ಮೈಸೂರು : ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಕ್ತಿ ಕೇಂದ್ರ ಆಗಿರುವ ಶ್ರೀರಾಂಪುರ ಗ್ರಾಮಪಂಚಾಯತಿಗೆ ಸೇರಿರುವ ರಮಾಬಾಯಿ ನಗರದಲ್ಲಿ ಈ ಘಟನೆ ನಡೆದಿದ್ದು, ಅಧಿಕಾರವಿದ್ದರೆ ಏನು ಬೇಕಾದರು ಮಾಡಬಹುದು ಎಂಬ ದರ್ಪಕ್ಕೆ ಕಾಂಗ್ರೆಸ್​​​ನ ಮಖಂಡೆ ಮತ್ತು ಪಂಚಾಯತಿ ಅಧ್ಯಕ್ಷೆ ಚೂಡಾಮಣಿ ಸಾಕ್ಷಿಯಾಗಿದ್ದಾರೆ.

ಇನ್ನು ರಮಾಬಾಯಿನಗರದ ಶಾಲೆಮನೆ ಮತಗಟ್ಟೆ ಯಲ್ಲಿ ಪೂರ್ಣ ಮತದಾನ ನಡೆದ ನಂತರ ಸರಿ ಸುಮಾರು 6 ಗಂಟೆಯಿಂದ 6.30 ವರೆಗೂ ಅಂದರೆ ಅರ್ಧ ತಾಸುಗಳ ಕಾಲ ಮದಾನ ಪ್ರಕ್ರಿಯೆ ಮುಗಿದ ಮೇಲೆ ಅಧಿಕಾರಿಗಳ ಜೊತೆ ಬೂತ್ ಇದ್ದ​​​ ಕೊಠಡಿಯೊಳಗೆ  ಇದ್ದರು ಎನ್ನಲಾಗಿದೆ. ಮತದಾನದ ಸಮಯ ಮುಗಿದ ನಂತರ  ಯಾವೂದೇ ಕಾರಂಕ್ಕೂ ಅಧಿಕಾರಗಳನ್ನ ಹೊರತು ಪಡಿಸಿ ಮತಗಟ್ಟೆ ಕೊಠಡಿ ಒಳಗೆ ಇರುವುದು ಕಾನೂನು ಬಾಹಿರ. ಆಗಿದ್ದಾಗಿಯೂ ಚುನಾವಣಾ ಅಧಿಕಾರಿಗಳು ಪಂಚಾಯತಿ ಅಧ್ಯಕ್ಷೆ ಚೂಡಾಮಣಿ ಅವರಿಗೆ ಬೂತ್​​ ಒಳಗೆ ಇರಲು ಅವಕಾಶ ಮಾಡಿಕೊಟ್ಟಿದ್ದು ಸ್ಥಳೀಯ ಜೆಡಿಎಸ್​​​ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಅಲ್ಲದೆ  ಜನರನ್ನು ಕಂಡ ತಕ್ಷಣ ಮತಗಟ್ಟೆಯೊಳಗಿದ್ದ ಚೂಡಾಮಣಿ ಶಾಲೆ ಕಾಂಪೊಂಡ್​​​ನ್ನು ಹಾರಿ ಹೊರ ಹೊಗಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಯಾವೂದೇ ಅಪರಾಧ ಮಾಡಿಲ್ಲ ಎಂದಾರೆ ಈ ರೀತಿ ಓಡಿ ಹೋಗುವ ಪ್ರಮೇಯವೇನಿತ್ತು ಎಂಬ ಪ್ರಶ್ನೆಯನ್ನ ಹೊತ್ತು ಜೆಡಿಎಸ್​​​ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದರು. ವಿಷಯ ಅರಿತ ಪೊಲೀಸರು ಸ್ಥಳಕ್ಕಾಗಮಿಸಿ ಬೀಗು ವಾತಾವರಣವನ್ನ ತಿಳಿಗೊಳಿಸಿ ಸದ್ಯ ತಾವು ದೂರು ನೀಡಿ, ನಾವು ಆ ಬಗ್ಗೆ ಕ್ರಮ ತೆಗದುಕೊಳ್ಳುತ್ತೇವೆ ಎಂದು ಸಮಾಧಾನ ಪಡಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/Karnatakada-Miditha-53.jpeghttp://bp9news.com/wp-content/uploads/2018/05/Karnatakada-Miditha-53-150x150.jpegBP9 Bureauಪ್ರಮುಖಮೈಸೂರುರಾಜಕೀಯಮೈಸೂರು : ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಕ್ತಿ ಕೇಂದ್ರ ಆಗಿರುವ ಶ್ರೀರಾಂಪುರ ಗ್ರಾಮಪಂಚಾಯತಿಗೆ ಸೇರಿರುವ ರಮಾಬಾಯಿ ನಗರದಲ್ಲಿ ಈ ಘಟನೆ ನಡೆದಿದ್ದು, ಅಧಿಕಾರವಿದ್ದರೆ ಏನು ಬೇಕಾದರು ಮಾಡಬಹುದು ಎಂಬ ದರ್ಪಕ್ಕೆ ಕಾಂಗ್ರೆಸ್​​​ನ ಮಖಂಡೆ ಮತ್ತು ಪಂಚಾಯತಿ ಅಧ್ಯಕ್ಷೆ ಚೂಡಾಮಣಿ ಸಾಕ್ಷಿಯಾಗಿದ್ದಾರೆ. ಇನ್ನು ರಮಾಬಾಯಿನಗರದ ಶಾಲೆಮನೆ ಮತಗಟ್ಟೆ ಯಲ್ಲಿ ಪೂರ್ಣ ಮತದಾನ ನಡೆದ ನಂತರ ಸರಿ ಸುಮಾರು 6 ಗಂಟೆಯಿಂದ 6.30 ವರೆಗೂ ಅಂದರೆ ಅರ್ಧ ತಾಸುಗಳ ಕಾಲ ಮದಾನ ಪ್ರಕ್ರಿಯೆ...Kannada News Portal