ಸಿನಿಟಾಕ್ : ಟಾಲಿವುಡ್​ ಸಿನಿಮಾ ರಂಗದಲ್ಲಿ ಸಾಕಷ್ಟು  ಸ್ಟಾರ್​ ನಟರ ಬೆವರು ಇಳಿಸಿದ ನಟಿ ಅಂದ್ರೆ ಅದು ಶ್ರೀ ರೆಡ್ಡಿ. ಕಾಸ್ಟಿಂಗ್​ ಕೌಚ್​ ರಹಸ್ಯ ವನ್ನು  ಎಳೆಎಳೆಯಾಗಿ ಬಿಚ್ಚಿಡುತ್ತಾ ಸ್ಟಾರ್​ ನಟರ , ನಿರ್ದೇಶಕರ ಜಂಘಾ ಬಲವನ್ನೇ ಹುದುಗಿಸಿದ ನಟಿ ಶ್ರೀ ರೆಡ್ಡಿ ಇದೀಗ ಕಾಸ್ಟಿಂಗ್​ ಕೌಚ್​ನಲ್ಲಿನ ಒಂದು ಭಯಾನಕ ಸತ್ಯ ಬಿಚ್ಚಿಟ್ಟಿದ್ದಾರೆ.  ಕಾಸ್ಟಿಂಗ್​ ಕೌಚ್​  ವಿರುದ್ಧ  ಇಡೀ ಚಿತ್ರರಂಗದಲ್ಲಿ ಅರೆಬೆತ್ತಲೇ  ಪ್ರತಿಭಟನೆ ಮಾಡಿ ದೇಶವ್ಯಾಪಿ ಸುದ್ದಿಯಾಗಿದ್ದ ಶ್ರೀ ರೆಡ್ಡಿ  ತೆಲುಗಿನ ಸ್ಟಾರ್​ ನಾನಿ  ಬಗ್ಗೆ ಹೊಸ ಟ್ವಿಸ್ಟ್​ ಕೊಡೋಕೆ ಆರಂಭ ಮಾಡುತ್ತಿದ್ದಾರೆ.

 ಸಿನಿಮಾ ಇಂಡಸ್ಟ್ರಿಯಲ್ಲೇ ನಾಣಿ ಎಂಥಹ ಒಬ್ಬ  ಕಾಮುಕ ಎಂಬುದನ್ನು ಹೇಳಿರುವ ಅವರು, ಅಅವನಿಂದಾಗಿ ಒಬ್ಬ ಹೆಣ್ಣು ಮಗಳ  ಜೀವನವೇ ಹಾಳಾಗಿ ಹೋಯ್ತು ಎಂಬ ಕ್ಲೂ ಕೊಟ್ಟು ಸುಮ್ಮನಾಗಿದ್ದರು. ಮತ್ತೆ ಆ ಸುದ್ದಿಯ ಬಗ್ಗೆ ಇನ್ನಷ್ಟು ಚರ್ಚೆಗಿಳಿದಿರುವ ಶ್ರೀ ರೆಡ್ಡಿ. ಮತ್ತಷ್ಟು ಕ್ರೋಧಗೊಳ್ಳಲು ಕಾರಣ.  ಅಂದ ಹಾಗೇ ಬಿಗ್​ಬಾಸ್​ ಸೀಸನ್​-2 ಕಾರ್ಯಕ್ರಮಕ್ಕೆ  ನಾನಿ ನಿರೂಪಕನಬಾಗಿ ಆಯ್ಕೆಯಾದ ನಂತರ, ಅದೇ ಕಾರ್ಯಕ್ರಮಕ್ಕೆ ನಟಿ ಶ್ರೀ ರೆಡ್ಡಿ ಕೂಡ ಒಬ್ಬ ಸ್ಪರ್ಧಿ ಎಂಬ ಸುದ್ದಿ ಕೇಳಿದ ಮೇಲೆ, ನಾನಿಯೇ ಸ್ವತಃಕ  ಈ ಕಾರ್ಯಕ್ರಮದಿಂದ ದೂರವೇ ಉಳಿಯುತ್ತೇನೆ ಎಂದಿದ್ದರು

ತನಗೆ ಬಿಗ್​ಬಾಸ್​ನಲ್ಲಿ ಭಾಗವಹಿಸಲು ತನಗೆ ಸಿಕ್ಕಿದ್ದ ಅವಕಾಶಕ್ಕೆ ಕತ್ತರಿ ಹಾಕಿದ ನಾನಿ ವಿರುದ್ಧ ‘ಶ್ರೀರೆಡ್ಡಿ…ನಾನಿ… ಓ ಡರ್ಟಿ ಪಿಕ್ಚರ್​’ ಎಂಬ ಪೋಸ್ಟರ್​ ಹಾಕುವ ಮೂಲಕ ಖಾಸಗಿ ಟಿವಿ  ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾರೆ.  ಸಾಲದಕ್ಕೆ ಅದನ್ನು ತಮ್ಮ ಫೇಸ್​ಬುಕ್​ನಲ್ಲೂ ಶೇರ್​ ಮಾಡಿದ್ದಾರೆ.

ತೆಲುಗು ಬಿಗ್​ಬಾಸ್​ನಲ್ಲಿ ಭಾಗವಹಿಸಲು ಸಿಕ್ಕಿದ್ದ ಅವಕಾಶದಿಂದ ವಂಚಿರಾಗಲು ಕಾರಣ ನಾನಿ. ಇದಕ್ಕೆ ನಮ್ಮ ನಡುವೆ ಹಿಂದೆ ಇದ್ದ ದೈಹಿಕ ಸಂಬಂಧದವೇ ಕಾರಣ. ಆಗಲೂ ನಾನಿ ನನಗೆ ಸಿನಿಮಾಗಳಲ್ಲಿ ನಾಯಕಿ ನಂತರದ ಪಾತ್ರ ಕೊಡಿಸುವುದಾಗಿ ನಂಬಿಸಿ ನಾಲ್ಕು ವರ್ಷ ನನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು. ಆದರೆ ಅದು ಪ್ರೀತಿಯ ಸಂಬಂಧವಲ್ಲ. ಆದರೆ ನನಗೆ ಬೇಕಾದ್ದನ್ನು ಕೊಟ್ಟು ತನಗೆ ಬೇಕಾದ್ದನ್ನು ಪಡೆಯಲು ಮಾಡಿಕೊಂಡಿದ್ದ ಸಂಬಂಧ ಅಷ್ಟೆ. ಆಗ ನಾನಿ ಇನ್ನೂ ವಿವಾಹವಾಗಿರಲಿಲ್ಲ. ಆದರೆ ಆ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಆದರೂ ನನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು. ಏನೂ ಇಲ್ಲದೆ ಅವರೊಂದಿಗೆ ದೈಹಿಕ ಸಂಬಂಧ ಹೊಂದಲು ನಾನಿ ಸುರ ಸುಂದರನಲ್ಲ.’ಎಂದು ಶ್ರೀರೆಡ್ಡಿ ಹೇಳಿಕೊಂಡಿದ್ದಾರೆ.

ಒಟ್ಟಾರೆ ತಾನು, ನಾನಿ ಒಬ್ಬ ಕಾಮುಕ ಅನ್ನೋದನ್ನ ಹೇಳ್ತಿದ್ದೀನಿ ಅಂತಾ ಫೇಸ್​ಬುಕ್​ ಮೂಲಕ ಪೋಸ್ಟ್​  ಮಾಡಿದ್ದ ನಟಿ ಜಸ್ಟ್​ ಕ್ದಲೂ ಕೊಟ್ಟು ಸುಮ್ಮನಾಗಿದ್ದರು. ಸದ್ಯ ಟಿವಿ ಸಂದರ್ಶನ ಮೂಲಕ ಅವನ –ಅವಳ ನಡುವೆ ಇದ್ದ ದೈಹಿಸ ಸಂಬಂಶ ರಿವೀಲ್​ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/06/nani-sri-reddy.jpghttp://bp9news.com/wp-content/uploads/2018/06/nani-sri-reddy-150x150.jpgBP9 Bureauಸಿನಿಮಾ  ಸಿನಿಟಾಕ್ : ಟಾಲಿವುಡ್​ ಸಿನಿಮಾ ರಂಗದಲ್ಲಿ ಸಾಕಷ್ಟು  ಸ್ಟಾರ್​ ನಟರ ಬೆವರು ಇಳಿಸಿದ ನಟಿ ಅಂದ್ರೆ ಅದು ಶ್ರೀ ರೆಡ್ಡಿ. ಕಾಸ್ಟಿಂಗ್​ ಕೌಚ್​ ರಹಸ್ಯ ವನ್ನು  ಎಳೆಎಳೆಯಾಗಿ ಬಿಚ್ಚಿಡುತ್ತಾ ಸ್ಟಾರ್​ ನಟರ , ನಿರ್ದೇಶಕರ ಜಂಘಾ ಬಲವನ್ನೇ ಹುದುಗಿಸಿದ ನಟಿ ಶ್ರೀ ರೆಡ್ಡಿ ಇದೀಗ ಕಾಸ್ಟಿಂಗ್​ ಕೌಚ್​ನಲ್ಲಿನ ಒಂದು ಭಯಾನಕ ಸತ್ಯ ಬಿಚ್ಚಿಟ್ಟಿದ್ದಾರೆ.  ಕಾಸ್ಟಿಂಗ್​ ಕೌಚ್​  ವಿರುದ್ಧ  ಇಡೀ ಚಿತ್ರರಂಗದಲ್ಲಿ ಅರೆಬೆತ್ತಲೇ  ಪ್ರತಿಭಟನೆ ಮಾಡಿ ದೇಶವ್ಯಾಪಿ ಸುದ್ದಿಯಾಗಿದ್ದ ಶ್ರೀ...Kannada News Portal