ನವದೆಹಲಿ : ರಾಷ್ಟ್ರದ ರಾಜಧಾನಿಯಾದ ನವದೆಹಲಿಯ ಪರಿಸರವು ತುಂಬಾ ಕಲುಷಿತವಾಗಿದೆ ಗಾಳಿಯಲ್ಲಿ ವಿಷ ಸೇರಿದ್ದು ಜನರು ಭಯ ಭೀತರಾಗಿದ್ದಾರೆ.

ದೆಹಲಿ ಪರಿಸರದ ಗಾಳಿಯಲ್ಲಿ ವಿಷಾನಿಲಗಳ ಪ್ರಮಾಣ ಹೆಚ್ಚುತ್ತಿದೆ. ಶುದ್ಧ ಗಾಳಿ ಸಿಗದೇ ಎಲ್ಲರೂ ಪರದದಾಡುತ್ತಿದ್ದಾರೆ. ಈ ಮಧ್ಯೆ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರವು ವಾಹನ ಸಂಚಾರಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆತರುತ್ತಲೆ ಇದೆ.

ಶುದ್ಧಗಾಳಿಯ ಕೊರೆತೆಯನ್ನು ನೀಗಿಸಲು ಸರ್ಕಾರವು ಒಂದು ಹೊಸ ಆಲೋಚನೆಯಿಂದ ಈ ಒಂದು ದೊಡ್ಡ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದಿದೆ. ಆ ಪರಿಹಾರ ಏನು ಅಂದರೇ ವಾಯು ಶುದ್ಧೀಕರಣ ಉಪಕರಣವನ್ನು ತಯಾರಿಕಾ ಸಂಸ್ಥೆಗಳನ್ನು ಮನದಲ್ಲಿ ಇಟ್ಟುಕೊಂಡು, ಆ ಸಂಸ್ಥೆಗಳಿಂದ ಗಾಳಿಯನ್ನು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ.
ಇನ್ನು ಚೀನಾದಲ್ಲಿ ವಾಯು ಮಾಲಿನ್ಯದಿಂದ ಜನರು ತುಂಬ ಸಮಸ್ಯೆಗಳನ್ನು ಎದುರಿಸಿದ್ದರು. ಆಗ ಚೀನ ಸರ್ಕಾರವು ಈ ರೀತಿಯ ಯಂತ್ರಗಳನ್ನು ಸ್ಥಾಪಿಸಿತ್ತು ಈ ಉಪಕರಣದ ಸಹಾಯದಿಂದ ವಾಯು ಮಾಲಿನ್ಯವನ್ನು ತಡೆಯುವಲ್ಲಿ ಸಾಧ್ಯವಾಯಿತು.
ಭಾರತ ಕೂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುತ್ತಿದ್ದು, ಇದರಲ್ಲಿ ಯಶಸ್ವಿಯಾದರೆ 130 ಕೋಟಿ ಲೀಟರ್​ ಗಾಳಿಯನ್ನು ಒಂದು ದಿನಕ್ಕೆ ಶುದ್ಧ ಮಾಡಬಹುದು.  ಗುರು ಗ್ರಾಮ ಮೂಲದ ಕುರಿಯನ್​ ಹೆಸರಿನ ಸಂಸ್ಥೆ 40 ಅಡಿ ಎತ್ತರದ ವಾಯು ಶುದ್ಧೀಕರಣ ಯಂತ್ರವನ್ನು ಸ್ಥಾಪಿಸಿದೆ. ಇದರ ಸಹಾಯದಿಂದ ಒಮ್ಮೆಗೆ 3 ಕಿ.ಮೀ ವ್ಯಾಪ್ತಿಯಲ್ಲಿರುವ 75,000 ಜನರಿಗೆ ಶುದ್ಧ ಗಾಳಿ ನೀಡಬಹುದು ಎಂಬುದು ಈ ಸಂಸ್ಥೆಯ ಸ್ಥಾಪಕ ಪವನೀತ್​ ಸಿಂಗ್​ ಪುರಿ ಅವರ ಅಭಿಪ್ರಾಯ.

ಈ ಘಟಕ ಹೇಗೆ ಇರುತ್ತದೆ ಅದು ಹೇಗೆ ಕೆಲಸ ನಿರ್ವಹಿಸುತ್ತದೆ!!!

ಈ ಯಂತ್ರ 40 ಅಡಿ ಎತ್ತರ, 20 ಅಡಿ ಅಗಲ ಇದೆ. ಒಂದು ದಿನಕ್ಕೆ 3.2 ಕೋಟಿ ಕ್ಯೂಬಿಕ್​ ಮೀಟರ್​ ಗಾಳಿಯನ್ನು ಶುದ್ಧೀಕರಿಸುವ ಸಾಮರ್ಥ್ಯ ಇದಕ್ಕಿದೆ.

ಈ ಉಪಕರಣ 3 ಕಿ.ಮೀ ವ್ಯಾಪ್ತಿಯ ಗಾಳಿಯನ್ನು ಶುದ್ಧಗೊಳಿಸುವ ಶಕ್ತಿ ಹೊಂದಿದೆ. ಇದರಿಂದ ಕನಿಷ್ಠ 75 ಸಾವಿರ ಜನರಿಗೆ ಸಹಾಯವಾಗಲಿದೆ.

ಈ ಯಂತ್ರ ಎಲ್ಲ ಕಡೆಗಳಿಂದ ಗಾಳಿಯನ್ನು ಒಳಗೆ ತೆಗೆದುಕೊಳ್ಳುವ ತಂತ್ರಜ್ಞಾನ ಹೊಂದಿದೆ. ಒಂದು ಗಂಟೆಗೆ 13 ಸಾವಿರ ಕ್ಯೂಬಿಕ್​ ಮೀಟರ್​ ಶುದ್ಧ ಗಾಳಿಯನ್ನು ಹೊರಹಾಕುತ್ತದೆ.

ಈ ಉಪಕರಣದಿಂದ ಹೊರಬಂದ ಗಾಳಿ ಶೇ. 99 ಶುದ್ಧವಾಗಿರುತ್ತದೆ. ಕಾರ್ಬನ್​ ಅಂಶಗಳನ್ನು ತೆಗೆದು ಹಾಕಬಹುದಾಗಿದೆ.

ಶುದ್ಧ ಗಾಳಿ ಎಲ್ಲೆಡೆ ಪಸರಿಸಿರುವಂತೆ ನೋಡಿಕೊಳ್ಳಲು 48 ಫ್ಯಾನ್​ಗಳನ್ನು ಅಳವಡಿಸಲಾಗಿದೆ.

ವಾಯು ಶುದ್ಧೀಕರಣ ಉಪಕರಣ ಸೌರಶಕ್ತಿಯಿಂದ ನಡೆಯಲಿದೆ!!!

ಚೀನಾಗಿಂತ ಹೇಗೆ ಭಿನ್ನ : ಈ ತಂತ್ರಜ್ಞಾನದಲ್ಲಿ ಚೀನಾಗಿಂತ ನಾವೇ ಮುಂದಿದ್ದೇವೆ. ಚೀನಾದಲ್ಲಿ ಒಂದು ಘಟಕದಿಂದ 1 ಕೋಟಿ ಕ್ಯೂಬಿಕ್​ ಮೀಟರ್​ ಅಶುದ್ಧ ಗಾಳಿಯನ್ನು ಶುದ್ಧ ಗಾಳಿಯನ್ನಾಗಿ ಬದಲಾಯಿಸಲಾಗುತ್ತಿದೆ. ಭಾರತೀಯರು ಕಂಡು ಹಿಡಿದಿರುವ ಉಪಕರಣ ಇದಕ್ಕಿಂತ ಮೂರುಪಟ್ಟು ಪರಿಣಾಮಕಾರಿಯಾಗಲ್ಲಿದೆ.


ಈ ಘಟಕವನ್ನು ಸ್ಥಾಪಿಸಲು ಬರೋಬ್ಬರಿ ನಾಲ್ಕು ತಿಂಗಳು ಬೇಕು. ಹಾಗಾಗಿ ಇದಕ್ಕೆ 1.75-2 ಕೋಟಿ ರೂ. ವೆಚ್ಛ ತಗುಲಬಹುದು ಎನ್ನಲಾಗಿದೆ.
Please follow and like us:
0
http://bp9news.com/wp-content/uploads/2018/11/china-purifier-1024x576.jpghttp://bp9news.com/wp-content/uploads/2018/11/china-purifier-150x150.jpgBP9 Bureauಪ್ರಮುಖರಾಷ್ಟ್ರೀಯನವದೆಹಲಿ : ರಾಷ್ಟ್ರದ ರಾಜಧಾನಿಯಾದ ನವದೆಹಲಿಯ ಪರಿಸರವು ತುಂಬಾ ಕಲುಷಿತವಾಗಿದೆ ಗಾಳಿಯಲ್ಲಿ ವಿಷ ಸೇರಿದ್ದು ಜನರು ಭಯ ಭೀತರಾಗಿದ್ದಾರೆ. ದೆಹಲಿ ಪರಿಸರದ ಗಾಳಿಯಲ್ಲಿ ವಿಷಾನಿಲಗಳ ಪ್ರಮಾಣ ಹೆಚ್ಚುತ್ತಿದೆ. ಶುದ್ಧ ಗಾಳಿ ಸಿಗದೇ ಎಲ್ಲರೂ ಪರದದಾಡುತ್ತಿದ್ದಾರೆ. ಈ ಮಧ್ಯೆ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರವು ವಾಹನ ಸಂಚಾರಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆತರುತ್ತಲೆ ಇದೆ. ಶುದ್ಧಗಾಳಿಯ ಕೊರೆತೆಯನ್ನು ನೀಗಿಸಲು ಸರ್ಕಾರವು ಒಂದು ಹೊಸ ಆಲೋಚನೆಯಿಂದ ಈ ಒಂದು ದೊಡ್ಡ ಸಮಸ್ಯೆಗೆ ಪರಿಹಾರವನ್ನು...Kannada News Portal