ನವದಿಹಲಿ : ಬೆಂಗಳೂರು ಮೂಲದ ದಂಪತಿಗಳಿಗೆ  ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್, ಹೌದು ವಿಚ್ಛೇದನ ಕೋರಿ ನ್ಯಾಯಾಲಯದ ಮೇಟ್ಟಿಲೇರಿರುವ ಈ ದಂಪತಿಗಳು ಈಗಾಗಲೆ 67 ದೂರಿನ ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ಇನ್ನು ಯಾವುದೇ ಹೊಸ ಅರ್ಜಿ ದಾಖಲಿಸದಂತೆ ಸೂಚನೆ ನೀಡಿ ಸುಪ್ರೀಂ ಕೋರ್ಟ್​ ಎಚ್ಚರಿಕೆ ನೀಡಿದೆ.

ಬೆಂಗಳೂರು ಮೂಲದ ಅಮೆರಿಕ ಪೌರತ್ವ ಹೊಂದಿರುವ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಗಂಡ ಈಗಾಗಲೇ ನ್ಯಾಯಾಲಯಕ್ಕೆ 58 ಪ್ರಕರಣ ದಾಖಲಿಸದ್ದಾರೆ. ಎಂಬಿಎ ಪದವೀಧರೆ ಹೆಂಡತಿ 9 ದೂರಿನ ಅರ್ಜಿಯನ್ನು ದಾಖಲಿಸಿದ್ದಾರೆ. ಇವರ ದೂರು ಅರ್ಜಿಗಳಿಂದ ಸಿಟ್ಟಿಗೆದ್ದರಿರುವ ಸುಪ್ರೀಂ ಕೋರ್ಟ್​ ನ್ಯಾಯಾಧೀಶರು ಇನ್ನೊಂದು ಅರ್ಜಿಯನ್ನು ದಾಖಲಿಸಿದರೂ ಅದನ್ನು ನಿಬಂರ್ಧಿಸಲಾಗುವುದು ಎಂದು ಎಚ್ಚರಸಿದ್ದಾರೆ.

ಕ್ರಿಮಿನಲ್​ ಅಥವಾ ಸಿವಿಲ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಅಥವಾ ಕುಟುಂಬದ ಸದಸ್ಯರ ವಿರುದ್ಧ ಅಥವಾ ಮಗುವಿನ ಶಾಲೆ ಅಥವಾ ಕರ್ನಾಟಕ ಉಚ್ಛ ನ್ಯಾಯಾಲಯದ ಅನುಮತಿಯಿಲ್ಲದೇ ಸುಪ್ರೀಂ ಕೋರ್ಟ್​ಗೆ ಯಾವುದೇ ಅರ್ಜಿಯನ್ನು ಸಲ್ಲಿಸುವಂತಿಲ್ಲ ಎಂದು ತಾಕೀತು ಮಾಡಿದೆ.

2002ರಲ್ಲಿ ಮದುವೆಯಾಗಿ ಅಮೆರಿಕದಲ್ಲಿ ನೆಲೆಸಿದ್ದ ಈ ದಂಪತಿಗೆ 2009ರಲ್ಲಿ ಮಗುವಾಗಿತ್ತು. ಮಗುವಾದ ಬಳಿಕ ಹೆಂಡತಿ ಬೆಂಗಳೂರಿನ ಪೋಷಕರ ಮನೆಗೆ ಬಂದಿದ್ದಳು.  ಕೌಟಂಬಿಕ ಹಿಂಸೆ ಕುರಿತು ಈ ವೇಳೆ ನ್ಯಾಯಾಲಯದಲ್ಲಿ  ಪ್ರಕರಣ ದಾಖಲಾಗಿತ್ತು.

ದಂಪತಿಗಳ ಒಂಭತ್ತು ವರ್ಷದ ಮಗುವು ಯಾರ ಸುಪರ್ದಿಗೆ ಸೇರಬೇಕು ಎಂಬುದು ಸೇರಿ ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪ ಮಾಡಿ ಅರ್ಜಿಗಳ ಮಹಾಪೂರವನ್ನೇ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಗಂಡ ಹೆಂಡತಿಯ ಜಗಳದಿಂದಾಗಿ 9 ವರ್ಷದ ಮಗುವು ಮಾನಸಿಕ, ಭಾವನಾತ್ಮಕವಾಗಿ ಆಘಾತಕ್ಕೆ ಒಳಗಾಗಿದ್ದು, ಪೋಷಕರಿಬ್ಬರು ಮಗುವಿನ ಶಾಲೆಗೆ ಭೇಟಿ ನೀಡದಂತೆ ನ್ಯಾಯಾಲಯ ನಿರ್ಬಂಧ ಹೇರಿದೆ. ಅಲ್ಲದೇ ಪೋಷಕರ ಸಭೆಗೂ ಬರದಂತೆ ನಿರ್ಬಂಧ ವಿಧಿಸುವ ಜವಬ್ದಾರಿಯನ್ನು ಶಾಲಾ ಆಡಳಿತ ಮಂಡಳಿಗೆ ನೀಡಿದೆ.

ಆರು ತಿಂಗಳ ಒಳಗೆ ಇವರ ವಿಚ್ಛೇದನಾ ಅರ್ಜಿಯನ್ನು ಇತ್ಯರ್ಥಗೊಳಿಸುವಂತೆ ಬೆಂಗಳೂರು ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್​ ಸೂಚನೆ ನೀಡಿದೆ. ಇದರ ಜೊತೆಯಲ್ಲಿಯೇ ಮಗು ಯಾರ ವಶಕ್ಕೆ ಹೋಗಬೇಕು ಹಾಗೂ ಇನ್ನಿತರ ಪ್ರಕರಣಗಳನ್ನು ಇತ್ಯರ್ಥ ಪಡಿಸುವಂತೆ ತಿಳಿಸಿದೆ.

Please follow and like us:
0
http://bp9news.com/wp-content/uploads/2018/09/supreme-court.pnghttp://bp9news.com/wp-content/uploads/2018/09/supreme-court-150x150.pngBP9 Bureauಪ್ರಮುಖಬೆಂಗಳೂರುರಾಷ್ಟ್ರೀಯನವದಿಹಲಿ : ಬೆಂಗಳೂರು ಮೂಲದ ದಂಪತಿಗಳಿಗೆ  ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್, ಹೌದು ವಿಚ್ಛೇದನ ಕೋರಿ ನ್ಯಾಯಾಲಯದ ಮೇಟ್ಟಿಲೇರಿರುವ ಈ ದಂಪತಿಗಳು ಈಗಾಗಲೆ 67 ದೂರಿನ ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ಇನ್ನು ಯಾವುದೇ ಹೊಸ ಅರ್ಜಿ ದಾಖಲಿಸದಂತೆ ಸೂಚನೆ ನೀಡಿ ಸುಪ್ರೀಂ ಕೋರ್ಟ್​ ಎಚ್ಚರಿಕೆ ನೀಡಿದೆ. ಬೆಂಗಳೂರು ಮೂಲದ ಅಮೆರಿಕ ಪೌರತ್ವ ಹೊಂದಿರುವ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಗಂಡ ಈಗಾಗಲೇ ನ್ಯಾಯಾಲಯಕ್ಕೆ 58 ಪ್ರಕರಣ ದಾಖಲಿಸದ್ದಾರೆ. ಎಂಬಿಎ ಪದವೀಧರೆ ಹೆಂಡತಿ 9...Kannada News Portal