ಬೆಂಗಳೂರು : ಮಾನ್ಯತೆ ಇಲ್ಲದೆ ನೆನೆಗುದಿಗೆ ಬಿದ್ದಿದ್ದ ಕರ್ನಾಟಕ ಮುಕ್ತ ವಿವಿ ಆರಂಭಕ್ಕೆ ಕೊನೆಗೂ ಅನುಮತಿ ಸಿಕ್ಕಿದೆ. 2013 ರಲ್ಲಿ ಯುಜಿಸಿಯಿಂದ ಮಾನ್ಯತೆ ರದ್ದಾಗಿ ಸ್ಥಗಿತಗೊಂಡಿದ್ದ ಕರ್ನಾಟಕ ಮುಕ್ತ ವಿವಿ 2018-19 ಸಾಲಿನ ಶೈಕ್ಷಣಿಕ ವರ್ಷದಿಂದ ಪುನರಾರಂಭವಾಗಲಿದೆ ಎನ್ನುವ ಸುದ್ದಿ ಬಂದಿದೆ.

2013 ರಲ್ಲಿ ಯುಜಿಸಿ ಕರ್ನಾಟಕ ಮುಕ್ತ ವಿವಿ ಮಾನ್ಯತೆ ರದ್ದು ಮಾಡಿತ್ತು. ನಂತರ ಮುಕ್ತ ವಿವಿ ಆರಂಭಕ್ಕೆ ಸಾಕಷ್ಟು ಹೋರಾಟಗಳು ಸಹ ನಡೆದಿದ್ದವು. ಸಾಕಷ್ಟು ಹೋರಾಟಗಳ ನಂತರ ಯುಜಿಸಿ ಮುಕ್ತ ವಿವಿಗೆ ಮಾನ್ಯತೆ ನೀಡಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಮೊಗದಲ್ಲಿ ನಗು ಮೂಡಿದೆ.

ಆದರೆ ಯುಜಿಸಿ 2013 ರಿಂದ 2018 ರವರೆಗಿನ ಶೈಕ್ಷಣಿಕ ವಿಚಾರದ ಕುರಿತು ಯಾವುದೇ ಚರ್ಚೆ ಮಾಡದೆ ಇರುವುದು ಹಳೆ ವಿದ್ಯಾರ್ಥಿಗಳಲ್ಲಿರುವ ಆತಂಕ ಇನ್ನು ಹೋಗಿಲ್ಲ. 2018-19 ಸಾಲಿನ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನುಮತಿಗೆ ಮುಂದಾಗಿದೆ. ಯುಜಿಸಿಯ ಈ ನಡೆ ಕುತೂಹಲ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Please follow and like us:
0
http://bp9news.com/wp-content/uploads/2018/06/banner6-1024x468.jpghttp://bp9news.com/wp-content/uploads/2018/06/banner6-150x150.jpgBP9 Bureauಪ್ರಮುಖಮೈಸೂರುಬೆಂಗಳೂರು : ಮಾನ್ಯತೆ ಇಲ್ಲದೆ ನೆನೆಗುದಿಗೆ ಬಿದ್ದಿದ್ದ ಕರ್ನಾಟಕ ಮುಕ್ತ ವಿವಿ ಆರಂಭಕ್ಕೆ ಕೊನೆಗೂ ಅನುಮತಿ ಸಿಕ್ಕಿದೆ. 2013 ರಲ್ಲಿ ಯುಜಿಸಿಯಿಂದ ಮಾನ್ಯತೆ ರದ್ದಾಗಿ ಸ್ಥಗಿತಗೊಂಡಿದ್ದ ಕರ್ನಾಟಕ ಮುಕ್ತ ವಿವಿ 2018-19 ಸಾಲಿನ ಶೈಕ್ಷಣಿಕ ವರ್ಷದಿಂದ ಪುನರಾರಂಭವಾಗಲಿದೆ ಎನ್ನುವ ಸುದ್ದಿ ಬಂದಿದೆ. 2013 ರಲ್ಲಿ ಯುಜಿಸಿ ಕರ್ನಾಟಕ ಮುಕ್ತ ವಿವಿ ಮಾನ್ಯತೆ ರದ್ದು ಮಾಡಿತ್ತು. ನಂತರ ಮುಕ್ತ ವಿವಿ ಆರಂಭಕ್ಕೆ ಸಾಕಷ್ಟು ಹೋರಾಟಗಳು ಸಹ ನಡೆದಿದ್ದವು. ಸಾಕಷ್ಟು ಹೋರಾಟಗಳ ನಂತರ...Kannada News Portal