ಮೈಸೂರು:ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರೇಸ್ ಕೋರ್ಸ್ ಗೆ ಸೇರಿದ 131 ಎಕರೆ ಜಾಗವನ್ನ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲು  ಚಿಂತನೆ ನಡೆದಿದೆ ಎಂದು ಪ್ರವಾಸೋದ್ಯಮ ಸಚಿವ  ಸಾ.ರಾ.ಮಹೇಶ್ ಹೇಳಿದ್ದಾರೆ.

ಮೈಸೂರಿನಲ್ಲಿ ಪ್ರಥಮ ಸುದ್ದಿಗೋಷ್ಠಿಯನ್ನುದ್ದೇಶಿಸಿ ಈ ವಿಷಯ ತಿಳಿಸಿದ್ರು.  ಇದಕ್ಕೆ ಅನುಮತಿ ಅಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು ಎಂದಿದ್ದಾರೆ. ಮೈಸೂರಿಗೆ ಪ್ರವಾಸಿಗರೇ ಮುಖ್ಯವಾಗಿದ್ದಾರೆ. ಅನುಮತಿ ಸಿಕ್ಕರೆ ರೇಸ್ ಕೋರ್ಸ್ ಸಾರ್ವಜನಿಕವಾಗಿ ಬಳಸಿಕೊಳ್ಳುವ ದೃಷ್ಟಿಯಿಂದ ಅಲ್ಲಿನ ಆಡಳಿತ ಮಂಡಳಿಯ ಜೊತೆ ಚರ್ಚಿಸುತ್ತೇನೆ ಎಂದು  ಹೇಳಿದ್ದಾರೆ. ಪ್ರಾಮಾಣಿಕ ಮುಖ್ಯಮಂತ್ರಿ ಸಂಪುಟದಲ್ಲಿ ಸಚಿವನಾಗಿದ್ದೇನೆ ಎಲ್ಲರ ಒಪ್ಪಿಗೆ ಮೇರೆಗೆ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದರು.

ತೃಪ್ತಿ ತಂದಿದೆ:  ನನಗೆ ಕೊಟ್ಟಿರುವ ಖಾತೆ ತೃಪ್ತಿ ತಂದಿದೆ. ನಾನು ಕೆಲಸ ಮಾಡಬೇಕಿತ್ತು, ಒಂದು ಖಾತೆ ಬೇಕಿತ್ತು ಕೊಟ್ಟಿದ್ದಾರೆ.ಕೆಲಸ ಮಾಡೋಕ್ಕೆ ಯಾವ ಖಾತೆ ಆದ್ರೇನು. ಸದ್ಯ ರೇಷ್ಮೆ, ಪ್ರವಾಸೋದ್ಯಮ ಖಾತೆ ನಿರ್ವಹಿಸಲು ಖುಷಿಯಾಗ್ತಿದೆ. ನಾನು ಇವತ್ತು ಸಹ ಸಿಎಂ ಹೆಚ್ಡಿಕೆ ದೂರವಾಣಿ ಕರೆ ಮಾಡಿ ರಾಜೀನಾಮೆ ನೀಡು ಅಂದ್ರೆ ಫ್ಯಾಕ್ಸ್ ನಲ್ಲಿ‌ ಕಳಿಸುತ್ತೇನೆ. ಸಚಿವ ಸಾ.ರಾ. ಮಹೇಶ್ ಹೇಳಿಕೆ.

Please follow and like us:
0
http://bp9news.com/wp-content/uploads/2018/06/sa.ra.mahesh.jpghttp://bp9news.com/wp-content/uploads/2018/06/sa.ra.mahesh-150x150.jpgBP9 Bureauಪ್ರಮುಖಮೈಸೂರುಮೈಸೂರು:ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರೇಸ್ ಕೋರ್ಸ್ ಗೆ ಸೇರಿದ 131 ಎಕರೆ ಜಾಗವನ್ನ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲು  ಚಿಂತನೆ ನಡೆದಿದೆ ಎಂದು ಪ್ರವಾಸೋದ್ಯಮ ಸಚಿವ  ಸಾ.ರಾ.ಮಹೇಶ್ ಹೇಳಿದ್ದಾರೆ. ಮೈಸೂರಿನಲ್ಲಿ ಪ್ರಥಮ ಸುದ್ದಿಗೋಷ್ಠಿಯನ್ನುದ್ದೇಶಿಸಿ ಈ ವಿಷಯ ತಿಳಿಸಿದ್ರು.  ಇದಕ್ಕೆ ಅನುಮತಿ ಅಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು ಎಂದಿದ್ದಾರೆ. ಮೈಸೂರಿಗೆ ಪ್ರವಾಸಿಗರೇ ಮುಖ್ಯವಾಗಿದ್ದಾರೆ. ಅನುಮತಿ ಸಿಕ್ಕರೆ ರೇಸ್ ಕೋರ್ಸ್ ಸಾರ್ವಜನಿಕವಾಗಿ ಬಳಸಿಕೊಳ್ಳುವ ದೃಷ್ಟಿಯಿಂದ ಅಲ್ಲಿನ ಆಡಳಿತ ಮಂಡಳಿಯ ಜೊತೆ ಚರ್ಚಿಸುತ್ತೇನೆ ಎಂದು  ಹೇಳಿದ್ದಾರೆ. ಪ್ರಾಮಾಣಿಕ ಮುಖ್ಯಮಂತ್ರಿ...Kannada News Portal