ಬೆಂಗಳೂರು : ಪ್ರಧಾನಿ ಮೋದಿ ಕೆಂಪು ಕೋಟೆ ಮೇಲೆ ನಿಂತು ಕಸಗೂಡಿಸುತ್ತಿದ್ದಾರೆ, ಶೌಚಾಲಯದ ಬಗ್ಗೆ ಮಾತನಾಡುತ್ತಾರೆ ಎಂದು ಅಗೌರವವಾಗಿ ಮಾತನಾಡುತ್ತೀರಿ.., ನಾನು ಹೇಳುತ್ತೇನೆ… ನನಗೆ ಹೆಸರಿಗಾಗಿ ಕೆಲಸ ಮಾಡಬೇಕು. ನೀವು ನನನ್ನು ನೋಡಿ ನಗಾಡಿ, ಜನ ನಿಮ್ಮನ್ನು  ಚುನಾವಣೆಯಲ್ಲಿ ಅಳಿಸುತ್ತಾರೆ ಎಂದರು. ರಾತ್ರಿಯಾಗುವವರೆಗೂ ನನ್ನ ಅಕ್ಕ ತಂಗಿಯರು ಕಾಯುವ ವಾತಾವರಣ ಇದೆ. ಅದನ್ನು ನಾನು ತೆಗೆದು ಹಾಕೇ ಹಾಕುತ್ತೇನೆ. ಈ ಯೋಜನೆ ನಿಮಗೆ ತಮಾಷೆ ಆದ್ರೆ, ಅದರ ಕಷ್ಟ ಅನುಭವಿಸಿದವರಿಗೆ ಮಾತ್ರ ಗೊತ್ತು ಎಂದು ಶಿವಮೊಗ್ಗದ ಬೃಹತ್​ ಬಿಜೆಪಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ಸಿಗರಿಗೆ ಎಚ್ಚರಿಕೆ ನಿಡಿದ್ದಾರೆ.

ಶನಿವಾರ ಸಂಜೆ ಆಗಮಿಸಿದ ಮೋದಿ, ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ನಮಸ್ಕಾರ…, ಕುವೆಂಪು, ಗೋಪಾಲಗೌಡರಂತಹ ಮಹನೀಯರು ಇಲ್ಲಿ ಹುಟ್ಟಿದ್ದಾರೆ ಅವರಿಗೆ ನಮಸ್ಕಾರ. ಹಾಗೂ ಮಾಜಿ ರೈತ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ನನ್ನ ಸ್ನೇಹಿತರಾದ ಈಶ್ವರಪ್ಪನವರೇ ಮತ್ತು ವೇದಿಕೆ ಮೇಲಿನ ಎಲ್ಲಾ ಅಭ್ಯರ್ಥಿಗಳಾದ ನಿಮಗೆಲ್ಲಾ ನನ್ನ ನಮಸ್ಕಾರ ಎಂದರು.

ನನಗೂ ಶಿವಮೊಗ್ಗಾಕ್ಕೂ ಒಂದು ಅವಿನಾಭಾವ ಸಂಬಂಧ ಇದೆ. ಕಾಶ್ಮೀರದ ತ್ರಿರಂಗ ಯಾತ್ರೆ ಕಾರ್ಯಕ್ರಮಕ್ಕಾಗಿ ನಾನು ಇಲ್ಲಿಗೆ ಬಂದಿದ್ದೆ. ಆಗ ನಾನು ಇಲ್ಲಿ ಗುಜರಾತಿ ಭಾಷೆಯಲ್ಲಿಯೇ ಮಾತನಾಡಿದ್ದೇ ಆದರೂ ತಾವು ನನಗೆ ಆಗ ಅಭೂತ ಪೂರ್ವ ಪ್ರೀತಿ ಕೊಟ್ಟಿದ್ದೀರಿ, ನಾನು ಅದಕ್ಕೆ ಯಾವಾಗಲೂ ಚಿರಋಣಿ ಎಂದು ಹಿಂದಿನ ದಿನಗಳನ್ನು ನೆನದರು.

ಬಿಜೆಪಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸರ್ವರಿಗೂ ಒಳ್ಳೆಯದಾಗ ಬೇಕು ಎಂಬ ಅಜೆಂಡಾದಲ್ಲಿ ಕೆಲಸ ಮಾಡುತ್ತಿದ್ದೇವೆ. ಕುವೆಂಪು ಅವರು ಹೇಳಿದ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಎಂಬ ನಾಲ್ನುಡಿಯನ್ನು ಚಾಲ್ತಿಗೆ ತರುತ್ತಿದ್ದೇವೆ. ಆದರೆ ಕಾಂಗ್ರೆಸ್ ಕಾಲದಿಂದಲೂ ಬ್ರಿಟೀಷರಂತೆಯೇ ಒಡೆದು ಹಾಳುವ ನೀತಿಯನ್ನು ಎರವಲು ಪಡೆದು ಕೊಂಡು ಈಗಲೂ ಅದೇ ಕೆಲಸ ಮಾಡುತ್ತಿದೆ. ಜಾತಿಯನ್ನು ಒಡೆದು , ಧರ್ಮವನ್ನು ಹೊಡೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ನಂತರ ಹಿಂದೂ ಕಾರ್ಯಕರ್ತರ ಮೇಲೆ ಮಾತ್ರ ಈ ಕಾಂಗ್ರೆಸ್ ಸರ್ಕಾರ ಕೇಸು ದಾಖಲಿಸುತ್ತಿದೆ. ಆದರೆ ಅದೇ ಅನ್ಯ ಕೋಮಿಗೆ ಸೇರಿದ ದುಷ್ಟ ಸಂಘಟನೆಗಳ ಕಾರ್ಯಕರ್ತರ ಮೇಲಿನ ಕೇಸ್ ಅನ್ನು ವಜಾ ಮಾಡಿದೆ. ಇದು ಯಾವ ಸೀಮೆಯ ನ್ಯಾಯ ಸ್ವಾಮಿ. ಕರ್ನಾಟಕದಲ್ಲಿ ನಮ್ಮ ಕಾರ್ಯಕರ್ತರು ಸಾಲು ಸಾಲಾಗಿ ಹೆಣವಾಗುತ್ತಿದ್ದಾರೆ. ಅವರನ್ನು ಟಾರ್ಗೆ ಮಾಡಿ ಕೊಲ್ಲಲಾಗುತ್ತಿದೆ. ಅವರ ಸಾವಿನ ವಿಚಾರವಾಗಿ ನೀವು ಮೌನವಾಗಿಯೇ ಇದ್ದೀರಲ್ಲಾ ಇದಕ್ಕೆ ನೀವು ಉತ್ತರ ಕೊಡಲೇ ಬೇಕು. ಹೇಳಿ ಇದಕ್ಕೆಲ್ಲಾ ಯಾರು ಕಾರಣ ಎಂದು ಪ್ರಶ್ನಿಸಿದರು.

ನಮ್ಮ ಶಿವಮೊಗ್ಗದ ಜೋಗ್ ಫಾಲ್ಸ್ ವಿಶ್ವಪ್ರಸಿದ್ಧವಾದ ತಾಣ ಮತ್ತು ಪವರ್ ಪಾಯಿಂಟ್ ಎಂಬುದು ಎಲ್ಲರಿಗೂ ಗೊತ್ತು. ಆದರೆ ಮುಖ್ಯಮಂತ್ರಿಗೂ ಜೋಗ್ ಫಾಲ್ಸ್ ವಾಚು ಹಗರಣಕ್ಕೂ ಇರುವ ಸಂಬಂಧ ಏನು ಎಂಬುದು ನನಗೆ ಗೊತ್ತಾಗುತ್ತಿಲ್ಲ. ಆದರೆ ನಿಮಗೆ ಚೆನ್ನಾಗಿ ಗೊತ್ತಿದೆ ಅಲ್ವೇ ಎಂದು ಸಿಎಂ ಮೇಲೆ ವ್ಯಂಗ್ಯವಾಗಿ ಚಾಟಿ ಬೀಸಿದರು. ನಂತರ ಕಾಂಗ್ರೆಸ್ನವರು ಇಲ್ಲಿವರೆಗೂ ಮಾಡಿಕೊಂಡು ಬಂದಿರುವ ಒಂದೇ ಒಂದು ಕೆಲಸ ಅಂದರೆ ಸುಳ್ಳು ಹೇಳುವುದು, ಹಣ ಮಾಡುವುದು ಎಂದು ಟೀಕಾಪ್ರಹಾರ ಮಾಡಿದರು.

ಇನ್ನು ಕಾರ್ಯಕ್ರಮದಲ್ಲಿ ನೆರೆದಿದ್ದ ಜನ ಸಾಮಾನ್ಯರಿಗೆ ಕಾಂಗ್ರೆಸ್ ನಿಮ್ಮನ್ನು ವೋಟು ಕೇಳಲು ಬಂದರೆ ನೀವು ಅವರನ್ನು ಪ್ರಶ್ನೆ ಮಾಡ ಬೇಕು ಎಂದ ಅವರು, ಮರಳು ಮಾಫಿಯಾವನ್ನು ಪ್ರಾರಂಭಿಸಿದವರು ಯಾರು? ಆ ಮಾಫಿಯಾ ನಡೆಸುತ್ತಿರುವವರ ಗಾಡ್ ಫಾದರ್ ಯಾರು ಎಂದು ಕೇಳಿ ಎಂದರು. ಅಲ್ಲದೇ ನದಿ ನಿಮ್ಮದು ಸ್ಥಳ ನಿಮ್ಮದು ಆದರೂ ನದಿಯಲ್ಲಿ ಒಂದು ಹಿಡಿ ಮರಳು ತೆಗೆಯಲು ಏಕೆ ಇಷ್ಟು ತೊಂದರೆ ಕೊಡುತ್ತಿದೆ ಈ ಸರ್ಕಾರ ಎಂದು ಮರುಳು ನೀತಿಯ ಗೋಜಲಿನ ಬಗ್ಗೆ ಟೀಕಿಸಿದರು.

ಕಾಂಗ್ರೆಸ್ನವರು ಲೂಟಿ ಕೋರರು ಇವರಿಂದ ರಾಜ್ಯ ಉದ್ಧಾರ ಆಗಲು ಸಾಧ್ಯವೇ…? ಇದಕ್ಕೆ ಒಂದು ಉದಾಹರಣೆ 5 ವರ್ಷಗಳ ಹಿಂದೆ ಈ ಸಿದ್ದು ಸರ್ಕಾರದ ಸಚಿವನ ಆಸ್ತಿ ಇದೀಗ 3ರಷ್ಟು ಹೆಚ್ಚಾಗಿದೆ ಅದು ಹೇಗೆ ಸಾಧ್ಯ ಆಯ್ತು.., ಭ್ರಷ್ಟಾಚಾರ ಮಾಡದೇ ಈ ಹಣ ಸಂಪಾದಿಸಿದ್ದೀರಾ ಎಂದು ಮೋದಿ ಗುಡುಗಿದ್ದರು.

ನೋಟಿನ ಬಂಡಿ ಮೇಲೆ ಕೂತು ಕಾಂಗ್ರೆಸ್ನ ಕೆಲವರು ನಾನೇ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ರಾಜ್ಯಾಧ್ಯಕ್ಷರು ಹೇಳುತ್ತಾರೇ, ಕಳ್ಳರನ್ನು ವಿಧಾನ ಸಭೆ ಒಳಗೆ ಬಿಡಲ್ಲ ಎಂದು. ಈಗ ಹೇಳಿ ಬೀರುವಿನಲ್ಲಿ, ಹಾಸಿಗೆ ಕೆಳಗಡೆ ಹಣ ಸಿಕ್ಕಿ ಜೈಲು ಸೇರಿದ್ರಲ್ಲಾ ಅವರನ್ನು ಪಕ್ಷಕ್ಕೆ ಸೇರಿಸಿ ಕೊಂಡು ಟಿಕೆಟ್ ಕೊಟ್ಟು ಕಣಕ್ಕಿಳಿಸಿದ್ದೀರಲ್ಲಾ ಹೇಳಿ ಜನರ ಮುಂದೆ ಲಾಡ್ ಮೇಲೆ ಏಕೆ ಪ್ರೀತಿ ತೋರುತ್ತಿದ್ದೀರಿ ಎಂಬುದಾಗಿ ಪ್ರಶ್ನೆ ಮಾಡಿದರು.

ಗಂಗಾ ಸ್ನಾನ, ತುಂಗ ಪಾನ :

ಶಿವಮೊಗ್ಗಾದ ಸೋದರ ಸೋದರಿಯರೇ ಗಂಗಾ ಸ್ನಾನ, ತುಂಗ ಪಾನ ಎಂಬ ಮಾತು ಇದೆ. ಈ ಕಾಂಗ್ರೆಸ್ ನವರು ಈ ಎರಡಕ್ಕೂ ಮರ್ಯಾದೆ ಕೊಡಲ್ಲ. ನಾನು ಗುಜರಾತ್ ಸಿಎಂ ಆಗಿದ್ದೆ, ಆಗ ಈಶ್ವರಪ್ಪ ನೀರಾವರಿ ಸಚಿವರು, ಯಡಿಯೂರಪ್ಪ ಸಿಎಂ ಆಗಿದ್ರೂ. ಸಬರಮತಿ ಯೋಜನೆಯನ್ನು ತುಂಗಾ ನದಿಗೂ ಮಾಡಿಸ ಬೇಕು ಎಂದು ಆಶಯ ಹೊಂದಿದ್ದರು. ಆದ್ದರಿಂದಲೂ ಪ್ರತಿ ವರ್ಷ ಬಂದು ಕಾಮಗಾರಿ ನೋಡುತ್ತಿದ್ದರು.

ಮೇ 16 ಕ್ಕೆ ಯಡಿಯೂರಪ್ಪ ಸರ್ಕಾರ ರಚನೆ ಮಾಡಲಿದ್ದಾರೆ. ಆಗ ಅವರ ಕನಸನ್ನು ನಾನು ನನಸು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತುಂಗ ನದಿ ನೀರು ಯೋಜನೆಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ಮಾತು ಕೊಡುವುದಾಗಿ ತಿಳಿಸಿದರು. ನಾನು ಈ ಜಿಲ್ಲೆಯ ಜನರಿಗೆ ಹೇಳುತ್ತೇನೆ, ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪಗಳು ಇದ್ದೇ ಇರುತ್ತದೆ. ಆದರೆ ಯಡಿಯೂರಪ್ಪ ಮೇಲೆ ಅವರ ವಯಸ್ಸಿನ ಮೇಲೆ ಗೌರವ ಇಲ್ಲದೆ ಸಣ್ಣ ಪುಟ್ಟ ನಾಯಕರೂ ಕೂಡ ಅಗ್ಗವಾಗಿ ಮಾತನಾಡುತ್ತಿದ್ದಾರೆ. ಅವರೆಲ್ಲರಿಗೂ ಠೇವಣಿ ಇಲ್ಲದಂತೆ ಮಾಡಿ ಎಂದು ಕರೆ ನೀಡಿದರು.

ಬಿಎಸ್​​​ವೈ ಹಳ್ಳಿ ಹಳ್ಳಿಗೆ ತಿರುಗಿದ್ದಾರೆ, ಬಡವರ ಮನೆಯಲ್ಲಿ ವಾಸ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಇದರ ಮೇಲು ತಮಾಷೆ ಮಾಡಿದ್ದಾರೆ. ಅದಕ್ಕೆ ಅವರಿಗೆ ನೀವು ಉತ್ತರ ನೀಡ ಬೇಕು. ದೇಶದ ಬಡವರ ಶಕ್ತಿ ಏನು ಎಂಬುದನ್ನು ತೋರಿಸ ಬೇಕು.

ಅಡಿಕೆ ಬೆಳೆ ಬಗ್ಗೆ ಕಾಂಗ್ರೆಸ್ ಇದು ಕೆಟ್ಟದ್ದು ಎಂದು ಅಫೀಡವಿಟ್ ಕೊಟ್ಟಿದೆ. ಇಡೀ ಭಾರತದಲ್ಲಿ ಶಿಮೊಗ್ಗ ಜಿಲ್ಲೆಯಲ್ಲಿ ಅರ್ಧದಷ್ಟು ಬೆಳೆಯುತ್ತಾರೆ. ಅಡಿಕೆ ವಿಚಾರದಲ್ಲಿ ಹೆಚ್ಚು ಕಡಿಮೆ ಆದರೆ ನಿಮ್ಮ ಜಿಲ್ಲೆಯ ಕತೆ ಏನು. ಬಿಎಸ್ವೈ ಈ ಬಗ್ಗೆ ಹೋರಾಟ ಆರಂಭಿಸಿದ ಮೇಲೆ ಕಾಂಗ್ರೆಸ್ ಯುಟರ್ನ್ ತೆಗೆದು ಕೊಂಡು ಸುಮ್ಮನಾಯಿತು ಇಲ್ಲದಿದ್ದರೇ ಈ ಭಾಗದ ರೈತರಿಗೆ ಸಂಕಷ್ಟ ಎದುರಾಗುತ್ತಿತ್ತು. ಇದಕ್ಕಾಗಿ ನಾನು ಬಿಎಸ್ವೈ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ, ನಿಮ್ಮ ಸರ್ಕಾರ ರಚನೆಯಾಗುತ್ತಿದ್ದಂತೆ ತಾವು ಈ ಸಮಸ್ಯೆಯನ್ನು ಮತ್ತಷ್ಟು ಸರಿ ಪಡಿಸ ಬೇಕು ಎಂದು ತಿಳಿಸಿದರು.

ಬಿಜೆಪಿ ಸರ್ಕಾರ ಬಂದ ಮೇಲೆ ಅತ್ಯಂತ ಕಡಿಮೆ ಸಮಯದಲ್ಲಿ 4 ಕೋಟಿ ಬಡವರ ಮನೆಗೆ ಉಚಿತ ಸಿಲಿಂಡರ್ ನೀಡಿದ್ದೇವೆ. ಕರ್ನಾಟಕ್ಕೆ 40 ಲಕ್ಷ ಜನರಿಗೆ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯ 4 ಲಕ್ಷ ಜನರಿಗೆ ದೊರೆತಿದೆ ಎಂದರು. ಆದರೆ ಕೇಂದ್ರ ಸರ್ಕಾರದ ಈ ಯೋಜನೆಯನ್ನು ರಾಜ್ಯ ಸರ್ಕಾರದ ಕೆಲಸ ಎಂದು ಬಿಂಬಿಸಿ ಕೊಳ್ಳುತ್ತಿದೆ. ನನಗೆ ಇದರಿಂದ ಏನು ತೊಂದರೆ ಇಲ್ಲ. ಆದರೆ ನಿಮಗೆ ಗೊತ್ತಿದೆ ಅಲ್ವಾ ಆ ಯೋಜನೆ ಕೇಂದ್ರ ಸರ್ಕಾರದ್ದು ಎಂದು. ಕಾಂಗ್ರೆಸ್ ಇದೇ ರೀತಿ ಹಲವು ಸುಳ್ಳುಗಳನ್ನು ಹೇಳಿಕೊಂಡು ರಾಜ್ಯ ಸರ್ಕಾರ ತಮ್ಮ ಕೆಲಸ ಎಂದು ಹೇಳಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಶಿವಮೊಗ್ಗ ಬದಲಾದರೆ ರಾಜ್ಯ ಬದಲಾಗುತ್ತೆದೆ. ರಾಜ್ಯಗಳು ಬದಲಾದರೆ ದೇಶ ಬದಲಾಗುತ್ತದೆ. ಮೇ 12 ಕ್ಕೆ ನೀವು ಬಿಜೆಪಿಗೆ ವೋಟ್ ಹಾಕಿ, ನಾವು ನಿಮಗೆ ನೀಡಿರುವ ಕನಸನ್ನು ನನಸು ಮಾಡುತ್ತೇವೆ. ಬಿಎಸ್ವೈ ಅಧಿಕಾರಕ್ಕೆ ಬಂದರೆ ರೈತರ ಸರ್ಕಾರ ರಚನೆಯಾಗಲಿದೆ. ಬನ್ನಿ ಎಲ್ಲರೂ ಒಮದಾಗೋಣ ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ. ಎಂದು ಮತ್ತದೇ ಘೋಷಣೆಯೊಂದಿಗೆ ಭಾಷಣಕ್ಕೆ ವಿರಾಮ ಹೇಳಿದರು.

ಪ್ರಧಾನಿ ಮೋದಿಯ ಆಗಮನದಿಂದ ಇಡೀ ಶಿವಮೊಗ್ಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸ್ವತಃ ತಮ್ಮದೇ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯಾದ ಬಳಿಕ ಪ್ರಧಾನಿ ಮೋದಿಯವರನ್ನು ಬರಮಾಡಿಕೊಂಡರು ಬಿಎಸ್​​ವೈ. ಇತ್ತ ಬಿಎಸ್ ಯಡಿಯೂರಪ್ಪ ಅವರಿಗೆ ಈಶ್ವರಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ಅಭ್ಯರ್ಥಿಗಳು ಸಹ ಸಾಥ್ ನೀಡಿದರು.

Please follow and like us:
0
http://bp9news.com/wp-content/uploads/2018/05/modi-yeddyurappa-pti-650_650x400_81525191402.jpghttp://bp9news.com/wp-content/uploads/2018/05/modi-yeddyurappa-pti-650_650x400_81525191402-150x150.jpgPolitical Bureauಪ್ರಮುಖರಾಜಕೀಯಶಿವಮೊಗ್ಗNarendra Modi in Shimogaಬೆಂಗಳೂರು : ಪ್ರಧಾನಿ ಮೋದಿ ಕೆಂಪು ಕೋಟೆ ಮೇಲೆ ನಿಂತು ಕಸಗೂಡಿಸುತ್ತಿದ್ದಾರೆ, ಶೌಚಾಲಯದ ಬಗ್ಗೆ ಮಾತನಾಡುತ್ತಾರೆ ಎಂದು ಅಗೌರವವಾಗಿ ಮಾತನಾಡುತ್ತೀರಿ.., ನಾನು ಹೇಳುತ್ತೇನೆ... ನನಗೆ ಹೆಸರಿಗಾಗಿ ಕೆಲಸ ಮಾಡಬೇಕು. ನೀವು ನನನ್ನು ನೋಡಿ ನಗಾಡಿ, ಜನ ನಿಮ್ಮನ್ನು  ಚುನಾವಣೆಯಲ್ಲಿ ಅಳಿಸುತ್ತಾರೆ ಎಂದರು. ರಾತ್ರಿಯಾಗುವವರೆಗೂ ನನ್ನ ಅಕ್ಕ ತಂಗಿಯರು ಕಾಯುವ ವಾತಾವರಣ ಇದೆ. ಅದನ್ನು ನಾನು ತೆಗೆದು ಹಾಕೇ ಹಾಕುತ್ತೇನೆ. ಈ ಯೋಜನೆ ನಿಮಗೆ ತಮಾಷೆ ಆದ್ರೆ, ಅದರ ಕಷ್ಟ ಅನುಭವಿಸಿದವರಿಗೆ...Kannada News Portal