ಚಾಮರಾಜನಗರ : ಸಿಎಂ.ಸಿದ್ದರಾಮಯ್ಯ ದಲಿತರಿಗಾಗಿ, ದಲಿತರ ವಿವಿಧ ನಿಗಮಗಳಿಂದ ಪಡೆದು ಕೊಂಡಿದ್ದ, ೧೨೭೮ಕೋಟಿ ರೂಗಳ ಸಾಲವನ್ನ ಮನ್ನಾಮಾಡಿದ್ದಾರೆ. ಮಹದೇವಪ್ಪ, ಪರಮೇಶ್ವರ, ಪ್ರಿಯಾಂಕ ಖರ್ಗೆ, ಆಂಜನೇಯ ಸೇರಿದಂತೆ ಅನೇಕರಿಗೆ ಮಂತ್ರಿ ಪದವಿಯನ್ನ ಕೊಟ್ಟಿದ್ದಾರೆ.ದಲಿತರು ಯಾಕೆ ಕಾಂಗ್ರೆಸ್ ಗೆ ಓಟ್ ಕೊಡಬೇಕು ಅನ್ನೋ ಶ್ರೀನಿವಾಸ್ ಪ್ರಸಾದ್ ಪ್ರಶ್ನೆಗೆ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ, ಮಾಜಿ  ಎಂಪಿ ಸಿದ್ದರಾಜು ಟಾಂಗ್ ಕೊಟ್ಟಿದ್ದಾರೆ.

ದಲಿತ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ಕೊಡುವ ಮೂಲಕ ಶೈಕ್ಷಣಿಕವಾಗಿ ಉತ್ತೇಜನ ಕೊಟ್ಟಿದೆ ಕಾಂಗ್ರೆಸ್. ಅನಂತ್ ಕುಮಾರ್ ಹೆಗಡೆಯವರ ಸಂವಿಧಾನ ಬದಲಾವಣೆ ಮಾಡುತ್ತೇವೆ ಅನ್ನೋ ಮಾತಿನಿಂದ ದಲಿತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮೊದಲು ಸಂವಿಧಾನದ ತಳ ಹದಿಯ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳಲಿ ಅನಂತ್​ಕುಮಾರ್​. ಇಂತಹ ಸಂವಿಧಾನದ ಮೇಲೆ ಕೆಂಗಣ್ಣಿಟ್ಟಿರುವ ಕೋಮುವಾದಿ ಪಕ್ಷಕ್ಕೆ ಪಲಾಯನ ಮಾಡಿದವರು ಶ್ರೀನಿವಾಸ್ ಪ್ರಸಾದ್ ವಿನಹಃ ಖರ್ಗೆಯವರಲ್ಲ.

ಸಮಾಜವಾದವನ್ನ, ಸ್ವಾಭಿಮಾನವನ್ನ ಬಿಟ್ಟು, ಕೋಮುವಾದವನ್ನ ಒಪ್ಪಿಕೊಂಡಿರುವವರು ಪ್ರಸಾದ್.  ೧೫ ವರ್ಷ ಪಾರ್ಲಿಮೆಂಟ್ ನಲ್ಲಿ ಎಷ್ಟು ಸಲ ಮಾತಾಡಿದ್ದಾರೆ ಕೇಳಿ ನೋಡಿ. ಶ್ರಿನಿವಾಸ್ ಪ್ರಸಾದ್ ರವರು ವಯೋವೃದ್ದರು.  ಅವರಿಗೆ ಅಂಗಾಂಗಗಳ ವೈಫಲ್ಯ ಕಾಡುತ್ತಿದೆ. ಕಂದಾಯ ಸಚಿವರಾಗಿದ್ದಾಗ ಒಂದು ದಿನನೂ ಜಿಲ್ಲೆಗಳ ಪ್ರವಾಸ ಮಾಡದವರನ್ನ ಇನ್ನೇನ್ ಮಾಡೋಕಾಗುತ್ತೆ. ಸಿದ್ದರಾಮಯ್ಯ ರವರು ದುರಹಂಕಾರಿಗಳಲ್ಲ, ಶ್ರೀನಿವಾಸ್ ಪ್ರಸಾದ್ ರವರು ದುರಹಂಕಾರಿಗಳು. ದಲಿತರು , ಲೀಡರ್ ಶಿಪ್ ಅನ್ನ ಪ್ರಸಾದ್ ಉಳಿಸಿಕೊಳ್ಳಲಿಲ್ಲ ಎಂದು ಕಿಡಿಕಾರಿದರು..

 

Please follow and like us:
0
http://bp9news.com/wp-content/uploads/2018/05/collage-18-1024x768.jpghttp://bp9news.com/wp-content/uploads/2018/05/collage-18-150x150.jpgBP9 Bureauಚಾಮರಾಜನಗರಪ್ರಮುಖಮೈಸೂರುರಾಜಕೀಯಚಾಮರಾಜನಗರ : ಸಿಎಂ.ಸಿದ್ದರಾಮಯ್ಯ ದಲಿತರಿಗಾಗಿ, ದಲಿತರ ವಿವಿಧ ನಿಗಮಗಳಿಂದ ಪಡೆದು ಕೊಂಡಿದ್ದ, ೧೨೭೮ಕೋಟಿ ರೂಗಳ ಸಾಲವನ್ನ ಮನ್ನಾಮಾಡಿದ್ದಾರೆ. ಮಹದೇವಪ್ಪ, ಪರಮೇಶ್ವರ, ಪ್ರಿಯಾಂಕ ಖರ್ಗೆ, ಆಂಜನೇಯ ಸೇರಿದಂತೆ ಅನೇಕರಿಗೆ ಮಂತ್ರಿ ಪದವಿಯನ್ನ ಕೊಟ್ಟಿದ್ದಾರೆ.ದಲಿತರು ಯಾಕೆ ಕಾಂಗ್ರೆಸ್ ಗೆ ಓಟ್ ಕೊಡಬೇಕು ಅನ್ನೋ ಶ್ರೀನಿವಾಸ್ ಪ್ರಸಾದ್ ಪ್ರಶ್ನೆಗೆ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ, ಮಾಜಿ  ಎಂಪಿ ಸಿದ್ದರಾಜು ಟಾಂಗ್ ಕೊಟ್ಟಿದ್ದಾರೆ. ದಲಿತ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ಕೊಡುವ ಮೂಲಕ ಶೈಕ್ಷಣಿಕವಾಗಿ ಉತ್ತೇಜನ...Kannada News Portal