ಮೈಸೂರು : ಇನ್ನು ಮುಂದೆ ರಾಜಕೀಯದಲ್ಲಿ ಸಕ್ರಿಯನಾಗಿರುತ್ತೇನೆ. ಆದರೆ ಚುನಾವಣೆಗೆ ನಿಲ್ಲಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿಗೆ ಬಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗಾರರ ಜೊತೆ ಮಾತನಾಡಿದ್ದಾರೆ. ಬಾದಾಮಿ ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ಹೋಗಿ ಥ್ಯಾಂಕ್ ಹೇಳಿದ್ದೇನೆ. ಬಾದಾಮಿ ಜನ ಕೈ ಹಿಡಿದಿದ್ದೀರೀ ಚಾಮುಂಡೇಶ್ವರಿ ಜನ ಕೈ ಹಿಡಿದಿಲ್ಲಾ ಅಂತ ಹೇಳಿದ್ದು ಅಷ್ಟೇ. ಇದರ ಬಗ್ಗೆ ವಿಶ್ಲೇಷಣೆ ಮಾಡೋಕೋಗಲ್ಲಾ ಚಾಮುಂಡೇಶ್ವರಿ ಕ್ಷೇತ್ರದ ಜನ ಈಗಾಗಲೇ ತೀರ್ಪನ್ನು ನೀಡಿದ್ದಾರೆ.

ಪಕ್ಷದಲ್ಲಿನ ಅತೃಪ್ತರ ವಿಚಾರವಾಗಿ ಮಾತನಾಡಿದ ಅವರು ನಮ್ಮ ಪಕ್ಷದಲ್ಲಿ ಯಾರು ಅತೃಪ್ತರೇ ಇಲ್ಲ.ಎಲ್ಲರೂ ತೃಪ್ತರಾಗಿದ್ದಾರೆ ಎಂದರು. ಅತೃಪ್ತರು ನಮ್ಮ ಜೊತೆ ಇದ್ದಾರೆ ಅಂತ ಯಡಿಯೂರಪ್ಪ ಹೇಳಿದ್ದಾರೆ. ಆದರೆ ಅವರ ಮಾತುಗಳಿಗೆ ಕವಡೆ ಕಾಸು ಕಿಮ್ಮತ್ತಿಲ್ಲಾ. ಬಿಜೆಪಿಯವರು ಇತ್ತೀಚೆಗೆ ನನ್ನ ಬಗ್ಗೆ ಒಲವು ತೋರಿಸುತ್ತಿದ್ದಾರೆ ಎಂಬ ವಿಚಾರ ಕೇಳಿದೆ. ಆದರೆ ಕರ್ನಾಟಕದಲ್ಲಿ ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆ. ಒಮ್ಮೆ ಬಿಜೆಪಿಯವರು ಕರುಣೆ ತೋರುತ್ತಿದ್ದಾರೆ ಎಂದರೆ ಅವರಿಗೂ ಥ್ಯಾಂಕ್ಸ್ ಹೇಳ್ತೀನಿ ಎಂದರು.ಇನ್ನು ಮುಂದೆ ರಾಜಕೀಯದಲ್ಲಿ ಸಕ್ರೀಯವಾಗಿರುತ್ತೇನೆ. ಆದರೆ ಚುನಾವಣೆಗೆ ನಿಲ್ಲಲ್ಲ ಎಂದು ಮಾಹಿತಿ ನೀಡಿದರು. ಈಗಾಗಲೇ ಜನರು ತೀರ್ಪು ನೀಡಿದ್ದಾರೆ. ಯಾವ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲಾ. ಸಮ್ಮಿಶ್ರ ಸರ್ಕಾರ 5 ವರ್ಷ ಪೂರೈಸಲೇಬೇಕು ಎಂದು ಆಶಯವ್ಯಕ್ತಪಡಿಸಿದರು.

ವರುಣಾ ಜನತೆಗೆ ಥ್ಯಾಂಕ್ಸ್ ಹೇಳಿದ ಸಿದ್ದರಾಮಯ್ಯ

ಮಗನನ್ನ ಗೆಲ್ಲಿಸಿದ್ದಕ್ಕೆ  ವರುಣಾ ಕ್ಷೇತ್ರದ ಜನತೆಗೆ ಸಿದ್ದರಾಮಯ್ಯ ಥ್ಯಾಂಕ್ಸ್ ಹೇಳಿದ್ದಾರೆ. ಮೈಸೂರಿನ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ನಡೆದ ವರುಣಾ ವಿಧಾನ ಸಭಾ ಕ್ಷೇತ್ರದ ಮತದಾರರ ಕೃತಜ್ಞತಾ ಸಭೆಯಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ನನ್ನ ಮಗನನ್ನ ಗೆಲ್ಲಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂಕೆ ಸೋಮಶೇಖರ್ , ಸಂಸದ ದೃವನಾರಯಣ್ , ಐವಾನ್ ಡಿಸೋಜ, ಎ.ಆರ್ ಕೃಷ್ಣ ಮೂರ್ತಿ , ಕಳಲೆ ಕೇಶವಮೂರ್ತಿ , ಮಾಜಿ ಲೋಕ ಸಭೆ ಸದಸ್ಯ ವಿಜಯಶಂಕರ್ , ಮೂಡಾ ಅಧ್ಯಕ್ಷ ದೃವಕುಮಾರ್  ಸೇರಿದಂತೆ ಹಲವು ಮುಖಂಡರುಗಳು ಭಾಗಿಯಾಗಿದ್ದರು.

ಗೊಂದಲದ ಗೂಡಾದ ಕೃತಜ್ಞತಾ ಸಮಾರಂಭ

ಕೆಲ ಕ್ಷಣ ಕೃತಜ್ಞತಾ ಸಮಾರಂಭ ಗೊಂದಲದ ಗೂಡಾಗಿತ್ತು.ಕಾರ್ಯಕರ್ತರನ್ನ ನಿಯಂತ್ರಿಸಲು ಕೈ ಮುಖಂಡರು ಹರಸಾಹಸ ಪಡುತ್ತಿದ್ದರು. ಇದನ್ನು ನೋಡಿದ ಸಿದ್ದರಾಮಯ್ಯ ಸ್ವತಃ ಕಾರ್ಯಕರ್ತರಿಗೆ ಶಾಂತವಾಗಿರುವಂತೆ ಮನವಿ ಮಾಡಿದರು. ಆದರೂ ಕೇಳದ ಕಾರ್ಯಕರ್ತರ ಮೇಲೆ ಒಂದು ಕ್ಷಣ ಸಿದ್ದರಾಮಯ್ಯ ಸಿಟ್ಟಿಗೆದ್ದಿದ್ದು ಕಂಡುಬಂತು. ಇದರ ನಡುವೆ ನಂಜನಗೂಡು ತಾಲ್ಲೂಕಿನ ತಗಡೂರು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕೆಂದು ಕಾರ್ಯಕರ್ತರು ಕೂಗುತ್ತಿದ್ದರು. ಆಗ ಸಿದ್ದರಾಮಯ್ಯ ಕೂಗಾಡುತ್ತಿದ್ದ ಕಾರ್ಯಕರ್ತರಿಗೆ ಬೈದು ಸುಮ್ಮನಿರಿಸಿದ್ದಾರೆ.  ಇದೆಲ್ಲ ಶಾಂತವಾದ ನಂತರ ಸಭೆ ಸತುತ್ರವಾಗಿ ನಡೆಯಿತು.

 

 

 

Please follow and like us:
0
http://bp9news.com/wp-content/uploads/2018/06/WhatsApp-Image-2018-06-12-at-2.17.45-PM-e1528799822477.jpeghttp://bp9news.com/wp-content/uploads/2018/06/WhatsApp-Image-2018-06-12-at-2.17.45-PM-e1528799822477-150x150.jpegBP9 Bureauಪ್ರಮುಖಮೈಸೂರುರಾಜಕೀಯಮೈಸೂರು : ಇನ್ನು ಮುಂದೆ ರಾಜಕೀಯದಲ್ಲಿ ಸಕ್ರಿಯನಾಗಿರುತ್ತೇನೆ. ಆದರೆ ಚುನಾವಣೆಗೆ ನಿಲ್ಲಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿಗೆ ಬಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗಾರರ ಜೊತೆ ಮಾತನಾಡಿದ್ದಾರೆ. ಬಾದಾಮಿ ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ಹೋಗಿ ಥ್ಯಾಂಕ್ ಹೇಳಿದ್ದೇನೆ. ಬಾದಾಮಿ ಜನ ಕೈ ಹಿಡಿದಿದ್ದೀರೀ ಚಾಮುಂಡೇಶ್ವರಿ ಜನ ಕೈ ಹಿಡಿದಿಲ್ಲಾ ಅಂತ ಹೇಳಿದ್ದು ಅಷ್ಟೇ. ಇದರ ಬಗ್ಗೆ ವಿಶ್ಲೇಷಣೆ ಮಾಡೋಕೋಗಲ್ಲಾ ಚಾಮುಂಡೇಶ್ವರಿ ಕ್ಷೇತ್ರದ ಜನ ಈಗಾಗಲೇ ತೀರ್ಪನ್ನು ನೀಡಿದ್ದಾರೆ. var...Kannada News Portal