ಬೆಂಗಳೂರು :  ತುಮಕೂರಿನ ಮಹತ್ಮಾಗಾಂಧಿ ಸ್ಟೇಡಿಯಂನಲ್ಲಿ ಶನಿವಾರ ಬಿಜೆಪಿ ಪರ ಪ್ರಧಾನಿ ಮೋದಿ ಬೃಹತ್​ ಸಮಾವೇಶದಲ್ಲಿ ಪ್ರಚಾರ ಭಾಷಣ ಮಾಡಿದರು. ಈ ವೇಳೆ ಕಾಂಗ್ರೆಸ್​ ಮತ್ತು ಜೆಡಿಎಸ್​ ವಿರುದ್ಧ ನಮೋ ತೀವ್ರ ಟೀಕಾಪ್ರಹಾರ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತು ಮುಂದಿಟ್ಟ ಪ್ರಧಾನಿ ಮೋದಿ, ನಾನು ಅನೇಕ ಸಲ ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದೇನೆ. ತುಮಕೂರಿಗೂ ಭೇಟಿ ನೀಡುತ್ತಲೇ ಬಂದಿದ್ದೇನೆ. ಆದರೆ ಈ ಬಾರಿ ಈ ರಾಜ್ಯದಲ್ಲಿ ಸಿಗುತ್ತಿರುವ ಬೆಂಬಲ ನಾನು ಈ ಹಿಂದೇ ಎಂದೂ ಕಂಡಿರಲಿಲ್ಲ. ಈ ಬಾರಿ ಎಲ್ಲೆಡೆ ಬಿಜೆಪಿಗೆ ಅಮೋಘವಾದ ಬೆಂಬಲ ದೊರೆಯುತ್ತಿದೆ. ಹಾಗೆ ತುಮಕೂರಿನಲ್ಲಿಯೂ ಒಳ್ಳೆಯ ವಾತಾವರಣ ಕಾಣುತ್ತಿದ್ದು, ನಿಮ್ಮ ಉಮ್ಮಸ್ಸು ನನಗೆ ಮತ್ತಷ್ಟು ಶಕ್ತಿ ತುಂಬಿದೆ ಎಂದು ನೆರೆದಿದ್ದ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ತಿಳಿಸಿದರು.

ಈ ತುಮಕೂರು ಪುಣ್ಯ ಭೂಮಿ. ಈ ಮಣ್ಣಿನಲ್ಲಿ ಮಹಾತ್ಮರ, ಹೆಮ್ಮೆಯ ಪುತ್ರರ ಜನನವಾಗಿದೆ. ವಿಜ್ಞಾನಿ ಡಾ. ರಾಜಾ ರಾಮಣ್ಣ ಇಲ್ಲಿಯವರು, ಕಲಾಸಾಮ್ರಾಟರಾದ ಗುಬ್ಬಿ ವೀರಣ್ಣ, ಜಕ್ಕಣಚಾರಿ ಇದೇ ಮಣ್ಣಿನವರು ಎಂದೇಳಲು ನನಗೆ ಹೆಮ್ಮಯಾಗುತ್ತಿದೆ.

ನಾನು ಈ ಭಾಗಕ್ಕೆ ಬಂದಾಗಲೆಲ್ಲ ಸುಕ್ಷೇತ್ರವಾದ ಸಿದ್ಧಗಂಗಾ ಮಠಕ್ಕೆ ಭೇಟಿನೀಡಿದ್ದೇನೆ. ದೇಶದ ನಡದಾಡುವ ದೇವರು ಶ್ರೀ ಶಿವಕುಮಾರಸ್ವಾಮಿಗಳ ಆಶಿರ್ವಾದ ಪಡೆದಿದ್ದೇನೆ. ಇಲ್ಲಿನ ಮಠ ಮಾನ್ಯಗಳು ಕೇವಲ ಧಾರ್ಮಿಕ ವಿಚಾರದಲ್ಲಿ ಮಾತ್ರ ತಲ್ಲೀನವಾಗದೇ ಸಾಮಾಜಿಕವಾಗಿಯು ಸಮಾಜದ ಏಳಿಗೆಗೆ ದುಡಿಯುತ್ತಿವೆ. ಸಿದ್ಧಗಂಗಾ ಮಠ ತ್ರಿವಿಧ ದಾಸೋಹ ನಡೆಸುತ್ತಿದ್ದು, ವಿಶ್ವಕ್ಕೆ ಮಾದರಿಯ ಕ್ಷೇತ್ರವಾಗಿ ಮಠವಾಗಿ ಮಿನುಗುತ್ತಿದೆ ಎಂದು ಶ್ಲಾಘಿಸಿದ ಅವರು, ಯಾವ ರೀತಿ ಸಮಾಜವನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಹೇಗೆ ಮೇಲೆತ್ತ ಬೇಕು ಎಂಬುದನ್ನು ಇಲ್ಲಿನ ಮಠ ಮಂದಿರಗಳು ತಿಳಿದಿವೆ ಎಂದು ಅಭಿಪ್ರಾಯ ವ್ಯಕ್ತಪಡಿದರು.

ಇನ್ನು ಭಾರತೀಯ ಜನಸಂಘದ ಕಾಲದಿಂದಲೂ , ನಂತರ ಬಿಜೆಪಿ ಹುಟ್ಟಿದಾಗಲಿಂದಲೂ ಈ ಪ್ರಾಂತ್ಯದ ನಮ್ಮ ನೇತಾರರು , ನಾಯಕರು ಮುಖಂಡರುಗಳಾದ ದಿವಂಗತ ಸಂಘಟಕರಾದಂತಹ ಮಲ್ಲಿಕಾರ್ಜುನಯ್ಯ, ಜೆ . ಎಂ ರಾಜಾಚಾರ್​,​ ಬೋರಪ್ಪ ಅವರುಗಳನ್ನು ಸ್ಮರಿಸಿದರು.

ನಂತರ ಕಾಂಗ್ರೆಸ್ಸಿಗರ ಮೇಲೆ ಹರಿಹಾಯಲು ಪ್ರಾರಂಭಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ಸ್​ ಪಕ್ಷದ ಬಗ್ಗೆ ತಿಳಿಯ ಬೇಕು ಅಂದ್ರೆ ಬಡತನ, ಬಡತನ, ಬಡತನ, ಬಡತನ ಎಂದು ಜಪಿಸುತ್ತಲೇ ಚುನಾವಣೆಯನ್ನು ಗೆಲ್ಲುತ್ತಿತ್ತು. ಆದರೆ ಗೆದ್ದನಂತರ ನಿಮ್ಮ ಕೈಗೆ ಸಿಗದಂತೆ ಮಾಯವಾಗಿತ್ತು.

ಆದರೆ ಯಾವಾಗ ಭಾರತೀಯ ಜನತಾ ಪಕ್ಷದಿಂದ ಓರ್ವ ಸಾಮಾನ್ಯ ವಕ್ತಿಯಾಗಿದ್ದ, ಟೀ ಮಾರುತ್ತಿದ್ದ, ಬಡವನನ್ನು ಮುಖ್ಯಮಂತ್ರಿ ಮಾಡಿತೊ, ನಂತರ ಇದೀಗ ನಿಮ್ಮ ಆಶಿರ್ವಾದದಿಂದ ಪ್ರಧಾನಿ ಮಾಡಿದ್ರೋ ಆಗಿನಿಂದ ಬಡತನದ ಬಗ್ಗೆ ಮಾತನಾಡುವುದನ್ನು ಕಾಂಗ್ರೆಸ್​ ನಿಲ್ಲಿಸಿದ್ದಾರೆ. ಏಕೆ ಅಂದ್ರೆ ಅವನಿಗೆ ಲೆಕ್ಕ ಗೊತ್ತಿದೆ. ಮೋಸ ಮಾಡಲು ಆಗಲ್ಲ. ಈಗ ರಾಷ್ಟ್ರದ ಖಜಾನೆಯಿಂದ ಸೋರಿಕೆಯಾಗುತ್ತಿದ್ದ ಹಣ ಸೋರಿಕೆಯಾಗುತ್ತಿಲ್ಲ. ಈಗ ಭಾರತ ಬಡರಾಷ್ಟ್ರ ಅಲ್ಲ… ಎಂದು ತಿಳಿದಿದೆ. ಹಾಗೆ ನಾವು ಅಧಿಕಾರಕ್ಕೆ ಬಂದ ದಿನದಿಂದಲೇ ಕೆಲಸ ಮಾಡಿದ್ದೇವೆ.

ಅದಕ್ಕಾಗಿ ಈಗ ಕಾಂಗ್ರೆಸ್ನ ತನ್ನ ರಾಗವನ್ನು ಬದಲಿಸಿ. ರೈತರ ಬಗ್ಗೆ ಮಾತನಾಡಲು ಆರಂಭಿಸಿದೆ. ರೈತರ ಮೇಲೆ ದಿಢೀರ್ ಕಾಳಜಿ ವ್ಯಕ್ತಪಡಿಸುತ್ತಿದೆ. ಅದೂ ದೆಹಲಿಯವರೂ ಮತ್ತು ಕರ್ನಾಟಕದವರೂ ಸೇರಿ… ಇಬ್ಬರೂ ​ ರೈತರ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ಆದರೆ ಅವರಿಗೆ  ಕಡಲೇಕಾಯಿ ಬೀಜ ನೆಲದ ಮೇಲೆ ಬೆಳೆಯುತ್ತೋ ಇಲ್ಲ ಭೂಮಿಯ ಕೆಳಗೆ ಬೆಳೆಯುತ್ತೋ ಗೊತ್ತಿಲ್ಲ. ಆದರೂ ರೈತರ ಬಗ್ಗೆ ಮಾತನಾಡುತ್ತಿದ್ದಾರೆ. 70 ವರ್ಷಗಳಿಂದ ಏಕೆ ರೈತರ ಬಗ್ಗೆ ಮಾತನಾಡಿಲ್ಲ. ಏಕೆ ನಿಮ್ಮಕೊಡುಗೆ ರೈತರ ವಿಚಾರದಲ್ಲಿ ಶೂನ್ಯವಿದೆ ಎಂದು ಪ್ರಶ್ನಿಸಿದರು.

ಇವತ್ತಿನ ರೈತರ ಕಷ್ಟಕ್ಕೆ ಕಾಂಗ್ರೆಸ್​ ಸರ್ಕಾರದ ನಿರ್ಧಾರಗಳು ಮತ್ತು ಆಡಳಿತವೇ ಕಾರಣ. ಅವರ ಪಾಪದ ಕೆಲಸದ ಪ್ರತಿಫಲವನ್ನು ಇಂದು ರೈತರು ಅನುಭವಿಸುತ್ತಿದ್ದಾರೆ. ಈಗ ನಾವು ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ಸಾಧ್ಯವಾದಷ್ಟು ರೈತರ ಕಷ್ಟ ಕಡಿಮೆ ಮಾಡಲು ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ ಎಂದ ನಮೋ, ಕಾಂಗ್ರೆಸ್ ನಡೆಸಿರುವ 50 ವರ್ಷಗಳ ಆಡಳಿತ ಏನು ಕಡಿಮೆ ಸಮಯದ ಆಡಳಿತ ಅಲ್ಲ. ನಾವು ಬಂದು 50 ತಿಂಗಳುಗಳಾಗಿವೆ. ಆದಷ್ಟು ಅಭಿವೃದ್ಧಿ ಪಡಿಸುತ್ತಿದ್ದೇವೆ. ನಿಮ್ಮ ತುಮಕೂರಿನ ಪರಿಸ್ಥಿತಿಯನ್ನೇ ತೆಗೆದು ಕೊಳ್ಳಿ, ಹಿಂದಿನ ಕಾಂಗ್ರೆಸ್ ಸರ್ಕಾರಗಳ ಕೊಡುಗೆ ಏನಿದೆ ಎಂದು ಪ್ರಶ್ನಿಸಿದ ಅವರು, ಕಡೆಯ ಪಕ್ಷ ದುಡಿಯುವ ರೈತರ ಜಮೀನಿಗೆ ನೀರನ್ನೂ ಸಹ ಕೊಡಲು ಸಾಧ್ಯವಾಗಿಲ್ಲ ಅವರ ಕೈನಿಂದ, ನಿಮಗೆ ನೀರು ಕೊಟ್ಟಿದ್ದರೆ ಚಿನ್ನ ಬೆಳೆಯುತ್ತಿದ್ದಿರಿ. ಆದರೆ ಅವರಿಗೆ ಅದು ಬೇಕಿರಲಿಲ್ಲ. ಅವರಗಿ ಬೇಕಿರುವುದು ಕೇವಲ ದುಡ್ಡು ಮಾಡುವುದು ಅಷ್ಟೆ ಎಂದು ಕಾಂಗ್ರೆಸ್​ ವಿರುದ್ಧ ವೋತಾ ಪ್ರೇತವಾಗಿ ಕ್ಲಾಸ್​ ತೆಗೆದು ಕೊಂಡರು.

ನಂತರ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ನರೇಂದ್ರ ಮೋದಿ ಪ್ರಧಾನಿಯಾದರೇ, ನಾನು ಆತ್ಮಹತ್ಯೆ ಮಾಡುತ್ತೇನೆ ಎಂದು ಮಾನ್ಯ ದೇವೇಗೌಡರು ಪ್ರಮಾಣ ಮಾಡಿದ್ದರು. ನಮ್ಮ ಮತ್ತು ಅವರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ನಾನು ಅದೇ ಚುನಾವಣಾ ಪ್ರಚಾರ ವೇದಿಕೆಗಳಲ್ಲಿಯೇ ಅದಕ್ಕೆ ಉತ್ತರ ಕೊಟ್ಟೆ. ಸನ್ಮಾನ್ಯ ಮಾಜಿ ಪ್ರಧಾನಿ ದೇವೇಗೌಡರ ಜೀ ನೀವು ದೇಶ ಕಂಡ ಶ್ರೇಷ್ಠ ರಾಜಕಾರಣಿ. ಚುನಾವಣೆ ಅಂದ ಮೇಲೆ ನೀವು ನಮ್ಮ ಮೇಲೆ ನಾವು ನಿಮ್ಮ ಮೇಲೆ ಟೀಕೆ ಮಾಡುವುದ ಆರೋಪ ಮಾಡುವುದು ಸಹಜ.  ಅದಕ್ಕಾಗಿ ತಾವು ಸಾಯುವ ಮಾತುಗಳನ್ನು ಏಕೆ ಆಡುತ್ತೀರಿ..? ನೀವು ಈ ರೀತಿ ಸಾಯುವ ಮಾತನಾಡಬಾರದು. ನೀವು ಇನ್ನೂ 100 ವರ್ಷ ಬದುಕ ಬೇಕು. ನಿಮ್ಮಿಂದ ಸಮಾಜದ ಜನರಿಗೆ  ನಿಮ್ಮದೇ ಕೊಡುಗೆಗಳನ್ನು ನೀಡುವ ಅವಶ್ಯಕತೆ ಇದೆ ಎಂದು ಹೇಳಿದೆ.

ಆದರೆ ಕಾಂಗ್ರೆಸ್​ ಸ್ಥಿತಿ ಬೇರೆ. ಬರೀ ಸುಳ್ಳು ಹೇಳಿ ಕೊಂಡು ರಾಜಕೀಯ ಮಾಡುತ್ತಿದೆ. ಬಿಜೆಪಿ ಮತ್ತು ಜೆಡಿಎಸ್​ ಒಳ ಒಪ್ಪಂದ ಮಾಡಿಕೊಂಡಿದೆ. ಜೆಡಿಎಸ್​ ಬಿಜೆಪಿಯ ಬಿ ಟೀಂ ಎಂದು ಆರೋಪಿಸುತ್ತಿದೆ. ನಾನು ಕಾಂಗ್ರೆಸ್ಸಿಗರಿಗೆ ನಾನು ನೇರ ಕೇಳುತ್ತೇನೆ, ಕಾಂಗ್ರೆಸ್​ ಮತ್ತು ಜೆಡಿಎಸ್​ ನಡುವಿನ ಒಳ ಒಪ್ಪಂದ ಇದೆ. . ಬೆಂಗಳೂರಿನಲ್ಲಿ ಮಹಾನಗರ ಪಾಲಿಕೆಯಲ್ಲಿ ಸಮ್ಮಿಶ್ರ ಆಡಳಿತ ನಡೆಸುತ್ತಿದೆ. ತುಮಕೂರಿನಲ್ಲಿಯೂ ಒಳ ಒಪ್ಪಂದದ ಮೂಲಕ ಕಣಕ್ಕಿಳಿಯುತ್ತಿದೆ. ಕಾಂಗ್ರೆಸ್​ ಮತ್ತು ಜೆಡಿಎಸ್​ ಈ ರೀತಿ ಒಳ ಒಪ್ಪಂದದ ಮೂಲಕ ನಾಟಕ ಆಡುತ್ತಿದೆ ಇದನ್ನು ನೀವು ನಿಲ್ಲಿಸ ಬೇಕು ಎಂದು ಕಿಡಿ ಕಾರಿದರು.

ಅಲ್ಲದೇ ಎಲ್ಲಾ ಸಮೀಕ್ಷೆಗಳಲ್ಲಿಯೂ ಜೆಡಿಎಸ್​ 3 ಸ್ಥಾನ ಪಡೆಯುತ್ತದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಸರ್ಕಾರ ರಚಿಸುವ ಶಕ್ತಿ ಇರುವುದು ಈ ಬಾರಿ ಕೇವಲ ಬಿಜೆಪಿಗೆ ಮಾತ್ರ. ಆದ್ದರಿಂದ ಜೆಡಿಎಸ್​ಗೆ ಮನ ನೀಡದೇ ಬಿಜೆಪಿಗೆ ಮತ ನೀಡಿ. ಏಕೆಂದ್ರೆ ಕಾಂಗ್ರೆಸ್​ ಅನ್ನು ಎದರಿಸುವ ಶಕ್ತಿ ಇರುವುದು ಬಿಜೆಪಿಗೆ ಮಾತ್ರ ಇದೆ. ಆದ್ದರಿಂದ ಸರ್ಕಾರ ರಚಿಸುವ ಶಕ್ತಿ ಇರುವುದು ಈ ಬಾರಿ ಕೇವಲ ಬಿಜೆಪಿಗೆ ಮಾತ್ರ ಎಂದು ವಿಶ್ವಾಸ ವ್ಯಕ್ತಪಡಿದರು.

ಮತ್ತೆ ಕಾಂಗ್ರೆಸ್​ ಕಡೆ ಮುಖ ಮಾಡಿದ ಮೋದಿಯವರು ಕಾಂಗ್ರೆಸ್​ ನವರೇ ಈಗ ಹೇಳಿ ಭದ್ರ ಮೇಲ್ದಂಡೆ ವಿಚಾರದಲ್ಲಿ ನಿಮ್ಮ ಕೊಡುಗೆ ಏನಿದೆ ?. ಹೇಮಾವತಿ ಡ್ಯಾಮ್​ನ ನೀರು ಏಕೆ ತುಮಕೂರಿನ ರೈತರಿಗೆ ಇನ್ನೂ ಸಿಕ್ಕಿಲ್ಲ ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲಾ ಎತ್ತಿನ ಹೊಳೆ ಯೋಜನೆಯಿಂದ ತುಮಕೂರಿನ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ನೀಡಬೇಕಿತ್ತು. ಆದರೆ ಆ ಯೋಜನೆ ಇನ್ನೂ ನೇತಾಡುತ್ತಲೇ ಇದೆ. ಇದೇ ಏನು ನಿಮ್ಮ ರೈತರ ಪರ ಕಾಳಜಿ ಎಂದು ಪ್ರಶ್ನಿಸಿದರು.

ನಾವು ಸುಮ್ಮನೆ ಕುಳಿತಿಲ್ಲ :

ಭಾಷಣದಲ್ಲಿ ಮೋದಿ, ನಾವು ಸುಮ್ಮನೆ ಕುಳಿತಿಲ್ಲ 33- 35 ವರ್ಷದಿಂದ ನಿಂತಿದ್ದ ಯೋಜನೆಗಳು 30 ತಿಂಗಳಿನಲ್ಲಿ ಆ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ, ಅದರಲ್ಲಿ ಕರ್ನಾಟಕದಲ್ಲಿಯೂ 5 ಯೋಜನೆಗಳು ನಡೆಯುತ್ತಿವೆ ಎಂದೇಳಲು ಹರ್ಷ ಪಡುತ್ತೇನೆ ಎಂದರು. ನೀರಿನ ಉಳಿತಾಯ ಮತ್ತು ಸಂಪನ್ಮೂಲಗಳ ಬಳಕೆ ಸುಸ್ಥಿರವಾಗಿ ಮಾಡಲು ಸಾಕಷ್ಟು ಸಬ್​​ಸಿಡಿ ನೀಡಿದ್ದೇವೆ. ಅದರ ಫಲವನ್ನು ಎಲ್ಲಾ ರೈತರು ಸದುಪಯೋಗ ಮಾಡಿಕೊಳ್ಳ ಬೇಕು ಎಂದು ಕರೆ ನೀಡಿದರು.

ಇನ್ನು ಮಾಜಿ ಪ್ರಾಧಾನಿ ಅಟಲ್ ಬಿಹಾರಿ​ ವಾಜಪೇಯಿ ಅವರ ಕನಸಿನ ಹೇಮಾವತಿ ಮತ್ತು ನೇತ್ರ ನದಿ ನೀರು ಜೋಡಣೆ ಮಾಡೇ ಮಾಡುತ್ತೇವೆ. ಅದರಿಂದ ತುಮಕೂರಿನ ಸುತ್ತಮುತ್ತಲಿನ 8 ಜಿಲ್ಲೆಗಳಿಗೆ ನೀರಿನ ಪೋರೈಕೆ ಮಾಡಿ , ನಮ್ಮ ತಾಕತ್ತನ್ನು ಪ್ರದರ್ಶಿಸುತ್ತೇವೆ. ಇಲ್ಲಿ ತೆಂಗಿನಕಾಯಿ ಬೆಳೆ ಪ್ರಸಿದ್ಧ. ಪ್ರಕೃತಿಯ ಮುಂದೆ ನಾವು ಏನು ಅಲ್ಲ. ಆದರೆ ಸರ್ಕಾರ ರೈತರಿಗೆ ತೊಂದರೆ ಆದ ಸಂದರ್ಭದಲ್ಲಿ ರೈತರ ಪರ ನಿಲ್ಲ ಬೇಕು. ಆದರೆ ನಿದ್ರಾಮಯ್ಯ ಸರ್ಕಾರ ಏನು ಮಾಡಿದೆ. ರೈತರು ಯಾವುದೇ ಸಂಕಷ್ಟದಲ್ಲಿ ಇದ್ದರೂ ಸಿದ್ದು ಸರ್ಕಾರದ ಸಚಿವರ ಗಲ್ಲಾಪೆಟ್ಟಿಗೆ ಮಾತ್ರ ತುಂಬಿಸಿ ಕೊಳ್ಳುತ್ತಿದ್ದಾರೆ. ನಾನು ಹೇಳುತ್ತೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ತೆಂಗು ರಫ್ತಿನಲ್ಲಿ  ಶೇ 60 ರಷ್ಟು ಹೆಚ್ಚು ಮಾಡಲು ನಾವು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದರು.

ತುಮಕೂರಿಗೆ ನಮ್ಮ ಸರ್ಕಾರ ಕೊಡುಗೆ :

ಹಿಂದಿನ ಸರ್ಕಾರಗಳು ಇಲ್ಲಿನ ಭಾಗದ ರೈತರ ಜೊತೆ ಎಂದೂ ನಿಂತಿಲ್ಲ. ನಿಂತಿದ್ದರೇ ಖಂಡಿತ ಇವತ್ತು ನಿಮ್ಮ ಸ್ಥಿತಿ ಹೀಗೆ ಇರುತ್ತಿರಲಿಲ್ಲ. ನಾವು ಆಹಾರ ಸಂಗ್ರಹ ಮತ್ತು ಸಂಶೋದನೆ ಘಟಕ ಪ್ರಾರಂಭಿಸಿ 6000 ಯುವಕರಿಗೆ ಉದ್ಯೋಗ ನೀಡಿದ್ದೇವೆ. ಈ ರೀತಿ ಸಣ್ಣ ಪ್ರಮಾಣದಲ್ಲಿಯೇ ಯುವಕರಿಗೆ ಕೆಲಸ ನೀಡುವಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ.

ಕರೆಂಟ್​ ಪೂರೈಕೆಯಲ್ಲಿಯೂ ಸರ್ಕಾರದ ಕೊಡುಗೆ ಏನು ಇಲ್ಲ. ಇಲ್ಲಿನ ರೈತರು ಜಮೀನಿಗೆ ನೀರು ಅರಿಸಲು ಕರೆಂಟ್​ ಇಲ್ಲದೆ ಕಷ್ಟ ಪಡುತ್ತಿದ್ದಾರೆ. ಇಲ್ಲನ ರೈತರು ಎಷ್ಟು ಶ್ರಮಿಕರೂ ಅಷ್ಟೇ ಇಲ್ಲಿನ  ಯುವ ಜನ ಸ್ಮಾರ್ಟ್​​ ಇದ್ದಾರೆ. ಅವರಿಗೆ ಕೌಶಲ್ಯ ಅಭಿವೃದ್ಧಿ ಶಿಕ್ಷಣ ನೀಡಿದ್ರೆ ಸ್ಮಾರ್ಟ್​ ಸಿಟಿ ಎಂದೋ ಆಗುತ್ತಿತ್ತು. ಆದರೆ ಕಾಂಗ್ರೆಸ್​ ಈ ಕೆಲಸ ಮಾಡಲಿಲ್ಲ.

ನಾವು ಕರ್ನಾಟಕಲ್ಲಿ 7 ಸ್ಮಾರ್ಟ್​ ಸಿಟಿ ನಿರ್ಮಾಣ ಮಾಡುತ್ತಿದ್ದೇವೆ. ಅದರಲ್ಲಿ ತುಮಕೂರು ಕೂಡ ಒಂದು. ಇಲ್ಲಿಗೆ 900 ಸಾವಿರ ಕೋಟಿ ನೀಡಿದ್ದೇವೆ. ಇಲ್ಲಿನ ಸರ್ಕಾರ 12 ಸಾವಿರ ಕೋಟಿ ಮಾತ್ರ ಉಪಯೋಗ ಮಾಡಿದೆ ಅಷ್ಟೇ. ಇದು ಈ ಸರ್ಕಾರ ಯೋಗ್ಯತೆ.

ತುಮಕೂರಿನಲ್ಲಿ HAL  ಯುನಿಟ್ ಕೂಡ ​ ನಿರ್ಮಾಣ ಮಾಡಿದ್ದೇವೆ ಇದನ್ನು ನೀವು ಕಂಡಿದ್ದೀರಿ. ನಾವು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವತ್ತ ಮುನ್ನುಗ್ಗುತ್ತಿದ್ದೇವೆ. ಈ ಹಿಂದಿನ ಸರ್ಕಾರಗಳ ಸಮಯದಲ್ಲಿ ವ್ಯಕ್ತಿಯೇ ಇಲ್ಲದೇ ಒಂದು ಹೆಣ್ಣುಮಗಳು  ಹುಟ್ಟಿ, ಆಕೆ ಓದಿ, ಮದುವೆ ಆಗಿ, ಗಂಡನನ್ನು ಕಳೆದು ವಿಧವೆಯಾಗಿ, ಮಸಾಸನವನ್ನು ಪಡೆಯುತ್ತಿದ್ದಳು. ಆ ರೀತಿಯಾದ ವಾತಾವರಣ ಸರ್ಕಾರಿ ಕಚೇರಿಗಳಲ್ಲಿ ನಿರ್ಮಾವಾಗಿತ್ತು.

ನಮ್ಮ ಸರ್ಕಾರ ಬಂದ ಮೇಲೆ ಆಧಾರ್​ ಕಾರ್ಡ್​ ಲಿಂಕ್​ ಮಾಡಿಸುವ ಮೂಲಕ ಈ ರೀತಿ ಕಳ್ಳ ಲೆಕ್ಕಾ, ಮತ್ತು ಸಂಪನ್ಮೂಲದ ಸೋರಿಕೆ ಆಗದಂತೆ ಮಾಡಿ, ಸುಮಾರು 80 ಸಾವಿರ ಕೋಟಿ ಹಣವನ್ನು ಉಳಿತಾಯ ಮಾಡಿದೆ. ಇದು ಬಿಜೆಪಿ ಸರ್ಕಾರದ ಪಾರದರ್ಶಕ ಮತ್ತು ಚಾಕಚಕ್ಯತೆಯ ಕೆಲಸ ಎಂದರು.…

ನಾನು ಇಷ್ಟನ್ನು ಮಾತ್ರ ಹೇಳುತ್ತೇನೆ. ನಿಮ್ಮ ತುಮಕೂರಿನ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ , ರೈತ ನಾಯಕ ಯಡಿಯೂರಪ್ಪ ಅವರನ್ನು ಮುಖ್ಯ ಮಂತ್ರಿ ಮಾಡಿ ರೈತರ ಉಜ್ವಲ ಭವಿಷ್ಯವನ್ನು ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಿ.

ಈ ರಾಜ್ಯವನ್ನು ಸ್ವಚ್ಚ ಸುಂದರ ಸುರಕ್ಷಿತ ರಾಜ್ಯವನ್ನಾಗಿ ಮಾಡಲು ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ ಎಂದು ಘೋಷಣೆಯನ್ನು ಕೂಗಿ ನೆರೆದಿದ್ದ ಕಾರ್ಯಕರ್ತರಲ್ಲಿಯೂ ಹುಮ್ಮಸ್ಸು ಹೆಚ್ಚಿಸಿ ಘೋಷಣೆಯ ಗುಡುಗನ್ನೇ ನಿರ್ಮಾಣ ಮಾಡಿ ತಮ್ಮ ಭಾಷಣಕ್ಕೆ ವಿರಾಮ ಹೇಳಿ ಅಲ್ಲಿಂದ ತೆರಳಿದರು.

Please follow and like us:
0
http://bp9news.com/wp-content/uploads/2018/05/WhatsApp-Image-2018-05-05-at-1.06.27-PM-1.jpeghttp://bp9news.com/wp-content/uploads/2018/05/WhatsApp-Image-2018-05-05-at-1.06.27-PM-1-150x150.jpegPolitical Bureauಅಂಕಣತುಮಕೂರುಪ್ರಮುಖರಾಜಕೀಯNarendra Modi campaigns in Kalatri Nomo criticism against Congressಬೆಂಗಳೂರು :  ತುಮಕೂರಿನ ಮಹತ್ಮಾಗಾಂಧಿ ಸ್ಟೇಡಿಯಂನಲ್ಲಿ ಶನಿವಾರ ಬಿಜೆಪಿ ಪರ ಪ್ರಧಾನಿ ಮೋದಿ ಬೃಹತ್​ ಸಮಾವೇಶದಲ್ಲಿ ಪ್ರಚಾರ ಭಾಷಣ ಮಾಡಿದರು. ಈ ವೇಳೆ ಕಾಂಗ್ರೆಸ್​ ಮತ್ತು ಜೆಡಿಎಸ್​ ವಿರುದ್ಧ ನಮೋ ತೀವ್ರ ಟೀಕಾಪ್ರಹಾರ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತು ಮುಂದಿಟ್ಟ ಪ್ರಧಾನಿ ಮೋದಿ, ನಾನು ಅನೇಕ ಸಲ ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದೇನೆ. ತುಮಕೂರಿಗೂ ಭೇಟಿ ನೀಡುತ್ತಲೇ ಬಂದಿದ್ದೇನೆ. ಆದರೆ ಈ ಬಾರಿ ಈ ರಾಜ್ಯದಲ್ಲಿ ಸಿಗುತ್ತಿರುವ ಬೆಂಬಲ ನಾನು ಈ ಹಿಂದೇ...Kannada News Portal