ಮೈಸೂರು : ನೂತನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎನ್ ಮಹೇಶ್ ಅವರು ಮೈಸೂರಿನ  ಮಹಾರಾಜ ಪ್ರೌಢ ಶಾಲೆಗೆ ಧೀಡಿರ್ ಭೇಟಿ ಕೊಟ್ಟಿದ್ದಾರೆ. ಮಕ್ಕಳ ದಾಖಲಾತಿ, ಶಾಲಾ ಶಿಥಿಲ ಕೊಠಡಿಗಳ ಪುನರ್ ನಿರ್ಮಾಣ ಕಾರ್ಯ ಪರಿಶೀಲನೆ ನಡೆಸಿದರು. ಕೊಠಿಡಗಳ ಕಾಮಗಾರಿ ಜತೆಗೆ ಮಕ್ಕಳ ದಾಖಲಾತಿ ಬಗ್ಗೆಯೂ ಪರಿಶೀಲನೆ ನಡೆಸಿದರು. ಮಕ್ಕಳ ದಾಖಲಾತಿಯಲ್ಲಿ ಗಣಿಯವಾಗಿ ಇಳಿಮುಖ‌ ಹಿನ್ನೆಲೆ ಸೂಕ್ತ ಕ್ರಮಕ್ಕೆ ಸಚಿವರು ಸಲಹೆ ನೀಡಿದರು. ನಂತರ ತರಗತಿಗಳಿಗೆ ತೆರಳಿ ಮಕ್ಕಳ ಜತೆ ಮಾತನಾಡಿ ಮಾಹಿತಿ ಪಡೆದುಕೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಜ ಶಾಲೆ ಐತಿಹಾಸಿಕ ಹಿನ್ನೆಲೆಯುಳ್ಳ ಶಾಲೆ. ಇಲ್ಲಿ ಎಲ್ಲಾ ಸೌಲಭ್ಯಗಳಿವೆ ಆದರೂ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆತರೆದೆ ಇರುವುದು ನಮ್ಮ ಇಲಾಖೆಯ ವೈಫಲ್ಯ. ಸುಮಾರು 60% ಹೆಚ್ಚು ಮಕ್ಕಳು ಖಾಸಗಿ ಶಾಲೆಗಳತ್ತ  ಹೋಗುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಖುದ್ದು ಪ್ರೌಢಶಾಲೆಯ ಶಿಕ್ಷಕರು, ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳನ್ನ ಸೆಳೆಯಬೇಕು. ಮಕ್ಕಳಿಗೆ ಸರ್ವ ಶಿಕ್ಷಣ ಅಭಿಯಾನದಡಿ ಖಾಸಗಿ ಶಾಲೆಯಂತೆ ಬಸ್ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಯಲಿದೆ.

ನನ್ನ ಮಾಹಿತಿ ಪ್ರಕಾರ ಖಾಸಗಿ ಶಾಲೆಯ ಶಿಕ್ಷಕರಿಗಿಂತ, ಸರ್ಕಾರಿ ಶಾಲೆ ಶಿಕ್ಷಕರು ಸಿಇಟಿ ಬರೆದು ಆಯ್ಕೆ ಆಗಿದ್ದು, ಉತ್ತಮ ಶಿಕ್ಷಣ ನೀಡುತ್ತಾರೆ. ಮಂತ್ರಿಗಳು ಸರ್ಕಾರಿ ಅಧಿಕಾರಿಗಳು ತಮ್ಮ  ಮಕ್ಕಳನ್ನ ಸರ್ಕಾರಿ ಶಾಲೆಗೆ  ಸೇರಿಸಲು ಮನಸ್ಸು ಮಾಡಬೇಕು ಎಂದರು. ಕನ್ನಡ ಮಾಧ್ಯಮದೊಳಗೆ ಇಂಗ್ಲಿಷ್ ಒಂದು ಭಾಷೆಯಾಗಿ ಕಲಿಸಲು ಯತ್ನ ಮಾಡಬೇಕು. ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗಿಂತ ಹೆಚ್ಚು ಆಕರ್ಷಿಣಿಯವಾಗಿಡಬೇಕು ಆಗ ಮಕ್ಕಳು ಬರ್ತಾರೆ ಎಂದರು.

ಖಾಸಗಿ ಶಾಲೆಗಳು ತಮ್ಮ ಸ್ಟ್ರೆಂತ್ ಹೆಚ್ಚಿಸಿಕೊಳ್ಳಲು ಮಕ್ಕಳ‌ ಪೋಷಕರನ್ನ ಬಕ್ ಮಾಡುತ್ತಿರುವ ವಿಚಾರ ಮಾತನಾಡಿದ ಸಚಿವರು,ಮಾಧ್ಯಮಗಳ ಮೂಲಕ  ನನಗೆ ಗೊತ್ತಾಗಿದ್ದು, ಇದು ಒಂದು ವಿಚಿತ್ರ ಸಂಗತಿಯಾಗಿದ್ದು, ಈ ಬಗ್ಗೆ ಗಮನ ಹರಿಸುತ್ತೇನೆ ಎಂದರು.

ಸರ್ಕಾರಿ ಶಿಕ್ಷಕರ ಮೇಲೆ ಕೆಲಸದ ಒತ್ತಡಗಳು ಹೆಚ್ಚಾಗ್ತಿವೆ ಅನ್ನೋ ವಿಚಾರ ತಿಳಿದಿದೆ.ಒತ್ತಡ ಕಡಿಮೆ ಮಾಡಿ ಉತ್ತಮ ಶಿಕ್ಷಣ ನೀಡಲು ಅವಕಾಶ ಕಲ್ಪಿಸಲು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ಕಛೇರಿಯಲ್ಲಿ ಗಾಂಧೀಜಿ ಫೋಟೋ ತೆಗೆದ ವಿಚಾರವಾಗಿ ಹೇಳಿಕೆ ನೀಡಿದ ಸಚಿವ ಎನ್‌. ಮಹೇಶ್, ನಾನು ಅಧಿಕಾರ ಸ್ವೀಕರಿಸಿದ ಬಳಿಕೆ ಕಛೇರಿಯಲ್ಲಿ ಇದ್ದ ಎಲ್ಲಾ ಫೋಟೋಗಳನ್ನ ತೆಗೆದು ಇಟ್ಟಿದ್ದರು. ಇದು ಅಕಸ್ಮಾತಾಗಿ ನನ್ನ ಅರಿವಿಗೆ ಬಾರದಂತೆ ಆಗಿರುವ ಘಟನೆ.

ನಾನು ಕೊಠಡಿ ಪ್ರವೇಶ ಮಾಡಿದ ದಿನ ಬುದ್ದ ಬಸವ ಅಂಬೇಡ್ಕರ್ ಫೋಟೋ ಇಟ್ಟು ಪೂಜೆ ಮಾಡಿದೆ. ಸದ್ಯ ಪ್ರೊಟೋಕಾಲ್ ಪ್ರಕಾರ ಎಲ್ಲರ ಫೋಟೋ ಇಡಲಾಗಿದೆ ಎಂದು ಸ್ಪಷ್ಟ ಪಡಿಸಿದರು. ನನಗೆ ಗಾಂಧಿಯವರ ಬಗ್ಗೆ ಅಪಾರ ಗೌರವ ಇದೆ.ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಎಂದರು.

 

Please follow and like us:
0
http://bp9news.com/wp-content/uploads/2018/06/file701v9rsd3brmu3v4iwc.jpghttp://bp9news.com/wp-content/uploads/2018/06/file701v9rsd3brmu3v4iwc-150x150.jpgBP9 Bureauಪ್ರಮುಖಮೈಸೂರುಮೈಸೂರು : ನೂತನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎನ್ ಮಹೇಶ್ ಅವರು ಮೈಸೂರಿನ  ಮಹಾರಾಜ ಪ್ರೌಢ ಶಾಲೆಗೆ ಧೀಡಿರ್ ಭೇಟಿ ಕೊಟ್ಟಿದ್ದಾರೆ. ಮಕ್ಕಳ ದಾಖಲಾತಿ, ಶಾಲಾ ಶಿಥಿಲ ಕೊಠಡಿಗಳ ಪುನರ್ ನಿರ್ಮಾಣ ಕಾರ್ಯ ಪರಿಶೀಲನೆ ನಡೆಸಿದರು. ಕೊಠಿಡಗಳ ಕಾಮಗಾರಿ ಜತೆಗೆ ಮಕ್ಕಳ ದಾಖಲಾತಿ ಬಗ್ಗೆಯೂ ಪರಿಶೀಲನೆ ನಡೆಸಿದರು. ಮಕ್ಕಳ ದಾಖಲಾತಿಯಲ್ಲಿ ಗಣಿಯವಾಗಿ ಇಳಿಮುಖ‌ ಹಿನ್ನೆಲೆ ಸೂಕ್ತ ಕ್ರಮಕ್ಕೆ ಸಚಿವರು ಸಲಹೆ ನೀಡಿದರು. ನಂತರ ತರಗತಿಗಳಿಗೆ ತೆರಳಿ...Kannada News Portal