ಮಂಡ್ಯ: ಇನ್ನು ಕೆಲವೇ ದಿನಗಳು ಕಾಯಿರಿ. ಬಿಜೆಪಿಯಿಂದಲೇ 5 ಶಾಸಕರು ಯೂ ಟರ್ನ್ ತೆಗೆದುಕೊಳ್ಳುತ್ತಾರೆ ಅಂತಾ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಜಾರಕಿ ಹೊಳಿ ಸಹೋದರರು ಬಿಜೆಪಿಗೆ ಹೋಗ್ತಾರೆ. ಸರ್ಕಾರ ಬಿದ್ದು ಹೋಗುತ್ತೆ.ಈ ಥರದ ಮಾಹಿತಿಗಳನ್ನ ನಿಮಗೆಲ್ಲಾ ಯಾರು ಕೊಡ್ತಾರೆ? ಇನ್ನು ಕೆಲವೇ ದಿನಗಳು ಕಾಯಿರಿ. ಬಿಜೆಪಿಯಿಂದಲೇ 5 ಶಾಸಕರು ಯೂ ಟರ್ನ್ ತೆಗೆದುಕೊಳ್ಳುತ್ತಾರೆ  ಅವರ ಕೈಯಲ್ಲೇ ರಾಜೀನಾಮೆ ಕೊಡಿಸೋಣ ಎಂದು ಹೇಳಿದ್ದಾರೆ.

ಇದೇ ವೇಳೆ ನಿನ್ನೆ ಪ್ರಧಾನಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೊಡಗು ಜಿಲ್ಲೆಗೆ ತನಿಖಾ ತಂಡ ಕಳುಹಿಸುವಂತೆ ಮನವಿ ಮಾಡಿದ್ದೇವೆ. 2 ಸಾವಿರ ಕೋಟಿ ರೂಪಾಯಿ ಪರಿಹಾರ ಕೇಳಿದ್ದೇವೆ. ಇಂದು ಸಂಜೆ ಕೇಂದ್ರದ ತಂಡ ಕೊಡಗು ಜಿಲ್ಲೆಗೆ ಭೇಟಿ ನೀಡಲಿದೆ ಎಂದರು.

ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡುವ ಬಗ್ಗೆ ಅರ್ಥಿಕ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ನಿರ್ಧರಿಸುತ್ತೇನೆ. ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ, ನಿರ್ಧಾರ ಕೈಗೊಳ್ಳುತ್ತೇವೆ. ಕೇಂದ್ರ ಸರ್ಕಾರ ಅಂತೂ ತೈಲ ಬೆಲೆ ಕಡಿಮೆ ಮಾಡಲು ಆಗಲ್ಲ ಅಂತಾ ಸ್ಪಷ್ಟನೆ ನೀಡಿದೆ. ಪಾಪ ಯಡಿಯೂರಪ್ಪ ಅವರು ನಿನ್ನೆ ಒಂದು ಸಲಹೆ ನೀಡಿದ್ದಾರೆ. ಸಲಹೆಗೆ ಗೌರವ ಕೊಡೋಣ ಅಂತಾ ಯೋಚನೆ ಮಾಡುತ್ತಿದ್ದೇನೆ ಎಂದು ವ್ಯಂಗ್ಯವಾಡಿದರು. ಇನ್ನು ರೈತರಿಗೆ ಬ್ಯಾಂಕ್​ಗಳು ನೀಡುತ್ತಿರುವ ನೋಟೀಸ್​ನಿಂದ ರೈತರು ಕಂಗೆಡುವುದು ಬೇಡ. ಈ ಬಗ್ಗೆ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದರು.

Please follow and like us:
0
http://bp9news.com/wp-content/uploads/2018/09/WhatsApp-Image-2018-09-11-at-1.14.35-PM.jpeghttp://bp9news.com/wp-content/uploads/2018/09/WhatsApp-Image-2018-09-11-at-1.14.35-PM-150x150.jpegBP9 Bureauಪ್ರಮುಖಮಂಡ್ಯರಾಜಕೀಯಮಂಡ್ಯ: ಇನ್ನು ಕೆಲವೇ ದಿನಗಳು ಕಾಯಿರಿ. ಬಿಜೆಪಿಯಿಂದಲೇ 5 ಶಾಸಕರು ಯೂ ಟರ್ನ್ ತೆಗೆದುಕೊಳ್ಳುತ್ತಾರೆ ಅಂತಾ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಜಾರಕಿ ಹೊಳಿ ಸಹೋದರರು ಬಿಜೆಪಿಗೆ ಹೋಗ್ತಾರೆ. ಸರ್ಕಾರ ಬಿದ್ದು ಹೋಗುತ್ತೆ.ಈ ಥರದ ಮಾಹಿತಿಗಳನ್ನ ನಿಮಗೆಲ್ಲಾ ಯಾರು ಕೊಡ್ತಾರೆ? ಇನ್ನು ಕೆಲವೇ ದಿನಗಳು ಕಾಯಿರಿ. ಬಿಜೆಪಿಯಿಂದಲೇ 5 ಶಾಸಕರು ಯೂ ಟರ್ನ್ ತೆಗೆದುಕೊಳ್ಳುತ್ತಾರೆ  ಅವರ ಕೈಯಲ್ಲೇ ರಾಜೀನಾಮೆ ಕೊಡಿಸೋಣ ಎಂದು ಹೇಳಿದ್ದಾರೆ. var domain =...Kannada News Portal