ಮೈಸೂರಿನಲ್ಲಿ : ನಿರ್ಮಾಣ ಹಂತದಲ್ಲಿರುವ ಏಷ್ಯನ್ ಪೇಂಟ್ಸ್ ಕಟ್ಟಡದಿಂದ ಬಿದ್ದು ವಿದೇಶಿ ಪ್ರಜೆ ಸಾವನ್ನಪ್ಪಿರುವ ಘಟನೆ  ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಇಟಲಿ ಮೂಲದ  ಮೋರಿಯನ್ಟೋನಿಯ (58), ಮೃತಪಟ್ಟ ವಿದೇಶಿ ಪ್ರಜೆ. ಇವರು ಗುರುವಾರ ಮದ್ಯಾಹ್ನ ತಮ್ಮ ತಂಡದೊಂದಿಗೆ ನಿರ್ಮಾಣ ಹಂತದಲ್ಲಿರುವ ಏಷ್ಯನ್ ಪೇಂಟ್ಸ್ ಕಟ್ಟಡದ ಪರಿಶೀಲನೆ ನಡೆಸುತ್ತಿರುವಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಆ ಸಂದರ್ಭದಲ್ಲಿ ಕೆಳಗಿದ್ದ ಕಬ್ಬಿಣದ ಸಲಾಕೆ ಇವರ ತಲೆಗೆ ಬಡಿದು ತೀವ್ರ ಗಾಯಗಳಾಗಿವೆ. ಸ್ಥಳದಲ್ಲಿದ್ದ ಕಂಪನಿಯ ವೈದ್ಯರ ತಂಡ ಪ್ರಾಥಮಿಕ ಚಿಕಿತ್ಸೆ ನೀಡಿದರಾದರೂ ಚೇತರಿಸಿಕೊಳ್ಳಲಿಲ್ಲ. ಕೂಡಲೆ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ  ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ  ಸಾವನ್ನಪ್ಪಿದ್ದಾರೆ.

ಈ ಸಂಬಂಧ ಕಂಪನಿಯ ಅಧಿಕಾರಿಗಳು ದೂರು ನೀಡಿದ್ದು, ನಂಜನಗೂಡು ಗ್ರಾಮಾಂತರ ಪೊಲೀಸ್​​ ಠಾಣೆಯಲ್ಲಿ  ಪ್ರಕರಣ  ದಾಖಲಾಗಿದೆ. ಏಷ್ಯನ್ ಪೇಂಟ್ಸ್ ಕಟ್ಟಡ  ದಕ್ಷಿಣ ಭಾರತದಲ್ಲಿಯೇ ಕಂಪನಿಯ ಬೃಹತ್​​​ ಕಟ್ಟಡವಾಗಿದ್ದು, ದಕ್ಷಿಣ ಭಾರತಕ್ಕೆ ಇಲ್ಲಿಂದಲೇ ಬಣ್ಣ ಸಿದ್ದ ಪಡಿಸಿ, ಸರಬರಾಜು ಮಾಡುವ ಗುರಿ ಹೊಂದಿದೆ. ಇನ್ನು 6 ತಿಂಗಳಲ್ಲಿ ಕೆಲಸ ಮುಗಿಯಲಿದ್ದು, 6 ತಿಂಗಳ ನಂತರ ಉತ್ಪಾದನೆ ಆರಂಭವಾಗಲಿದೆ.

Please follow and like us:
0
http://bp9news.com/wp-content/uploads/2018/06/WhatsApp-Image-2018-06-15-at-11.01.13-AM.jpeghttp://bp9news.com/wp-content/uploads/2018/06/WhatsApp-Image-2018-06-15-at-11.01.13-AM-150x150.jpegBP9 Bureauಪ್ರಮುಖಮೈಸೂರುಮೈಸೂರಿನಲ್ಲಿ : ನಿರ್ಮಾಣ ಹಂತದಲ್ಲಿರುವ ಏಷ್ಯನ್ ಪೇಂಟ್ಸ್ ಕಟ್ಟಡದಿಂದ ಬಿದ್ದು ವಿದೇಶಿ ಪ್ರಜೆ ಸಾವನ್ನಪ್ಪಿರುವ ಘಟನೆ  ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಇಟಲಿ ಮೂಲದ  ಮೋರಿಯನ್ಟೋನಿಯ (58), ಮೃತಪಟ್ಟ ವಿದೇಶಿ ಪ್ರಜೆ. ಇವರು ಗುರುವಾರ ಮದ್ಯಾಹ್ನ ತಮ್ಮ ತಂಡದೊಂದಿಗೆ ನಿರ್ಮಾಣ ಹಂತದಲ್ಲಿರುವ ಏಷ್ಯನ್ ಪೇಂಟ್ಸ್ ಕಟ್ಟಡದ ಪರಿಶೀಲನೆ ನಡೆಸುತ್ತಿರುವಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಆ ಸಂದರ್ಭದಲ್ಲಿ ಕೆಳಗಿದ್ದ ಕಬ್ಬಿಣದ ಸಲಾಕೆ ಇವರ ತಲೆಗೆ ಬಡಿದು ತೀವ್ರ ಗಾಯಗಳಾಗಿವೆ. ಸ್ಥಳದಲ್ಲಿದ್ದ ಕಂಪನಿಯ ವೈದ್ಯರ...Kannada News Portal