ಮೈಸೂರು: ಮೈಸೂರಿನಲ್ಲಿ ನಾಲ್ವರ ತಂಡದಿಂದ ಇವಿಎಂ ಯಂತ್ರಗಳ ಹ್ಯಾಕಿಂಗ್ ಆರೋಪ  ಹಿನ್ನೆಲೆ ಎನ್.ಆರ್. ಪೊಲೀಸ್ ಠಾಣೆ ಮುಂದೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಅಜೀಜ್, ಎಸ್.ಡಿ.ಪಿ.ಐ. ನ ಅಭ್ಯರ್ಥಿ ಅಬ್ದುಲ್ ಮಜೀದ್ ಹಾಗೂ ಕೆ.ಆರ್.ಕ್ಷೇತ್ರದ ಕಾಂಗ್ರೆಸ್​​​ಅಭ್ಯರ್ಥಿ ಎಂ.ಕೆ. ಸೋಮಶೇಖರ್, ಚಾಮರಾಜ ಕ್ಷೇತ್ರದ ವಾಸು ಎನ್.ಆರ್. ಠಾಣೆಗೆ ಭೇಟಿ ನೀಡಿ ಮಾತುಕತೆ ನಡೆಸುತ್ತಿದ್ದಾರೆ.

ಮೂರು ಪಕ್ಷಗಳ ನೂರಾರು ಬೆಂಬಲಿಗರ ಜಮಾವಣೆ ಠಾಣೆ ಎದುರಿಗೆ ಜಮಾಯಿಸಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು  ಮರು ಚುನಾವಣೆ ನಡೆಸುವಂತೆ ಆಗ್ರಹಿಸುತ್ತಿದ್ದಾರೆ. ಕೆಲ ಅಭ್ಯರ್ಥಿಗಳನ್ನು ಸಂಪರ್ಕಿಸಿ ಹ್ಯಾಕಿಂಗ್ ಮಾಡುವ ಮಾತುಕತೆ ನಡೆದಿದೆ. ವೆಂಕಟೇಶ್ ಹಾಗೂ ಪ್ರದೀಪ್ ಸೇರಿದಂತೆ ನಾಲ್ವರ ತಂಡದಿಂದ ಹ್ಯಾಕಿಂಗ್ ನಡೆದಿರುವ ಶಂಕೆ ಇದೆ. ಆ 4 ಆರೋಪಿಗಳ ಹಿಂದೆ ತಂಡವೊಂದರ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಇಷ್ಟೆ ಅಲ್ಲದೆ ವಿದೇಶಿ ವ್ಯಕ್ತಿಯ ಕೈವಾಡ ಕೂಡಾ ಇರುವ ಶಂಕೆ ಇದೆ ಎಂದು ಸೋತ ಅಭ್ಯರ್ಥಿಗಳು ಆರೋಪಿಸುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/05/collage-3-13.jpghttp://bp9news.com/wp-content/uploads/2018/05/collage-3-13-150x150.jpgBP9 Bureauಪ್ರಮುಖಮೈಸೂರುಮೈಸೂರು: ಮೈಸೂರಿನಲ್ಲಿ ನಾಲ್ವರ ತಂಡದಿಂದ ಇವಿಎಂ ಯಂತ್ರಗಳ ಹ್ಯಾಕಿಂಗ್ ಆರೋಪ  ಹಿನ್ನೆಲೆ ಎನ್.ಆರ್. ಪೊಲೀಸ್ ಠಾಣೆ ಮುಂದೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಅಜೀಜ್, ಎಸ್.ಡಿ.ಪಿ.ಐ. ನ ಅಭ್ಯರ್ಥಿ ಅಬ್ದುಲ್ ಮಜೀದ್ ಹಾಗೂ ಕೆ.ಆರ್.ಕ್ಷೇತ್ರದ ಕಾಂಗ್ರೆಸ್​​​ಅಭ್ಯರ್ಥಿ ಎಂ.ಕೆ. ಸೋಮಶೇಖರ್, ಚಾಮರಾಜ ಕ್ಷೇತ್ರದ ವಾಸು ಎನ್.ಆರ್. ಠಾಣೆಗೆ ಭೇಟಿ ನೀಡಿ ಮಾತುಕತೆ ನಡೆಸುತ್ತಿದ್ದಾರೆ. ಮೂರು ಪಕ್ಷಗಳ ನೂರಾರು ಬೆಂಬಲಿಗರ ಜಮಾವಣೆ ಠಾಣೆ ಎದುರಿಗೆ ಜಮಾಯಿಸಿದ್ದು, ಸೂಕ್ತ ತನಿಖೆ ನಡೆಸಿ...Kannada News Portal