ಬೆಂಗಳೂರು : ಮೈಸೂರಿನಲ್ಲಿ 11 ಕ್ಷೇತ್ರಗಳಿದ್ದು, 6 ಕ್ಷೇತ್ರಗಳಲ್ಲಿ ಹೊಸಮುಖಗಳಿಗೆ ಮಣೆ ಹಾಕಿದೆ. ವರುಣಾದಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಯತೀಂದ್ರ ಸಿದ್ದರಾಮಯ್ಯ ತಮ್ಮ ಮೊದಲ ಅದೃಷ್ಠ ಪರೀಕ್ಷೆಯಲ್ಲಿಯೇ ಸಕ್ಸಸ್ ಆಗಿದ್ದು, ಬಾರಿ ಅಂತರದಿಂದ ಆರಿಸಿ ಬಂದಿದ್ದಾರೆ. ಕ್ಷೇತ್ರದಲ್ಲಿ ಪ್ರಬಲ ಪ್ರತಿಸ್ಪರ್ಧಿ ಇಲ್ಲದೇ ಇರುವುದೂ ಕೂಡ ಇವರ ವಿಜಯಕ್ಕೆ ಕಾರಣವಾಗಿದೆ ಎನ್ನಬಹುದು.

ಪಿರಿಯಾಪಟ್ಟಣದಲ್ಲಿ ಹಾಲಿ ಕಾಂಗ್ರೆಸ್ ಶಾಸಕ ವೆಂಕಟೇಶ್ ವಿರುದ್ಧ ಜೆಡಿಎಸ್ ಅಭ್ಯರ್ಥಿ ಕೆ ಮಹದೇವ ಅವರು ಜಯಗಳಿಸಿದ್ದಾರೆ. ಈ ಮೂಲಕ ವೆಂಕಟೇಶ್ ಅವರ ಸಾಲು ಸಾಲು ಗೆಲುವಿಗೆ ಬ್ರೇಕ್ಹಾಕಿದ್ದು, ಜೆಡಿಎಸ್ ಬಾವುಟ ಹಾರುವಂತೆ ಮಾಡಿದ್ದಾರೆ.

ಇತ್ತ ಮೈಸೂರು ನಗರ ಕ್ಷೇತ್ರವಾದ ಚಾಮರಾಜಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಲ್ ನಾಗೇಂದ್ರ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇವರ ಗೆಲುವಿಗೆ ಜೆಡಿಎಸ್ನ ಭಿನ್ನಮತ ಮತ್ತು ವೋಟ್ ಡಿವೈಡ್ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಸೋಲು ಅನುಭವಿಸಿದ್ದು, ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರೋ. ರಂಗಪ್ಪ ಭಾರಿ ಮುಖಭಂಗ ಅನುಭವಿಸಿದ್ದಾರೆ.

ಅತ್ತ ನರಸೀಪುರದಲ್ಲಿ ಸಚಿವ ಮಹದೇವಪ್ಪ ಅವರನ್ನು ಕೆಡವಿರುವ ಜೆಡಿಎಸ್ ಯುವ ನಾಯಕ ಅಶ್ವಿನ್ಕುಮಾರ್ ಎಂ ಟಿ ನರಸೀಪುರದಲ್ಲಿ ತೆನೆ ಹೊತ್ತ ಮಹಿಳೆಯ ಬಾವುಟ ಹಾರಿಸಿದ್ದಾರೆ. ಇದರೊಂದಿಗೆ ಟಿ ನರಸೀಪುರದಲ್ಲಿ ಇದ್ದ ವಂಶಾಡಳಿತದ ನಡೆಯ ಬಹುದಾದ ಅಪಾಯವನ್ನು ತಪ್ಪಿಸಿದಂತಾಗಿದೆ ಎನ್ನುತ್ತಿದ್ದಾರೆ ಅಲ್ಲಿನ ಯುವ ಜನತೆ.

ಹೆಚ್. ಡಿ ಕೋಟೆಯಲ್ಲಿ ಶಾಸಕ ಚಿಕ್ಕಮಾದು ಅವರ ನಿಧನದ ನಂತರ ಗರಿಗೆದರಿದ ರಾಜಕೀಯದ ಹಿನ್ನೆಲೆಯಲ್ಲಿ ಜೆಡಿಎಸ್ನಿಂದ ದಿವಂಗತ ಚಿಕ್ಕಮಾದು ಅವರ ಪುತ್ರ ಅನಿಲ್ ಕುಮಾರ್ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದರು. ಇದೀಗ ತಂದೆಯ ಸಾವಿನ ಅನುಕಂಪದಿಂದಲೇ ಅನಿಲ್ ಕುಮಾರ್ ಆಯ್ದು ಬಂದಿದ್ದಾರೆ ಎನ್ನಲಾಗಿದೆ.

ಪ್ರಮುಖವಾಗಿ ಮೈಸೂರು ಪ್ರಾಂತ್ಯದ ದಲಿತ ನಾಯಕ ಶ್ರೀನಿವಾಸ ಪ್ರಸಾದ್ ಅವರ ಪ್ರತಿಷ್ಠೆಯನ್ನು ಅಡವಿಟ್ಟು ಕಣಕ್ಕಿಳಿದು ಸೋತು ಸಿಎಂ ಸಿದ್ದರಾಮಯ್ಯ ಮುಂದೆ ಸುಸ್ತಾಗಿದ್ದರು. ಆದರೆ ಇದೀಗ ಮತ್ತೆ ತಮ್ಮ ಸ್ವಾಭಿಮಾನವನ್ನು ಉಳಿಸಿ ಕೊಂಡಿದ್ದು, ಬೆಂಕಿಯಲ್ಲಿ ಅರಳಿದ ಹೂವಿನಂತೆ ನಂಜನಗೂಡಿನಲ್ಲಿ ಶ್ರೀನಿವಾಸ ಪ್ರಸಾದ್ ತಮ್ಮ ಅಳಿಯ ಹರ್ಷವರ್ಧನ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಿ ಗೆಲ್ಲಿಸಿ ಕೊಂಡಿದ್ದಾರೆ. ಅದರ ಜೊತೆಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಸೇಡು ತೀರಿಸಿ ಕೊಂಡರು ಎಂಬ ಅನಿಸಿಕೆಯನ್ನು ಮೈಸೂರು ರಾಜಕೀಯ ಪಡಸಾಲೆ ವ್ಯಕ್ತಪಡಿಸುತ್ತಿದೆ.

ಉಳಿದಂತೆ ಟೈಟ್ ಫೈಟ್ ನಲ್ಲಿ ಹಾರಿಸಿ ಬಂದ ಮೈಸೂರು ರಣಕಲಿಗಳು :

ಚಾಮುಂಡೇಶ್ವರಿ ಕ್ಷೇತ್ರ : ಜೆಡಿಎಸ್ ಜಿ ಟಿ ದೇವೇಗೌಡ ಗೆಲುವು

ಚಾಮುಂಡೇಶ್ವರಿ ವರಪುತ್ರ ಸಿಎಂ ಸಿದ್ದರಾಮಯ್ಯ ಎಂಬ ಹೆಗ್ಗಳಿಕೆಗೆ ಹೆಡೆಮುರಿ ಕಟ್ಟಿ ಬಾರಿ ಅಂತರದಿಂದ ಜಿ. ಟಿ ದೇವೇಗೌಡ ಅವರು ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಸಿದ್ದರಾಮಯ್ಯ ಅವರ ಕಡೇ ಚುನಾವಣೆಯಲ್ಲಿ ತಮ್ಮ ರಾಜಕೀಯ ಮರು ಜೀವನ ನೀಡಿದ ಕ್ಷೇತ್ರದಿಂದಲೇ ತಮ್ಮ ರಾಜಕೀಯ ಜೀವನದ ಕಟ್ಟ ಕಡೆಯ ಚುನಾವಣೆ ಸೋಲಿನೊಂದಿಗೆ ಅಂತ್ಯವಾಗುವಂತೆ ಮಾಡಿದ್ದಾರೆ.

ಕೆ ಆರ್ ಕ್ಷೇತ್ರ : ಬಿಜೆಪಿ ರಾಮದಾಸ್

ಹತ್ತು ಹಲವು ಹೋರಾಟಗಳೊಂದಿಗೆ ಟಿಕೆಟ್ ಪಡೆದು ಜನಾಶಿರ್ವಾದ ಕೇಳಿದ ರಾಮದಾಸ್ ಈ ಬಾರಿ ಅತ್ಯಧಿಕ ಮತಗಳೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್ ಅವರನ್ನು ಮಣಿಸಿದ್ದಾರೆ. ಇದರೊಂದಿಗೆ ಕಳೆದ ಬಾರಿ ಸೋತು ಸುಣ್ಣವಾಗಿದ್ದ ಅವರು ಸೇಡು ತೀರಿಸಿ ಕೊಂಡಂತಾಗಿದೆ.

ಹುಣಸೂರು : ಜೆಡಿಎಸ್ ಹೆಚ್ ವಿಶ್ವನಾಥ್

ಹುಣಸೂರು ಅಂದ್ರೆ ಮಂಜುನಾಥ್ ಹುಣಸೂರು ಎಂಬ ಮಾತುಗಳು ಕಾಂಗ್ರೆಸ್ ಸರ್ಕಾರ ಇದ್ದ ಕಾಲದಲ್ಲಿ ಕೇಳಿ ಬರುತ್ತಿದ್ದ ಮಾತುಗಳು. ಅಷ್ಟೇ ಅಲ್ಲಾ ಸೋಲಿಲ್ಲದ ಸರದಾರನಾಗಿ ಮೆರೆದಿದ್ದ ಶಾಸಕರು ಹೆಚ್ ವಿಶ್ವನಾಥ್. ಯಾವುದೇ ಸಮುದಾಯದ ಬಲವಿಲ್ಲದೇ ಜಾತ್ಯಾತೀತವಾಗಿ ಆಯ್ಕೆಯಾಗಿ ಬರುತ್ತಿದ್ದ ಮಂಜುನಾಥ್ ಇದೀಗ ತಮ್ಮದೇ ಕೆಲವು ಆಂತರಿಕ ಸಮಸ್ಯೆಗಳು ಮತ್ತು ತಾವೇ ಮಾಡಿಕೊಂಡ ಎಡವಟ್ಟುಗಳಿಂದ ಇದೀಗ ಜೆಡಿಎಸ್ ಹೆಚ್ ವಿಶ್ವನಾಥ್ ಭರ್ಜರಿ ಜಯ ಸಾಧಿಸಿದ್ದಾರೆ.

ನರಸಿಂಹರಾಜ : ಕಾಂಗ್ರೆಸ್ ತನ್ವೀರ್ ಸೇಠ್

ಮತ್ತೆ ನರಸಿಂಹರಾಜ ಕ್ಷೇತ್ರದಲ್ಲಿ ಜನರು ಸಚಿವರಾಗಿದ್ದ ತನ್ವೀರ್ ಸೇಠ್ ಅವರು ಮರು ಆಯ್ಕೆಮಾಡಿ ಆಶೀರ್ವಾದ ಮಾಡಿದ್ದಾರೆ. ಇದರೊಂದಿಗೆ ತನ್ವೀರ್ ಸೇಠ್ ತಮ್ಮ ಅಸ್ತಿತ್ವವನ್ನು ಇನ್ನೂ ಉಳಿಸಿ ಕೊಂಡಿದ್ದಾರೆ ಎಂಬುದು ಇದೀಗ ಖಾತ್ರಿಯಾಗಿದೆ. ಅಲ್ದೇ ಜೆಡಿಎಸ್ಗೆ ಎದುರಾದ ಬಂಡಾಯವೂ ಕೂಡ ತನ್ವೀರ್ ಸೇಠ್ಗೆ ವರದಾನವಾಗಿರ ಬಹುದು.

ಕೆ ಆರ್ ನಗರ ಕ್ಷೇತ್ರ : ಜೆಡಿಎಸ್ ಸಾರಾ ಮಹೇಶ್

ಕೆ ಆರ್ ನಗರದ ಸೋಲಿಲ್ಲದ ಸರದಾರ ಸಾ ರಾ ಮಹೇಶ್ ಮತ್ತೆ ತಮ್ಮ ಗೆಲುವಿನ ಓಟನ್ನು ಮುಂದುವರೆಸಿದ್ದಾರೆ. ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು, ನನ್ನ ಮಗನ ವಿಡಿಯೋ ಬಿಟ್ಟು ತೇಜೋವಧೆ ಮಾಡಿದ್ರೂ , ಜನರಿಗೆ ಸಾರಾ ಮೇಲಿನ ಅಭಿಮಾನ ಮತ್ತು ನಂಬಿಕೆ ಮಾತ್ರ ಕಡಿಮೆಯಾಗಿಲ್ಲ ಎಂಬ ವಿಚಾರ ಇದೀಗ ಸ್ಪಷ್ಟವಾಗಿದೆ ಎನ್ನಲಾಗಿದೆ.

Please follow and like us:
0
http://bp9news.com/wp-content/uploads/2018/05/Mysore_Palace_gate.jpghttp://bp9news.com/wp-content/uploads/2018/05/Mysore_Palace_gate-150x150.jpgPolitical Bureauಪ್ರಮುಖಮೈಸೂರುರಾಜಕೀಯಬೆಂಗಳೂರು : ಮೈಸೂರಿನಲ್ಲಿ 11 ಕ್ಷೇತ್ರಗಳಿದ್ದು, 6 ಕ್ಷೇತ್ರಗಳಲ್ಲಿ ಹೊಸಮುಖಗಳಿಗೆ ಮಣೆ ಹಾಕಿದೆ. ವರುಣಾದಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಯತೀಂದ್ರ ಸಿದ್ದರಾಮಯ್ಯ ತಮ್ಮ ಮೊದಲ ಅದೃಷ್ಠ ಪರೀಕ್ಷೆಯಲ್ಲಿಯೇ ಸಕ್ಸಸ್ ಆಗಿದ್ದು, ಬಾರಿ ಅಂತರದಿಂದ ಆರಿಸಿ ಬಂದಿದ್ದಾರೆ. ಕ್ಷೇತ್ರದಲ್ಲಿ ಪ್ರಬಲ ಪ್ರತಿಸ್ಪರ್ಧಿ ಇಲ್ಲದೇ ಇರುವುದೂ ಕೂಡ ಇವರ ವಿಜಯಕ್ಕೆ ಕಾರಣವಾಗಿದೆ ಎನ್ನಬಹುದು. ಪಿರಿಯಾಪಟ್ಟಣದಲ್ಲಿ ಹಾಲಿ ಕಾಂಗ್ರೆಸ್ ಶಾಸಕ ವೆಂಕಟೇಶ್ ವಿರುದ್ಧ ಜೆಡಿಎಸ್ ಅಭ್ಯರ್ಥಿ ಕೆ ಮಹದೇವ ಅವರು ಜಯಗಳಿಸಿದ್ದಾರೆ....Kannada News Portal