ಸಿನಿಮಾ ಇಂಡಸ್ಟ್ರಿಯಲ್ಲಿ  ಕಾಸ್ಟಿಂಗ್​ ಕೌಚ್​ ನ ಸುದ್ದಿ ಬಿಸಿ ಇರುವಾಗ್ಲೇ ನಟಿಯೊಬ್ಬಳು ಶೂಟಿಂಗ್​ಗಾಗಿ ನಿರ್ದೇಶಕರು ನನ್ನನ್ನು ಏಳು ಬಾರಿ ನಗ್ನಗೊಳಿಸಿದ್ದಾರೆ ಎಂಬ ಮಾಹಿತಿಯನ್ನು ಹೊರ ಹಾಕಿದ್ದಾರೆ.

ನಟ ಸೈಫ್ ಅಲಿಖಾನ್​ ಹಾಗೂ ನವಾಜುದ್ದೀನ್​ ಸಿದ್ದೀಕಿ ನಟಿಸುತ್ತಿರುವ  ವೆಬ್​ ಸಿರೀಸ್​ ”ಸೇಕ್ರೆಡ್​ಗೇಮ್ಸ್​” ನಲ್ಲಿ ನಟಿ ಕುಬ್ರಾ ಸೇಠ್​  ಅವರು,  ನನ್ನನ್ನು 7 ಬಾರಿ ನಗ್ನಗೊಳಿಸಿ ಚಿತ್ರೀಕರಿಸಿದ್ದಾರೆ ಎಂದು ಸ್ವತಃ ನಟಿಯೇ ಒಪ್ಪಿಕೊಂಡಿದ್ದಾರೆ.

ಚಿತ್ರದಲ್ಲಿ  ನನ್ನ ನಗ್ನಗೊಳಿಸಿ ಚಿತ್ರೀಕರಿಸಿದ ಮೇಲೆ ನಿರ್ದೇಶಕ ಅನುರಾಗ್​ ಕಶ್ಯಪ್​ ನನ್ನ ಬಳಿ ಕ್ಷಮೆ ಕೇಳಿದ್ದರು. ಪ್ರತಿ ಬಾರಿ ಆ ಸೀನ್​ ಚಿತ್ರೀಕರಿಸಿದ ಮೇಲೆ ಅವರು ನನ್ನ ಬಳಿ ಬಂದು ಕ್ಷಮೆ ಕೇಳಿದ್ದಾರೆ. ‘ನಾನು ಈ ಸೀನ್​ಗಾಗಿ ಸಾಕಷ್ಟು ಕೆಲಸ   ಮಾಡಿಸುತ್ತಿದ್ದೇನೆ, ಈ ಸೀನ್​ ಶೂಟ್​ ಮಾಡಿದ್ದಕ್ಕೆ ನನ್ನನ್ನು ದ್ವೇಷಿಸಬೇಡ, ಆದರೆ ನನಗೆ ಗೊತ್ತು ನೀನು ನನ್ನನ್ನು ದ್ವೇಷಿಸುತ್ತೀಯಾ ಅಂತಾ…ಆದರೆ ಎಲ್ಲಾ ಚಿತ್ರಕ್ಕಾಗಿ ಅಷ್ಟೆ, ನನ್ನನ್ನು ದ್ವೇಷಿಸಬೇಡ ಎಂದು ಹೇಳುತ್ತಿದ್ದರು.

ನಾನು ಆ ಸೀನ್​  ಮಾಡುವಾಗ  ನೆಲದ ಮೇಲೆ ಬಿದ್ದು ಅಳಬೇಕಿತ್ತು. ಆದರೆ ಅನುರಾಗ್​ ನನಗೆ ನಿಜವಾಗಿಯೂ ಏಳು ಬಾರಿ ಅಳಿಸಿದ್ದಾರೆ. ಸೀನ್​ ಮುಗಿದ ಮೇಲು ನಾನು ನೆಲದ  ಮೇಲೆ ಕೂತು ಅಳುತ್ತಿದ್ದೆ. ಆಗ ಅನುರಾಗ್​ ನನ್ನ ಬಳಿ ಬಂದು ನನ್ನನ್ನು ತಬ್ಬಿಕೊಂಡು ಐ ಲವ್​​ ಯೂ ಸೋ ಮಚ್​ ಹಾಗೂ ಆ ಸೀನ್​ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು   ಹೇಳಿದ್ದರು. ನಾನು ಆಗ ಆ ರೂಂ ನಿಂದ ಹೊರ ಬಂದೆ. ಅಲ್ಲಿ ಇದ್ದವರೆಲ್ಲಾ ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದರು.ನಾನು ಮಾಡಿದ ಸೀನ್​ ತುಂಬಾ ಅದ್ಭುತವಾಗಿ ಬರುತ್ತೆ ಎಂದು ನಾನು ಎಂದುಕೊಂಡಿರಲಿಲ್ಲ ಎಂದು ಕುಬ್ರಾ ತಿಳಿಸಿದ್ದಾರೆ.

ಈ ಸೀನ್ ಚಿತ್ರಿಕರಿಸುವ ಮೊದಲು ನಾನು ತುಂಬಾ ನಗುತ್ತಿದ್ದೆ. ಆದರೆ ಆ ಸೀನ್‍ನಲ್ಲಿ ನಾನು ಅಳಬೇಕಿತ್ತು. ಆಗ ಅನುರಾಗ್ ನನ್ನ ಬಳಿ ಬಂದು ನೀನು ಏನು ಕುಡಿತೀಯಾ ಎಂದು ಕೇಳಿದ್ದಾಗ ವೈನ್ ಎಂದು ಹೇಳಿದೆ. ಆದರೆ ಅವರು ನನಗೆ ವಿಸ್ಕಿ ನೀಡಿ ಸೀನ್‍ನಲ್ಲಿರುವ ಲೈನ್ಸ್​ಗಳನ್ನು ಓದಿಸುತ್ತಿದ್ದರು. ನಾನು ಓದಿದ ಮೇಲೆ ಅವರು ಪೇಪರ್ ತೆಗೆದುಕೊಂಡು ನಾನು ಹೇಳುವುದನ್ನು ಅನುಭವ ಮಾಡಿಕೋ ಎಂದು ಹೇಳುತ್ತಿದ್ದರು.

ಅವರು ಹೇಳಿದ ಮಾತು ಕೇಳಿ ಆ ಕ್ಷಣವೇ ನನ್ನ ಕಣ್ಣಲ್ಲಿ ನೀರು ಬಂತು. ಆಗ ಅವರು ಯಾರೂ ಏನು ಮಾತಾಡಬೇಡಿ, ನಾನು ಅವಳನ್ನು ಸಿನಿಮಾ ಸೆಟ್‍ನಲ್ಲಿ ಭೇಟಿ ಮಾಡುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಟು ಹೋದರು. ಆದರೆ ನಾನು ಸಿನಿಮಾ ಸೆಟ್ ಹೋಗುವರೆಗೂ ನನ್ನ ಜೊತೆ ಯಾರೂ ಮಾತನಾಡಲಿಲ್ಲ. ನಾನು ಆ ಸೀನ್ ಅದ್ಭುತವಾಗಿ ಮಾಡಿದ್ದೇನೆ ಹಾಗೂ ಆ ಸೀನ್ ತುಂಬಾ ಚೆನ್ನಾಗಿ ಚಿತ್ರೀಕರಿಸಲಾಗಿದೆ ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದ್ದರು ಎಂದು ನಟಿ ಕುಬ್ರಾ ಸೇಠ್ ಹೇಳಿದ್ದಾರೆ.

Please follow and like us:
0
http://bp9news.com/wp-content/uploads/2018/07/Kubra-Sait-2.jpghttp://bp9news.com/wp-content/uploads/2018/07/Kubra-Sait-2-150x150.jpgBP9 Bureauಸಿನಿಮಾಸಿನಿಮಾ ಇಂಡಸ್ಟ್ರಿಯಲ್ಲಿ  ಕಾಸ್ಟಿಂಗ್​ ಕೌಚ್​ ನ ಸುದ್ದಿ ಬಿಸಿ ಇರುವಾಗ್ಲೇ ನಟಿಯೊಬ್ಬಳು ಶೂಟಿಂಗ್​ಗಾಗಿ ನಿರ್ದೇಶಕರು ನನ್ನನ್ನು ಏಳು ಬಾರಿ ನಗ್ನಗೊಳಿಸಿದ್ದಾರೆ ಎಂಬ ಮಾಹಿತಿಯನ್ನು ಹೊರ ಹಾಕಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180630120129'); document.getElementById('div_1520180630120129').appendChild(scpt); ನಟ ಸೈಫ್ ಅಲಿಖಾನ್​ ಹಾಗೂ ನವಾಜುದ್ದೀನ್​ ಸಿದ್ದೀಕಿ ನಟಿಸುತ್ತಿರುವ ...Kannada News Portal