ಬೆಂಗಳೂರು : ಮಲ್ಲಿಕಾಜುರ್ನ ಖರ್ಗೆ.., ದಲಿತ ಸಮುದಾಯದ ಪ್ರಭಾವಿ ನಾಯಕ. ಸೋಲಿಲ್ಲದ ಸರದಾರ, ಆದ್ರೆ ಬಹು ದಶಕಗಳ ಕಾಲದ ಆಸೆಯನ್ನು ಹೀಡೇರಿಸಿ ಕೊಳ್ಳಲಾಗದೇ ರಾಜಕೀಯ ದೊಂಬ್ಬರಾಟಗಳಿಗೆ ಸಿಲುಕಿ ಸಿಎಂ ಖುರ್ಚಿ ಇನ್ನೇನೂ ದಕ್ಕೆ ಬಿಟ್ಟಿತು ಎನ್ನುವ ಸಂದರ್ಭದಲ್ಲಿಯೂ ಕೈತಪ್ಪಿದರೂ ತಮ್ಮ ಎಲ್ಲಾ ಹತಾಶೆ, ಅಸಮಾಧಾನ ಯಾವುದನ್ನೂ ಹೊರ ಹಾಕದೇ ಕಾಂಗ್ರೆಸ್ ಪಕ್ಷದ ನೇತಾರನಂತೆ ಪಕ್ಷದ ನಿಷ್ಠಾವಂತ ಎಂಬಂತೆ ರಾಜ್ಯ ರಾಜಕಾರಣದಿಂದ ಕಾಲ ಕಾಲಕ್ಕೆ ದೂರವಾಗುತ್ತಲೇ ಕೇಂದ್ರದ ವಿರೋಧ ಪಕ್ಷದ ನಾಯಕರಾದವರು. ಆದರೆ ತಮ್ಮ ಕನಸಿನ ಕರ್ನಾಟಕ ಮುಖ್ಯಮಂತ್ರಿ ಸ್ಥಾನ ಮಾತ್ರ ಕನಸಾಗೇ ಉಳಿದಿತ್ತು. ಈ ಕಾರಣಕ್ಕಾಗಿಯೇ ಖರ್ಗೆ ಅವರನ್ನು ದುರಾದೃಷ್ಟ ನಾಯಕ ಎಂದು ರಾಜಕೀಯ ಪಡಸಾಲೆಯಲ್ಲಿ ಆಗಾಗ ಕೇಳಿ ಬರುತ್ತಲೇ ಇರುತ್ತದೆ.

ಈ ಮೇಲಿನ ಹೇಳಿಕೆ ಸತ್ಯ ಎನ್ನುವುದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪಾಳಯದಲ್ಲಿ ನಡೆದಿರುವ ಬೆಳವಣಿಗೆ ಬಗ್ಗೆ ರಾಜಕೀಯ ವಿಮರ್ಶಾತ್ಮಕರು ಒಂದಷ್ಟು ಘಟನೆಗಳನ್ನು ತಿಳಿಸುತ್ತಾರೆ.

2005 ರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು ಖರ್ಗೆ. ಆವರೆಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಯಾರು ಆಗಿರುತ್ತಾರೋ ಅವರೇ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದರು. ಆದರೆ 2004 ರಲ್ಲಿ ಖರ್ಗೆಗೆ ಸಿಎಂ ಪಟ್ಟ ಸಿಗಲಿಲ್ಲ. ಆ ಸಂದರ್ಭದಲ್ಲಿ ಚುನಾವಣಾ ಫಲಿತಾಂಶ ಪೂರ್ಣ ಬಲದ ಸರ್ಕಾರ ರಚಿಸಲು ಅವಕಾಶ ಸಿಕ್ಕಿರಲಿಲ್ಲ. ಆದ್ದರಿಂದ ಕಾಂಗ್ರೆಸ್ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾದರು.

ಆ ವೇಳೆ ಖರ್ಗೆ ಪಕ್ಷದ ಅಧ್ಯಕ್ಷರಾಗಿದ್ದರು ದೇವೇಗೌಡರು ಧರಮ್ ಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡಿ, ಸಿದ್ದರಾಮಯ್ಯ ಡಿಸಿಎಂ ಆಗಿ ಆಯ್ಕೆ ಮಾಡುವುದಾದರೆ ಬೆಂಬಲ ನೀಡುವುದಾಗಿ ಷರತ್ತು ಹಾಕಿದರು. ಅದಕ್ಕೆ ಸಮ್ಮತಿಸಿದ ಕಾಂಗ್ರೆಸ್ ಹೈಕಮಾಂಡ್ ಖರ್ಗೆಗೆ ಸಿಎಂ ಪಟ್ಟ ನೀಡದೇ ಧರಮ್ ಸಿಂಗ್ ಅವರನ್ನು ಸಿಎಂ ಮಾಡಿ, ಖರ್ಗೆ ಸಚಿವ ಸ್ಥಾನವನ್ನಷ್ಟೇ ನೀಡಿದರು. ಈ ಬೆಳವಣಿಗೆಯಲ್ಲಿ ಖರ್ಗೆ ಮೊದಲ ಬಾರಿಗೆ ಸಿಎಂ ಆಗುವ ಅವಕಾಶ ಕೈತಪ್ಪಿತ್ತು.

ನಂತರ 2013 ರ ವೇಳೆ ಪೂರ್ಣ ಬಹುಮತದ ಸರ್ಕಾರಕ್ಕೆ ಜನಾದೇಶವಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ. ಆ ಸಂದರ್ಭದಲ್ಲಿಯೂ ದಲಿತ ಮುಖ್ಯಮಂತ್ರಿ ಕೂಗು ಜೋರಾಗಿಯೇ ಕೇಳಿತ್ತು. ಅದರಲ್ಲೂ ಖರ್ಗೆಅವರ ಹೆಸರು ಮಾರ್ಧನಿಸುತ್ತಿತ್ತು. ಆದರೆ ಆಗ ಪಕ್ಷದ ಅಧ್ಯಕ್ಷರಾಗಿದ್ದವರು ಸಿದ್ದರಾಮಯ್ಯ. ಅವರ ಹೋರಾಟ ಮತ್ತು ಅವರ ಬೆಂಬಲಕ್ಕೆ ನಿಂತಿದ್ದ ಮೂರನೇ ಬೃಹತ್ ಸಮುದಾಯವನ್ನು ಕೆಣಕಲಾಗದ ಸನ್ನಿವೇಶದ ಹಿನ್ನಲೆಯಲ್ಲಿ ದೆಹಲಿ ನಾಯಕರು ಖರ್ಗೆಗೆ ಕೇಂದ್ರ ಕಾರ್ಮಿಕ ಖಾತೆ ನೀಡಿದ್ದ ಕಾರಣ ನೀಡಿ ರಾಜ್ಯ ರಾಜಕಾರಣಕ್ಕೆ ಕಳುಹಿಸದೇ ಸಿದ್ದರಾಮಯ್ಯ ಹಾದಿಯನ್ನು ಸುಗಮ ಮಾಡಿಕೊಟ್ಟಿತ್ತು. ಆಗಲೂ ಖರ್ಗೆಗೆ ಪಕ್ಷ ಅಧಿಕಾರಕ್ಕೆ ಬಂದರೂ ರಾಜ್ಯ ರಾಜಕಾರಣದಿಂದ ವಿಯೋಗದ ಭಾಗ್ಯ ಒದಗಿ ಬಂದಿತ್ತು.

ಇದೀಗ ಮತ್ತೆ ಖರ್ಗೆಗೆ ರಾಜ್ಯ ರಾಜಕಾರಣಕ್ಕೆ ಎಂಟ್ರೀ ಕೊಡಿಸುವ ಅವಕಾಶ ಹೈಕಮಾಂಡ್ ಖರ್ಗೆ ಅವರಿಗೆ ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಅದಕ್ಕೆ ಕಾರಣ ರಾಜ್ಯದಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದಿದೆ.

ನೂತನ ಮೈತ್ರಿ ಸರ್ಕಾರದ ಹೆಚ್ಚು ಶಾಸಕರ ಪಾಲು ಕೈ ಪಡೆಯದ್ದೇ ಆದ್ದರಿಂದ ಕಾಂಗ್ರೆಸ್ ಶಾಸಕರು 5 ವರ್ಷಗಳ ಕಾಲ ಏಕೈಕ ಮುಖ್ಯಮಂತ್ರಿಗಳನ್ನು ಮಾಡಿ ಜೆಡಿಎಸ್ಗೆ ಅವಕಾಶ ನೀಡಿದರೆ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ಗೆ ಜನಮಾನಸದಲ್ಲಿನ ಇಮೇಜ್ ಕಡಿಯಾಗಿ ಹೋಗಿ, ಜೆಡಿಎಸ್ ಮೇಲೆ ಒಲವು ಹೆಚ್ಚಾಗುತ್ತದೆ. ಇದರಿಂದ ನಮ್ಮ ರಾಜಕೀಯ ಜೀವನದ ಮೇಲು ಇದರ ಪ್ರಭಾವ ಪರಿಣಾಮಗಳು ಬೀರಲಿದೆ, ಆದ ಕಾರಣ ಖರ್ಗೆ ಅವರನ್ನು ರಾಜ್ಯಕ್ಕೆ ಮತ್ತೆ ಕಳುಹಿಸ ಬೇಕು. ಅವರನ್ನು ಕಡೆಯ ಎರಡುವರೆ ವರ್ಷಗಳ ಕಾಲ ಸಿಎಂ ಆಗಲು ಅವಕಾಶ ಮಾಡಿಕೊಡಬೇಕು ಎಂದು ರಾಜ್ಯಕ್ಕೆ ಸೋನಿಯಾ ಅವರು ಬಂದಿದ್ದಾಗ ನೇರವಾಗಿಯೇ ತಿಳಿಸಿದ್ದರು.

ದೇಶದ ಏಕೈಕ ದೊಡ್ಡ ರಾಜ್ಯದ ಶಾಸಕರ ಮಾತುಗಳನ್ನು ಅಷ್ಟುಸುಲಬಕ್ಕೆ ತಳ್ಳಿ ಹಾಕಲಾಗದೆ ಆ ಬಗ್ಗೆ ಯೋಚಿಸಿ ತೀರ್ಮಾನ ಹೇಳುವುದಾಗಿ ರಾಜ್ಯ ಶಾಸಕರಿಗೆ ಸೋನಿಯಾ ಮತ್ತು ರಾಹುಲ್ ಮಾತುಕೊಟ್ಟು ಹೋಗಿದ್ದರು. ಈ ಹಿನ್ನಲೆಯಲ್ಲಿ ಇದೀಗ ಕಾಂಗ್ರೆಸ್ ಹೈಕಮಾಂಡ್ ಸಾಕಷ್ಟು ಅಳೆದು ತೂಗಿ ಮಾಡಿದ್ದು, ಖರ್ಗೆಯವರನ್ನು ರಾಜ್ಯಕ್ಕೆ ಮರಳಿ ಕಳುಹಿಸಿದರೆ ಪಕ್ಷಕ್ಕೆ ಎಷ್ಟು ಲಾಭ, ರಾಜ್ಯದಲ್ಲಿ ಆಗಬಹುದಾದ ಬದಲಾವಣೆಗಳು ಏನು ಎಂಬುದು ವರದಿ ತರಿಸಿ ಕೊಂಡಿದೆ.

ಒಂದು ವೇಳೆ ಖರ್ಗೆಗೆ ಸಿಎಂ ಮಾಡಿದ್ರೇ ದಲಿತ ಸಿಎಂ ಮತ್ತು ಡಿಸಿಎಂ ಮಾಡಿರುವ ಏಕೈಕ ಪಕ್ಷ ಕಾಂಗ್ರೆಸ್ ಎಂಬ ಭಾವನೆ ಜನರಲ್ಲಿ ಮೂಡಿ ರಾಜ್ಯದ ಬಹುಸಂಖ್ಯಾತ ಸಮುದಾಯದ ಕೃಪೆಗೆ ಪಾತ್ರವಾಗ ಬಹುದು ಮತ್ತು ಕಾಂಗ್ರೆಸ್ ಸಾಂಪ್ರದಾಯಿಕ ಮತಗಳು ಮತ್ತಷ್ಟು ಸ್ಟ್ರಾಂಗ್ ಆಗುತ್ತದೆ.

ನಂತರ ರಾಜ್ಯದಲ್ಲಿ ಇದೀಗ ಎದುರಾಗಿರುವ ಸಮಸ್ಯೆ ಅಂದ್ರೆ ಮಾಸ್ ಲೀಡರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏನು ಮಾಡುವುದು ಎಂಬುದು. ಹೌದು, ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಶಾಸಕಾಂಗ ಪಕ್ಷದ ನಾಯಕರಾಗಿ ಸದ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇಲ್ಲಿ ಸಿದ್ದರಾಮಯ್ಯ ಮಾಡಬಹುದಾದ ಕೆಲಸ ಏನು ಇಲ್ಲ. ಪಕ್ಷಕ್ಕೂ ಅವರಿಂದ ಈ ಪೋಸ್ಟ್ನಿಂದ ಏನೂ ಬಲ ನೀಡಲು ಸಾಧ್ಯ ಆಗುವುದಿಲ್ಲ.

ಕೇಂದ್ರ ಬಿಜೆಪಿ ನಾಯಕರಿಗೆ ಬೆವರಿಳಿಸಿದ ಕಾಂಗ್ರೆಸ್ ಪಕ್ಷದ ದಕ್ಷಿಣದ ಬಾಹುಬಲಿಯನ್ನು ವೀಕ್ ಮಾಡಲು ಕಾಂಗ್ರೆಸ್ನ ಹೈಕಮಾಂಡ್ಗೆ ಇಷ್ಟ ಇಲ್ಲದ ಕಾರಣ ಸಿದ್ದರಾಮಯ್ಯ ಅವರನ್ನು ಕೇಂದ್ರಕ್ಕೆ ಕರೆಸಿಕೊಂಡು ಅಲ್ಲಿಂದ ಖರ್ಗೆಯನ್ನು ರಾಜ್ಯಕ್ಕೆ ಕಳುಹಿಸಿದರೆ, ರಾಜ್ಯದ ಜನರ ಮನಸ್ಸಿನಲ್ಲಿ 2 ರೀತಿಯಾದ ಸಂದೇಶವನ್ನು ಮತ್ತು ಮತ ಬೇಟೆಯನ್ನು ಮಾಡಬಹುದು.
ಅದೇನಪ್ಪಾ ಅಂದ್ರೆ ಗಾಣದ ಎತ್ತಿನಂತೆ ಕೆಲಸ ಮಾಡಿದ್ದ ಸಿದ್ದರಾಮಯ್ಯಗೆ ಸೂಕ್ತ ಸ್ಥಾನ ಮಾನ ನೀಡಿ ರಾಜ್ಯದ ಕುರುಬ ಸಮುದಾಯವನ್ನು ಸಾಂಪ್ರದಾಯ ಮತವಾಗಿ ಬದಲಿಸಿ ಕೊಳ್ಳಬಹುದು.

ಆಗೆ ಕೇಂದ್ರ ಬಿಜೆಪಿ ನಾಯಕರಿಗೆ ಅವರದ್ದೇ ಶೈಲಿಯಲ್ಲಿ ಟಕ್ಕರ್ ಕೊಡೋ ಖಡಕ್ ಲೀಡರ್ ಕೇಂದ್ರಕ್ಕೆ ಅವಶ್ಯಕತೆ ಇದೆ ಆ ನಾಯಕತ್ವವನ್ನು ಕೃಡೀಕರಿಸಿದಂತೆ ಆಗುತ್ತದೆ. ಜೊತೆಗೆ ಖರ್ಗೆಯವರನ್ನು ರಾಜ್ಯಕ್ಕೆ ಕಳುಹಿಸಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರ ಸುಸೂತ್ರವಾಗಿ ನಡೆದರೆ ಎರಡೂವರೆ ವರ್ಷ ಬಿಟ್ಟು ಸಿಎಂ ಗಾದಿ ಮೇಲೆ ಖರ್ಗೆಯವರನ್ನು ಕೂರಿಸುವ ಚಿಂತನೆಯನ್ನೂ ಕಾಂಗ್ರೆಸ್ ಹೊಂದಿದೆ. ಈ ಮೂಲಕ ಸಿಎಂ ಹುದ್ದೆಗೇರುವ ಖರ್ಗೆ ಕನಸು ಮತ್ತು ದಲಿತರನ್ನು ಸಿಎಂ ಮಾಡಿದ ಕ್ರೆಡಿಟ್ ತೆಗೆದುಕೊಳ್ಳುವುದು ಕಾಂಗ್ರೆಸ್ ಯೋಜನೆಯಾಗಿದೆ. ಆದರೆ ಇವಿಷ್ಟೂ ಕಾಂಗ್ರೆಸ್ ಕಡಬಡಯ್ಯನ ಆಟಕ್ಕೆ ಜೆಡಿಎಸ್ ವರಿಷ್ಠ ರಾಜ್ಯ ರಾಷ್ಟ್ರ ಕಂಡ ಚಾಣಕ್ಷ ತಂತ್ರಗಾರಿಕೆಗಳ ದುರೀಣ ದೇವೇಗೌಡರು ಸೊಪ್ಪಾಕುವರೋ ಇಲ್ಲ ಕಾಂಗ್ರೆಸ್ನ ಈ ಸ್ಟೆಪ್ಪಿಗೆ ಶಟಪ್ ಎನ್ನುತ್ತಾರೋ ಕಾದು ನೋಡಬೇಕಿದೆ.

ಲೇಖನ : PSV

 

Please follow and like us:
0
http://bp9news.com/wp-content/uploads/2018/05/dc-Cover-rf0b8kv0c460acn3vaulkuapb2-20160327042439.Medi_-1.jpeghttp://bp9news.com/wp-content/uploads/2018/05/dc-Cover-rf0b8kv0c460acn3vaulkuapb2-20160327042439.Medi_-1-150x150.jpegPolitical Bureauಅಂಕಣಪ್ರಮುಖರಾಜಕೀಯರಾಷ್ಟ್ರೀಯNarendra Modi is ready to give a tucker!ಬೆಂಗಳೂರು : ಮಲ್ಲಿಕಾಜುರ್ನ ಖರ್ಗೆ.., ದಲಿತ ಸಮುದಾಯದ ಪ್ರಭಾವಿ ನಾಯಕ. ಸೋಲಿಲ್ಲದ ಸರದಾರ, ಆದ್ರೆ ಬಹು ದಶಕಗಳ ಕಾಲದ ಆಸೆಯನ್ನು ಹೀಡೇರಿಸಿ ಕೊಳ್ಳಲಾಗದೇ ರಾಜಕೀಯ ದೊಂಬ್ಬರಾಟಗಳಿಗೆ ಸಿಲುಕಿ ಸಿಎಂ ಖುರ್ಚಿ ಇನ್ನೇನೂ ದಕ್ಕೆ ಬಿಟ್ಟಿತು ಎನ್ನುವ ಸಂದರ್ಭದಲ್ಲಿಯೂ ಕೈತಪ್ಪಿದರೂ ತಮ್ಮ ಎಲ್ಲಾ ಹತಾಶೆ, ಅಸಮಾಧಾನ ಯಾವುದನ್ನೂ ಹೊರ ಹಾಕದೇ ಕಾಂಗ್ರೆಸ್ ಪಕ್ಷದ ನೇತಾರನಂತೆ ಪಕ್ಷದ ನಿಷ್ಠಾವಂತ ಎಂಬಂತೆ ರಾಜ್ಯ ರಾಜಕಾರಣದಿಂದ ಕಾಲ ಕಾಲಕ್ಕೆ ದೂರವಾಗುತ್ತಲೇ ಕೇಂದ್ರದ ವಿರೋಧ ಪಕ್ಷದ...Kannada News Portal