ಮೈಸೂರು : ಅಧಿಕಾರಿಗಳ ಕಾರ್ಯವೈಖರಿ ಹೇಗಿರಬೇಕು ಎಂಬುದನ್ನು ಹೇಳಿದ್ದೇನೆ. ಉತ್ತಮ ಕೆಲಸಮಾಡುವವರಿಗೆ ರಕ್ಷಣೆ ಕೊಡಲು ಸರ್ಕಾರ ಸಿದ್ಧ ಇದೆ ಎಂದು ತಿಳಿಸಿದ್ದೇವೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಆರ್ ಟಿ ಇ ಅಡಿ ಎಲ್ಲಾ ಮಕ್ಕಳಿಗೂ ಶಿಕ್ಷಣ ಸಿಗಬೇಕು. ಕೆಲವು ಬಿಇಓ, ಡಿಡಿಪಿಐ ಗಳು ಶಿಕ್ಷಣ ಸಂಸ್ಥೆಗಳ ಜೊತೆ ಶಾಮೀಲಾಗಿ ಅಕ್ರಮವಾಗಿ ಭಾಗಿಯಾಗಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅದರಂತೆ ಬೆಂಗಳೂರು ಉತ್ತರ ವಿಭಾಗದ ಡಿಡಿಪಿಐ ಅಮಾನತ್ತು ಮಾಡಲು ಆದೇಶ ನೀಡಿದ್ದೇನೆ ಎಂದು ಸಿಎಂ ತಿಳಿಸಿದರು.

ಖಾಸಗಿ ಶಾಲೆಯ ಮಟ್ಟಕ್ಕೆ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೆ ತರಲಾಗುವುದು.ಎಲ್.ಕೆ.ಜಿ ಇಂದಲೇ ಸರಕಾರಿ ಶಾಲೆಗಳನ್ನು ಆರಂಭಿಸಲಾಗುವುದು. ಕನ್ನಡ ಉಳಿಸುವ ಜೊತೆಗೆ ಇಂಗ್ಲಿಷ್​​​ನ್ನು ಒಂದು  ಭಾಷೆಯಾಗಿ ಕಲಿಸಲಾಗುವುದು.

ನಾರಾಯಣ್ ಮೂರ್ತಿ ಅವರ ಸಲಹೆ ತೆಗೆದು ಕೊಳ್ಳಲು ಸರ್ಕಾರ ಸಿದ್ಧ ಇದೆ. ಅವರ ಜೊತೆ ಮಾತುಕತೆ ನಡೆಸಿದಾಗ ಸರ್ಕಾರಿ ಮಟ್ಟದ ಯಾವುದೇ ಹುದ್ದೆ ಬೇಡ ಎಂದಿದ್ದಾರೆ. ಆದರೆ ಅವರ ಅನುಭವ ಸದುಪಯೋಗ ಪಡಿಸಿಕೊಳ್ಳಲಾಗುವುದು ಎಂದರು.

Please follow and like us:
0
http://bp9news.com/wp-content/uploads/2018/06/kumaraswamy7591.jpghttp://bp9news.com/wp-content/uploads/2018/06/kumaraswamy7591-150x150.jpgBP9 Bureauಪ್ರಮುಖರಾಜಕೀಯಮೈಸೂರು : ಅಧಿಕಾರಿಗಳ ಕಾರ್ಯವೈಖರಿ ಹೇಗಿರಬೇಕು ಎಂಬುದನ್ನು ಹೇಳಿದ್ದೇನೆ. ಉತ್ತಮ ಕೆಲಸಮಾಡುವವರಿಗೆ ರಕ್ಷಣೆ ಕೊಡಲು ಸರ್ಕಾರ ಸಿದ್ಧ ಇದೆ ಎಂದು ತಿಳಿಸಿದ್ದೇವೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಆರ್ ಟಿ ಇ ಅಡಿ ಎಲ್ಲಾ ಮಕ್ಕಳಿಗೂ ಶಿಕ್ಷಣ ಸಿಗಬೇಕು. ಕೆಲವು ಬಿಇಓ, ಡಿಡಿಪಿಐ ಗಳು ಶಿಕ್ಷಣ ಸಂಸ್ಥೆಗಳ ಜೊತೆ ಶಾಮೀಲಾಗಿ ಅಕ್ರಮವಾಗಿ ಭಾಗಿಯಾಗಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅದರಂತೆ ಬೆಂಗಳೂರು ಉತ್ತರ ವಿಭಾಗದ ಡಿಡಿಪಿಐ ಅಮಾನತ್ತು ಮಾಡಲು ಆದೇಶ ನೀಡಿದ್ದೇನೆ ಎಂದು...Kannada News Portal