ಮೈಸೂರು : ರಿಯಾಯಿತಿ ದರದಲ್ಲಿ ನೀಡಲಾಗುವ ಕೆಎಸ್ ಐಸಿ ರೇಷ್ಮೆ ಸೀರೆ ಖರೀದಿಗಾಗಿ ನೂಕು ನುಗ್ಗಲು  ಉಂಟಾಗಿದ್ದು, ಲಾಟರಿ ಮೂಲಕ ಸೀರೆ ನೀಡಲಾಗುತ್ತದೆ ಎಂಬುದನ್ನರಿತ  ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ  ಮೈಸೂರು ಮೃಗಾಲಯದ ಎದುರಿರುವ ಕೆಎಸ್ ಐಸಿ ಸಿಲ್ಕ್ ಮಳಿಗೆಯಲ್ಲಿ ನಡೆದಿದೆ.

ಗೌರಿ ಹಬ್ಬದ ಪ್ರಯುಕ್ತ ರಿಯಾಯತಿ ದರದಲ್ಲಿ ಕೆಎಸ್ ಐಸಿಯ ರಾಜ್ಯದಲ್ಲಿನ 18ಬ್ರಾಂಚ್ ಗಳಲ್ಲಿ ಸೀರೆ ನೀಡಲಾಗುತ್ತಿದ್ದು, ಮೈಸೂರಿನ ಕೆಎಸ್ ಐಸಿ ಮಳಿಗೆ ಸೀರೆ ನೀಡಲಾಗುತ್ತಿದೆ.  15ಸಾವಿರ ರೂ. ಸೀರೆಯನ್ನು ನಾಲ್ಕೂವರೆ ರೂ.ಗೆ ನೀಡಲಾಗುತ್ತಿದ್ದು, ಸೀರೆ ಕೊಳ್ಳಲು ಸಾರ್ವಜನಿಕರು ಮುಗಿಬಿದ್ದಿದ್ದಾರೆ. ಮಧ್ಯಾಹ್ನ 3ಗಂಟೆಯವರೆಗೆ ಆಧಾರ್ ನೋಂದಣಿ ಮಾಡಿಸಿಕೊಂಡು ಬಳಿಕ ಲಾಟರಿಯ ಮೂಲಕ ಸೀರೆ ವಿತರಿಸಲಾಗುತ್ತಿದೆ ಎಂದು ಸಂಸ್ಥೆಯ ಮ್ಯಾನೇಜರ್ ತಿಳಿಸಿದ್ದಾರೆ.

ಮಳಿಗೆಯ ಎದುರು ಭಾರೀ ಸಂಖ್ಯೆಯಲ್ಲಿ ಸೀರೆ ಖರೀದಿಗಾಗಿ ಮಹಿಳೆಯರು ಜಮಾಯಿಸಿದ್ದು, ನಾವು ಬೆಳಿಗಿನ ಜಾವದಿಂದಲೇ ಇಲ್ಲಿಗೆ ಬಂದು ಕುಳಿತಿದ್ದೇವೆ. ನೀವು ಆಧಾರ್ ಸಂಖ್ಯೆ ನೋಂದಣಿ ಮಾಡಿಕೊಂಡು ಲಾಟರಿ ಮೂಲಕ ಆಯ್ಕೆ ಮಾಡಿ ಸೀರೆ ನೀಡಿದರೆ ನಮಗೆ ಅನ್ಯಾಯವಾಗಲಿದೆ. ಬೆಳಿಗ್ಗೆಯಿಂದಲೇ ಬಂದು ಕಾದು ಕುಳಿತವರಿಗೆ ಬೆಲೆಯಿಲ್ಲವೇ ಎಂದು ಮ್ಯಾನೇಜರ್ ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಸರ್ಕಾರದ ವಿರುದ್ಧ, ಮಳಿಗೆಯ ಮ್ಯಾನೇಜರ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನ ಸ್ಥಳಕ್ಕಾಗಮಿಸಿದ ದೇವರಾಜ ಠಾಣೆಯ ಎಸಿಪಿ ಗಜೇಂದ್ರ ಪ್ರಸಾದ್, ನಜರ್ ಬಾದ್ ಠಾಣೆಯ ಇನ್ಸಪೆಕ್ಟರ್ ಶೇಖರ್ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.

ಮ್ಯಾನೇಜರ್ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಮ್ಯಾನೇಜರ್ ಕೃಷ್ಣ ಮಾತನಾಡಿ ನಮಗೆ ಸರ್ಕಾರದಿಂದ ಲಾಟರಿ ಮೂಲಕ ಆಯ್ಕೆ ಮಾಡಿ ಎಂದು ಆದೇಶ ಬಂದಿದೆ. ನಾವು ಅದರಂತೆ ನಡೆದುಕೊಳ್ಳುತ್ತಿದ್ದೇವೆ. ಸಾರ್ವಜನಿಕರು ಹೇಳಿದ್ದನ್ನು ಅರ್ಥಮಾಡಿಕೊಳ್ಳಲಿಕ್ಕೆ ಹೋಗ್ತಾ ಇಲ್ಲ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆಧಾರ್ ನ್ನು ಮಹಿಳೆಯರೇ ನೀಡಬೇಕು. ಅವರೇ ಸೀರೆ ಕೊಂಡೊಯ್ಯಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/09/WhatsApp-Image-2018-09-11-at-10.48.54-AM-1024x768.jpeghttp://bp9news.com/wp-content/uploads/2018/09/WhatsApp-Image-2018-09-11-at-10.48.54-AM-150x150.jpegBP9 Bureauಪ್ರಮುಖಮೈಸೂರುರಾಜಕೀಯಮೈಸೂರು : ರಿಯಾಯಿತಿ ದರದಲ್ಲಿ ನೀಡಲಾಗುವ ಕೆಎಸ್ ಐಸಿ ರೇಷ್ಮೆ ಸೀರೆ ಖರೀದಿಗಾಗಿ ನೂಕು ನುಗ್ಗಲು  ಉಂಟಾಗಿದ್ದು, ಲಾಟರಿ ಮೂಲಕ ಸೀರೆ ನೀಡಲಾಗುತ್ತದೆ ಎಂಬುದನ್ನರಿತ  ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ  ಮೈಸೂರು ಮೃಗಾಲಯದ ಎದುರಿರುವ ಕೆಎಸ್ ಐಸಿ ಸಿಲ್ಕ್ ಮಳಿಗೆಯಲ್ಲಿ ನಡೆದಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random()...Kannada News Portal