ನವದೆಹಲಿ : ರಾಜ್ಯ ಕಾಂಗ್ರೆಸ್​ ಮತ್ತು ಬಿಜೆಪಿ ನಾಯಕರ ನಡುವಿನ ಗಲಾಟೆ ದೆಹಲಿಯ ಹೈಕಮಾಂಡ್​ವರೆಗೆ ತಲುಪಿದ್ದು, ಬಿಜೆಪಿಯ ಷಡ್ಯಂತ್ರದಿಂದ ಕಾಂಗ್ರೆಸ್​ ನಾಯಕರನ್ನು ಆಚೆ ತರುವ ಬಗ್ಗೆ ನಿನ್ನೆ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಸಭೆ ನಡೆಸಿದ್ದಾರೆ.

ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ. ಬಂಡಾಯಗಾರರ ಜೊತೆ ಹಿರಿಯ ನಾಯಕರು ಮಾತನಾಡಿ. ಭಿನ್ನಮತೀಯ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿರಿ. ಆಪರೇಷನ್​ ಕಮಲದ ಬಗ್ಗೆ ಎಚ್ಚರವಿರಲಿ. ಈ ಮೂಲಕ ಬಿಜೆಪಿ ನಾಯಕರ ಬಣ್ಣ ಬಯಲಾದರೆ ಆಗಲಿ ಬಿಡಿ ಎಂದು ರಾಜ್ಯ ‘ಕೈ’ ನಾಯಕರಿಗೆ ರಾಹುಲ್​ ಗಾಂಧಿ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ  ನಡೆದ ಸಭೆಯಲ್ಲಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದ ರಾಹುಲ್ ಗಾಂಧಿ ಬಂಡಾಯವೆದ್ದಿರುವ ಶಾಸಕರು ಬಿಜೆಪಿ ಸೇರದಂತೆ ಎಚ್ಚರ ವಹಿಸಿ ಎಂದು ಹೇಳಿದ್ದಾರೆ.

ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ದಾಖಲಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಂದ ರಾಹುಲ್ ಗಾಂಧಿ  ಮಾಹಿತಿ ಪಡೆದರು. ರಾಜಕೀಯಪ್ರೇರಿತವಾಗಿ ಡಿಕೆಶಿ ವಿರುದ್ಧ ದೂರು ದಾಖಲಿಸಲಾಗಿದೆ. ಡಿಕೆಶಿ ಮೂಲಕ ಮೈತ್ರಿ ಸರ್ಕಾರವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್​ ನಾಯಕರು ಮಾಹಿತಿ ನೀಡಿದರು.

ಬಿಜೆಪಿಯ ಈ ಎಲ್ಲ ಕುಟಿಲ ತಂತ್ರಗಳನ್ನು ಜನರಿಗೆ ತಿಳಿಸಬೇಕಿದೆ. ಬಿಜೆಪಿ ನಾಯಕರಿಂದಲೇ ಐಟಿ, ಇಡಿ ದುರ್ಬಳಕೆಯಾಗುತ್ತಿದೆ. ರಾಜಕೀಯ ಕಾರಣಗಳಿಗಾಗಿ ಐಟಿ ಮತ್ತು ಇ.ಡಿ. ದುರ್ಬಳಕೆಯಾಗುತ್ತಿದೆ.  ಬಿಜೆಪಿ ರಾಷ್ಟ್ರ ನಾಯಕರೇ ಡಿಕೆಶಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನ್ಯೂಸ್ ರೂಂ
ಸತೀಶ್ಜಾರಕಿಹೊಳಿ ನಡೆಯೇನು?:

ನಿನ್ನೆ ರಾಜ್ಯ ಕಾಂಗ್ರೆಸ್​ ನಾಯಕರು ರಾಹುಲ್​ ಗಾಂಧಿಯನ್ನು ಭೇಟಿ ಮಾಡಿ ಸಭೆ ನಡೆಸಿದ ಬೆನ್ನಲ್ಲೇ ಇಂದು ಶಾಸಕ ಸತೀಶ್​ ಜಾರಕಿಹೊಳಿ ದೆಹಲಿಯ ರಾಹುಲ್​ ಗಾಂಧಿ ನಿವಾಸದಲ್ಲಿ ಅವರನ್ನು ಭೇಟಿ ಮಾಡಲಿದ್ದಾರೆ. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಸ್ಯೆ ಬಗ್ಗೆ ಚರ್ಚಿಸಲು ತೆರಳಲಿರುವ ಸತೀಶ್​ ಜಾರಕಿಹೊಳಿ ಬೆಂಬಲಿಗರಿಗೆ ಸಚಿವ ಸ್ಥಾನ ನೀಡುವಂತೆ ಕೇಳಲಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿರುವ ಜಾರಕಿಹೊಳಿ ಸಹೋದರರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಹುಲ್​ ಗಾಂಧಿ ಸತೀಶ್​ ಜಾರಕಿಹೊಳಿ ಅವರ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಲಿದ್ದಾರಾ? ಎಂಬುದನ್ನು ನೋಡಬೇಕಾಗಿದೆ. ರಾಹುಲ್​ ಭೇಟಿಯ ವೇಳೆ ಡಿ.ಕೆ.ಶಿವಕುಮಾರ್ ವಿರುದ್ಧ ಸತೀಶ್ ಜಾರಕಿಹೊಳಿ ದೂರು ನೀಡುವ ಸಾಧ್ಯತೆ ಇದೆ. ಪಿಎಲ್​ಡಿ ಬ್ಯಾಂಕ್​ ಚುನಾವಣೆ ವಿಚಾರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​-ಜಾರಿಹೊಳಿ ಸಹೋದರರ ನಡುವೆ ಗಲಾಟೆ ಎದ್ದಿದ್ದಾಗ ಡಿಕೆಶಿ ಲಕ್ಷ್ಮೀ ಹೆಬ್ಬಾಳ್ಕರ್​ ಪರವಾಗಿ ನಿಂತಿದ್ದರು. ಹಾಗಾಗಿ, ಬೆಳಗಾವಿ ರಾಜಕಾರಣದಲ್ಲಿ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪದ ವಿರುದ್ಧ ದೂರು ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

Please follow and like us:
0
http://bp9news.com/wp-content/uploads/2018/09/state-bjp-leaders.pnghttp://bp9news.com/wp-content/uploads/2018/09/state-bjp-leaders-150x150.pngBP9 Bureauಪ್ರಮುಖರಾಜಕೀಯರಾಷ್ಟ್ರೀಯನವದೆಹಲಿ : ರಾಜ್ಯ ಕಾಂಗ್ರೆಸ್​ ಮತ್ತು ಬಿಜೆಪಿ ನಾಯಕರ ನಡುವಿನ ಗಲಾಟೆ ದೆಹಲಿಯ ಹೈಕಮಾಂಡ್​ವರೆಗೆ ತಲುಪಿದ್ದು, ಬಿಜೆಪಿಯ ಷಡ್ಯಂತ್ರದಿಂದ ಕಾಂಗ್ರೆಸ್​ ನಾಯಕರನ್ನು ಆಚೆ ತರುವ ಬಗ್ಗೆ ನಿನ್ನೆ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಸಭೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ. ಬಂಡಾಯಗಾರರ ಜೊತೆ ಹಿರಿಯ ನಾಯಕರು ಮಾತನಾಡಿ. ಭಿನ್ನಮತೀಯ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿರಿ. ಆಪರೇಷನ್​ ಕಮಲದ ಬಗ್ಗೆ ಎಚ್ಚರವಿರಲಿ. ಈ ಮೂಲಕ ಬಿಜೆಪಿ ನಾಯಕರ ಬಣ್ಣ ಬಯಲಾದರೆ ಆಗಲಿ ಬಿಡಿ...Kannada News Portal