ಮೈಸೂರು: ಭಾರತೀಯ ಯುವಕನೊರ್ವ ಪ್ಯಾನ್ ಆಫ್ರಿಕಾ ಬೈಕ್ ರೇಸ್​​​ನಲ್ಲಿ ಪಾಲ್ಗೊಂಡು ಮೊದಲ ಸ್ಥಾನದಲ್ಲಿ ಗೆದ್ದು ಸಾಧನೆ ಮಾಡಿದ್ದಾನೆ. ಸಾಂಸ್ಕೃತಿಕ ನಗರಿ ಮೈಸೂರಿನ ಅಬ್ದುಲ್​ ವಾಹಿದ್ ತನ್ವೀರ್ ಸಾಧನೆ ಮಾಡಿದ ಯುವಕ. ಈತ ಆಫ್ರಿಕಾ ಖಂಡದಲ್ಲಿ ನಡೆದ ಬೈಕ್ ರೇಸ್​​​ನಲ್ಲಿ ಮೊದಲ ಸ್ಥಾನ ಗೆದ್ದು ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಗೌರವ ತಂದಿದ್ದಾನೆ.

ಈ ಸಾಧನೆ ಬಳಿಕ ಹುಟ್ಟೂರಿಗೆ ಹಿಂತಿರುಗಿದ ಅಬ್ದುಲ್​ ಗೆ ಮೈಸೂರಿನಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಆತನ ಕುಟುಂಬಸ್ಥರು, ಸ್ನೇಹಿತರು ಸ್ವಾಗತಿಸಿ ಬರಮಾಡಿಕೊಂಡರು. ಕಳೆದ ನಾಲ್ಕು ವರ್ಷಗಳಿಂದ ಟಿವಿಎಸ್ ಕಂಪನಿ ಬೈಕ್ ರೈಡ್ ಮಾಡ್ತಿರೋ ತನ್ವೀರ್, ಈ ಬಾರಿಯ ಆಫ್ರಿಕಾ ಖಂಡದ ಬೈಕ್ ರೇಸ್ ನಲ್ಲಿ ಭಾಗಿಯಾಗಿದ್ದರು.ಒಟ್ಟು ಮೂರು ಜನ ಭಾರತೀಯರು ಭಾಗಿಯಾಗಿದ್ದು, ಅದರಲ್ಲಿ ತನ್ವೀರ್ ಮೊದಲನೇ ಸ್ಥಾನ ಪಡೆದಿದ್ದಾರೆ.

ಪ್ಯಾನ್ ಆಫ್ರೀಕಾ ರೇಸ್ ನಲ್ಲಿ ಗೆದ್ದ  ಏಕೈಕ ಭಾರತೀಯ ರೇಸರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸುಮಾರು 50 ಸ್ಪರ್ಧಿಗಳಿದ್ದ ಈ ರೇಸ್ ನಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ, ಆಫ್ರಿಕಾ ನೆಲದಲ್ಲಿ ಭಾರತ ಈ ಸ್ಪರ್ಧೆಯಲ್ಲಿ ಮೊದಲ ಅಂತರರಾಷ್ಟ್ರೀಯ ಚಾಂಪಿಯನ್ ಟ್ರೋಫಿ ಗೆ ಮುತ್ತಿಟ್ಟ ಸಾಧನೆ ಮಾಡಿದ್ದಾನೆ.

ಮೈಸೂರು ಹೊರ ವಲಯದ ರಿಂಗ್ ರಸ್ತೆಯಿಂದ ಬೈಕ್ ಜಾಥಾ ಮೂಲಕ ಕರೆತರಲಾಯ್ತು. ಈ ವೇಳೆ ತನ್ನ ಸಾಧನೆ ಬೆಂಬಲಿಸಿದ ಎಲ್ಲರಿಗೂ ತನ್ವೀರ್ ಕೃತಜ್ಞತೆ ಸಲ್ಲಿಸಿದರು. ಒಟ್ಟಿನಲ್ಲಿ ವಿದೇಶದ ಬೈಕ್ ರೈಡ್ ನಲ್ಲಿ ಪ್ರಥಮ ಸ್ಥಾನ ಗೆದ್ದು ಬಂದ ಮೈಸೂರಿನ ಯುವಕನ ಸಾಧನೆ ಮೆಚ್ಚುವಂತದ್ದು , ನಮ್ಮ ನೆಲದಲ್ಲಿ ಇದೇ ರೀತಿಯ ಹಲವಾರು ಪ್ರತಿಭಾವಂತರು ಎಲೆ ಮರೆಕಾಯಿಯಂತಿದ್ದಾರೆ, ಅವರಿಗೆ ಪ್ರೋತ್ಸಾಹದ ಅಗತ್ಯವಿದೆ , ಅಂತವರನ್ನು ಗುರುತಿಸಿ ಪ್ರೋತ್ಸಾಹ ನೀಡಿದರೆ ಇನ್ನಷ್ಟು ಕ್ರೀಡಾ ಪಟುಗಳು ಸಾಧನೆಯ ಶಿಖರವನ್ನೇರುತ್ತಾರೆ.

Please follow and like us:
0
http://bp9news.com/wp-content/uploads/2018/09/WhatsApp-Image-2018-09-18-at-10.29.50-AM-1024x683.jpeghttp://bp9news.com/wp-content/uploads/2018/09/WhatsApp-Image-2018-09-18-at-10.29.50-AM-150x150.jpegBP9 Bureauಪ್ರಮುಖಮೈಸೂರುರಾಷ್ಟ್ರೀಯಮೈಸೂರು: ಭಾರತೀಯ ಯುವಕನೊರ್ವ ಪ್ಯಾನ್ ಆಫ್ರಿಕಾ ಬೈಕ್ ರೇಸ್​​​ನಲ್ಲಿ ಪಾಲ್ಗೊಂಡು ಮೊದಲ ಸ್ಥಾನದಲ್ಲಿ ಗೆದ್ದು ಸಾಧನೆ ಮಾಡಿದ್ದಾನೆ. ಸಾಂಸ್ಕೃತಿಕ ನಗರಿ ಮೈಸೂರಿನ ಅಬ್ದುಲ್​ ವಾಹಿದ್ ತನ್ವೀರ್ ಸಾಧನೆ ಮಾಡಿದ ಯುವಕ. ಈತ ಆಫ್ರಿಕಾ ಖಂಡದಲ್ಲಿ ನಡೆದ ಬೈಕ್ ರೇಸ್​​​ನಲ್ಲಿ ಮೊದಲ ಸ್ಥಾನ ಗೆದ್ದು ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಗೌರವ ತಂದಿದ್ದಾನೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ?...Kannada News Portal