ನವದೆಹಲಿ
:  ಇಷ್ಟು ದಿನ ಪೈಲೆಟ್​ಗಳು ತಮ್ಮ ಕರ್ತವ್ಯ ಪಾಲನೆಯಿಂದ, ಸಮಯ ಪ್ರಯಜ್ಞನೆಯಿಂದ   ತುರ್ತು ಭೂಸ್ಪರ್ಶ ಮಾಡುತ್ತಿದ್ದ ವಿಮಾನ, ಈ ಭಾರಿ ಸಿಬ್ಬಂದಿಗಳ ಎಡವಟ್ಟಿನಿಂದ ತುರ್ತು ಭೂಸ್ಪರ್ಶ ಮಾಡಿದೆ.  ಪ್ರಯಾಣಿಕರ ರಕ್ಷಣೆ ಮತ್ತು ಹಿತವನ್ನು ಕಾಯುತ್ತಿದ್ದ ವಿಮಾನ ಸಿಬ್ಬಂದಿ ವರ್ಗ ಇಂದು ಯಾಕೋ ತಮ್ಮ ವಿವೇಚನೆಯನ್ನು ಕೆಳೆದು ಕೊಂಡಿದ್ದರಿಂದಾಗಿ ಪ್ರಯಾಣಿಕರು ಸಮಸ್ಯೆ ಎದುರಸಬೇಕಾಯಿತು. ಈ ಘಟನೆ ಮುಂಬೈ-ಜೈಪುರ್ ಮಾರ್ಗದ ಜೆಟ್ ಏರ್ ವೇಸ್ ವಿಮಾನದಲ್ಲಿ  ನಡೆದಿದೆ.

ಅಂದ ಹಾಗೆ ಈ ಸಮಸ್ಯೆ ಏನಪ್ಪ ಅಂದರೆ, ಜೆಟ್ ಏರ್ ವೇಸ್ ವಿಮಾನದದೊಳಗಿದ್ದ ಪ್ರಯಾಣಿಕರಿಗೆ ಏಕಾಏಕಿ ಕಿವಿ, ಮೂಗಿನಲ್ಲಿ ರಕ್ತ ಸುರಿಯಲಾರಂಭಿಸಿದೆ. ಇದರಿಂದ  ಕೆಲ ಸಮಯ ಆತಂಕದ  ವಾತಾವರಣ  ನಿರ್ಮಾಣವಾಗಿತ್ತು.

ಅರೇ ಇದೆನಪ್ಪ, ವಿಮಾನ ಪ್ರಯಾಣಿಕರಲ್ಲಿ ರಕ್ತ, ಯಾಕೆ ಹೀಗೆ  ಆಯ್ತು ಅಂತೀರಾ, ಅದಕ್ಕೆ ಕಾರಣ ನಾವು ಮೊದಲೆ ಹೇಳಿದ ಹಾಗೆ ವಿಮಾನ ಸಿಬ್ಬಂದಿಗಳು.  ವಿಮಾನ ಸಿಬ್ಬಂದಿ  ಬ್ಲೀಡ್​ ಸ್ವಿಚ್​ ಆನ್​ ಮಾಡಲು ಮರೆತಿದ್ದೇ ಈ ಅವಘಡಕ್ಕೆ  ಕಾರಣ ಎಂದು ತಿಳಿದುಬಂದಿದೆ. ಈ ಸ್ವಿಚ್​ ಆನ್​  ಮಾಡದೆ  ಇದ್ದಿದ್ದರಿಂದ   ಕ್ಯಾಬಿನ್​ ಪ್ರೆಷರ್​ ಮೇಂಟೇನ್​ ಮಾಡಲು ಸಾಧ್ಯವಾಗದೆ, ವಿಮಾನದಲ್ಲಿ  ಕ್ಯಾಬಿನ್​ ಪ್ರೆಷರ್​ ಕೊರತೆಯಾಗಿದೆ. ಇದರಿಂದ ಪ್ರಯಾಣಿಕರಲ್ಲಿ ರಕ್ತ ಸ್ರಾವ ಉಂಟಾಗಿದೆ.

ಇನ್ನು  ಈ  ಘಟನೆ ಅರಿತ ಪೈಲೆಟ್ ಮುಂಬೈನಿಂದ ಜೈಪುರಕ್ಕೆ  ಹೊರಟಿದ್ದ ವಿಮಾನವನ್ನು ವಾಪಸ್  ಮುಂಬೈ ವಿಮಾನ ನಿಲ್ದಾದಲ್ಲೇ ಇಳಿಸಿದ್ದಾರೆ.  ವಿಮಾನ ತುರ್ತು ಭೂಸ್ಪರ್ಶವಾದ ನಂತರ  ಪ್ರಯಾಣಿಕರನ್ನು ಕೆಳಗಿಳಿಸಿ ಚಿಕಿತ್ಸೆ ನೀಡಲಾಯಿತು.

ಸಿಬ್ಬಂದಿ ಯಡವಟ್ಟಿನಿಂದಾಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ  166 ಪ್ರಯಾಣಿಕರಲ್ಲಿ 30 ಜನರ  ಮೂಗಿನಲ್ಲಿ ಮತ್ತು ಕಿವಿಯಲ್ಲಿ  ರಕ್ತ ಸುರಿಯಲಾರಂಭಿಸಿತ್ತು. ಇನ್ನುಳಿದ ಪ್ರಯಾಣಿಕರಿಗೆ ಅತಿಯಾದ ತೆಲೆನೋವು ಕಾಣಸಿಕೊಂಡಿದೆ. ಈ ಎಲ್ಲಾ ಪ್ರಯಾಣಿಕರಿಗೂ ಏರಪೋರ್ಟ್​ನಲ್ಲಿದ್ದ ವೈದ್ಯರು ಚಿಕತ್ಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.ಈ ಅಚಾತುರ್ಯಕ್ಕೆ  ವಿಮಾನದ ಸಿಬ್ಬಂದಿಯ ನಿರ್ಲಕ್ಷ್ಯವೇ  ಕಾರಣ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

 

ಇದರಿಂದ  ವಿಮಾನದಲ್ಲಿ  ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಕೆಲಸದಿಂದ  ತೆಗದುಹಾಕಿ, ಜೆಟ್ ಏರ್ ವೇಸ್ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.ಅಲ್ಲದೆ  ಘಟನೆಯ ಬಗ್ಗೆ ಎಎಐಬಿ ತನಖೆಯನ್ನು ಕೈಗೊಂಡು ತನಿಖೆ ನಡೆಸುತ್ತಿದೆ ಎಂದು ಸಿವಿಲ್ ಡೈರೆಕ್ಟೊರೇಟ್ ಜನರಲ್ ಕಛೇರಿಯಿಂದ ಮಾಹಿತಿ  ತಿಳಿದುಬಂದಿದೆ.

ಇನ್ನು ಈ ಎಲ್ಲಾ ಘಟನಾವಳಿಯನ್ನು ತನ್ನ ಮೋಬೈಲ್ ನಲ್ಲಿ ಸೇರಿಡಿದರುವ ಯುವಕ ತನ್ನ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿದ್ದಾನೆ. ಈ ಯುವಕ  ಚಿತ್ರಕರಣ ಮಾಡಿರುವ ವಿಡಿಯೋ  ಈಗ  ಎಲ್ಲಡೆ ವೈರಲ್ ಆಗ್ತಿದೆ.

Please follow and like us:
0
http://bp9news.com/wp-content/uploads/2018/09/jet-airways.pnghttp://bp9news.com/wp-content/uploads/2018/09/jet-airways-150x150.pngBP9 Bureauಪ್ರಮುಖರಾಷ್ಟ್ರೀಯನವದೆಹಲಿ :  ಇಷ್ಟು ದಿನ ಪೈಲೆಟ್​ಗಳು ತಮ್ಮ ಕರ್ತವ್ಯ ಪಾಲನೆಯಿಂದ, ಸಮಯ ಪ್ರಯಜ್ಞನೆಯಿಂದ   ತುರ್ತು ಭೂಸ್ಪರ್ಶ ಮಾಡುತ್ತಿದ್ದ ವಿಮಾನ, ಈ ಭಾರಿ ಸಿಬ್ಬಂದಿಗಳ ಎಡವಟ್ಟಿನಿಂದ ತುರ್ತು ಭೂಸ್ಪರ್ಶ ಮಾಡಿದೆ.  ಪ್ರಯಾಣಿಕರ ರಕ್ಷಣೆ ಮತ್ತು ಹಿತವನ್ನು ಕಾಯುತ್ತಿದ್ದ ವಿಮಾನ ಸಿಬ್ಬಂದಿ ವರ್ಗ ಇಂದು ಯಾಕೋ ತಮ್ಮ ವಿವೇಚನೆಯನ್ನು ಕೆಳೆದು ಕೊಂಡಿದ್ದರಿಂದಾಗಿ ಪ್ರಯಾಣಿಕರು ಸಮಸ್ಯೆ ಎದುರಸಬೇಕಾಯಿತು. ಈ ಘಟನೆ ಮುಂಬೈ-ಜೈಪುರ್ ಮಾರ್ಗದ ಜೆಟ್ ಏರ್ ವೇಸ್ ವಿಮಾನದಲ್ಲಿ  ನಡೆದಿದೆ. ಅಂದ ಹಾಗೆ ಈ ಸಮಸ್ಯೆ ಏನಪ್ಪ ಅಂದರೆ, ಜೆಟ್...Kannada News Portal