋಟೆಲ್​ನಲ್ಲಿ ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಸಭೆ ನಡೆಸಲಿದ್ದಾರೆ ಎಂದು ಸಚಿವ ಸಿ.ಎಸ್. ಪುಟ್ಟರಾಜು ಮಾಹಿತಿ ನೀಡಿದ್ದಾರೆ.

Please follow and like us:
0
http://bp9news.com/wp-content/uploads/2018/08/1526379005-Kumara-Swany.jpghttp://bp9news.com/wp-content/uploads/2018/08/1526379005-Kumara-Swany-150x150.jpgBP9 Bureauಪ್ರಮುಖಮಂಡ್ಯಮೈಸೂರುರಾಜಕೀಯಮಂಡ್ಯ: ನಾಳೆ ಸಿಎಂ ನಾಟಿ ಮಾಡೋ ದೃಶ್ಯ ನಿಮಗೆ ಮತ್ತೊಮ್ಮೆ 'ಬಂಗಾರದ ಮನುಷ್ಯ' ಚಿತ್ರದ 'ಕೈಲಾಗದು ಎಂದು' ಎಂಬ ಹಾಡಿನ ದೃಶ್ಯವನ್ನು ನೆನಪು ಮಾಡಿಕೊಡುವಲ್ಲಿ ಅನುಮಾನವಿಲ್ಲ. ಸಕ್ಕರೆನಾಡು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಜಮೀನಿನಲ್ಲಿ ಸಿಎಂ ನಾಟಿ ಮಾಡೋ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಹರಳಕುಪ್ಪೆ ಗ್ರಾಮದ ಕೆಂಚೇಗೌಡ ಎಂಬುವವರ ಕುಟುಂಬಕ್ಕೆ ಸೇರಿದ 5 ಎಕರೆ ಜಮೀನಿನಲ್ಲಿ ನಾಟಿ ಕಾರ್ಯಕ್ಕೆ  ಈಗಾಗಲೇ ಗದ್ದೆಯನ್ನ ಹದಗೊಳಿಸಲಾಗಿದೆ. var domain = (window.location...Kannada News Portal